Banana Peel Benefits: ಬಾಳೆಹಣ್ಣಿನ ಸಿಪ್ಪೆಯನ್ನು ತಿಂದ್ರೆ ಸಿಗೋ ಪ್ರಯೋಜನಗಳು ಒಂದೆರೆಡಲ್ಲ
Eating Banana Peel: ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೋಷಕಾಂಶಗಳು ಕೂಡ ಸಮೃದ್ಧವಾಗಿವೆ, ಈ ಸಿಪ್ಪೆಗಳಲ್ಲಿ ಆ್ಯಂಟಿ ಫಂಗಲ್ ಕಾಂಪೌಂಡ್, ಆ್ಯಂಟಿಬಯೋಟಿಕ್, ನಾರಿನಂಶ, ಪೋಷಕಾಂಶಗಳು ಮತ್ತು ಆರೋಗ್ಯವನ್ನು ಉತ್ತೇಜಿಸುವ ಇತರ ಪೋಷಕಾಂಶಗಳು ಸಮೃದ್ಧವಾಗಿವೆ.
ಮುಂದೆ ಓದಿ …
ಪ್ರತಿದಿನ ಬಾಳೆಹಣ್ಣು (Banana) ತಿನ್ನುವುದರಿಂದ ಅಸಂಖ್ಯಾತ ಪ್ರಯೋಜನಗಳಿವೆ (Benefits) ಎಂದು ನಮಗೆಲ್ಲರಿಗೂ ತಿಳಿದಿದೆ. ಬಾಳೆಹಣ್ಣು ತಿಂದ ನಂತರ ಹೆಚ್ಚಿನವರು ಬಾಳೆಹಣ್ಣಿನ ಸಿಪ್ಪೆ (Banana Peel) ಸುಲಿದು ಬಿಟ್ಟು ಹೋಗುತ್ತಾರೆ. ಆದರೆ ಬಾಳೆಹಣ್ಣಿನ ಸಿಪ್ಪೆಯ ಪ್ರಯೋಜನಗಳನ್ನು ಒಮ್ಮೆ ತಿಳಿದರೆ ಅದನ್ನು ಬಿಸಾಡುವುದಿಲ್ಲ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೋಷಕಾಂಶಗಳು ಕೂಡ ಸಮೃದ್ಧವಾಗಿವೆ, ಈ ಸಿಪ್ಪೆಗಳಲ್ಲಿ ಆ್ಯಂಟಿ ಫಂಗಲ್ ಕಾಂಪೌಂಡ್, ಆ್ಯಂಟಿಬಯೋಟಿಕ್, ನಾರಿನಂಶ, ಪೋಷಕಾಂಶಗಳು ಮತ್ತು ಆರೋಗ್ಯವನ್ನು ಉತ್ತೇಜಿಸುವ ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿ ಒಳಗಿನ ಚರ್ಮದ ಬಿಳಿ ಭಾಗವನ್ನು ನಾವು ತಿನ್ನಬಹುದು. ಇದನ್ನು ಕೇಳಿ ಆಶ್ಚರ್ಯವಾದರೂ ಸತ್ಯ. ಈ ಬಾಳೆಹಣ್ಣಿನ ಸಿಪ್ಪೆಯನ್ನು (Banana Peel benefits) ತಿಂದ್ರೆ ಯಾವೆಲ್ಲಾ ಪ್ರಯೋಜನ ಸಿಗುತ್ತದ ಎಂಬುದು ಇಲ್ಲಿದೆ.
ಬಾಳೆಹಣ್ಣಿನ ಸಿಪ್ಪೆಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು:
ಬಾಳೆಹಣ್ಣಿನಲ್ಲಿ ನಾರಿನಂಶ ಹೇರಳವಾಗಿದ್ದು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ವಿಟಮಿನ್ ಡಿ 12 ಮತ್ತು ಆಂಟಿಆಕ್ಸಿಡೆಂಟ್ಗಳನ್ನು ಸಹ ಒಳಗೊಂಡಿದೆ, ಇದು ನರಮಂಡಲ ಮತ್ತು ಚಯಾಪಚಯವನ್ನು ನಿಯಂತ್ರಿಸುತ್ತದೆ.
ಬಾಳೆಹಣ್ಣಿನಲ್ಲಿ ಟ್ರಿಪ್ಟೊಫಾನ್ ಎಂಬ ರಾಸಾಯನಿಕವು ತುಂಬಿದ್ದು ನಿದ್ರಾಹೀನತೆ ಇರುವವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ, ಬಾಳೆಹಣ್ಣಿನ ಚರ್ಮವನ್ನು ತಿನ್ನುವುದರಿಂದ ನಿದ್ರೆಯ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ.
ನರಹುಲಿಗಳ ಸಮಸ್ಯೆ ಇದ್ದರೆ, ಬಾಳೆಹಣ್ಣಿನ ಚರ್ಮವನ್ನು ರಾತ್ರಿಯಲ್ಲಿ ನರಹುಲಿಗಳ ಮೇಲೆ ಉಜ್ಜಿಕೊಳ್ಳಿ. ಹೀಗೆ ಒಂದು ವಾರ ನಿರಂತರವಾಗಿ ಮಾಡಿದರೆ ನರಹುಲಿಗಳು ಮಾಯವಾಗುತ್ತವೆ ಮತ್ತು ಹೊಸ ನರಹುಲಿಗಳು ರೂಪುಗೊಳ್ಳುವುದಿಲ್ಲ.
ಬಾಳೆಹಣ್ಣಿನ ಸಿಪ್ಪೆಯು ನಿಮ್ಮ ಕರುಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ಉತ್ತಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಚರ್ಮದ ಸಮಸ್ಯೆಯಿಂದ ಮುಕ್ತಿ ನೀಡುತ್ತೆ ಈ ಸಿಪ್ಪೆ
ಬಾಳೆಹಣ್ಣಿನ ಸಿಪ್ಪೆಗಳು ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿವೆ, ಇದು ಎಲ್ಲಾ ರೀತಿಯ ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣು ಚರ್ಮದ ದದ್ದುಗಳು, ಡರ್ಮಟೈಟಿಸ್, ತುರಿಕೆ, ಕೀಟ ಕಡಿತ, ದದ್ದುಗಳು, ಸುಕ್ಕುಗಳು ಇತ್ಯಾದಿಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಬಾಳೆಹಣ್ಣಿನ ಸಿಪ್ಪೆಯು ನಿಮ್ಮ ದೇಹದಲ್ಲಿರುವ ಕೆಂಪು ರಕ್ತ ಕಣಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಅದರಲ್ಲೂ ಹಸಿರು ಬಾಳೆಹಣ್ಣಿನ ಸಿಪ್ಪೆಗಳು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತವೆ.