ಆಧ್ಯಾತ್ಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಆಧ್ಯಾತ್ಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶ್ರೀ ಲಕ್ಷ್ಮೀ ಹೃದಯ ಸ್ತೋತ್ರಂ

 ಶ್ರೀ ಲಕ್ಷ್ಮೀ ಹೃದಯ ಸ್ತೋತ್ರಂ



ಅಸ್ಯ ಶ್ರೀ ಮಹಾಲಕ್ಷ್ಮೀಹೃದಯಸ್ತೋತ್ರ ಮಹಾಮಂತ್ರಸ್ಯ ಭಾರ್ಗವ ಋಷಿಃ, ಅನುಷ್ಟುಪಾದೀನಿ ನಾನಾಛಂದಾಂಸಿ, ಆದ್ಯಾದಿ ಶ್ರೀಮಹಾಲಕ್ಷ್ಮೀರ್ದೇವತಾ, ಶ್ರೀಂ ಬೀಜಂ, ಹ್ರೀಂ ಶಕ್ತಿಃ, ಐಂ ಕೀಲಕಂ, ಆದ್ಯಾದಿಮಹಾಲಕ್ಷ್ಮೀ ಪ್ರಸಾದಸಿದ್ಧ್ಯರ್ಥಂ ಜಪೇ ವಿನಿಯೋಗಃ ॥
ಋಷ್ಯಾದಿನ್ಯಾಸಃ –
ಓಂ ಭಾರ್ಗವೃಷಯೇ ನಮಃ ಶಿರಸಿ ।
ಓಂ ಅನುಷ್ಟುಪಾದಿನಾನಾಛಂದೋಭ್ಯೋ ನಮೋ ಮುಖೇ ।
ಓಂ ಆದ್ಯಾದಿಶ್ರೀಮಹಾಲಕ್ಷ್ಮೀ ದೇವತಾಯೈ ನಮೋ ಹೃದಯೇ ।
ಓಂ ಶ್ರೀಂ ಬೀಜಾಯ ನಮೋ ಗುಹ್ಯೇ ।
ಓಂ ಹ್ರೀಂ ಶಕ್ತಯೇ ನಮಃ ಪಾದಯೋಃ ।
ಓಂ ಐಂ ಕೀಲಕಾಯ ನಮೋ ನಾಭೌ ।
ಓಂ ವಿನಿಯೋಗಾಯ ನಮಃ ಸರ್ವಾಂಗೇ ।
ಕರನ್ಯಾಸಃ –
ಓಂ ಶ್ರೀಂ ಅಂಗುಷ್ಠಾಭ್ಯಾಂ ನಮಃ ।
ಓಂ ಹ್ರೀಂ ತರ್ಜನೀಭ್ಯಾಂ ನಮಃ ।
ಓಂ ಐಂ ಮಧ್ಯಮಾಭ್ಯಾಂ ನಮಃ ।
ಓಂ ಶ್ರೀಂ ಅನಾಮಿಕಾಭ್ಯಾಂ ನಮಃ ।
ಓಂ ಹ್ರೀಂ ಕನಿಷ್ಠಿಕಾಭ್ಯಾಂ ನಮಃ ।
ಓಂ ಐಂ ಕರತಲ ಕರಪೃಷ್ಠಾಭ್ಯಾಂ ನಮಃ ।
ಅಂಗನ್ಯಾಸಃ –
ಓಂ ಶ್ರೀಂ ಹೃದಯಾಯ ನಮಃ ।
ಓಂ ಹ್ರೀಂ ಶಿರಸೇ ಸ್ವಾಹಾ ।
ಓಂ ಐಂ ಶಿಖಾಯೈ ವಷಟ್ ।
ಓಂ ಶ್ರೀಂ ಕವಚಾಯ ಹುಮ್ ।
ಓಂ ಹ್ರೀಂ ನೇತ್ರತ್ರಯಾಯ ವೌಷಟ್ ।
ಓಂ ಐಂ ಅಸ್ತ್ರಾಯ ಫಟ್ ।
ಓಂ ಶ್ರೀಂ ಹ್ರೀಂ ಐಂ ಇತಿ ದಿಗ್ಬಂಧಃ ।
ಅಥ ಧ್ಯಾನಮ್ ।
ಹಸ್ತದ್ವಯೇನ ಕಮಲೇ ಧಾರಯಂತೀಂ ಸ್ವಲೀಲಯಾ ।
ಹಾರನೂಪುರಸಂಯುಕ್ತಾಂ ಲಕ್ಷ್ಮೀಂ ದೇವೀಂ ವಿಚಿಂತಯೇ ॥
ಕೌಶೇಯಪೀತವಸನಾಮರವಿಂದನೇತ್ರಾಂ
ಪದ್ಮದ್ವಯಾಭಯವರೋದ್ಯತಪದ್ಮಹಸ್ತಾಮ್ ।
ಉದ್ಯಚ್ಛತಾರ್ಕಸದೃಶೀಂ ಪರಮಾಂಕಸಂಸ್ಥಾಂ
ಧ್ಯಾಯೇದ್ವಿಧೀಶನತಪಾದಯುಗಾಂ ಜನಿತ್ರೀಮ್ ॥
ಪೀತವಸ್ತ್ರಾಂ ಸುವರ್ಣಾಂಗೀಂ ಪದ್ಮಹಸ್ತದ್ವಾಯಾನ್ವಿತಾಮ್ ।
ಲಕ್ಷ್ಮೀಂ ಧ್ಯಾತ್ವೇತಿ ಮಂತ್ರೇಣ ಸ ಭವೇತ್ಪೃಥಿವೀಪತಿಃ ॥
ಮಾತುಲುಂಗಂ ಗದಾಂ ಖೇಟಂ ಪಾಣೌ ಪಾತ್ರಂ ಚ ಬಿಭ್ರತೀ ।
ನಾಗಂ ಲಿಂಗಂ ಚ ಯೋನಿಂ ಚ ಬಿಭ್ರತೀಂ ಚೈವ ಮೂರ್ಧನಿ ॥
[ ಇತಿ ಧ್ಯಾತ್ವಾ ಮಾನಸೋಪಚಾರೈಃ ಸಂಪೂಜ್ಯ ।
ಶಂಖಚಕ್ರಗದಾಹಸ್ತೇ ಶುಭ್ರವರ್ಣೇ ಸುವಾಸಿನೀ ।
ಮಮ ದೇಹಿ ವರಂ ಲಕ್ಷ್ಮೀಃ ಸರ್ವಸಿದ್ಧಿಪ್ರದಾಯಿನೀ ।
ಇತಿ ಸಂಪ್ರಾರ್ಥ್ಯ ಓಂ ಶ್ರೀಂ ಹ್ರೀಂ ಐಂ ಮಹಾಲಕ್ಷ್ಮ್ಯೈ ಕಮಲಧಾರಿಣ್ಯೈ ಸಿಂಹವಾಹಿನ್ಯೈ ಸ್ವಾಹಾ ಇತಿ ಮಂತ್ರಂ ಜಪ್ತ್ವಾ ಪುನಃ ಪೂರ್ವವದ್ಧೃದಯಾದಿ ಷಡಂಗನ್ಯಾಸಂ ಕೃತ್ವಾ ಸ್ತೋತ್ರಂ ಪಠೇತ್ । ]
ಸ್ತೋತ್ರಮ್ ।
ವಂದೇ ಲಕ್ಷ್ಮೀಂ ಪರಮಶಿವಮಯೀಂ ಶುದ್ಧಜಾಂಬೂನದಾಭಾಂ
ತೇಜೋರೂಪಾಂ ಕನಕವಸನಾಂ ಸರ್ವಭೂಷೋಜ್ಜ್ವಲಾಂಗೀಮ್ ।
ಬೀಜಾಪೂರಂ ಕನಕಕಲಶಂ ಹೇಮಪದ್ಮಂ ದಧಾನಾ-
-ಮಾದ್ಯಾಂ ಶಕ್ತಿಂ ಸಕಲಜನನೀಂ ವಿಷ್ಣುವಾಮಾಂಕಸಂಸ್ಥಾಮ್ ॥ 1 ॥
ಶ್ರೀಮತ್ಸೌಭಾಗ್ಯಜನನೀಂ ಸ್ತೌಮಿ ಲಕ್ಷ್ಮೀಂ ಸನಾತನೀಮ್ ।
ಸರ್ವಕಾಮಫಲಾವಾಪ್ತಿಸಾಧನೈಕಸುಖಾವಹಾಮ್ ॥ 2 ॥
ಸ್ಮರಾಮಿ ನಿತ್ಯಂ ದೇವೇಶಿ ತ್ವಯಾ ಪ್ರೇರಿತಮಾನಸಃ ।
ತ್ವದಾಜ್ಞಾಂ ಶಿರಸಾ ಧೃತ್ವಾ ಭಜಾಮಿ ಪರಮೇಶ್ವರೀಮ್ ॥ 3 ॥
ಸಮಸ್ತಸಂಪತ್ಸುಖದಾಂ ಮಹಾಶ್ರಿಯಂ
ಸಮಸ್ತಸೌಭಾಗ್ಯಕರೀಂ ಮಹಾಶ್ರಿಯಮ್ ।
ಸಮಸ್ತಕಳ್ಯಾಣಕರೀಂ ಮಹಾಶ್ರಿಯಂ
ಭಜಾಮ್ಯಹಂ ಜ್ಞಾನಕರೀಂ ಮಹಾಶ್ರಿಯಮ್ ॥ 4 ॥
ವಿಜ್ಞಾನಸಂಪತ್ಸುಖದಾಂ ಸನಾತನೀಂ
ವಿಚಿತ್ರವಾಗ್ಭೂತಿಕರೀಂ ಮನೋಹರಾಮ್ ।
ಅನಂತಸಂಮೋದಸುಖಪ್ರದಾಯಿನೀಂ
ನಮಾಮ್ಯಹಂ ಭೂತಿಕರೀಂ ಹರಿಪ್ರಿಯಾಮ್ ॥ 5 ॥
ಸಮಸ್ತಭೂತಾಂತರಸಂಸ್ಥಿತಾ ತ್ವಂ
ಸಮಸ್ತಭೋಕ್ತ್ರೀಶ್ವರಿ ವಿಶ್ವರೂಪೇ ।
ತನ್ನಾಸ್ತಿ ಯತ್ತ್ವದ್ವ್ಯತಿರಿಕ್ತವಸ್ತು
ತ್ವತ್ಪಾದಪದ್ಮಂ ಪ್ರಣಮಾಮ್ಯಹಂ ಶ್ರೀಃ ॥ 6 ॥
ದಾರಿದ್ರ್ಯ ದುಃಖೌಘತಮೋಪಹಂತ್ರೀ
ತ್ವತ್ಪಾದಪದ್ಮಂ ಮಯಿ ಸನ್ನಿಧತ್ಸ್ವ ।
ದೀನಾರ್ತಿವಿಚ್ಛೇದನಹೇತುಭೂತೈಃ
ಕೃಪಾಕಟಾಕ್ಷೈರಭಿಷಿಂಚ ಮಾಂ ಶ್ರೀಃ ॥ 7 ॥
ಅಂಬ ಪ್ರಸೀದ ಕರುಣಾಸುಧಯಾರ್ದ್ರದೃಷ್ಟ್ಯಾ
ಮಾಂ ತ್ವತ್ಕೃಪಾದ್ರವಿಣಗೇಹಮಿಮಂ ಕುರುಷ್ವ ।
ಆಲೋಕಯ ಪ್ರಣತಹೃದ್ಗತಶೋಕಹಂತ್ರೀ
ತ್ವತ್ಪಾದಪದ್ಮಯುಗಳಂ ಪ್ರಣಮಾಮ್ಯಹಂ ಶ್ರೀಃ ॥ 8 ॥
ಶಾಂತ್ಯೈ ನಮೋಽಸ್ತು ಶರಣಾಗತರಕ್ಷಣಾಯೈ
ಕಾಂತ್ಯೈ ನಮೋಽಸ್ತು ಕಮನೀಯಗುಣಾಶ್ರಯಾಯೈ ।
ಕ್ಷಾಂತ್ಯೈ ನಮೋಽಸ್ತು ದುರಿತಕ್ಷಯಕಾರಣಾಯೈ
ದಾತ್ರ್ಯೈ ನಮೋಽಸ್ತು ಧನಧಾನ್ಯಸಮೃದ್ಧಿದಾಯೈ ॥ 9 ॥
ಶಕ್ತ್ಯೈ ನಮೋಽಸ್ತು ಶಶಿಶೇಖರಸಂಸ್ತುತಾಯೈ
ರತ್ಯೈ ನಮೋಽಸ್ತು ರಜನೀಕರಸೋದರಾಯೈ ।
ಭಕ್ತ್ಯೈ ನಮೋಽಸ್ತು ಭವಸಾಗರತಾರಕಾಯೈ
ಮತ್ಯೈ ನಮೋಽಸ್ತು ಮಧುಸೂದನವಲ್ಲಭಾಯೈ ॥ 10 ॥
ಲಕ್ಷ್ಮ್ಯೈ ನಮೋಽಸ್ತು ಶುಭಲಕ್ಷಣಲಕ್ಷಿತಾಯೈ
ಸಿದ್ಧ್ಯೈ ನಮೋಽಸ್ತು ಶಿವಸಿದ್ಧಸುಪೂಜಿತಾಯೈ ।
ಧೃತ್ಯೈ ನಮೋಽಸ್ತ್ವಮಿತದುರ್ಗತಿಭಂಜನಾಯೈ
ಗತ್ಯೈ ನಮೋಽಸ್ತು ವರಸದ್ಗತಿದಾಯಿಕಾಯೈ ॥ 11 ॥
ದೇವ್ಯೈ ನಮೋಽಸ್ತು ದಿವಿ ದೇವಗಣಾರ್ಚಿತಾಯೈ
ಭೂತ್ಯೈ ನಮೋಽಸ್ತು ಭುವನಾರ್ತಿವಿನಾಶನಾಯೈ ।
ಧಾತ್ರ್ಯೈ ನಮೋಽಸ್ತು ಧರಣೀಧರವಲ್ಲಭಾಯೈ
ಪುಷ್ಟ್ಯೈ ನಮೋಽಸ್ತು ಪುರುಷೋತ್ತಮವಲ್ಲಭಾಯೈ ॥ 12 ॥
ಸುತೀವ್ರದಾರಿದ್ರ್ಯವಿದುಃಖಹಂತ್ರ್ಯೈ
ನಮೋಽಸ್ತು ತೇ ಸರ್ವಭಯಾಪಹಂತ್ರ್ಯೈ ।
ಶ್ರೀವಿಷ್ಣುವಕ್ಷಃಸ್ಥಲಸಂಸ್ಥಿತಾಯೈ
ನಮೋ ನಮಃ ಸರ್ವವಿಭೂತಿದಾಯೈ ॥ 13 ॥
ಜಯತು ಜಯತು ಲಕ್ಷ್ಮೀರ್ಲಕ್ಷಣಾಲಂಕೃತಾಂಗೀ
ಜಯತು ಜಯತು ಪದ್ಮಾ ಪದ್ಮಸದ್ಮಾಭಿವಂದ್ಯಾ ।
ಜಯತು ಜಯತು ವಿದ್ಯಾ ವಿಷ್ಣುವಾಮಾಂಕಸಂಸ್ಥಾ
ಜಯತು ಜಯತು ಸಮ್ಯಕ್ಸರ್ವಸಂಪತ್ಕರೀ ಶ್ರೀಃ ॥ 14 ॥
ಜಯತು ಜಯತು ದೇವೀ ದೇವಸಂಘಾಭಿಪೂಜ್ಯಾ
ಜಯತು ಜಯತು ಭದ್ರಾ ಭಾರ್ಗವೀ ಭಾಗ್ಯರೂಪಾ ।
ಜಯತು ಜಯತು ನಿತ್ಯಾ ನಿರ್ಮಲಜ್ಞಾನವೇದ್ಯಾ
ಜಯತು ಜಯತು ಸತ್ಯಾ ಸರ್ವಭೂತಾಂತರಸ್ಥಾ ॥ 15 ॥
ಜಯತು ಜಯತು ರಮ್ಯಾ ರತ್ನಗರ್ಭಾಂತರಸ್ಥಾ
ಜಯತು ಜಯತು ಶುದ್ಧಾ ಶುದ್ಧಜಾಂಬೂನದಾಭಾ ।
ಜಯತು ಜಯತು ಕಾಂತಾ ಕಾಂತಿಮದ್ಭಾಸಿತಾಂಗೀ
ಜಯತು ಜಯತು ಶಾಂತಾ ಶೀಘ್ರಮಾಗಚ್ಛ ಸೌಮ್ಯೇ ॥ 16 ॥
ಯಸ್ಯಾಃ ಕಲಾಯಾಃ ಕಮಲೋದ್ಭವಾದ್ಯಾ
ರುದ್ರಾಶ್ಚ ಶಕ್ರ ಪ್ರಮುಖಾಶ್ಚ ದೇವಾಃ ।
ಜೀವಂತಿ ಸರ್ವೇಽಪಿ ಸಶಕ್ತಯಸ್ತೇ
ಪ್ರಭುತ್ವಮಾಪ್ತಾಃ ಪರಮಾಯುಷಸ್ತೇ ॥ 17 ॥
ಲಿಲೇಖ ನಿಟಿಲೇ ವಿಧಿರ್ಮಮ ಲಿಪಿಂ ವಿಸೃಜ್ಯಾಂತರಂ
ತ್ವಯಾ ವಿಲಿಖಿತವ್ಯಮೇತದಿತಿ ತತ್ಫಲಪ್ರಾಪ್ತಯೇ ।
ತದಂತರಫಲೇಸ್ಫುಟಂ ಕಮಲವಾಸಿನೀ ಶ್ರೀರಿಮಾಂ
ಸಮರ್ಪಯ ಸಮುದ್ರಿಕಾಂ ಸಕಲಭಾಗ್ಯಸಂಸೂಚಿಕಾಮ್ ॥ 18 ॥
ಕಲಯಾ ತೇ ಯಥಾ ದೇವಿ ಜೀವಂತಿ ಸಚರಾಚರಾಃ ।
ತಥಾ ಸಂಪತ್ಕರೇ ಲಕ್ಷ್ಮಿ ಸರ್ವದಾ ಸಂಪ್ರಸೀದ ಮೇ ॥ 19 ॥
ಯಥಾ ವಿಷ್ಣುರ್ಧ್ರುವೇ ನಿತ್ಯಂ ಸ್ವಕಲಾಂ ಸಂನ್ಯವೇಶಯತ್ ।
ತಥೈವ ಸ್ವಕಲಾಂ ಲಕ್ಷ್ಮಿ ಮಯಿ ಸಮ್ಯಕ್ ಸಮರ್ಪಯ ॥ 20 ॥
ಸರ್ವಸೌಖ್ಯಪ್ರದೇ ದೇವಿ ಭಕ್ತಾನಾಮಭಯಪ್ರದೇ ।
ಅಚಲಾಂ ಕುರು ಯತ್ನೇನ ಕಲಾಂ ಮಯಿ ನಿವೇಶಿತಾಮ್ ॥ 21 ॥
ಮುದಾಸ್ತಾಂ ಮತ್ಫಾಲೇ ಪರಮಪದಲಕ್ಷ್ಮೀಃ ಸ್ಫುಟಕಲಾ
ಸದಾ ವೈಕುಂಠಶ್ರೀರ್ನಿವಸತು ಕಲಾ ಮೇ ನಯನಯೋಃ ।
ವಸೇತ್ಸತ್ಯೇ ಲೋಕೇ ಮಮ ವಚಸಿ ಲಕ್ಷ್ಮೀರ್ವರಕಲಾ
ಶ್ರಿಯಃ ಶ್ವೇತದ್ವೀಪೇ ನಿವಸತು ಕಲಾ ಮೇ ಸ್ವಕರಯೋಃ ॥ 22 ॥
ತಾವನ್ನಿತ್ಯಂ ಮಮಾಂಗೇಷು ಕ್ಷೀರಾಬ್ಧೌ ಶ್ರೀಕಲಾ ವಸೇತ್ ।
ಸೂರ್ಯಾಚಂದ್ರಮಸೌ ಯಾವದ್ಯಾವಲ್ಲಕ್ಷ್ಮೀಪತಿಃ ಶ್ರಿಯಾಃ ॥ 23 ॥
ಸರ್ವಮಂಗಳಸಂಪೂರ್ಣಾ ಸರ್ವೈಶ್ವರ್ಯಸಮನ್ವಿತಾ ।
ಆದ್ಯಾದಿ ಶ್ರೀರ್ಮಹಾಲಕ್ಷ್ಮೀ ತ್ವತ್ಕಲಾ ಮಯಿ ತಿಷ್ಠತು ॥ 24 ॥
ಅಜ್ಞಾನತಿಮಿರಂ ಹಂತುಂ ಶುದ್ಧಜ್ಞಾನಪ್ರಕಾಶಿಕಾ ।
ಸರ್ವೈಶ್ವರ್ಯಪ್ರದಾ ಮೇಽಸ್ತು ತ್ವತ್ಕಲಾ ಮಯಿ ಸಂಸ್ಥಿತಾ ॥ 25 ॥
ಅಲಕ್ಷ್ಮೀಂ ಹರತು ಕ್ಷಿಪ್ರಂ ತಮಃ ಸೂರ್ಯಪ್ರಭಾ ಯಥಾ ।
ವಿತನೋತು ಮಮ ಶ್ರೇಯಸ್ತ್ವತ್ಕಳಾ ಮಯಿ ಸಂಸ್ಥಿತಾ ॥ 26 ॥
ಐಶ್ವರ್ಯಮಂಗಳೋತ್ಪತ್ತಿಸ್ತ್ವತ್ಕಲಾಯಾಂ ನಿಧೀಯತೇ ।
ಮಯಿ ತಸ್ಮಾತ್ಕೃತಾರ್ಥೋಽಸ್ಮಿ ಪಾತ್ರಮಸ್ಮಿ ಸ್ಥಿತೇಸ್ತವ ॥ 27 ॥
ಭವದಾವೇಶಭಾಗ್ಯಾರ್ಹೋ ಭಾಗ್ಯವಾನಸ್ಮಿ ಭಾರ್ಗವಿ ।
ತ್ವತ್ಪ್ರಸಾದಾತ್ಪವಿತ್ರೋಽಹಂ ಲೋಕಮಾತರ್ನಮೋಽಸ್ತು ತೇ ॥ 28 ॥
ಪುನಾಸಿ ಮಾಂ ತ್ವತ್ಕಲಯೈವ ಯಸ್ಮಾ-
-ದತಃ ಸಮಾಗಚ್ಛ ಮಮಾಗ್ರತಸ್ತ್ವಮ್ ।
ಪರಂ ಪದಂ ಶ್ರೀರ್ಭವ ಸುಪ್ರಸನ್ನಾ
ಮಯ್ಯಚ್ಯುತೇನ ಪ್ರವಿಶಾದಿಲಕ್ಷ್ಮೀಃ ॥ 29 ॥
ಶ್ರೀವೈಕುಂಠಸ್ಥಿತೇ ಲಕ್ಷ್ಮಿ ಸಮಾಗಚ್ಛ ಮಮಾಗ್ರತಃ ।
ನಾರಾಯಣೇನ ಸಹ ಮಾಂ ಕೃಪಾದೃಷ್ಟ್ಯಾಽವಲೋಕಯ ॥ 30 ॥
ಸತ್ಯಲೋಕಸ್ಥಿತೇ ಲಕ್ಷ್ಮಿ ತ್ವಂ ಮಮಾಗಚ್ಛ ಸನ್ನಿಧಿಮ್ ।
ವಾಸುದೇವೇನ ಸಹಿತಾ ಪ್ರಸೀದ ವರದಾ ಭವ ॥ 31 ॥
ಶ್ವೇತದ್ವೀಪಸ್ಥಿತೇ ಲಕ್ಷ್ಮಿ ಶೀಘ್ರಮಾಗಚ್ಛ ಸುವ್ರತೇ ।
ವಿಷ್ಣುನಾ ಸಹಿತೇ ದೇವಿ ಜಗನ್ಮಾತಃ ಪ್ರಸೀದ ಮೇ ॥ 32 ॥
ಕ್ಷೀರಾಂಬುಧಿಸ್ಥಿತೇ ಲಕ್ಷ್ಮಿ ಸಮಾಗಚ್ಛ ಸಮಾಧವಾ ।
ತ್ವತ್ಕೃಪಾದೃಷ್ಟಿಸುಧಯಾ ಸತತಂ ಮಾಂ ವಿಲೋಕಯ ॥ 33 ॥
ರತ್ನಗರ್ಭಸ್ಥಿತೇ ಲಕ್ಷ್ಮಿ ಪರಿಪೂರ್ಣೇ ಹಿರಣ್ಮಯೇ ।
ಸಮಾಗಚ್ಛ ಸಮಾಗಚ್ಛ ಸ್ಥಿತ್ವಾಽಽಶು ಪುರತೋ ಮಮ ॥ 34 ॥
ಸ್ಥಿರಾ ಭವ ಮಹಾಲಕ್ಷ್ಮಿ ನಿಶ್ಚಲಾ ಭವ ನಿರ್ಮಲೇ ।
ಪ್ರಸನ್ನೇ ಕಮಲೇ ದೇವಿ ಪ್ರಸನ್ನಹೃದಯಾ ಭವ ॥ 35 ॥
ಶ್ರೀಧರೇ ಶ್ರೀಮಹಾಭೂತೇ ತ್ವದಂತಃಸ್ಥಂ ಮಹಾನಿಧಿಮ್ ।
ಶೀಘ್ರಮುದ್ಧೃತ್ಯ ಪುರತಃ ಪ್ರದರ್ಶಯ ಸಮರ್ಪಯ ॥ 36 ॥
ವಸುಂಧರೇ ಶ್ರೀವಸುಧೇ ವಸುದೋಗ್ಧ್ರಿ ಕೃಪಾಮಯೇ ।
ತ್ವತ್ಕುಕ್ಷಿಗತಸರ್ವಸ್ವಂ ಶೀಘ್ರಂ ಮೇ ಸಂಪ್ರದರ್ಶಯ ॥ 37 ॥
ವಿಷ್ಣುಪ್ರಿಯೇ ರತ್ನಗರ್ಭೇ ಸಮಸ್ತಫಲದೇ ಶಿವೇ ।
ತ್ವದ್ಗರ್ಭಗತಹೇಮಾದೀನ್ ಸಂಪ್ರದರ್ಶಯ ದರ್ಶಯ ॥ 38 ॥
ರಸಾತಲಗತೇ ಲಕ್ಷ್ಮಿ ಶೀಘ್ರಮಾಗಚ್ಛ ಮೇ ಪುರಃ ।
ನ ಜಾನೇ ಪರಮಂ ರೂಪಂ ಮಾತರ್ಮೇ ಸಂಪ್ರದರ್ಶಯ ॥ 39 ॥
ಆವಿರ್ಭವ ಮನೋವೇಗಾಚ್ಛೀಘ್ರಮಾಗಚ್ಛ ಮೇ ಪುರಃ ।
ಮಾ ವತ್ಸ ಭೈರಿಹೇತ್ಯುಕ್ತ್ವಾ ಕಾಮಂ ಗೌರಿವ ರಕ್ಷ ಮಾಮ್ ॥ 40 ॥
ದೇವಿ ಶೀಘ್ರಂ ಸಮಾಗಚ್ಛ ಧರಣೀಗರ್ಭಸಂಸ್ಥಿತೇ ।
ಮಾತಸ್ತ್ವದ್ಭೃತ್ಯಭೃತ್ಯೋಽಹಂ ಮೃಗಯೇ ತ್ವಾಂ ಕುತೂಹಲಾತ್ ॥ 41 ॥
ಉತ್ತಿಷ್ಠ ಜಾಗೃಹಿ ತ್ವಂ ಮೇ ಸಮುತ್ತಿಷ್ಠ ಸುಜಾಗೃಹಿ ।
ಅಕ್ಷಯಾನ್ ಹೇಮಕಲಶಾನ್ ಸುವರ್ಣೇನ ಸುಪೂರಿತಾನ್ ॥ 42 ॥
ನಿಕ್ಷೇಪಾನ್ಮೇ ಸಮಾಕೃಷ್ಯ ಸಮುದ್ಧೃತ್ಯ ಮಮಾಗ್ರತಃ ।
ಸಮುನ್ನತಾನನಾ ಭೂತ್ವಾ ಸಮಾಧೇಹಿ ಧರಾಂತರಾತ್ ॥ 43 ॥
ಮತ್ಸನ್ನಿಧಿಂ ಸಮಾಗಚ್ಛ ಮದಾಹಿತಕೃಪಾರಸಾತ್ ।
ಪ್ರಸೀದ ಶ್ರೇಯಸಾಂ ದೋಗ್ಧ್ರೀ ಲಕ್ಷ್ಮೀರ್ಮೇ ನಯನಾಗ್ರತಃ ॥ 44 ॥
ಅತ್ರೋಪವಿಶ ಲಕ್ಷ್ಮಿ ತ್ವಂ ಸ್ಥಿರಾ ಭವ ಹಿರಣ್ಮಯೇ ।
ಸುಸ್ಥಿರಾ ಭವ ಸಂಪ್ರೀತ್ಯಾ ಪ್ರಸೀದ ವರದಾ ಭವ ॥ 45 ॥
ಆನೀತಾಂಸ್ತು ತಥಾ ದೇವಿ ನಿಧೀನ್ಮೇ ಸಂಪ್ರದರ್ಶಯ ।
ಅದ್ಯ ಕ್ಷಣೇನ ಸಹಸಾ ದತ್ತ್ವಾ ಸಂರಕ್ಷ ಮಾಂ ಸದಾ ॥ 46 ॥
ಮಯಿ ತಿಷ್ಠ ತಥಾ ನಿತ್ಯಂ ಯಥೇಂದ್ರಾದಿಷು ತಿಷ್ಠಸಿ ।
ಅಭಯಂ ಕುರು ಮೇ ದೇವಿ ಮಹಾಲಕ್ಷ್ಮೀರ್ನಮೋಽಸ್ತು ತೇ ॥ 47 ॥
ಸಮಾಗಚ್ಛ ಮಹಾಲಕ್ಷ್ಮಿ ಶುದ್ಧಜಾಂಬೂನದಪ್ರಭೇ ।
ಪ್ರಸೀದ ಪುರತಃ ಸ್ಥಿತ್ವಾ ಪ್ರಣತಂ ಮಾಂ ವಿಲೋಕಯ ॥ 48 ॥
ಲಕ್ಷ್ಮೀರ್ಭುವಂ ಗತಾ ಭಾಸಿ ಯತ್ರ ಯತ್ರ ಹಿರಣ್ಮಯೀ ।
ತತ್ರ ತತ್ರ ಸ್ಥಿತಾ ತ್ವಂ ಮೇ ತವ ರೂಪಂ ಪ್ರದರ್ಶಯ ॥ 49 ॥
ಕ್ರೀಡಂತೀ ಬಹುಧಾ ಭೂಮೌ ಪರಿಪೂರ್ಣಕೃಪಾಮಯಿ ।
ಮಮ ಮೂರ್ಧನಿ ತೇ ಹಸ್ತಮವಿಲಂಬಿತಮರ್ಪಯ ॥ 50 ॥
ಫಲದ್ಭಾಗ್ಯೋದಯೇ ಲಕ್ಷ್ಮಿ ಸಮಸ್ತಪುರವಾಸಿನೀ ।
ಪ್ರಸೀದ ಮೇ ಮಹಾಲಕ್ಷ್ಮಿ ಪರಿಪೂರ್ಣಮನೋರಥೇ ॥ 51 ॥
ಅಯೋಧ್ಯಾದಿಷು ಸರ್ವೇಷು ನಗರೇಷು ಸಮಾಸ್ಥಿತೇ ।
ವೈಭವೈರ್ವಿವಿಧೈರ್ಯುಕ್ತೈಃ ಸಮಾಗಚ್ಛ ಮುದಾನ್ವಿತೇ ॥ 52 ॥
ಸಮಾಗಚ್ಛ ಸಮಾಗಚ್ಛ ಮಮಾಗ್ರೇ ಭವ ಸುಸ್ಥಿರಾ ।
ಕರುಣಾರಸನಿಷ್ಯಂದನೇತ್ರದ್ವಯ ವಿಲಾಸಿನೀ ॥ 53 ॥ [ನಿಷ್ಪನ್ನ]
ಸನ್ನಿಧತ್ಸ್ವ ಮಹಾಲಕ್ಷ್ಮಿ ತ್ವತ್ಪಾಣಿಂ ಮಮ ಮಸ್ತಕೇ ।
ಕರುಣಾಸುಧಯಾ ಮಾಂ ತ್ವಮಭಿಷಿಂಚ್ಯ ಸ್ಥಿರಂ ಕುರು ॥ 54 ॥
ಸರ್ವರಾಜಗೃಹೇ ಲಕ್ಷ್ಮಿ ಸಮಾಗಚ್ಛ ಬಲಾನ್ವಿತೇ । [ಮುದಾನ್ವಿತೇ]
ಸ್ಥಿತ್ವಾಽಽಶು ಪುರತೋ ಮೇಽದ್ಯ ಪ್ರಸಾದೇನಾಽಭಯಂ ಕುರು ॥ 55 ॥
ಸಾದರಂ ಮಸ್ತಕೇ ಹಸ್ತಂ ಮಮ ತ್ವಂ ಕೃಪಯಾರ್ಪಯ ।
ಸರ್ವರಾಜಗೃಹೇ ಲಕ್ಷ್ಮಿ ತ್ವತ್ಕಲಾ ಮಯಿ ತಿಷ್ಠತು ॥ 56 ॥
ಆದ್ಯಾದಿ ಶ್ರೀಮಹಾಲಕ್ಷ್ಮಿ ವಿಷ್ಣುವಾಮಾಂಕಸಂಸ್ಥಿತೇ ।
ಪ್ರತ್ಯಕ್ಷಂ ಕುರು ಮೇ ರೂಪಂ ರಕ್ಷ ಮಾಂ ಶರಣಾಗತಮ್ ॥ 57 ॥
ಪ್ರಸೀದ ಮೇ ಮಹಾಲಕ್ಷ್ಮಿ ಸುಪ್ರಸೀದ ಮಹಾಶಿವೇ ।
ಅಚಲಾ ಭವ ಸಂಪ್ರೀತ್ಯಾ ಸುಸ್ಥಿರಾ ಭವ ಮದ್ಗೃಹೇ ॥ 58 ॥
ಯಾವತ್ತಿಷ್ಠಂತಿ ವೇದಾಶ್ಚ ಯಾವಚ್ಚಂದ್ರದಿವಾಕರೌ ।
ಯಾವದ್ವಿಷ್ಣುಶ್ಚ ಯಾವತ್ತ್ವಂ ತಾವತ್ಕುರು ಕೃಪಾಂ ಮಯಿ ॥ 59 ॥
ಚಾಂದ್ರೀಕಲಾ ಯಥಾ ಶುಕ್ಲೇ ವರ್ಧತೇ ಸಾ ದಿನೇ ದಿನೇ ।
ತಥಾ ದಯಾ ತೇ ಮಯ್ಯೇವ ವರ್ಧತಾಮಭಿವರ್ಧತಾಮ್ ॥ 60 ॥
ಯಥಾ ವೈಕುಂಠನಗರೇ ಯಥಾ ವೈ ಕ್ಷೀರಸಾಗರೇ ।
ತಥಾ ಮದ್ಭವನೇ ತಿಷ್ಠ ಸ್ಥಿರಂ ಶ್ರೀವಿಷ್ಣುನಾ ಸಹ ॥ 61 ॥
ಯೋಗಿನಾಂ ಹೃದಯೇ ನಿತ್ಯಂ ಯಥಾ ತಿಷ್ಠಸಿ ವಿಷ್ಣುನಾ ।
ತಥಾ ಮದ್ಭವನೇ ತಿಷ್ಠ ಸ್ಥಿರಂ ಶ್ರೀವಿಷ್ಣುನಾ ಸಹ ॥ 62 ॥
ನಾರಾಯಣಸ್ಯ ಹೃದಯೇ ಭವತೀ ಯಥಾಸ್ತೇ
ನಾರಾಯಣೋಽಪಿ ತವ ಹೃತ್ಕಮಲೇ ಯಥಾಸ್ತೇ ।
ನಾರಾಯಣಸ್ತ್ವಮಪಿ ನಿತ್ಯಮುಭೌ ತಥೈವ
ತೌ ತಿಷ್ಠತಾಂ ಹೃದಿ ಮಮಾಪಿ ದಯಾನ್ವಿತೌ ಶ್ರೀಃ ॥ 63 ॥
ವಿಜ್ಞಾನವೃದ್ಧಿಂ ಹೃದಯೇ ಕುರು ಶ್ರೀಃ
ಸೌಭಾಗ್ಯವೃದ್ಧಿಂ ಕುರು ಮೇ ಗೃಹೇ ಶ್ರೀಃ ।
ದಯಾಸುವೃದ್ಧಿಂ ಕುರುತಾಂ ಮಯಿ ಶ್ರೀಃ
ಸುವರ್ಣವೃದ್ಧಿಂ ಕುರು ಮೇ ಗೃಹೇ ಶ್ರೀಃ ॥ 64 ॥
ನ ಮಾಂ ತ್ಯಜೇಥಾಃ ಶ್ರಿತಕಲ್ಪವಲ್ಲಿ
ಸದ್ಭಕ್ತಚಿಂತಾಮಣಿಕಾಮಧೇನೋ ।
ವಿಶ್ವಸ್ಯ ಮಾತರ್ಭವ ಸುಪ್ರಸನ್ನಾ
ಗೃಹೇ ಕಲತ್ರೇಷು ಚ ಪುತ್ರವರ್ಗೇ ॥ 65 ॥
ಆದ್ಯಾದಿಮಾಯೇ ತ್ವಮಜಾಂಡಬೀಜಂ
ತ್ವಮೇವ ಸಾಕಾರನಿರಾಕೃತಿಸ್ತ್ವಮ್ ।
ತ್ವಯಾ ಧೃತಾಶ್ಚಾಬ್ಜಭವಾಂಡಸಂಘಾ-
-ಶ್ಚಿತ್ರಂ ಚರಿತ್ರಂ ತವ ದೇವಿ ವಿಷ್ಣೋಃ ॥ 66 ॥
ಬ್ರಹ್ಮರುದ್ರಾದಯೋ ದೇವಾ ವೇದಾಶ್ಚಾಪಿ ನ ಶಕ್ನುಯುಃ ।
ಮಹಿಮಾನಂ ತವ ಸ್ತೋತುಂ ಮಂದೋಽಹಂ ಶಕ್ನುಯಾಂ ಕಥಮ್ ॥ 67 ॥
ಅಂಬ ತ್ವದ್ವತ್ಸವಾಕ್ಯಾನಿ ಸೂಕ್ತಾಸೂಕ್ತಾನಿ ಯಾನಿ ಚ ।
ತಾನಿ ಸ್ವೀಕುರು ಸರ್ವಜ್ಞೇ ದಯಾಲುತ್ವೇನ ಸಾದರಮ್ ॥ 68 ॥
ಭವತೀಂ ಶರಣಂ ಗತ್ವಾ ಕೃತಾರ್ಥಾಃ ಸ್ಯುಃ ಪುರಾತನಾಃ ।
ಇತಿ ಸಂಚಿಂತ್ಯ ಮನಸಾ ತ್ವಾಮಹಂ ಶರಣಂ ವ್ರಜೇ ॥ 69 ॥
ಅನಂತಾ ನಿತ್ಯಸುಖಿನಸ್ತ್ವದ್ಭಕ್ತಾಸ್ತ್ವತ್ಪರಾಯಣಾಃ ।
ಇತಿ ವೇದಪ್ರಮಾಣಾದ್ಧಿ ದೇವಿ ತ್ವಾಂ ಶರಣಂ ವ್ರಜೇ ॥ 70 ॥
ತವ ಪ್ರತಿಜ್ಞಾ ಮದ್ಭಕ್ತಾ ನ ನಶ್ಯಂತೀತ್ಯಪಿ ಕ್ವಚಿತ್ ।
ಇತಿ ಸಂಚಿಂತ್ಯ ಸಂಚಿಂತ್ಯ ಪ್ರಾಣಾನ್ ಸಂಧಾರಯಾಮ್ಯಹಮ್ ॥ 71 ॥
ತ್ವದಧೀನಸ್ತ್ವಹಂ ಮಾತಸ್ತ್ವತ್ಕೃಪಾ ಮಯಿ ವಿದ್ಯತೇ ।
ಯಾವತ್ಸಂಪೂರ್ಣಕಾಮಃ ಸ್ಯಾತ್ತಾವದ್ದೇಹಿ ದಯಾನಿಧೇ ॥ 72 ॥
ಕ್ಷಣಮಾತ್ರಂ ನ ಶಕ್ನೋಮಿ ಜೀವಿತುಂ ತ್ವತ್ಕೃಪಾಂ ವಿನಾ ।
ನ ಜೀವಂತೀಹ ಜಲಜಾ ಜಲಂ ತ್ಯಕ್ತ್ವಾ ಜಲಗ್ರಹಾಃ ॥ 73 ॥
ಯಥಾ ಹಿ ಪುತ್ರವಾತ್ಸಲ್ಯಾಜ್ಜನನೀ ಪ್ರಸ್ನುತಸ್ತನೀ ।
ವತ್ಸಂ ತ್ವರಿತಮಾಗತ್ಯ ಸಂಪ್ರೀಣಯತಿ ವತ್ಸಲಾ ॥ 74 ॥
ಯದಿ ಸ್ಯಾಂ ತವ ಪುತ್ರೋಽಹಂ ಮಾತಾ ತ್ವಂ ಯದಿ ಮಾಮಕೀ ।
ದಯಾಪಯೋಧರಸ್ತನ್ಯಸುಧಾಭಿರಭಿಷಿಂಚ ಮಾಮ್ ॥ 75 ॥
ಮೃಗ್ಯೋ ನ ಗುಣಲೇಶೋಽಪಿ ಮಯಿ ದೋಷೈಕಮಂದಿರೇ ।
ಪಾಂಸೂನಾಂ ವೃಷ್ಟಿಬಿಂದೂನಾಂ ದೋಷಾಣಾಂ ಚ ನ ಮೇ ಮತಿಃ ॥ 76 ॥
ಪಾಪಿನಾಮಹಮೇವಾಗ್ರ್ಯೋ ದಯಾಲೂನಾಂ ತ್ವಮಗ್ರಣೀಃ ।
ದಯನೀಯೋ ಮದನ್ಯೋಽಸ್ತಿ ತವ ಕೋಽತ್ರ ಜಗತ್ತ್ರಯೇ ॥ 77 ॥
ವಿಧಿನಾಹಂ ನ ಸೃಷ್ಟಶ್ಚೇನ್ನ ಸ್ಯಾತ್ತವ ದಯಾಲುತಾ ।
ಆಮಯೋ ವಾ ನ ಸೃಷ್ಟಶ್ಚೇದೌಷಧಸ್ಯ ವೃಥೋದಯಃ ॥ 78 ॥
ಕೃಪಾ ಮದಗ್ರಜಾ ಕಿಂ ತೇ ಅಹಂ ಕಿಂ ವಾ ತದಗ್ರಜಃ ।
ವಿಚಾರ್ಯ ದೇಹಿ ಮೇ ವಿತ್ತಂ ತವ ದೇವಿ ದಯಾನಿಧೇ ॥ 79 ॥
ಮಾತಾ ಪಿತಾ ತ್ವಂ ಗುರುಸದ್ಗತಿಃ ಶ್ರೀ-
-ಸ್ತ್ವಮೇವ ಸಂಜೀವನಹೇತುಭೂತಾ ।
ಅನ್ಯಂ ನ ಮನ್ಯೇ ಜಗದೇಕನಾಥೇ
ತ್ವಮೇವ ಸರ್ವಂ ಮಮ ದೇವಿ ಸತ್ಯೇ ॥ 80 ॥
ಆದ್ಯಾದಿಲಕ್ಷ್ಮೀರ್ಭವ ಸುಪ್ರಸನ್ನಾ
ವಿಶುದ್ಧವಿಜ್ಞಾನಸುಖೈಕದೋಗ್ಧ್ರೀ ।
ಅಜ್ಞಾನಹಂತ್ರೀ ತ್ರಿಗುಣಾತಿರಿಕ್ತಾ
ಪ್ರಜ್ಞಾನನೇತ್ರೀ ಭವ ಸುಪ್ರಸನ್ನಾ ॥ 81 ॥
ಅಶೇಷವಾಗ್ಜಾಡ್ಯಮಲಾಪಹಂತ್ರೀ
ನವಂ ನವಂ ಸ್ಪಷ್ಟಸುವಾಕ್ಪ್ರದಾಯಿನೀ ।
ಮಮೇಹ ಜಿಹ್ವಾಗ್ರ ಸುರಂಗನರ್ತಕೀ [ನರ್ತಿನೀ]
ಭವ ಪ್ರಸನ್ನಾ ವದನೇ ಚ ಮೇ ಶ್ರೀಃ ॥ 82 ॥
ಸಮಸ್ತಸಂಪತ್ಸುವಿರಾಜಮಾನಾ
ಸಮಸ್ತತೇಜಶ್ಚಯಭಾಸಮಾನಾ ।
ವಿಷ್ಣುಪ್ರಿಯೇ ತ್ವಂ ಭವ ದೀಪ್ಯಮಾನಾ
ವಾಗ್ದೇವತಾ ಮೇ ನಯನೇ ಪ್ರಸನ್ನಾ ॥ 83 ॥
ಸರ್ವಪ್ರದರ್ಶೇ ಸಕಲಾರ್ಥದೇ ತ್ವಂ
ಪ್ರಭಾಸುಲಾವಣ್ಯದಯಾಪ್ರದೋಗ್ಧ್ರೀ ।
ಸುವರ್ಣದೇ ತ್ವಂ ಸುಮುಖೀ ಭವ ಶ್ರೀ-
-ರ್ಹಿರಣ್ಮಯೀ ಮೇ ನಯನೇ ಪ್ರಸನ್ನಾ ॥ 84 ॥
ಸರ್ವಾರ್ಥದಾ ಸರ್ವಜಗತ್ಪ್ರಸೂತಿಃ
ಸರ್ವೇಶ್ವರೀ ಸರ್ವಭಯಾಪಹಂತ್ರೀ ।
ಸರ್ವೋನ್ನತಾ ತ್ವಂ ಸುಮುಖೀ ಭವ ಶ್ರೀ-
-ರ್ಹಿರಣ್ಮಯೀ ಮೇ ನಯನೇ ಪ್ರಸನ್ನಾ ॥ 85 ॥
ಸಮಸ್ತವಿಘ್ನೌಘವಿನಾಶಕಾರಿಣೀ
ಸಮಸ್ತಭಕ್ತೋದ್ಧರಣೇ ವಿಚಕ್ಷಣಾ ।
ಅನಂತಸೌಭಾಗ್ಯಸುಖಪ್ರದಾಯಿನೀ
ಹಿರಣ್ಮಯೀ ಮೇ ನಯನೇ ಪ್ರಸನ್ನಾ ॥ 86 ॥
ದೇವಿ ಪ್ರಸೀದ ದಯನೀಯತಮಾಯ ಮಹ್ಯಂ
ದೇವಾಧಿನಾಥಭವದೇವಗಣಾಭಿವಂದ್ಯೇ ।
ಮಾತಸ್ತಥೈವ ಭವ ಸನ್ನಿಹಿತಾ ದೃಶೋರ್ಮೇ
ಪತ್ಯಾ ಸಮಂ ಮಮ ಮುಖೇ ಭವ ಸುಪ್ರಸನ್ನಾ ॥ 87 ॥
ಮಾ ವತ್ಸ ಭೈರಭಯದಾನಕರೋಽರ್ಪಿತಸ್ತೇ
ಮೌಲೌ ಮಮೇತಿ ಮಯಿ ದೀನದಯಾನುಕಂಪೇ ।
ಮಾತಃ ಸಮರ್ಪಯ ಮುದಾ ಕರುಣಾಕಟಾಕ್ಷಂ
ಮಾಂಗಳ್ಯಬೀಜಮಿಹ ನಃ ಸೃಜ ಜನ್ಮ ಮಾತಃ ॥ 88 ॥
ಕಟಾಕ್ಷ ಇಹ ಕಾಮಧುಕ್ತವ ಮನಸ್ತು ಚಿಂತಾಮಣಿಃ
ಕರಃ ಸುರತರುಃ ಸದಾ ನವನಿಧಿಸ್ತ್ವಮೇವೇಂದಿರೇ ।
ಭವೇ ತವ ದಯಾರಸೋ ಮಮ ರಸಾಯನಂ ಚಾನ್ವಹಂ
ಮುಖಂ ತವ ಕಲಾನಿಧಿರ್ವಿವಿಧವಾಂಛಿತಾರ್ಥಪ್ರದಮ್ ॥ 89 ॥
ಯಥಾ ರಸಸ್ಪರ್ಶನತೋಽಯಸೋಽಪಿ
ಸುವರ್ಣತಾ ಸ್ಯಾತ್ಕಮಲೇ ತಥಾ ತೇ ।
ಕಟಾಕ್ಷಸಂಸ್ಪರ್ಶನತೋ ಜನಾನಾ-
-ಮಮಂಗಳಾನಾಮಪಿ ಮಂಗಳತ್ವಮ್ ॥ 90 ॥
ದೇಹೀತಿ ನಾಸ್ತೀತಿ ವಚಃ ಪ್ರವೇಶಾ-
-ದ್ಭೀತೋ ರಮೇ ತ್ವಾಂ ಶರಣಂ ಪ್ರಪದ್ಯೇ ।
ಅತಃ ಸದಾಽಸ್ಮಿನ್ನಭಯಪ್ರದಾ ತ್ವಂ
ಸಹೈವ ಪತ್ಯಾ ಮಯಿ ಸನ್ನಿಧೇಹಿ ॥ 91 ॥
ಕಲ್ಪದ್ರುಮೇಣ ಮಣಿನಾ ಸಹಿತಾ ಸುರಮ್ಯಾ
ಶ್ರೀಸ್ತೇ ಕಲಾ ಮಯಿ ರಸೇನ ರಸಾಯನೇನ ।
ಆಸ್ತಾಂ ಯತೋ ಮಮ ಶಿರಃಕರದೃಷ್ಟಿಪಾದ-
-ಸ್ಪೃಷ್ಟಾಃ ಸುವರ್ಣವಪುಷಃ ಸ್ಥಿರಜಂಗಮಾಃ ಸ್ಯುಃ ॥ 92 ॥
ಆದ್ಯಾದಿವಿಷ್ಣೋಃ ಸ್ಥಿರಧರ್ಮಪತ್ನೀ
ತ್ವಮೇವ ಪತ್ಯಾ ಮಯಿ ಸನ್ನಿಧೇಹಿ ।
ಆದ್ಯಾದಿಲಕ್ಷ್ಮಿ ತ್ವದನುಗ್ರಹೇಣ
ಪದೇ ಪದೇ ಮೇ ನಿಧಿದರ್ಶನಂ ಸ್ಯಾತ್ ॥ 93 ॥
ಆದ್ಯಾದಿಲಕ್ಷ್ಮೀಹೃದಯಂ ಪಠೇದ್ಯಃ
ಸ ರಾಜ್ಯಲಕ್ಷ್ಮೀಮಚಲಾಂ ತನೋತಿ ।
ಮಹಾದರಿದ್ರೋಽಪಿ ಭವೇದ್ಧನಾಢ್ಯ-
-ಸ್ತದನ್ವಯೇ ಶ್ರೀಃ ಸ್ಥಿರತಾಂ ಪ್ರಯಾತಿ ॥ 94 ॥
ಯಸ್ಯ ಸ್ಮರಣಮಾತ್ರೇಣ ತುಷ್ಟಾ ಸ್ಯಾದ್ವಿಷ್ಣುವಲ್ಲಭಾ ।
ತಸ್ಯಾಭೀಷ್ಟಂ ದದತ್ಯಾಶು ತಂ ಪಾಲಯತಿ ಪುತ್ರವತ್ ॥ 95 ॥
ಇದಂ ರಹಸ್ಯಂ ಹೃದಯಂ ಸರ್ವಕಾಮಫಲಪ್ರದಮ್ ।
ಜಪಃ ಪಂಚಸಹಸ್ರಂ ತು ಪುರಶ್ಚರಣಮುಚ್ಯತೇ ॥ 96 ॥
ತ್ರಿಕಾಲಮೇಕಕಾಲಂ ವಾ ನರೋ ಭಕ್ತಿಸಮನ್ವಿತಃ ।
ಯಃ ಪಠೇಚ್ಛೃಣುಯಾದ್ವಾಪಿ ಸ ಯಾತಿ ಪರಮಾಂ ಶ್ರಿಯಮ್ ॥ 97 ॥
ಮಹಾಲಕ್ಷ್ಮೀಂ ಸಮುದ್ದಿಶ್ಯ ನಿಶಿ ಭಾರ್ಗವವಾಸರೇ ।
ಇದಂ ಶ್ರೀಹೃದಯಂ ಜಪ್ತ್ವಾ ಪಂಚವಾರಂ ಧನೀ ಭವೇತ್ ॥ 98 ॥
ಅನೇನ ಹೃದಯೇನಾನ್ನಂ ಗರ್ಭಿಣ್ಯಾ ಅಭಿಮಂತ್ರಿತಮ್ ।
ದದಾತಿ ತತ್ಕುಲೇ ಪುತ್ರೋ ಜಾಯತೇ ಶ್ರೀಪತಿಃ ಸ್ವಯಮ್ ॥ 99 ॥
ನರೇಣ ವಾಽಥವಾ ನಾರ್ಯಾ ಲಕ್ಷ್ಮೀಹೃದಯಮಂತ್ರಿತೇ ।
ಜಲೇ ಪೀತೇ ಚ ತದ್ವಂಶೇ ಮಂದಭಾಗ್ಯೋ ನ ಜಾಯತೇ ॥ 100 ॥
ಯ ಆಶ್ವಿನೇ ಮಾಸಿ ಚ ಶುಕ್ಲಪಕ್ಷೇ
ರಮೋತ್ಸವೇ ಸನ್ನಿಹಿತೇ ಸುಭಕ್ತ್ಯಾ ।
ಪಠೇತ್ತಥೈಕೋತ್ತರವಾರವೃದ್ಧ್ಯಾ
ಲಭೇತ್ಸ ಸೌವರ್ಣಮಯೀಂ ಸುವೃಷ್ಟಿಮ್ ॥ 101 ॥
ಯ ಏಕಭಕ್ತೋಽನ್ವಹಮೇಕವರ್ಷಂ
ವಿಶುದ್ಧಧೀಃ ಸಪ್ತತಿವಾರಜಾಪೀ ।
ಸ ಮಂದಭಾಗ್ಯೋಽಪಿ ರಮಾಕಟಾಕ್ಷಾ-
-ದ್ಭವೇತ್ಸಹಸ್ರಾಕ್ಷಶತಾಧಿಕಶ್ರೀಃ ॥ 102 ॥
ಶ್ರೀಶಾಂಘ್ರಿಭಕ್ತಿಂ ಹರಿದಾಸದಾಸ್ಯಂ
ಪ್ರಸನ್ನಮಂತ್ರಾರ್ಥದೃಢೈಕನಿಷ್ಠಾಮ್ ।
ಗುರೋಃ ಸ್ಮೃತಿಂ ನಿರ್ಮಲಬೋಧಬುದ್ಧಿಂ
ಪ್ರದೇಹಿ ಮಾತಃ ಪರಮಂ ಪದಂ ಶ್ರೀಃ ॥ 103 ॥
ಪೃಥ್ವೀಪತಿತ್ವಂ ಪುರುಷೋತ್ತಮತ್ವಂ
ವಿಭೂತಿವಾಸಂ ವಿವಿಧಾರ್ಥಸಿದ್ಧಿಮ್ ।
ಸಂಪೂರ್ಣಕೀರ್ತಿಂ ಬಹುವರ್ಷಭೋಗಂ
ಪ್ರದೇಹಿ ಮೇ ಲಕ್ಷ್ಮಿ ಪುನಃ ಪುನಸ್ತ್ವಮ್ ॥ 104 ॥
ವಾದಾರ್ಥಸಿದ್ಧಿಂ ಬಹುಲೋಕವಶ್ಯಂ
ವಯಃ ಸ್ಥಿರತ್ವಂ ಲಲನಾಸುಭೋಗಮ್ ।
ಪೌತ್ರಾದಿಲಬ್ಧಿಂ ಸಕಲಾರ್ಥಸಿದ್ಧಿಂ
ಪ್ರದೇಹಿ ಮೇ ಭಾರ್ಗವಿ ಜನ್ಮಜನ್ಮನಿ ॥ 105 ॥
ಸುವರ್ಣವೃದ್ಧಿಂ ಕುರು ಮೇ ಗೃಹೇ ಶ್ರೀಃ
ಸುಧಾನ್ಯವೃದ್ಧಿಂ ಕುರೂ ಮೇ ಗೃಹೇ ಶ್ರೀಃ ।
ಕಲ್ಯಾಣವೃದ್ಧಿಂ ಕುರು ಮೇ ಗೃಹೇ ಶ್ರೀಃ
ವಿಭೂತಿವೃದ್ಧಿಂ ಕುರು ಮೇ ಗೃಹೇ ಶ್ರೀಃ ॥ 106 ॥
ಧ್ಯಾಯೇಲ್ಲಕ್ಷ್ಮೀಂ ಪ್ರಹಸಿತಮುಖೀಂ ಕೋಟಿಬಾಲಾರ್ಕಭಾಸಾಂ
ವಿದ್ಯುದ್ವರ್ಣಾಂಬರವರಧರಾಂ ಭೂಷಣಾಢ್ಯಾಂ ಸುಶೋಭಾಮ್ ।
ಬೀಜಾಪೂರಂ ಸರಸಿಜಯುಗಂ ಬಿಭ್ರತೀಂ ಸ್ವರ್ಣಪಾತ್ರಂ
ಭರ್ತ್ರಾಯುಕ್ತಾಂ ಮುಹುರಭಯದಾಂ ಮಹ್ಯಮಪ್ಯಚ್ಯುತಶ್ರೀಃ ॥ 107 ॥
ಗುಹ್ಯಾತಿಗುಹ್ಯಗೋಪ್ತ್ರೀ ತ್ವಂ ಗೃಹಾಣಾಸ್ಮತ್ಕೃತಂ ಜಪಮ್ ।
ಸಿದ್ಧಿರ್ಭವತು ಮೇ ದೇವಿ ತ್ವತ್ಪ್ರಸಾದಾನ್ಮಯಿ ಸ್ಥಿತಾ ॥ 108 ॥
ಇತಿ ಶ್ರೀಅಥರ್ವಣರಹಸ್ಯೇ ಶ್ರೀಲಕ್ಷ್ಮೀಹೃದಯಸ್ತೋತ್ರಂ ಸಂಪೂರ್ಣಮ್ ॥
🌹🙏🏻🌹ಓಂ ನಮೋ ಶ್ರೀ ಮಹಾ ಲಕ್ಷ್ಮೀ ದೇವಿಯೇ ನಮಃ.
🌹🙏🏻🌹
🏵️🙏🏵️. ಶ್ರೀ ಕೃಷ್ಣಾರ್ಪಣಮಸ್ತು. 🏵️🙏🏵️
🌹🙏🏻🌹ಸರ್ವೇ ಜನಾಃ ಸುಖಿನೋ ಭವಂತು. 🌹🙏🏻🌹
🏵️🏵️🏵️🏵️🏵️🏵️🏵️🏵️🏵️🏵️🏵️🏵️🏵️🏵️🏵️🏵️

ದೇವಾಲಯಗಳ ಚಕ್ರವರ್ತಿ ಇಟಗಿಯ ಮಹಾದೇವ ದೇವಾಲಯದ ವಿಶೇಷತೆ


ದೇವಾಲಯ ಚಕ್ರವರ್ತಿ - ಇಟಗಿ ಮಹಾದೇವ ದೇವಸ್ಥಾನ

ದೇವಾಲಯ ನಿರ್ಮಾಣದ ಕಲೆಯನ್ನು ಪರಿಪೂರ್ಣಗೊಳಿಸಿದ ಕೀರ್ತಿ ಹೊಯ್ಸಳರಿಗೆ ಸಲ್ಲುತ್ತದೆಯಾದರೂ, ಮೊದಲ ಪ್ರಗತಿಯನ್ನು ಕಲ್ಯಾಣದ ಚಾಲುಕ್ಯರು ಮಾಡಿದರು. ಕಲ್ಯಾಣ ಚಾಲುಕ್ಯ ದೇವಾಲಯದ ವಾಸ್ತುಶಿಲ್ಪದ ಅತ್ಯುತ್ತಮ ಮಾದರಿಯೆಂದರೆ ಇಟಗಿಯ ಮಹಾದೇವ ದೇವಾಲಯ. ಹಂಪಿಯಿಂದ ಕೇವಲ ಒಂದು ಗಂಟೆಯ ಪ್ರಯಾಣದಲ್ಲಿ, ಈ ದೇವಾಲಯವನ್ನು ದೇವಾಲಯ ಚಕ್ರವರ್ತಿ ಎಂದು 1112 CE ದಿನಾಂಕದ ಶಾಸನದಲ್ಲಿ ವಿವರಿಸಲಾಗಿದೆ ಅಂದರೆ ದೇವಾಲಯಗಳಲ್ಲಿ ಚಕ್ರವರ್ತಿ. ಕಲಾ ಇತಿಹಾಸಕಾರ ಹೆನ್ರಿ ಕೂಸೆನ್ಸ್ ಈ ಸ್ಮಾರಕವನ್ನು 'ಹಳೇಬೀಡು ನಂತರ ಕನ್ನಡ ನಾಡಿನಲ್ಲೇ ಅತ್ಯುತ್ತಮ' ಎಂದು ಬಣ್ಣಿಸಿದ್ದಾರೆ.

ಈ ದೇವಾಲಯವನ್ನು 1112 CE ನಲ್ಲಿ ರಾಜ ವಿಕ್ರಮಾದಿತ್ಯ VI ರ ದಂಡನಾಯಕ (ಸೇನೆಯ ಜನರಲ್) ಮಹಾದೇವ ನಿರ್ಮಿಸಿದನು. ಇದು ಪೂರ್ವಾಭಿಮುಖವಾದ ಗರ್ಭಗೃಹವನ್ನು ಹೊಂದಿದ್ದು, ಎರಡು ಮುಖಮಂಟಪಗಳಿಂದ ಸುತ್ತುವರಿದ ಮುಚ್ಚಿದ ಸಭಾಂಗಣಕ್ಕೆ ವೆಸ್ಟಿಬುಲ್ ಮೂಲಕ ಸಂಪರ್ಕಿಸಲಾದ ಲಿಂಗವನ್ನು ಹೊಂದಿದೆ, ಇದು ದೇವಾಲಯದ ಪ್ರವೇಶದ್ವಾರಗಳಾಗಿಯೂ ಕಾರ್ಯನಿರ್ವಹಿಸುತ್ತದೆ. ದೇವಾಲಯದ ಮುಂಭಾಗದಲ್ಲಿ ಮುಖಮಂಟಪ ಎಂದು ಕರೆಯಲ್ಪಡುವ ಮತ್ತೊಂದು ಸ್ತಂಭದ ತೆರೆದ ಸಭಾಂಗಣವಿದೆ, ಕಿರಿದಾದ ಹಾದಿಯ ಮೂಲಕ ಅದಕ್ಕೆ ಸಂಪರ್ಕಿಸಲಾಗಿದೆ. ಕಿರಿದಾದ ಹಾದಿಯು ಲಿಂಗಕ್ಕೆ ಎದುರಾಗಿರುವ ಭಾಗಶಃ ನಾಶವಾದ ನಂದಿಯನ್ನು ಹೊಂದಿದೆ. ಮುಚ್ಚಿದ ಸಭಾಂಗಣದ ದ್ವಾರವು 9 ಜಾಂಬ್‌ಗಳೊಂದಿಗೆ ಜಟಿಲವಾಗಿದೆ, ಪ್ರತಿಯೊಂದೂ ವಿಭಿನ್ನ ವಿನ್ಯಾಸವನ್ನು ಹೊಂದಿದೆ ಮತ್ತು ಕೆಲವು ಮೂರು ಆಯಾಮಗಳಾಗಿವೆ! ಮುಖಮಂಟಪದ ಚಾಕಿ ತಿರುಗಿದ ಸ್ತಂಭಗಳು ಚೆನ್ನಾಗಿ ಕೆತ್ತಲಾದ ತಳಹದಿಗಳನ್ನು ಹೊಂದಿದ್ದು ಪ್ರತಿಯೊಂದಕ್ಕೂ ವಿಭಿನ್ನ ಶಿಲ್ಪಗಳಿವೆ. ದೇವಾಲಯದ ಪ್ರತಿರೋಧದ ತುಣುಕು ದೇವಾಲಯದ ಮಕರತೋರಣ (ಲಿಂಟೆಲ್) ಆಗಿದ್ದು, ಇದನ್ನು ಪರಿಪೂರ್ಣತೆಗೆ ಕೆತ್ತಲಾಗಿದೆ, ಇದು ಚಿಕ್ಕ ಸಂಗೀತಗಾರರಿಂದ ಸುತ್ತುವರೆದಿರುವ ನೃತ್ಯ ಮಾಡುವ ಶಿವನನ್ನು ಚಿತ್ರಿಸುತ್ತದೆ. ಶಿವನ ಎರಡೂ ಬದಿಯಲ್ಲಿ ಚೌರಿಧಾರಿಗಳಿಂದ ಸುತ್ತುವರಿದ ನಿಂತಿರುವ ಭಂಗಿಯಲ್ಲಿ ಬ್ರಹ್ಮ ಮತ್ತು ವಿಷ್ಣು ಇದ್ದಾರೆ. ಮಕರಗಳು ಎಂಬ ಪೌರಾಣಿಕ ಪ್ರಾಣಿಗಳು ಲಿಂಟಲ್‌ನ ಎರಡು ತುದಿಗಳನ್ನು ಮುಚ್ಚುತ್ತವೆ. ಗರ್ಭಗುಡಿಯ ಮೇಲಿರುವ ಗೋಪುರವು ವಿಶಿಷ್ಟವಾದ ಆಕಾರವನ್ನು ಹೊಂದಿದೆ - ನಕ್ಷತ್ರಾಕಾರದ ಪಿರಮಿಡ್ ಮತ್ತು ಪುನರಾವರ್ತಿತ ಲಕ್ಷಣಗಳಿಂದ ಉತ್ತಮವಾಗಿ ಅಲಂಕರಿಸಲ್ಪಟ್ಟಿದೆ. ನೀವು ಹತ್ತಿರದಿಂದ ನೋಡಿದರೆ ಗೋಪುರವನ್ನು ಹತ್ತುತ್ತಿದ್ದಂತೆಯೇ ಅಲ್ಲೊಂದು ಇಲ್ಲೊಂದು ಮಂಗಗಳು ಕಾಣಿಸುತ್ತವೆ. ಈ ದೇವಾಲಯವು ಶೃಂಗಾರಕ್ಕೆ ಹೆಸರುವಾಸಿಯಾಗಿದೆ.

IMG_2852
ಹಿಂಬದಿಯಿಂದ ನೋಡಿದರೆ ಇಟಗಿಯ ಮಹಾದೇವ ದೇವಾಲಯ

ಮುಖ್ಯ ದೇವಾಲಯದ ಉತ್ತರಕ್ಕೆ ಐದು ದೇವಾಲಯಗಳಿವೆ, ಅವುಗಳಲ್ಲಿ ಎರಡು ಮಹಾದೇವನ ಪೋಷಕರಾದ ಮೂರ್ತಿನಾರಾಯಣ ಮತ್ತು ಚಂದ್ರಲೇಶ್ವರಿಗೆ ಸಮರ್ಪಿತವಾಗಿವೆ. ಮುಖ್ಯ ದೇವಾಲಯದ ಸುತ್ತಲೂ ಶಿವಲಿಂಗಗಳಿರುವ 13 ದೇವಾಲಯಗಳಿದ್ದು, ಅವೆಲ್ಲವೂ ಶಿಥಿಲಾವಸ್ಥೆಯಲ್ಲಿವೆ. ಕಾಂಪೌಂಡ್ ಗೋಡೆಗೆ ವಿರುದ್ಧವಾಗಿ ಸಡಿಲವಾದ ಕಲ್ಲುಗಳು, ಸ್ತಂಭಗಳು, ಕಂಬಗಳು ಮತ್ತು ಪ್ರತಿಮೆಗಳು ಬಿದ್ದಿವೆ. ಹುಲ್ಲುಹಾಸಿನ ಮಧ್ಯದಲ್ಲಿ ಬ್ರಹ್ಮನ ವಿರೂಪಗೊಳಿಸಿದ ಪ್ರತಿಮೆಯನ್ನು (ಲಕ್ಕುಂಡಿಯಲ್ಲಿರುವಂತೆ) ಸ್ಥಾಪಿಸಲಾಗಿದೆ.

IMG_2832
ಮಕರತೋರಣ

ಕಲ್ಯಾಣ ಚಾಲುಕ್ಯರು ಮೊದಲು ಸಾಬೂನು ಕಲ್ಲನ್ನು ಮುಖ್ಯ ವಸ್ತುವಾಗಿ ಬಳಸಿದರು. ಅಲ್ಲಿಯವರೆಗೆ ಮರಳುಗಲ್ಲಿನಿಂದ ದೇವಾಲಯಗಳನ್ನು ನಿರ್ಮಿಸಲಾಗುತ್ತಿತ್ತು. ಅಣ್ಣಿಗೇರಿಯಲ್ಲಿರುವ ಅಮೃತೇಶ್ವರ ದೇವಾಲಯವು ಸೋಪ್‌ಸ್ಟೋನ್‌ನಿಂದ ನಿರ್ಮಿಸಲಾದ ಮೊದಲನೆಯದು ಮತ್ತು ಈ ದೇವಾಲಯದ ಮೂಲಮಾದರಿ ಎಂದು ಪರಿಗಣಿಸಲಾಗಿದೆ. ಹೊಯ್ಸಳ ಬಿಲ್ಡರ್‌ಗಳು ಈ ಹೊಸ ವಸ್ತುವನ್ನು ಬಳಸುವುದನ್ನು ಮುಂದುವರೆಸಿದರು ಮತ್ತು ಅದರ ಗುಣಲಕ್ಷಣಗಳನ್ನು ಸಂಪೂರ್ಣವಾಗಿ ಬಳಸಿಕೊಂಡರು.

ದೇವಾಲಯದ ಮುಂಭಾಗದಲ್ಲಿ ಪುಷ್ಕರಣಿ (ಟ್ಯಾಂಕ್) ಇದೆ, ಇದನ್ನು ಇಂದಿಗೂ ಗ್ರಾಮಸ್ಥರು ಬಳಸುತ್ತಾರೆ ಮತ್ತು ದೇವಾಲಯದ ಹಿಂದೆ ಮೆಟ್ಟಿಲುಗಳನ್ನು ಹೊಂದಿರುವ ತೆರೆದ ಬಾವಿ. ಮಹಾದೇವ ದೇವಾಲಯವು ಕರ್ನಾಟಕದ ಕೊಪ್ಪಳ ಜಿಲ್ಲೆಯ ಇಟಗಿ ಪಟ್ಟಣದಲ್ಲಿದೆ. ಇದು ಕುಕನೂರಿನಿಂದ (ಮಹಾಮಾಯ ಮತ್ತು ನವಲಿಂಗ ದೇವಸ್ಥಾನ) ಸುಮಾರು 7 ಕಿಮೀ ಮತ್ತು ಲಕ್ಕುಂಡಿಯಿಂದ 20 ಕಿಮೀ ದೂರದಲ್ಲಿದೆ (ದೇವಾಲಯಗಳು ಮತ್ತು ಮೆಟ್ಟಿಲು ಬಾವಿಗಳಿಂದ ಕೂಡಿದ ಗ್ರಾಮ). ನೀವು ಕರ್ನಾಟಕದ ಆ ಭಾಗದಲ್ಲಿದ್ದರೆ ಈ ಎಲ್ಲಾ ಸ್ಥಳಗಳು ಭೇಟಿ ನೀಡಲೇಬೇಕು.

ದೇವಾಲಯಗಳ ಚಕ್ರವರ್ತಿ ಇಟಗಿಯ ಮಹಾದೇವ ದೇವಾಲಯದ ವಿಶೇಷತೆ https://youtu.be/QXkLFL6Ku8o?si=e0dzxHzzBP75luQ

ಕಠಿಣ ಶಿಲ್ಪಪ್ರಕಾರಗಳಲ್ಲೇ ಈ ದೇವಾಲಯ ಅನನ್ಯ ಮತ್ತು ಅಮರ. ಸರಳ ಕೃತಿಗಳಲ್ಲಿ ಹುದುಗಿದ್ದ ನನ್ನ ಮನಸ್ಸಿಗೆ ಮುದನೀಡಿದ ಈ ದೇವಾಲಯದ ಶಿಲ್ಪ ಸೌಂದರ್ಯ, ನನ್ನನ್ನು ವಿಸ್ಮಯನನ್ನಾಗಿಸಿದೆ. ಹೀಗೆಂದು ಹೇಳಿದವರು ಬೇರಾರೂ ಅಲ್ಲ, ನಡೆದಾಡುವ ವಿಶ್ವಕೋಶ ಜ್ಞಾನಪೀಠ ಪ್ರಶಸ್ತಿ ವಿಜೇತರು ಆದ ಡಾ ಶಿವರಾಮ ಕಾರಂತರು ಹೇಳಿದ ಮಾತಿದು. ಹಳೇಬಿಡು - ಬೇಲೂರು ದೇವಸ್ಥಾನಗಳನ್ನು ನೋಡಿ ಡಾ. ಶಿವಕಾಮ ಕಾರಂತರು ಹೇಳಿದರೆಂದು ತಿಳಿಯಬೇಡಿ. ಅವರು ಹೇಳಿದ್ದು ದೇವಾಲಯ ಚಕ್ರವರ್ತಿಯಿಂದು ಹೊಗಳಿಸಿಕೊಂಡು, ಬೇಲೂರು-ಹೊಯ್ಸಳರ ನಾವಿನ್ಯಕ್ಕೆ ಕೊಂಡಿಯಾದ ದೇವಸ್ಥಾನವೊಂದರ ಬಗ್ಗೆ, ಅದು ಇಟಗಿಯ ಮಹದೇವ ದೇಗುಲ, ಕೇವಲ ಹಂಪೆ, ಬಾದಾಮಿ, ಬಿಜಾಪುರಗಳಷ್ಟೇ ಈ ಶಿಲ್ಪ ಕೃತಿಗಳಿಗೆ, ಐತಿಹಾಸಿಕ ಇಮಾರತ್ತುಗಳಿಗೆ ಹೆಸರಾಗಿರುವ ಪ್ರವಾಸೋದ್ಯಮ ನಿಗಮ ಸರ್ಕಾರ ಇವುಗಳಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಲೇ, ಅನೇಕಾನೇಕ ಶಿಲ್ಪ ಸೌಂದರ್ಯ ತಾಣಗಳನ್ನು ನಿರ್ಲಕ್ಷಿಸಿದೆ. ಹೀಗೆ ನಿರ್ಲಕ್ಷಿತ ತಾಣಗಳಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಇಟಗಿ ಗ್ರಾಮದ ದೇವಾಲಯ ಚಕ್ರವರ್ತಿ ಎಂದು ಬಿರುದಾಂಕಿತ ಮಹದೇವ ದೇಗುಲ ಪ್ರಮುಖವಾಗಿದೆ.

ಕರ್ನಾಟಕದ ಕೊಪ್ಪಳ ಜಿಲ್ಲೆಯು ಮೊದಲಿನಿಂದಲೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ತುಂಗಭದ್ರಾ ನದಿಯ ತೀರಕ್ಕೆ ಸಮೀಪವಾಗಿರುವ ಕೊಪ್ಪಳ ಜಿಲ್ಲೆಯು ಕೋಪಣ ನಗರವಾಗಿ ಮೆರೆದಿತ್ತು. ಇದು ಹೈದರಾಬಾದಿನ ನಿಜಾಮನ ಆಡಳಿತಕ್ಕೂ ಒಳಪಟ್ಟ ನಾಡಾಗಿತ್ತು. ಈ ಜಿಲ್ಲೆಯಲ್ಲಿ ಸಿಂಧರ ವಂಶದ ದೊರೆಗಳು ಯರಂಬರ್ಗೆ (ಯಲಬುರ್ಗಾ) ವನ್ನು ಆಳುತ್ತಿದ್ದರು. ಈ ತಾಲೂಕಿನ ಹಲವಾರು ಸ್ಥಳಗಳಲ್ಲಿ ಪುರಾಣ ಪ್ರಸಿದ್ಧ ಮತ್ತು ಐತಿಹಾಸಿಕ ಪ್ರಸಿದ್ಧ ದೇವಾಲಯಗಳನ್ನು ನಾವು ಕಾಣಬಹುದಾಗಿದೆ. ಎಲ್ಲ ದೇವಾಲಯಗಳು ಶೋಭಾಯ ಮಾನವಾಗಿವೆ. ಇವೆಲ್ಲವುಗಳಿಗಿಂತ ಇಟಗಿಯ ಮಹೇಶ್ವರ ದೇವಾಲಯವು ಅತಿ ಪ್ರಸಿದ್ಧಿಯನ್ನು ಪಡೆದಿದೆ. ಶಾಸನದಲ್ಲಿ ಈ ಗ್ರಾಮಕ್ಕೆ "ವಿಟ್ಟಿಕಾ" ಇಂದು ಕರೆಯಲಾಗಿದೆ. ಚಾಲುಕ್ಯರ ಕಾಲದಲ್ಲಿ ಈ ಗ್ರಾಮ ಒಂದು ದೊಡ್ಡ ಅಗ್ರಹಾರವಾಗಿತ್ತೆಂದೂ ತಿಳಿದು ಬರುತ್ತದೆ. ಇಂಥ ಪವಿತ್ರ ಸ್ಥಳದಲ್ಲಿಯೇ ಮಹಾದೇವ ಮಂದಿರ ನಿರ್ಮಾಣಗೊಂಡು ತನ್ನದೇ ಆದ ಇತಿಹಾಸ ವನ್ನು ರೂಪಿಸಿಕೊಂಡಿದೆ.

ದೇವಾಲಯದ_ವಿಶಿಷ್ಟ_ಲಕ್ಷಣಗಳು

ಈ ದೇವಸ್ಥಾನಕ್ಕೆ ಬಳಸಿದ ಕಲ್ಲು ಈ ಭಾಗದಲ್ಲಿ ಲಭ್ಯವಿಲ್ಲದಿದ್ದರೂ, ಮಹದೇವ ದಂಡನಾಯಕ ಶ್ರಮವಹಿಸಿ, ಕಲ್ಲುಗಳನ್ನು ಬೇರೆಡೆಯಿಂದ ತರಿಸಿರುವುದಲ್ಲದೆ ಆಗಿನ ಕಾಲದಲ್ಲಿಯೇ ಕರ್ನಾಟಕದಲ್ಲಿ ಕಲ್ಲನ್ನು ಕತ್ತರಿಸುವ, ಕೊರೆಯುವ ವಿಧ ವಿಧಾನಗಳ, ಕೈಸಲಕರಣೆಗಳ ಬಳಕೆ ಈ ದೇವಸ್ಥಾನದ ನಿರ್ಮಾಣಕ್ಕೆ ಬಳಸಲಾಗಿದೆ

ಕೃಪೆ: ರವಿ ನವಲಹಳ್ಳಿ

ಪೂರ್ವಾಭಿಮುಖವಾಗಿ ಮೈದಳೆದು, ಶ್ರೀಮಂತಿಕೆಯಿಂದ ರಾರಾಜಿಸುತ್ತಿರುವ ಈ ದೇವಸ್ಥಾನದ ಪ್ರದೇಶ ಎತ್ತರದಲ್ಲಿದೆ. ಮೊದಲಲೆ ಕೆಳಹಂತದಲ್ಲಿ 300 ಅಡಿ ಅಗಲ, ಉದ್ದದ ಪುಷ್ಕರಣೆ ಇದೆ. ಈ ಕಲ್ಯಾಣಿಯನ್ನು ದೊರೆತ ಕಲ್ಲನ್ನೇ ಸುತ್ತಲೂ ಬಳಸಿ, ಒಂದು ಕೆರೆ ರೂಪ ನೀಡಿರುವುದು ದೇವಸ್ಥಾನದ ಶೋಭೆಗೆ ಕಾರಣವಾಗಿದೆ.

ದೇವಾಲಯವನ್ನು ನಿರ್ಮಾಣ ಮಾಡುವಾಗ ಚಾಲುಕ್ಯರು ಉಸುಕು ಮಿಶ್ರಿತ ಕೆಂಪು ಕಲ್ಲನ್ನು ಹೊರತುಪಡಿಸಿ, ಕಪ್ಪು ಮಿಶ್ರಿತ ನೀಲಿ ಛಾಯೆಯ ಬಳಪದ ಕಲ್ಲಿನ ಕ್ಲೋರೆಟಿಕ್‌ ಸಿಸ್ಟ್ ಕಲ್ಲು' ಉಪಯೋಗಿಸಿ, ಗಾಢ ಹಾಗೂ ಚಕ್ರಗಳಿಂದ ಕೆತ್ತಿ ಕಂಬಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಸೂಕ್ಷ್ಮ ಕೆತ್ತನೆಯ ಕೆಲಸವನ್ನೂ ಮಾಡಿದ್ದಾರೆ. ರತ್ನಾ ಭರಣಗಳಲ್ಲಿ ಕಂಡುಬರುವ ನಯ, ನಾಜೂಕತೆ ಯನ್ನು ಇವರು ನಿರ್ಮಿಸಿರುವ ದೇವಾಲಯಗಳ ದ್ವಾರಗಳಲ್ಲಿ ಕಾಣಬಹುದು. ದೇವಾಲಯದ ದ್ವಾರಗಳ ಅಕ್ಕಪಕ್ಕದಲ್ಲಿ ಕಲಾತ್ಮಕವಾದ ಪಟ್ಟಿಗಳು ಕಂಡುಬರುತ್ತವೆ. ಶಿಲ್ಪಿಯ ಕೈ ಚಳಕದಿಂದ ನಿರ್ಮಾಣಗೊಂಡಿರುವ ಚಿಕ್ಕ-ಚಿಕ್ಕ ಗೊಂಬೆಗಳನ್ನು ಶಿಲಾಬಾಲಿಕೆಯರ ಮೂರ್ತಿಗಳನ್ನು, ನಗಾರಿ, ಡೋಲು, ಡಮರುಗ ಮುಂತಾದವುಗಳನ್ನು ಹಿಡಿದು ನರ್ತಿಸುವ ಗೊಂಬೆಗಳನ್ನು ನಾವು ಕಾಣಬಹುದು.

ಚಾಲುಕ್ಯ ದೇವಾಲಯಗಳು ನಿರ೦ಧಾರ ಪ್ರಕಾರದವುಗಳು. ಇವುಗಳಲ್ಲಿ' ಏಕ ಕೋಟಿ ಹಾಗೂ ತ್ರಿಕುಟ' ದೇವಾಲಯಗಳು ನಿರ್ಮಾಣಗೊಂಡಿರು ಇವೆ. ಇಟಗಿಯ ಮಹಾದೇವ ಮಂದಿರವು ಬಹಳ ಕಲಾತ್ಮಕವಾಗಿದ್ದು, ನೋಡುಗರ ಮನಸ್ಸನ್ನು ಆಕರ್ಷಿಸುತ್ತದೆ. ದಂಡಾದಿಪತಿ ಮಹಾದೇವ ದಂಡ ನಾಯಕನು ಇದರ ನಿರ್ಮಾಣ ಕಾರ್ಯದ ಪ್ರಮುಖನು. ಇವನು ಶ್ರೀಮೂರ್ತಿ ನಾರಾಯಣ ಮತ್ತು ಚಂದ್ರಲೇಶ್ವರಿಯರ ಉದರದಿಂದ ಜನಿಸಿದನು. ಇವನು ಸಾಹಸಿಯೂ ಹೌದು, ಭಕ್ತಿ ಪ್ರಿಯನೂ ಹೌದು. ಮಹಾದೇವ ಮಂದಿರದ ಜೊತೆಗೆ ತಂದೆಯ ಸ್ಮರಣಾರ್ಥವಾಗಿ ಮೂರ್ತಿ ನಾರಾಯಣ ದೇವಾಲಯ ಮತ್ತು ತಾಯಿಯ ನೆನಪಿಗಾಗಿ ಚಂದಲೇಶ್ವರಿ ದೇವಾಲಯವನ್ನು ಕಟ್ಟಿಸಿದನು. ಅಲ್ಲದೆ ಸಾಹಸ ಭೈರವ ದೇವಾಲಯವನ್ನು ಇವನೇ ನಿರ್ಮಿಸಿದನು. ಎಂಟು ದಿಕ್ಕುಗಳಿಗೆ ಒಂದೊಂದು ಲಿಂಗ ಮಂಟಪ ಗಳನ್ನು ಕಟ್ಟಿಸಿ, ಅಷ್ಟ ದಿಗ್ಗಾಲಕರ ನೆನಪನ್ನು ತಂದು ಕೊಡುವ ಕೆಲಸವನ್ನು ಮಾಡಿರುತ್ತಾನೆ. ದೇವಾಲಯದ ಹಲವಾರು ಭಾಗಗಳಲ್ಲಿ ಕೋಷ್ಟಗಳನ್ನು ಕಾಣಬಹುದು. ಇವು ಬಹಳ ಸುಂದರವಾಗಿದ್ದು ಎಡ ಬಲದಲ್ಲಿ ಉತ್ತಮ. ರೀತಿಯ ಕೆತ್ತನೆಯ ಕೆಲಸದಿಂದ ಕೂಡಿದ ಗೋಪುರ ಸ್ಥ೦ಬಗಳನ್ನು ಹೊಂದಿವೆ.

ಕೃಪೆ: ರವಿ ನವಲಹಳ್ಳಿ

ದೇವಾಲಯದ_ಪರಿಚಯ

ಚಾಲುಕ್ಯ ಶೈಲಿಯ ದೇವಾಲಯವು ವಿಶೇಷ ಲಕ್ಷಣಗಳನ್ನು ಹೊ೦ದಿದೆ. ನಯವಾದ ಶ್ರೇಷ್ಠ ಗುಣಮಟ್ಟದ ಕಲ್ಲಿನಿ೦ದ ಈ ದೇವಾಲಯ ನಿರ್ಮಾಣಗೊಂಡಿದೆ. ಶಿಲೆಯ ಕೆತ್ತನೆಯ ಕೆಲಸವನ್ನು ಕಲೆಯ ಮಾಧುರ್ಯವನ್ನು ಶಿಲೆಯಲ್ಲಿ ಕೆತ್ತಿ ಉಳಿಸಿ ಹೋಗಿದ್ದಾರೆ. ಈ ದೇವಾಲಯ ತ್ರಿಕೂಟಗಳ ಮಾದರಿಯಲ್ಲಿ ನಿರ್ಮಾಣಗೊಂಡಿರುತ್ತದೆ. ಈ ದೇವಾಲಯಗಳು ಇಂದು ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರಗಳಾಗಿ ಪ್ರಸಿದ್ಧಿಯನ್ನು ಪಡೆದಿವೆ . ಕರ್ನಾಟಕದ ಇತಿಹಾಸದಲ್ಲಿ ಮಹೇಶ್ವರ ದೇವಾಲಯ ವಿಶಿಷ್ಟ ಸ್ಥಾನ ಪಡೆದಿದೆ.ಇದನ್ನು ನೋಡಿದ ಜನ ಕೆತ್ತನೆಯ ಕೆಲಸವನ್ನು ಮೆಚ್ಚಿ ಬರ ಗಾಗುವರು. ಮಹಾದೇವ ದೇವಾಲಯದಂತಹ ಬೇರೊಂದು ವಿಶ ದೇವಾಲಯವನ್ನು ಜಗತ್ ಸೃಷ್ಟಿಕರ್ತನಾದ ಬ್ರಹ್ಮ ನಿಗೂ ಸೃಷ್ಟಿಸಲು ಸಾಧ್ಯವಿಲ್ಲ. ಇದು ಪೂರ್ವಂ ಬ್ರಹ್ಮನ0 ನಿರ್ಮಿಸಲಗಿಯನಿದ೦ ಕರ್ಮನೇನಾದರೂ ಇಂತಹ ದೇವಾಲಯ ಕಟ್ಟಲು ಛಲ ತೊಟ್ಟರೆ ಮಂದಿರದ ಬಳಿ ಇದ್ದು ಕೆಲ ಕಾಲ ತರಬೇತಿ ಪಡೆಯ ಬೇಕಾಗುತ್ತದೆ ಎಂದು ಸೂಚ್ಯ ವಾರಿದರ್ಕಾನೆಯ ಮ್ಮಾನರ ಮಾಹೇಷ ಹೇಳಿದ್ದಾರೆ.

ಕೃಪೆ: ರವಿ ನವಲಹಳ್ಳಿ

ಈ ದೇವಾಲಯದ ಕಟ್ಟಡದಲ್ಲಿ ಶಿಲ್ಪಕಲೆಯ ಇಂದ್ರಜಾಲವೇ ಅರಳಿ ನಿಂತಿದೆ. ಗರ್ಭಗುಡಿ, ಅಂತರಾಳ, ನವರಂಗ, ಮುಖ ಮಂಟಪ, ಶುಖನಾಶಿ ಒಂದೊಂದು ಸುಂದರ, ಎಲ್ಲವೂ ಮನೋಹರ. ಯಾತ್ರಿಕ ಮನಸ್ಸನ್ನು ದೂರದಿಂದಲೇ ಸೆಳೆಯುತ್ತದೆ. ದೇವಾಲಯ 6 ಅಡಿಯ ಜಗುಲಿನ ಮೇಲೆ ನಿರ್ಮಾಣಗೊಂಡಿದೆ ಪೂರ್ವ ದಿಕ್ಕಿಗೆ ಮಹಾದ್ವಾರ ವನ್ನು ಹೊಂದಿದ್ದು, ದಕ್ಷಿಣೋತ್ತರವಾಗಿ ಒಂದೊಂದು ದ್ವಾರವನ್ನು ಹೊಂದಿರುತ್ತದೆ. ಉತ್ತರ ಮತ್ತು ದಕ್ಷಿಣ ದ್ವಾರಗಳ ಮುಂದೆ ಚಿಕ್ಕ ಚಿಕ್ಕ ಕೂಟ ಗಳು ಮನಮೋಹಕವಾಗಿರುತ್ತವೆ. ದ್ವಾರಗಳ ಎಡ ಬಲಕ್ಕೆ ದ್ವಾರ ಪೆಟ್ಟಿಕೆಗಳನ್ನು ಕೆತ್ತಲಾಗಿದೆ. ಇದರಲ್ಲಿ ಸುಳುವು, ಹೂಬಳ್ಳಿ, ಕೀರ್ತಿ ಮುಖಗಳನ್ನು ನೋಡಿ ದರೆ ಆನಂದ ಎನಿಸುತ್ತದೆ.

ಉತ್ತರ ದಿಶೆಯಲ್ಲಿ ದ್ವಾರವು ಸುಪ್ತ ಪಟ್ಟಿಕೆಗಳಿಂದ ಕೂಡಿದೆ. ಒಂದೊಂದು ಪಟ್ಟಿಕೆಯ ಕೆಳಭಾಗದಲ್ಲಿ ದ್ವಾರ ಪಾಲಕ್ಕಿರ ಮೂರ್ತಿಯನ್ನು ಕಾಣಬಹುದು. ಕೆಲವು ಪಟ್ಟಿಕೆ ಗಳಲ್ಲಿ ಸಂಗೀತ ಸಾಮಾಗ್ರಿ ಗಳನ್ನು ಹಿಡಿದು ನರ್ತಿಸುವ, ಡೋಲು, ಡಮರುಗಳನ್ನು ಹಿಡಿದು ಹೆಜ್ಜೆ ಹಾಕುವ ಶಿಲಾ ಮೂರ್ತಿಗಳನ್ನು ಕಾಣ ಬಹುದು. ಪಟ್ಟಿಕೆಯಲ್ಲಿ ಪತ್ರ ಲತೆ, ಲತಾ ಸುರಳಿಯನ್ನು ನೋಡಬಹುದು. ಈ ಎರಡೂ ದ್ವಾರದ ಮೇಲ್ಪತ್ತು ಅತೀ ಸುಂದರವಾಗಿದ್ದು, ಪದ್ಮಾಲಂಕಾರವಾಗಿ ನೋಡಗುರ ಮನಸ್ಸನ್ನು ಸೆಳೆಯುತ್ತದೆ. ಅಲ್ಲಲ್ಲಿ ಮಕರಗಳ ಬಾಯಿಂದ ಅಲಂಕಾರಗೊಂಡ ಸುರಳಿಗಳು ದ್ವಾರದ ಮೇಲಚ್ಚತ್ತು ತೋರಣ ಕಟ್ಟಿ ಕೀರ್ತಿ ಮುಖದವರೆಗೆ ಸಾಗಿದೆ. ದ್ವಾರದ ಎಡ ಬಲಭಾಗದಲ್ಲಿ ನಿರ್ಮಾಣಗೊಂಡ ಸುಖಾಸನಗಳು ಭಗ್ನಗೊಂಡಿವೆ. ಗೋಪುರದ ಉತ್ತರ ಭಾಗಕ್ಕೆ ಅಽಷ್ಠಾನದ ಮೇಲೆ ಚಿಕ್ಕ ಕೋಷ್ಠ ಇದ್ದು ಎಡ , ಬಲ ಭಾಗಗಳಲ್ಲಿ ಚಿಕ್ಕ ಕಂಭಗಳ ಮೇಲೆ ಕೋನಾಕಾರದ ಚಿಕ್ಕ ಗೋಪುರಗಳು ಸೂಕ್ಷ ಕೆತ್ತನೆಯಿಂದ ಕೂಡಿವೆ. ವೇಸರ ಶೈಲಿಯಲ್ಲಿ ನಿರ್ಮಾಣವಾದ ಈ ದೇವಾಲಯ ಹಿನಸರಿತ ಮತ್ತು ಮುನಸರಿತದಿಂದ ಕೂಡಿದೆ. ಕಪೋತ'ದ ಮೇಲ್ಬಾಗವು ನಕ್ಷಾತ್ರಾಕಾರ ವನ್ನು ಹೊಂದಿದೆ. ದೇವಸ್ಥಾನದ ಮೇಲ್ಬಾಗದಲ್ಲಿ ವಿಷ್ಣುವಿನ ಮೂರ್ತಿ ರಚಿತಗೊಂಡಿದೆ. ಗೋಪುರದ ಮೇಲ್ತುದಿಯವರೆಗೆ ನಾಲ್ಕು ಸ್ಥರಗಳಲ್ಲಿ ಚಿಕ್ಕ ಚಿಕ್ಕ ಕೋಕೋಷ್ಠಗಳು ನಿರ್ಮಾಣಗೊಂಡಿವೆ. ಪ್ರತಿ ಸ್ಥರದಲ್ಲಿ ಮಕರಗಳ ಬಾಯಿಂದ ಅಲಂಕೃತ ಲತಾಸುರುಳಿಗಳು ಕೀರ್ತಿ ಮುಖದವರೆಗೆ ಸಾಗಿದೆ. ಗೋಪುರದ ಹಿಂಭಾಗದಲ್ಲಿ ಮತ್ತೊಂದು ದೇವಕೋಷ್ಠ ಕೆತ್ತಲ್ಪಟ್ಟಿದ್ದು ಮೇಲ್ಬಾಗದಲ್ಲಿ - ಬ್ರಹ್ಮನ ಮೂರ್ತಿಯು ಕೆತ್ತಲ್ಪಟ್ಟಿದೆ. ಹಿಂಭಾಗದ ಕಪೋತದ ಮೇಲೆ ಶಿಲಾ ಬಾಲಕಿಯರ ಮೂರ್ತಿಗಳು ಕೆಲವು ಜಾಗಗಳಲ್ಲಿ ಭಗ್ನವಾಗಿದೆ. ಗೋಪುರದ ದಕ್ಷಿಣ ದಿಶೆಯಲ್ಲಿ ಕೆತ್ತನೆಗೊಂಡ ಕೋಷ್ಟದ ಮೇಲೆ ಶಿವನ ವಿಗ್ರಹವು ಕೆತ್ತನೆಯಾಗಿದೆ. ವಿಗ್ರಹವು ಕೈಯಲ್ಲಿ ತ್ರಿಶೂಲ ಮತ್ತು ಡಮರುಧಾರಿ ಯಾಗಿದೆ. ಉತ್ತರ ದಿಶೆಯ ಗೋಪುರದಂತೆ ಇದು ಸಹಿತ ಮಕರ ತೋರಣ ಕೀರ್ತಿ ಮುಖಗಳನ್ನು ಹೊಂದಿದೆ. 

ಉತ್ತರ ದಿಶೆಯಲ್ಲಿ ದ್ವಾರವು ಸುಪ್ತ ಪಟ್ಟಿಕೆಗಳಿಂದ ಕೂಡಿದೆ. ಒಂದೊಂದು ಪಟ್ಟಿಕೆಯ ಕೆಳಭಾಗದಲ್ಲಿ ದ್ವಾರ ಪಾಲಕ್ಕಿರ ಮೂರ್ತಿಯನ್ನು ಕಾಣಬಹುದು. ಕೆಲವು ಪಟ್ಟಿಕೆ ಗಳಲ್ಲಿ ಸಂಗೀತ ಸಾಮಾಗ್ರಿ ಗಳನ್ನು ಹಿಡಿದು ನರ್ತಿಸುವ, ಡೋಲು, ಡಮರುಗಳನ್ನು ಹಿಡಿದು ಹೆಜ್ಜೆ ಹಾಕುವ ಶಿಲಾ ಮೂರ್ತಿಗಳನ್ನು ಕಾಣ ಬಹುದು. ಪಟ್ಟಿಕೆಯಲ್ಲಿ ಪತ್ರ ಲತೆ, ಲತಾ ಸುರಳಿಯನ್ನು ನೋಡಬಹುದು. ಈ ಎರಡೂ ದ್ವಾರದ ಮೇಲ್ಪತ್ತು ಅತೀ ಸುಂದರವಾಗಿದ್ದು, ಪದ್ಮಾಲಂಕಾರವಾಗಿ ನೋಡಗುರ ಮನಸ್ಸನ್ನು ಸೆಳೆಯುತ್ತದೆ. ಅಲ್ಲಲ್ಲಿ ಮಕರಗಳ ಬಾಯಿಂದ ಅಲಂಕಾರಗೊಂಡ ಸುರಳಿಗಳು ದ್ವಾರದ ಮೇಲಚ್ಚತ್ತು ತೋರಣ ಕಟ್ಟಿ ಕೀರ್ತಿ ಮುಖದವರೆಗೆ ಸಾಗಿದೆ. ದ್ವಾರದ ಎಡ ಬಲಭಾಗದಲ್ಲಿ ನಿರ್ಮಾಣಗೊಂಡ ಸುಖಾಸನಗಳು ಭಗ್ನಗೊಂಡಿವೆ. ಗೋಪುರದ ಉತ್ತರ ಭಾಗಕ್ಕೆ ಅಽಷ್ಠಾನದ ಮೇಲೆ ಚಿಕ್ಕ ಕೋಷ್ಠ ಇದ್ದು ಎಡ , ಬಲ ಭಾಗಗಳಲ್ಲಿ ಚಿಕ್ಕ ಕಂಭಗಳ ಮೇಲೆ ಕೋನಾಕಾರದ ಚಿಕ್ಕ ಗೋಪುರಗಳು ಸೂಕ್ಷ ಕೆತ್ತನೆಯಿಂದ ಕೂಡಿವೆ. ವೇಸರ ಶೈಲಿಯಲ್ಲಿ ನಿರ್ಮಾಣವಾದ ಈ ದೇವಾಲಯ ಹಿನಸರಿತ ಮತ್ತು ಮುನಸರಿತದಿಂದ ಕೂಡಿದೆ. ಕಪೋತ'ದ ಮೇಲ್ಬಾಗವು ನಕ್ಷಾತ್ರಾಕಾರ ವನ್ನು ಹೊಂದಿದೆ. ದೇವಸ್ಥಾನದ ಮೇಲ್ಬಾಗದಲ್ಲಿ ವಿಷ್ಣುವಿನ ಮೂರ್ತಿ ರಚಿತಗೊಂಡಿದೆ. ಗೋಪುರದ ಮೇಲ್ತುದಿಯವರೆಗೆ ನಾಲ್ಕು ಸ್ಥರಗಳಲ್ಲಿ ಚಿಕ್ಕ ಚಿಕ್ಕ ಕೋಕೋಷ್ಠಗಳು ನಿರ್ಮಾಣಗೊಂಡಿವೆ. ಪ್ರತಿ ಸ್ಥರದಲ್ಲಿ ಮಕರಗಳ ಬಾಯಿಂದ ಅಲಂಕೃತ ಲತಾಸುರುಳಿಗಳು ಕೀರ್ತಿ ಮುಖದವರೆಗೆ ಸಾಗಿದೆ. ಗೋಪುರದ ಹಿಂಭಾಗದಲ್ಲಿ ಮತ್ತೊಂದು ದೇವಕೋಷ್ಠ ಕೆತ್ತಲ್ಪಟ್ಟಿದ್ದು ಮೇಲ್ಬಾಗದಲ್ಲಿ - ಬ್ರಹ್ಮನ ಮೂರ್ತಿಯು ಕೆತ್ತಲ್ಪಟ್ಟಿದೆ. ಹಿಂಭಾಗದ ಕಪೋತದ ಮೇಲೆ ಶಿಲಾ ಬಾಲಕಿಯರ ಮೂರ್ತಿಗಳು ಕೆಲವು ಜಾಗಗಳಲ್ಲಿ ಭಗ್ನವಾಗಿದೆ. ಗೋಪುರದ ದಕ್ಷಿಣ ದಿಶೆಯಲ್ಲಿ ಕೆತ್ತನೆಗೊಂಡ ಕೋಷ್ಟದ ಮೇಲೆ ಶಿವನ ವಿಗ್ರಹವು ಕೆತ್ತನೆಯಾಗಿದೆ. ವಿಗ್ರಹವು ಕೈಯಲ್ಲಿ ತ್ರಿಶೂಲ ಮತ್ತು ಡಮರುಧಾರಿ ಯಾಗಿದೆ. ಉತ್ತರ ದಿಶೆಯ ಗೋಪುರದಂತೆ ಇದು ಸಹಿತ ಮಕರ ತೋರಣ ಕೀರ್ತಿ ಮುಖಗಳನ್ನು ಹೊಂದಿದೆ.

ದಕ್ಷಿಣದ್ವಾರವು ಸಹ ಸಪ್ತ ಪಟಿಕೆಗಲಿಂದ ಅಲಂಕೃತವಾಗಿದೆ. ವಿವಿಧ ಭಾವ ಭಂಗಿಗಳಲ್ಲಿ ನರ್ತಿಸುವ ಕ ವ ಹೆಣ್ಣು ಗೊಂಬೆಗಳು, ನಂದಿ, ಅಶ್ವಸಿಂಹದ ಮೂರ್ತಿಗಳು ಕೆತ್ತಲ್ಪಟ್ಟಿವೆ. ಇವುಗಳ ಸುತ್ತಲೂ ಲತಾ ಸುರಳಿ ಕೆತ್ತಲಾಗಿದೆ. ಪೂರ್ವ ದಿಶೆಯಲ್ಲಿ ರಚಿತವಾದ ದ್ವಾರವು ನವಪಟ್ಟಿಕೆಗಳಿಂದ ಕೂಡಿದೆ. ಅಶ್ವ, ನಂದಿ, ಗಜ, ಸಿಂಹದ ಮೂರ್ತಿಗಳು, ನಾಗ-ನಾಗಿಣಿಯರ, ಯಕ್ಷ-ಯಕ್ಷಿಣಿಯರ ಮೂರ್ತಿಗಳನ್ನು ಬಹು ಸುಂದರವಾಗಿ ಕೆತ್ತಲಾಗಿದೆ. ದ್ವಾರದ ಮೇಲ್ಬಾಗ ದಲ್ಲಿ ಗಜಲಕ್ಷ್ಮಿಯ ಮೂರ್ತಿ ಖಂಡರ್ಷವಾಗಿರುತ್ತದೆ. ಇದೇ ದ್ವಾರದ ಎಡಭಾಗದ ಉತ್ತರ ದಿಕ್ಕಿನಲ್ಲಿ ಕಪೋತದ ಅಂಚಿನಲ್ಲಿ ಚಿಕ್ಕ ಕೋಷ್ಟದ ಮೇಲೆ' ಸಾಹಸ ಭೈರವನ ಮೂರ್ತಿ ರಚನೆಯಾಗಿದೆ. ಇವನ ಕೈಯಲ್ಲಿ ತ್ರಿಶೂಲ, ಪರಶು, ನಡಕ್ಕೆ ನಡಪಟ್ಟಿಯನ್ನು ಕಟ್ಟಿದೆ. ಮೊಣಕಾಲವರೆಗೆ ಪೋಷಾಕವನ್ನು ಧರಿಸಿ ತಲೆಯಲ್ಲಿ ಮುಂಡಾಸ ಧರಿಸಿದೆ. ಕೊರಳಿಗೆ ತೆಲೆಯನ್ನು ಹಾಕಿಕೊಂಡಿ ಮೂರ್ತಿಯು ಅತೀ ಸುಂದರವಾಗಿದೆ. ದೇವಾಲಯದ ಮಹಾ ದ್ವಾರವನ್ನು ದಾಟಿ ಮುಂದೆ ಬಂದರೆ ರಂಜಸಜ್ಜಿಕೆ ಇದೆ. ಇದಕ್ಕೆ ಚತುಷ್ಕ ಎಂದು ಕರೆಯುವರು. ಇದರ ಈಶಾನ್ಯ ದಿಕ್ಕಿನಲ್ಲಿರುವಾ ದ್ವಾರವನ್ನು ದಾಟಿ ಮುಂದೆ ಬಂದರೆ ಬೋದಿನ ಮೇಲೆ ಮಹಾದೇವ ದಂಡ ನಾಯಕನ ಕಂಡಕ ಮೂರ್ತಿಯನ ಕಾಣಬಹುದಾಗಿದೆ. ಚತುಷ್ಯದಲ್ಲಿ ರಚಿತವಾದ ಕಂಬಗಳ ಕೆಳಭಾಗದ ದ್ವಾರ ಪಾಲಿಕೆಯರ ಮೂರ್ತಿಗಳು ಪ್ರೇಕ್ಷಕರ ಮನಸ್ಸನ್ನು ಸೆಳೆಯುತ್ತವೆ. ದೇವಾಲಯದ ಗೋಪುರದ ಮೇಲ್ತುದಿ ಶಿಲಾರಹಿತವಾಗಿ ರಚನೆಯಾಗಿದೆ. ಇದರ ನಿರ್ಮಾಣ ಕಾರ್ಯವನ್ನು ಇತ್ತೀಚಿನ ಕಾಲದಲ್ಲಿ ಹೈದರಾಬಾದ್‌ನ ನಿಜಾಮನು ವ್ಯವಸ್ಥೆಗೊಳಿಸಿದ ನೆಂದು ತಿಳಿಯುತ್ತದೆ ಗೋಪುರದ ಮೇಲ್ತುದಿಗೆ ದೊಡ್ಡ ಕಳಸವಿದೆ.

ಮಹಾದೇವ ಮಂದಿರದ ಗರ್ಭಗುಡಿಯ ವಿವಿಧ ಭಾಗದಲ್ಲಿ ಕಲಾತ್ಮಕವಾದ ಚಿಕ್ಕ ಕೋಷ್ಟಗಳು ರಚಿತವಾಗಿದ್ದು, ನೋಡಲು ಆಕರ್ಷಣೀಯವಾಗಿದೆ. ಇವು ಚಿಕ್ಕ ಮಂದಿರಗಳಂತೆ ಕಾಣುತ್ತಿದ್ದು, ಕೋಷ್ಠದ ಮೇಲ್ಬಾಗದಲ್ಲಿ ಗಜಲಕ್ಷ್ಮಿ, ಸಂಪತ್ತು ಲಕ್ಷ್ಮಿ, ಧನಲಕ್ಷ್ಮಿ ಇನ್ನೂ ಹಲವಾರು ದೇವತೆಯ ಚಿತ್ರವನ್ನು ಕಾಣಬಹುದು. ಇದೇ ರೀತಿ ಕೋಷ್ಟದ ಎರಡೂ ಮಗ್ಗಲಿನ ಭಾಗವು ಬಳ್ಳಿ ಮತ್ತು ತೋರಣಗಳಿಂದ ಅಲಂಕೃತಗೊಂಡಿದೆ. ದೇವಾಲಯದ ದಕ್ಷಿಣ ದಿಕ್ಕಿನಲ್ಲಿ ಶ್ರೀ ಸರಸ್ವತಿ ಮಠ ಇರುತ್ತದೆ. ಈ ಸರಸ್ವತಿ ಮಠದಲ್ಲಿರುವ 93 ಸಾಲುಗಳುಳ್ಳ ಶಾಸನವು ಕಲ್ಯಾಣ ಚಾಲುಕ್ಯರ ವರ್ಣನೆಯನ್ನು ಮಾಡುತ್ತದೆ. ಇದೇ ಸ್ಥಳದಲ್ಲಿ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಎರಡು ಗುಹೆಗಳಿದ್ದು, ಸುಮಾರು 40 ರಿಂದ 50 ಜನರು ಕೂಡುವಷ್ಟು

ಅವಕಾಶವನ್ನು ಹೊಂದಿವೆ. 

ಶಾಸನದ ಶಿಲೆ 8ಫೂಟ್, 10 ಇಂಚು ಎತ್ತರವಿದೆ. ಶಾಸನವನ್ನು ಬರೆದ ಅಗಲ 5ಫೂಟ್ ಆಗಿರುತ್ತದೆ. ಶಾಸನದ ಬಳಕೆ 6ಫೂಟ್, 8 ಇಂಚು ಆಗಿರುತ್ತದೆ. ಈ ಶಾಸನ ಉತ್ತಮ ರಕ್ಷಣೆಯಲ್ಲಿ ಇದೆ ಶಾಸನ ಸಾಲು 76ತರಲ್ಲಿ ಚಾಲುಕ್ಯ ರಾಜನ ಅವದಿಯಲ್ಲಿಯೇ ರಾಜ್ಯಾಡಳಿತದ ಮತ್ತು ದೇವಾಲಯಗಳ ನಿರ್ಮಾಣ ಕಾರ್ಯದ ಸ್ಥಿತಿ-ಗತಿಗಳ ಬಗ್ಗೆ ಈ ರೀತಿ ವರ್ಣನೆ ಮಾಡುತ್ತದೆ.

“ಶಾ.ಸಾ. 76।। ಶ್ರೀಮನ ಮಹಾ ಅಗ್ರಹಾರ ವಿಟ್ಟಿಗೆಗೆಯಗಿದೆ ಆಥೇಯ ಪ್ರಮುಖದ ಶ್ರೇಷ್ಟ ಮಹಾ ಜನರು ನಾಲ್ಕೂವರ್ ಕೈಯಲು ದ್ರವ್ಯ, ಧಾನ್ಯ, ಪೂರ್ವದಿಂ ಸಾರ್ವನ ವಸರ್ವ ಭಾದಾ ಪರಿಹಾರವಾಗಿ ಪಡೆದು ಶ್ರೀಮತ್ ಚಾಲುಕ್ಯ ವರ್ಷ 37ನೇಯ ನಂದನ ಸಂವತ್ಸರದ ಭಾದ್ರ ಪದ ಪೂರ್ಣಿಮೆ ಆದಿತ್ಯವಾರ ಸೋಮ ಗ್ರಹಣ ಸಂಕ್ರಾಂತಿ ವ್ಯತಿ ಪಾತದಂದು"

ಶಾ.ಸಾ .77।। ಶ್ರೀಮಾನ್ ಮಹಾದೇವೇಶ್ವರ ದೇವರ ಅಂಗಭೋಗ ನೈವೇದ್ಯ ಅನ್ನದಾನ, ಭಕ್ತವೃತ್ತಿ, ಫಣಿಯಾರ, ಧಾತ್ರ ನಾವುಗಳ ಪ ದೋರಿಗ್ರಹಕ್ಕೆ ಧಾರಾಪೂರ್ವಕವಾಗಿಬಿಟ್ಟ. "ಇದರ ಶುದ್ಧ ಭಾಷೆ, ಅಲಂಕಾರಿಕ ಶೈಲಿ ಹಾಗೂ ರಮ್ಯ ವರ್ಣನೆಯ ಚಿತ್ರ ಇರುವುದರಿಂದ ಈ ಶಾಸನವನ್ನು ಒಂದು ಚಿಕ್ಕ ಖಂಡ ಕಾವ್ಯವೆಂದೆಣಿಸ ಬಹುದು. ಬೆಳ್ಳಲ ನಾಡಿನ ಇಟಗಿಯ ವರ್ಣನೆ ವಿಕ್ರಮಾದಿತ್ಯನನ ಪರಾಕ್ರಮ, ದೇವಾಲಯದ ವರ್ಣನೆ, ಹೆಸರಾಂತ ಕವಿಗಳ ಕವಿಶ್ವ ಪ್ರೌಢಿಮೆ ಕಂಡುಬರುತ್ತದೆ.

ಕೃಪೆ: ರವಿ ನವಲಹಳ್ಳಿ

ಮಹಾದೇವ ಮಂದಿರದ ಪೂರ್ವ ದಿಕ್ಕಿಗೆ ಮುಖಮಂಟಪ ಶೋಭಿಸುತ್ತದೆ. ಈ ಮುಖಮಂಟಪಕ್ಕೆ ಹಲವಾರು ಕಂಬಗಳು ಆಧಾರವಾಗಿರುತ್ತವೆ. ಒಟ್ಟು 42 ಕಂಭಗಳು ಮುಖ ಮಂಟಪವನ್ನು ಎತ್ತಿ ಹಿಡಿದಿದ್ದವೆ ಮಂದಿರದ ಮುಖ ಮಂಟಪವನ್ನು ಪ್ರವೇಶಿಸಿ ಮೇಲ್ಕತ್ತನ್ನು ನೋಡಿದಾಗ ನಟರಾಜಾನವಾಗಿ ಕಂಗೊಳಿಸುತ್ತದೆ. ಈ ಮೂರ್ತಿಯ ಕೆಲಭಾಗ ಭಿನ್ನಗೊಂಡಿದ್ದು,ಭಂಗಿಗಳ ಮೂರ್ತಿಗಳು ಸುತ್ತಲೂ ವಿವಿಧ ಭಾಗ ಭಂಗಿಗಳ ಮೂರ್ತಿಗಳ ಕಂಡುಬರುತ್ತವೆ ಮಹದೇವ ದಂಡನಾಯಕನ ವಂಶಾವಳಿಯು ಇಲ್ಲಿ ದೊರೆಯುತ್ತದೆ. ತದನಂತರ ಮುಂದೆಸಾಗಿದರೆ,

ದೇವಸ್ಥಾನದ ಎದುರಿಗೆ ನಂದಿ ವಿಗ್ರಹವು ಮಹೇಶ್ವರನ ಎದುರಿಗೆ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಪವಡಿಸಿರುತ್ತದೆ. ನಂದಿ ವಿಗ್ರಹವು ಬಳಪದ ಕಲ್ಲಿನಿಂದ ನಿರ್ಮಾಣಗೊಂಡಿದ್ದು, ಆದರ ಕೆಲವು ಭಾಗ ಭಗ್ನವಾಗಿರುತ್ತದೆ. ಕೊರಳಿಗೆ ಗೆಜ್ಜೆಸರ, ಹಣೆಗೆ ಹಣೆಕಟ್ಟು, ಮಣಿಹಾರ ಮತ್ತು ಇಣಿಯಾ ಹಿಂಭಾಗದಲ್ಲಿ ಗುಮರೆ ಸರಗಳಿಂದ. ಶೃಂಗಾರಮಯವಾಗಿದೆ. ಇದೇ ನಂದಿ ವಿಗ್ರಹದ ಸುತ್ತಲೂ ಆವೃತ್ತಗೊಂಡ ಕಂಭಗಳು, ಚಕ್ರಕಂಭಗಳು ಮತ್ತು ದುಂದುಕಂಭಗಳು ತಳದಿಂದ ಮೇಲ್ತುದಿಯವರೆಗೆ ಚಕ್ರಾಕಾರವಾಗಿರುತ್ತವೆ. ಇವುಗಳ ತಳಭಾಗದ ನಾಲ್ಕೂಕಡೆಗೂ ಸೌಂದರ್ಯಮಯ ಶಿಲಾಬಾಲಿಕೆಯರ ವಿಷ್ಣುವಿನ ಶಿವನ ಶಿಲಾಮೂರ್ತಿಗಳು ಕಾಣುತ್ತವೆ. ಬೆಳ್ಳಿ ಬಂಗಾರದಿಂದ ಆಭರಣ ತಯಾರಿಸುವ ಮಾದರಿ ಯಲ್ಲಿ ರಚಿಸಲಾದ ಕಂಭಗಳಲ್ಲಿ ಕುಸುರಿನ ಕೆಲಸ ನೋಡಗುರ ಮನವನ್ನು ಸೆಳೆಯುತ್ತದೆ.

ಈ ಚಕ್ರಗಂಭದ ಚಿತ್ರವನ್ನು ನೋಡಿದರೆ ಮನ ಅರಳಿ ಹೂವಾಗುತ್ತದೆ. ಇಲ್ಲಿ ಶಿಲ್ಪ ಕಲ್ಲನ್ನು ಮೇಣದಂತೆ ಬಳಸಿ ತನ್ನ ಕೈಚಳಕವನ್ನು ತೋರಿಸಿ ಗುಡಿಯ ಸೌಂದರ್ಯಕ್ಕೆ ಕಾರಣ ಪುರುಷನಾಗಿದ್ದಾನೆ. ದುಂಡುಗಂಭಗಳ-ಮಧ್ಯಭಾಗದಲ್ಲಿ ಬೆಳ್ಳಿಯ ಗೆಜ್ಜೆಪಟ್ಟಿಯ ಆಕಾರದಲ್ಲಿ ಸುತ್ತಲೂ ಕೆತ್ತನೆಯ ಕೆಲಸ ಮಾಡಿ, ಕಲೆಯ ಸಿರಿಯನ್ನೇ ಭೂಮಿಗೆ ತಂದು ಮಂದಿರದ ಮೆರಗನ್ನು ಹೆಚ್ಚಿಸಿರುತಾನೆ. 

ಕೃಪೆ: ರವಿ ನವಲಹಳ್ಳಿ

ಮಹಾದ್ವಾರವನ್ನು ದಾಟಿ ಮುಂದೆ ಸಾಗಿದಾಗ ಯಾತ್ರಿಕರಿಗೆ ನವರಂಗದ ದರ್ಶನ ವಾಗುತ್ತದೆ. ನವರಂಗದ ಸುತ್ತಲೂ ನಾಲ್ಕು ದುಂಡು ಗಂಭಗಳು ಶಿಲ್ಪಕಲೆಯ ಚಾತುರ್ಯತೆಯಿಂದ ನಿರ್ಮಾಣ ಗೊಂಡಿದೆ. ಈ ಕಂಭಗಳ ಕೆಳಭಾಗದಲ್ಲಿಯೂ ವಿಷ್ಣುವಿನ ಹಾಗೂ ಶಿಲಾಬಾಲಕಿಯರ ಮೂರ್ತಿಗಳು ಕಂಗೊಳಿಸುತವೆ. ಇವು ತೀಡಿ ಮಾಡಿದ ಗೊಂಬೆಗಳು, ಹೂಬಳ್ಳಿಗಳುಮತ್ತು ತಾಳ ಮದ್ದಲೆಯೊಂದಿಗೆ ಕುಣಿಯುವ ಚಿತ್ರಗಳನ್ನು ಕಂಡಾಗ ನಮಗೂ ಕುಣಿಯ ಬೇಕೆಂದೆನಿಸುತ್ತದೆ. ಈ ಸ್ತಂಭಗಳು ಎರಡಡಿಗಿಂತಲೂ ಚಿಕ್ಕ ದಾದ ಚೌಕಾಕಾರದ ಪೀಠದ ಮೇಲೆ ನಿಂತಿವೆ. ಈ ಕಂಭಗಳಲ್ಲಿಯೂ ಮಣಿಹಾರ, ಪತ್ರ ಲತೆ, ಲತಾ ಸುರಳಿಗಳನ್ನು ಕಾಣಬಹುದು. ಇವುಗಳು ಮೀರಿ ಮೀರಿ ಹೊಳೆಯುತ್ತಿದ್ದು ಅತ್ಯಂತ ನುಣುಪಾಗಿದೆ.

ನವರಂಗದ ಮಧ್ಯೆನಿಂತು ಕತ್ತೆತ್ತಿ ದೃಷ್ಟಿಯನ್ನು ಹರಿಸಿದಾಗ, ಎರಡೇ ಎರಡು ಸ್ತಂಭಗಳ ಮೇಲೆ ಒಂದು ಏಕ ಶಿಲೆಯು ಅಲಂಕಾರಿಕ ಚಿತ್ರಗಳಿಂದ ರೂಪಗೊಂಡಿದೆ. ಇಲ್ಲಿ ಬ್ರಹ್ಮ, ವಿಷ್ಣು, ಶಿವನ ಮೂರ್ತಿಗಳನ್ನು ಕಾಣುತ್ತೇವೆ. ಇದಕ್ಕೆ "ಮಕರ ತೋರಣ" ಎಂದು ಹೆಸರು. ಇದರಲ್ಲಿ ಗಜ ಚಿತ್ರ ವಿವಿಧ ಉಡುಗೊರೆಗಳನ್ನು ತೊಟ್ಟು ಕುಣಿಯುವ ಕಟಿಬಂಧ, ಉದರ ಬಂಧ, ಕರಣ ಕುಂಡಲ ಕಾಲ್ಗಡಗಗಳನ್ನು ಧರಿಸಿದ ಚಿತ್ರಗಳು ಕೆತ್ತಲ್ಪಟ್ಟಿವೆ.

ಈ ಮಕರ ತೋರಣವನು ದಾಟಿ ಮುಂದೆಸಾಗಿದರೆ ಗರ್ಭಗುಡಿಯಿದೆ. ಆದರೆ ಮಹಾದ್ವಾರವು ಅಲಂಕಾರಿಕ ಚಿತ್ರಗಳ ಜಾಲಂದರ, ಪಟ್ಟಿಕೆಗಳನ್ನು ಹೊಂದಿದೆ. ಈ ದ್ವಾರ ಕುಸುರಿನ ಪಂಚ ಪಟ್ಟಿಕೆಗಳನ್ನು ಹೊಂದಿದ್ದು, ಸುಮಾರು ಪಟ್ಟಿಕೆಗಳು 4-5 ಇಂಚು ಅಗಲವಾಗಿವೆ. ಇದರಲ್ಲಿ ನೃತ್ಯ ಹಾಗೂ ಸಂಗೀತ ಮೇಳಗಳು, ತಾಳ ತಮ್ಮಟಿ ಮದ್ದಲಿಯನ್ನು ಹಿಡಿದು ಕುಣಿಯುವ ಸಂಸ್ಕೃತಿಯ ಪರಂಪರೆಯ ಚಿತ್ರಗಳು, ಆರತಿ ಪಡಿಯಚ್ಚಿನಲ್ಲಿ ಕೆತ್ತಿದಂತೆ ಸುಂದರವಾಗಿ ಕೆತ್ತಲ್ಪಟ್ಟಿದೆ. ಹೊಸ್ತಿಲದ ತಮ್ಮಟ, ಎಡಬದಿಯಲ್ಲಿ ಶಂಖ ಮತ್ತು ಚಕ್ರಗಳ ಚಿತ್ರಗಳನ್ನು ಕೆತ್ತಲಾಗಿದೆ. ಮುಂದೆ ಕಣ್ಣರಳಿಸಿ ನೋಡಿದರೆ ಮಹೇಶ್ವರನ ಮೂರ್ತಿ ಕಂಗೊಳಿಸುತ್ತದೆ. ಮೂರ್ತಯ ಎದುರು ಚಿಕ್ಕದಾದ ನಂದಿ ಪವಡಿಸಿದೆ.

ಮಹಾದೇವ ದಂಡನಾಯಕನು ಮಹಾದೇವ ಮಂದಿರದ ಉತ್ತರ ದಿಸೆಯಲ್ಲಿ ತಂದೆಯ ಸ್ಮರಣಾರ್ಥವಾಗಿ 'ಮೂರ್ತಿ ನಾರಾಯಣ'ಮತ್ತು ತಾಯಿ 'ಚಂದಲೇಶ್ವರಿ'ಯರ ಸ್ಮರಣಾರ್ಥವಾಗಿ ಚಂದಲೇಶ್ವರಿ ದೇವಾಲಯವನ್ನು ನಿರ್ಮಾಣ ಗೊಳಿಸಿದ್ದಾನೆ. ಅವುಗಳ ಮುಂಭಾಗದಲ್ಲಿ ಸಾಹಸ ಭೈರವ ದೇವಾಲಯವನ್ನು ಕಟ್ಟಿಸಿದ್ದಾನೆ. ಅದರ ಜೀರ್ಣೋದ್ಧಾರ ಕೆಲಸ ನಡೆಯಬೇಕಾಗಿದೆ. ದೇವಾಲಯದ ಹಲವಾರು ಕಡೆ ಲಿಂಗ ಮಂಟಪಗಳಿದ್ದು, ಆನ್ನೇಯ ದಿಕ್ಕಿನನಲ್ಲಿ ಬಹಳಷ್ಟು ಭಗ್ನಗೊಂಡ ಒಂದು ಉತ್ತಮ ರಂಗ ಸಜ್ಜಿಕೆಯಿಂದ ನಿರ್ಮಾಣಗೊಂಡ ಕಟ್ಟಡವಿದೆ. ಪ್ರಾಚ್ಯವಸ್ತು ಇಲಾಖೆಯವರು ಇದನ್ನು ' ಡ್ಯಾನ್ಸಿಂಗ್ ಹಾಲ್ ' (ನೃತ್ಯ ಶಾಲೆ) ಎಂದು ಗುರುತಿಸಿದ್ದಾರೆ. ಇದು ವಿಶಾಲವಾಗಿದ್ದು, ಕಟ್ಟಡದ ಮೇಲಿನ ಚತ್ತು ಸ್ವಲ್ಪ ಬಿದ್ದು ಹೋಗಿದೆ. ರಾಜಾಶ್ರಯ ಪಡೆದ ನರ್ತಕಿಯರು ಇಲ್ಲಿ ನೃತ್ಯದ ಪ್ರದರ್ಶನವನ್ನು ಮಾಡುತ್ತಿದ್ದರೆಂದು ತಿಳಿದು ಬರುತ್ತದೆ. ದೇವಾಲಯದ ಪಶ್ಚಿಮ ದಿಕ್ಕಿನಲ್ಲಿ ಜಲಭರರಿತ ಕಿಲ್ಗೊಂಡ ' ಎಂಬ ಹೆಸರು ಪಡೆದ ಭಾವಿ ನಿರ್ಮಾಣಗೊಂಡಿದೆ ₹. ಈ ಕಿಲ್ಗೊಂಡದಿಂದಲೇ ಮಹೇಶ್ವರ ಅರ್ಚನೆಯ ಸಲುವಾಗಿ ಪೂರೈಕೆಯಾಗುತ್ತಿತ್ತೆಂದು ತಿಳಿಯುತ್ತದೆ. ಭೀಕರ ಬರಗಾಲದಲ್ಲಿಯೂ ಬತ್ತದಂಥ ಈ ಬಾವಿಯಲ್ಲಿ ಜಲವು ಧಾರಾಳವಾಗಿ ತುಂಬಿ ಹರಿಯುತ್ತಿತ್ತೆಂದು ತಿಳಿದಿದೆ. ಇಂದಿಗೂ ಇದು ಬತ್ತಿರುವುದಿಲ್ಲ. ಇದರ ತಳ ವಿನ್ಯಾಸ ತೊಟ್ಟಿಲಿನಂತೆ ಇದ್ದು, ಗೋಪುರದ ತುದಿಯ ಸುತ್ತಳತೆಯ ಸಮನಾಗಿದೆ. 

ಕೃಪೆ: ರವಿ ನವಲಹಳ್ಳಿ

ಮಂದಿರದ ಮುಂಭಾಗಕ್ಕೆ ನೀರಿನ ರಾಶಿಯನ್ನೇ ಹೊತ್ತಿರುವ 10-12 ಫರ್ಲಾಂಗ್ ಉದ್ದದ ' ಶಿವತೀರ್ಥ' ಅಥವಾ ಪುಷ್ಕರಣೆ ಇದೆ. ದೇವಗಂಗೆ ನಿರಂತರವಾಗಿ ಹರಿದು ಇಲ್ಲಿ ನೆಲೆಸಿದಳಂತೆ. ಮೋಡಗಳು ಈ ಪುಷ್ಕರಣಿಯ ಮೇಲ್ಬಾಗದಲ್ಲಿ ಬಂದು ನಿಂತು ನೀರನ್ನು ಸುರಿದು ಹರ್ಷೋದ್ದಾರ ಉಂಟು ಮಾಡುತ್ತಿದ್ದವೆಂದು ಶಾಸನದ ಸಾಲುಗಳು ಹೇಳುತ್ತವೆ. ಈ ಬೇಳ್ವಲದ ಫಲವತ್ತಾದ ಭೂಮಿ ಸುತ್ತ ಮುತ್ತ ತೋಟ ಪಟ್ಟಿಗಳಿಂದ ನಗರದ ಶೋಭೆಯನ್ನು ಹೆಚ್ಚಿಸಿ, ಪ್ರಕೃತಿಯ ಫಲವೃತ್ತವಾಗಿತ್ತು. ಆಕರ್ಷಿತನಾದ ದೇವೇಂದ್ರನು ಇಲ್ಲಿಯ ನಂದನವನಗಳಿಂದ ಅಗಿಗಳನ್ನು ತರಿಸಿ, ಅಮರಾವತಿಯ ತನ್ನ ಉಪವನದಲ್ಲಿ ನೆಡುವ ಆಸೆ ತಳೆದಿದ್ದನಂತೆ ಎಂದು ವರ್ಣಿಸುವ ಮಾತು ಶಾಸನ ಸಾಲಿನಲ್ಲಿ ಬರುತ್ತದೆ. ಕವಿ ಒಂದು ಕಡೆ ಈ ರೀತಿಯಾಗಿ ವರ್ಣಿಸಿ ಆನಂದಿಸುತ್ತಾನೆ. ಅದೇ ನೆಂದರೆ "ದೇವಾಲಯದ ಕಲೆಯು ತಲೆಯೊಡೆದು ನಾಡಿನ ದಿಗಂತಗಳಲ್ಲಿ ಹರಿದು ಜನಮನಗಳನ್ನು ಸ್ಪರ್ಶಿಸಿ ಆನಂದವನ್ನುಂಟು ಮಾಡಿದರೆ ದೇವಾಲಯ ಕೆತ್ತಿದ ವಿಲ್ಪಿಯ ಆತ್ಮಕ್ಕೆ ಶಾಂತಿ ಸಿಗುತ್ತದೆ" .ಚಿರಶಾಂತಿಯು ನಿನ್ನ ಆತ್ಮಕ್ಕೆ ಓ ಕಲೆಗಾರ ಬರಿ ಶಿಲೆಯಲ್ಲ ಇದು ವಿಟಿಕೆಯು ಕಲೆಯ E ಆಗರ ನೋಡಾ ಕೈ ಮಾಡಿ ಕರೆಯುತಿದೆ ನಿನ್ನನು ಸ್ಪಂದಿಸಲೆಂದು ನನ್ನ ವೀಕ್ಷಿಸಿ ನೀನು ಆನಂದಿಸು ಎಂದು". ಈ ಕವಿ ವಾಣಿಯಂತೆ ದೇವಾಲಯದಲ್ಲಿ ರೂಪುಗೊಂಡಿರುವ ಶಿಲಾಮೂರ್ತಿಗಳು ದೇಶ - ವಿದೇಶಗಳಿಂದ ಜನರನ್ನು ಆಕರ್ಷಿಸಿ ಪ್ರದರ್ಶನಗೊಳ್ಳುತ್ತಲಿವೆ. ಜಗತ್ತಿನ ನಾನಾ ಮೂಲೆಗಳಿಂದ ಜನರು ಬಂದು ದೇವಾಲಯವನ್ನು ಕಂಡು ಕಲಾತ್ಮಕ ಹಾಗೂ ಕುಸುರಿನ ಶಿಲ್ಪಕಲೆಯನ್ನು ಕಂಡು ಆನಂದಿಸಿ, ನಕ್ಕು ನಲಿದು, ಹಾಡಿದ ಹರಸಿ ಹೋಗುತ್ತಾರೆ.

.    .    .

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...