ಸ್ಯಾಂಡಲ್‌ ವುಡ್‌ ಸುದ್ಧಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸ್ಯಾಂಡಲ್‌ ವುಡ್‌ ಸುದ್ಧಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಕನಸಲೂ ನೂರು ಬಾರಿ ಕರೆಯುವೆ ನಿನ್ನೇ ನಾನು Kanasalu nooru bari kareyuve ninne...


ಎವ್ರಿ ಮಾರ್ನಿಂಗ್ ಐ ರಿಮೆಂಬರ್ ಯೂ…
ಎವ್ರಿ ನೂನ್ ಎವ್ರಿ ನೈಟ್ ಐ ವಿಲ್ ಪ್ರೇ ಫಾರ್ ಯು..
ಮೈ ಹಾರ್ಟ್ ಸೇಸ್ ದಟ್ ಐ ಲವ್ ಯೂ..
ಅಂಡ್ ಮೈ ಸೌಲ್ ವಿಲ್ ಬರ್ನ್ ಆಲ್ವೇಸ್ ಫಾರ್ ಯು…

ಕನಸಲೂ ನೂರು ಬಾರಿ 
ಕರೆಯುವೆ ನಿನ್ನೇ ನಾನು 
ಅಭ್ಯಾಸವಾಗಿ ಹೋದೆ ನೀ ಜೀವಕೆ….
ಒಬ್ಬಳೇ ಕೂರದಾದೆ ಯಾರನೂ ಸೇರದಾದೆ…
ನೀ ಬೇಕು ಎಲ್ಲ ಘಳಿಗೆಯು 
ಸಿಗಬೇಕು ಪೂರ್ತಿ ಸಲಿಗೆಯ
ಆಸೆ ಬುರುಕಿ ತುಂಬ ನಾನು ಸಹಿಸು ನೀನು...

||ಕನಸಲೂ ನೂರು ಬಾರಿ ಕರೆಯುವೆ ನಿನ್ನೇ ನಾನು
ಅಭ್ಯಾಸವಾಗಿ ಹೋದೆ ನೀ ಜೀವಕೆ…||

ಎವ್ರಿ ಮಾರ್ನಿಂಗ್ ಐ ರಿಮೆಂಬರ್ ಯೂ…
ಎವ್ರಿ ನೂನ್ ಎವ್ರಿ ನೈಟ್ ಐ ವಿಲ್ ಪ್ರೇ ಫಾರ್ ಯು..
ಮೈ ಹಾರ್ಟ್ ಸೇಸ್ ದಟ್ ಐ ಲವ್ ಯೂ..
ಅಂಡ್ ಮೈ ಸೌಲ್ ವಿಲ್ ಬರ್ನ್ ಆಲ್ವೇಸ್ ಫಾರ್ ಯು…
 
ಈ ಕೊರಳಿಗೆ ನಿನ್ನ ಉಸಿರಿನ ಬಯಕೆಯು
ಮುಂಗುರುಳಿಗೆ ನಿನ್ನ ಬೆರಳಿನ ಹುಡುಕಾಟವೂ
ನಡೆವೆನು ಹಿಂಬಾಲಿಸಿ ನೆರಳನು ನಾ ಸೋಲಿಸಿ
ಅತಿಯಾದ ಪ್ರೀತಿ ಬೇಡುವೆ 
ಬೆಂಬಿಡದೆ ನಿನ್ನ ಕಾಡುವೆ
ಹುಚ್ಚು ಹುಡುಗಿ ತುಂಬ ನಾನು ಸಹಿಸು ನೀನು

ನೀ ಪೀಡಿಸು ನನ್ನ ಪ್ರೀತಿಸೋ ವಿಷಯದಿ
ಆಲಂಗಿಸು ಬಿಡದೆ ವಿಷಮದ ಪ್ರತಿ ನಿಮಿಷದಿ
ಉಳಿದರು ನಿನ್ನೊಂದಿಗೆ
ಅಳಿದರು ನಿನ್ನೊಂದಿಗೆ
ಇರಬೇಕು ನಾನು ಮಾತ್ರವೆ
ನಿನ್ನಲ್ಲಿ ಎಲ್ಲ ಕ್ಷಣದಲು
ಹೊಟ್ಟೆ ಕಿಚ್ಚು ತುಂಬಾ ನನಗೆ ಸಹಿಸು ನೀನು
 
ಎವ್ರಿ ಮಾರ್ನಿಂಗ್ ಐ ರಿಮೆಂಬರ್ ಯೂ…
ಎವ್ರಿ ನೂನ್ ಎವ್ರಿ ನೈಟ್ ಐ ವಿಲ್ ಪ್ರೇ ಫಾರ್ ಯು..
ಮೈ ಹಾರ್ಟ್ ಸೇಸ್ ದಟ್ ಐ ಲವ್ ಯೂ..
ಅಂಡ್ ಮೈ ಸೌಲ್ ವಿಲ್ ಬರ್ನ್ ಆಲ್ವೇಸ್ ಫಾರ್ ಯು…

ಮಧುರ ಪಿಸುಮಾತಿಗೆ ಅಧರ ತುಸು ಪ್ರೀತಿಗೆ : ಬಿರುಗಾಳಿ ಚಿತ್ರದ ಗೀತೆ


ಬಿರುಗಾಳಿ (೨೦೦೯)- ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...
ಓ...ಓ...ಓ...ಓ...

ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...
ಇರುವಲ್ಲಿಯೆ ಇರಲಾರದೆ ಬರುವಲ್ಲಿಯೂ ಬರಲಾರದೇ
ಸೋತೆ ನಾನು ನಿನ್ನ ಪ್ರೀತಿಗೆ...ಓ..ಓ..ಓ
ಚೂರಾದೆ ಒಂದೆ ಭೇಟಿಗೆ...

ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...
ಓ...ಓ...ಓ...ಓ...

ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ
ದಾರಿಯಲಿ ಕರೆ ನೋಡುವೆನು ನೀ ಕಾಣುವವರೆಗೆ
ನಿನ್ನದೆ ಪರಿಮಳ ನಿನ್ನಯ ನೆನಪಿಗೆ,ಏನಿದು ಕಾತರ
ಬಾರೆ ಬಾರೆ ನಿನ್ನ ಭೇಟಿಗೆ, ಸೋತೆ ನಾನು ನಿನ್ನ ಪ್ರೀತಿಗೆ...

ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...

ನೋಡಿದರೆ ಮಿತಿಮೀರುತಿದೆ ಮನಮೋಹಕ ಮಿಡಿತ...
ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ...
ನಿನ್ನದೆ ಹೆಸರಿದೆ ಕನಸಿನ ಊರಿಗೆ, ಕುಣಿಯುತ ಬಂದೆನು
ಭಿನ್ನವಾದ ನಿನ್ನ ದಾಟಿಗೆ...ಓ..ಓ..ಓ
ಸೋತೆ ನಾನು ನಿನ್ನ ಪ್ರೀತಿಗೆ...

ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...
ಇರುವಲ್ಲಿಯೆ ಇರಲಾರದೆ ಬರುವಲ್ಲಿಯೂ ಬರಲಾರದೇ
ಸೋತೆ ನಾನು ನಿನ್ನ ಪ್ರೀತಿಗೆ...ಓ..ಓ..ಓ
ಚೂರಾದೆ ಒಂದೆ ಭೇಟಿಗೆ...

ಮಧುರ ಪಿಸುಮಾತಿಗೆ ಅಧರ ತುಸು ಪ್ರೀತಿಗೆ : ಬಿರುಗಾಳಿ ಚಿತ್ರದ ಗೀತೆ

ಮಧುರ ಪಿಸುಮಾತಿಗೆ ಅಧರ ತುಸು ಪ್ರೀತಿಗೆ
madhura pisumaatige - birugaali Kannada song lyrics

ಮಧುರ ಪಿಸುಮಾತಿಗೆ ಅಧರ ತುಸು ಪ್ರೀತಿಗೆ

ಚಿತ್ರ: ಬಿರುಗಾಳಿ
ನಟರು: ಚೇತನ್, ಸಿತಾರ, ತಾರ
ಗಾಯನ: ಮೋಹಿತ್, ಶಮಿತಾ ಮಲ್ನಾಡ್

ಮಧುರ ಪಿಸುಮಾತಿಗೆ ಅಧರ ತುಸು ಪ್ರೀತಿಗೆ
ಇರುವಲ್ಲಿಯು ಇರಲಾರದೆ ಬರುವಲ್ಲಿಯು ಬರಲಾರದೆ
ಸೋತೆ ನಾನು ನಿನ್ನ ಪ್ರೀತಿಗೆ ಓ....
ಚೂರಾದೆ ಒಂದೆ ಭೇಟಿಗೆ

ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ
ದಾರಿಯನೆ ಬರಿ ನೋಡುವೆನು ನೀ ಕಾಣುವವರೆಗೆ
ನಿನ್ನದೇ ಪರಿಮಳ ನಿನ್ನಯ ನೆನಪಿಗೆ
ಏನಿದು ಕಾತರ ಬಾರಿ ಬಾರಿ ನಿನ್ನ ಭೇಟಿಗೆ....ಓ....
ಸೋತೆ ನಾನು ನಿನ್ನ ಪ್ರೀತಿಗೆ....

ನೋಡಿದರೆ ಮಿತಿ ಮೀರುತಿದೆ ಮನಮೋಹಕ ಮಿಡಿತ
ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ
ನಿನ್ನದೇ ಹೆಸರಿದೆ ಕನಸಿನ ಊರಿಗೆ
ಕುಣಿಯುತ ಬಂದೆನು ಭಿನ್ನವಾದ ನಿನ್ನ ಧಾಟಿಗೆ....ಓ....
ಸೋತೆ ನಾನು ನಿನ್ನ ಪ್ರೀತಿಗೆ.....

Mungaru male Song- ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ

ಹಾಡು: ಮುಂಗಾರು ಮಳೆಯೇ
ಚಿತ್ರ: ಮುಂಗಾರು ಮಳೆ (೨೦೦೬)
ನಿರ್ದೇಶಕ: ಯೋಗರಾಜ್ ಭಟ್
ನಿರ್ಮಾಪಕ: ಈ ಕೃಷ್ಣಪ್ಪ
ಸಂಗೀತ: ಮನೋ ಮೂರ್ತಿ
Mungaru Maleye lyrics in Kannada
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ..ಧರೆಯ ಕೊರಳ ಪ್ರೇಮದ ಮಾಲೆ..
ಸುರಿವ ಒಲುಮೆಯ ಜಡಿ ಮಳೆಗೆ..ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ..ಯಾವ ಹನಿಯು ಮುತ್ತಾಗುವುದೊ..
ಒಲವು ಎಲ್ಲಿ ಕುಡಿ ಒಡೆಯುವುದೊ..ತಿಳಿಯದಾಗಿದೆ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

ಭುವಿ ಕೆನ್ನೆ ತುಂಬ..ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ..ಅವಳು ಬಂದ ಹೆಜ್ಜೆಯ ಗುರುತು..
ಹೆಜ್ಜೆ ಗೆಜ್ಜೆಯ ಸವಿ ಸದ್ದು..ಪ್ರೇಮನಾದವೊ
ಎಳೆ ಮುಗಿಲಿನಲ್ಲಿ..ರಂಗು ಚೆಲ್ಲಿ ನಿಂತಳು ಅವಳು..
ಬರೆದು ಹೆಸರ ಕಾಮನ ಬಿಲ್ಲು…ಏನು ಮೋಡಿಯೊ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

ಯಾವ ಹನಿಗಳಿಂದ..ಯಾವ ನೆಲವು ಹಸಿರಾಗುವುದೊ
ಯಾರ ಸ್ಪರ್ಷದಿಂದ..ಯಾರ ಮನವು ಹಸಿಯಾಗುವುದೊ..
ಯಾರ ಉಸಿರಲ್ಯಾರ ಹೆಸರೊ..ಯಾರು ಬರೆದರೊ
ಯಾವ ಪ್ರೀತಿ ಹೂವು..ಯಾರ ಹೃದಯದಲ್ಲರಳುವುದೊ..
ಯಾರ ಪ್ರೇಮ ಪೂಜೆಗೆ ಮುಡಿಪೊ..ಯಾರು ಬಲ್ಲರು
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

ಒಲವ ಚೆಂದಮಾಮ..ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ..ಹೃದಯ ಹೊರಟಿದೆ ಮೆರವಣಿಗೆ..
ಅವಳ ಪ್ರೇಮದೂರಿನ ಕಡೆಗೆ..ಪ್ರೀತಿ ಪಯಣವೊ
ಪ್ರಣಯದೂರಿನಲ್ಲಿ ಕಳೆದು ಹೋದ ಸುಖವ ಇಂದು..
ಧನ್ಯನಾದೆ ಪಡೆದುಕೊಂಡು..ಹೊಸ ಜನ್ಮವೋ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ


Mungaru Maleye lyrics in English
Mungaru Maleye..
Yenu ninna Hanigala Leele
Ninna Mugila Saale, Dhareya Korala Premada Maale
Suriva Olume Aajadi Malege, Preeti Moodide

Yaava Chippinalli, Yaava Haniyu Muttaguvudo
Olavu Yelli Kudiyoduvudo, Tiliyadagide

Mungaru Maleye..
Yenu Ninna Hanigala Leele

Bhuvi Kenne Tumba, Mugilu Surida Muttina Gurutu
Nanna Yedeya Tumba, Avalu Banda Heggeya Gurutu
Hegge Gegge Aa Savi Saddu, Premanadavoo

Yede Mugilinalli, Rangu challi Nintalu Avalu
Baredu Hesaru Kamanabillu, Yenu Modeyoo
Mungaru Maleye..
Yenu Ninna Hanigala Leele

Yava Hanigalinda, Yava Nelavu Hasiraguvudo
Yaara Sparshadindaa, Yara Manavu Hasivaguvudo..
Yara Usirali Yara Hesaro Yaru Baredaro
Yava Preeti Huvu, Yara Hrudayadalli Ararluvudo
Yaara Prema Poojege Mudipo, Yaru Balloro

Mungaru Maleye..
Yenu ninna Hanigala Leele

Olava Chandamama Naguta Banda Manadangalake
Preeti Belakinalli, Hrudaya Horatide Meravanige
Avala Prema Doorinakadege, Preeti Payanavoo
Pranaya Doorinalli, Kaledu Hogo Sukava Indu
Dhanyanaade Padedukondu Hosa Janmavoo

Mungaru Maleye..
Yenu ninna Hanigala Leele

ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟಿದ ದಿನಕ್ಕೆ ಅಭಿಮಾನಿಗಳಿಗೆ ‘ಸಖತ್’ ಉಡುಗೊರೆ..!

ಜುಲೈ 2 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಗೆ ಅವರ ‘ಸಖತ್’ ಸಿನಿಮಾ ಉಡುಗೊರೆಯೊಂದನ್ನು ನೀಡಲಿದೆ.
38ನೇ ಹುಟ್ಟಹಬ್ಬ ಆಚರಿಸಿಕೊಂದ ಗೋಲ್ಡನ್ ...
ಗಣೇಶ್ ಈ ಬಾರಿ ಕೊರೋನಾ ಕಾರಣದಿಂದ ಅಭಿಮಾನಿಗಳ ಜತೆ ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿಕೊಳ್ಳುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಚಿತ್ರ ...
ಆದರೆ ಅವರ ಅಭಿಮಾನಿಗಳಿಗೆ ನಿರಾಸೆಯಾಗಬಾರದು ಎಂದು ‘ಸಖತ್’ ಚಿತ್ರತಂಡ ಮೋಷನ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಿದೆ. ಜುಲೈ 1 ರಂದು ಅಂದರೆ ನಾಳೆ ಸಂಜೆ 6 ಗಂಟೆಗೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಪೋಸ್ಟರ್ ಬಿಡುಗಡೆಯಾಗಲಿದೆ.

ಬಾಲಿವುಡ್ ಸ್ಟಾರ್‌ ನಟ ಅಮೀರ್ ಖಾನ್ ಗೂ ಕೊರೋನಾ ಕಾಟ ಎದುರಾಗಿದೆ..!

ಕೊರೋನಾ ಮಹಾಮಾರಿ ಯಾರನ್ನೂ ಬಿಡುವ ಹಾಗೆ ಕಾಣುತ್ತಿಲ್ಲ. ಇದೀಗ ಬಾಲಿವುಡ್ ನಟ ಅಮೀರ್ ಖಾನ್ ಕೂಡಾ ಕೊರೋನಾ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ.
ಅಮೀರ್ ಖಾನ್ ಮನೆಗೆಲಸದವರಿಗೆ ಕೋವಿಡ್-19 ...
ಇದಕ್ಕೆ ಕಾರಣ ಅವರ ನೌಕರರಲ್ಲಿ ಕೆಲವರಿಗೆ ಕೊರೋನಾ ದೃಢಪಟ್ಟಿದೆ. ಹೀಗಾಗಿ ಅಮೀರ್ ಕೂಡಾ ಪರೀಕ್ಷೆಗೊಳಗಾಗಿದ್ದು ಅವರ ವರದಿ ನೆಗೆಟಿವ್ ಬಂದಿದೆ.
ಆದರೆ ಅವರ ತಾಯಿಯವರ ಕೊರೋನಾ ಪರೀಕ್ಷೆ ಫಲಿತಾಂಶ ಇನ್ನೂ ಕೈ ಸೇರಿಲ್ಲ. ನನ್ನ ಅಮ್ಮನಿಗೂ ನೆಗೆಟಿವ್ ಫಲಿತಾಂಶ ಬರಲಿ ಎಂದು ಪ್ರಾರ್ಥಿಸಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿರುವ ಅಮೀರ್ ಸುರಕ್ಷತಾ ಕ್ರಮ ಕೈಗೊಂಡ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಕನ್ನಡ ನಾಡಿನ ಸ್ಟಾರ್‌ ನಟಿಗೆ ಕೊರೋನಾ, ಬೇಗ ಗುಣಮುಖವಾಗಲಿ ಹಾರೈಸೋಣ...!

ತೆಲುಗಿನಲ್ಲಿ ಹೆಸರು ಮಾಡಿರುವ ಮೈಸೂರು ಮೂಲದ ಬೆಡಗಿ ನವ್ಯಾ ಸ್ವಾಮಿ ಅವರಿಗೆ ಕೊರೋನಾ ಇರುವುದು ದೃಢವಾಗಿದೆ. ಚಿತ್ರೀಕರಣಕ್ಕೆ ಸರ್ಕಾರಗಳು ಅವಕಾಶ ನೀಡಿದ ಮೇಲೆ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು.



ತೆಲಂಗಾಣ ಸರ್ಕಾರ ಜೂನ್ 15 ರಿಂದ ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿತ್ತು. 'ನಾ ಪೇರು ಮೀನಾಕ್ಷಿ' ಧಾರಾವಾಹಿ ಮೂಲಕ ಮನೆಮಾತಾಗಿರುವ ನಟಿ, ಧಾರಾವಾಹಿಯ ಚಿತ್ರೀಕರಣದ ವೇಳೆಯೇ ಕೊರೋನಾ ವೈರಸ್ ಸೋಂಕಿತರ ಜತೆ ಸಂಪರ್ಕಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಇದೆ.

ತಲೆನೋವು, ಶೀತ ಸಮಸ್ಯೆ ಎದುರಿಸುತ್ತಿದ್ದ ನಟಿ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದರು. ಫಲಿತಾಂಶವು ಪಾಸಿಟಿವ್ ಬಂದಿದ್ದು, ನಟಿ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಹಾಗೆಯೇ ನಟಿಯೊಂದಿಗೆ ಶೂಟಿಂಗ್ ವೇಳೆ ಸಂಪರ್ಕದಲ್ಲಿದ್ದವರನ್ನು ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿದೆ. ಮೈಸೂರು ಮೂಲದ ನಟಿ ಕನ್ನಡದ ಲಕುಮಿ, ತಂಗಾಳಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. 

ತಮಿಳು, ತೆಲುಗಿನಲ್ಲಿ ಅವಕಾಶ ಗಿಟ್ಟಿಸಿಕೊಂಡು ವಾಣಿ ರಾಣಿ, 'ನಾ ಪೇರು ಮೀನಾಕ್ಷಿ' ಮೂಲಕ ತಮಿಳು- ತೆಲುಗುಗಿನಲ್ಲಿಯೂ ಪ್ರತಿಭೆ ಅನಾವರಣ ಮಾಡಿದ್ದರು.

ಗೋಲ್ಡನ್ ಸ್ಟಾರ್ ಗಣೇಶ್ ಗೆ ಬರ್ತ್ ಡೇ ವಿಶ್ ಮಾಡಿ ಎಡವಟ್ಟು ಮಾಡಿಕೊಂಡ ಕಿಚ್ಚ..!

ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇಗೆ ಎರಡು ದಿನ ಮೊದಲೇ ವಿಶ್ ಮಾಡಿ ಕಿಚ್ಚ ಸುದೀಪ್ ಟ್ರೋಲ್ ಗೊಳಗಾಗಿದ್ದಾರೆ. ತಮ್ಮ ತಪ್ಪು ಅರಿವಾಗುತ್ತಿದ್ದಂತೇ ಮತ್ತೊಂದು ಟ್ವೀಟ್ ಮಾಡಿ ತಿದ್ದಿಕೊಂಡಿದ್ದಾರೆ.
ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ...

ಗಣೇಶ್ ಬರ್ತ್ ಡೇ ಇರುವುದು ನಾಳೆ ಅಂದರೆ ಜುಲೈ 2 ಕ್ಕೆ. ಆದರೆ ಕಿಚ್ಚ ನಿನ್ನೆಯೇ ಬರ್ತ್ ಡೇಗೆ ವಿಶ್ ಮಾಡಿದ್ದರು. ಆದರೆ ಇದಕ್ಕೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಂತೇ ಎಚ್ಚೆತ್ತುಕೊಂಡ ಕಿಚ್ಚ ಮತ್ತೊಂದು ಟ್ವೀಟ್ ಮಾಡಿ ತಮ್ಮಿಂದ ತಪ್ಪಾಗಿದೆ ಎಂದು ತಿದ್ದಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಈ ಸಿನಿಮಾದಲ್ಲಿ ಬೇಕೇ ...
 
ಇದನ್ನು ಅಡ್ವಾನ್ಸ್ ವಿಶ್ ಎಂದುಕೋ ಗೆಳೆಯ. ನಾನು ಇಂದು ನಿನ್ನ ಜನ್ಮದಿನವೆಂದು ತಪ್ಪಾಗಿ ತಿಳಿದುಕೊಂಡು ವಿಶ್ ಮಾಡಿದೆ. ನೀನು ಸರಳವಾಗಿ ಬರ್ತ್ ಡೇ ಆಚರಿಸಿಕೊಳ್ಳಲು ನಿರ್ಧರಿಸಿರುವುದಕ್ಕೆ ಅಭಿನಂದನೆಗಳು ಎಂದು ಸುದೀಪ್ ಮತ್ತೊಂದು ಟ್ವೀಟ್ ಮೂಲಕ ತಿದ್ದಿಕೊಂಡಿದ್ದಾರೆ.

ಕಿಚ್ಚನ 'ಫ್ಯಾಂಟಮ್' ಸಿನಿಮಾಗೆ ಸಂಗೀತ ನಿರ್ದೇಶಕರು ಯಾರು ಗೊತ್ತಾ? ಚಿತ್ರೀಕರಣ ಯಾವಾಗಲಿಂದ ಗೊತ್ತಾ?

ಫ್ಯಾಂಟಮ್​ ಸಿನಿಮಾ ಚಿತ್ರೀಕರಣಕ್ಕೆ ಈಗಾಗಲೇ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇನ್ನೇನು ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗಿದೆ. ಕಿಚ್ಚ ಸುದೀಪ್​ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾದಲ್ಲಿ ವಿಕ್ರಾಂತ ರೋಣ ಹೆಸರಿನ ಪಾತ್ರ ನಿಭಾಯಿಸುತ್ತಿದ್ದಾರೆ. ಇದೀಗ ಇದೇ ಸಿನಿಮಾದಿಂದ ಹೊಸದೊಂದು ಅಪ್​ಟೇಟ್​ ಮಾಹಿತಿ ಲಭ್ಯವಾಗಿದೆ. ಚಿತ್ರಕ್ಕೆ ಸಂಗೀತ ನಿರ್ದೇಶಕರ ಆಗಮನವಾಗಿದೆ.
ಬಿಗ್ ಬಾಸ್ ಸೀಸನ್ 7' ಮುಗಿಸಿ 'ಫ್ಯಾಂಟಮ್ ...
ಹೌದು, ಇದೇ ಮೊದಲ ಬಾರಿ ಕಿಚ್ಚ ಸುದೀಪ್​ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಲಿದ್ದಾರೆ. ಸದ್ಯ ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲು ಸಿನಿಮಾ ಆಫರ್​ಗಳನ್ನು ಹಿಡಿದುಕೊಂಡು ಬಿಜೆಯೆಸ್ಟ್ ಮ್ಯೂಸಿಕ್​ ಡೈರೆಕ್ಟರ್ ಎಂದೇ ಕರೆಸಿಕೊಳ್ಳುತ್ತಿರುವ ಅಜನೀಶ್​, ಫ್ಯಾಂಟಮ್​ ಚಿತ್ರಕ್ಕೆ ರಾಗ ಸಂಯೋಜನೆ ಮಾಡಲಿದ್ದಾರೆ.
ಈ ಹಿಂದೆ ಅನೂಪ್​ ನಿರ್ದೇಶನ ಮಾಡಿದ್ದ ರಂಗಿತರಂಗ ಮತ್ತು ರಾಜರಥ ಚಿತ್ರಕ್ಕೆ ಇದೇ ಅಜನೀಶ್ ಸಂಗೀತ ನೀಡಿದ್ದರು. ಇದೀಗ ಅನೂಪ್​ ಜತೆ ಮೂರನೇ ಬಾರಿ ಕೈ ಜೋಡಿಸಿದ್ದಾರೆ. ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಲ್ ಬಾಟಂ, ಅವನೇ ಶ್ರೀಮನ್ನಾರಾಯಣ, ದಿಯಾ ಸಿನಿಮಾಗಳಿಗೆ ಅದ್ಭುತ ಸಂಗೀತ ನೀಡಿದ್ದಾರೆ ಅಜನೀಶ್​.
Ajaneesh Loknath: 'ಫ್ಯಾಂಟಮ್' ಸಿನಿಮಾಗೆ ಸಂಗೀತ ...
ಜುಲೈ ಮೊದಲ ವಾರದಿಂದ ಹೈದರಾಬಾದ್​ನಲ್ಲಿ ಫ್ಯಾಂಟಮ್​ ಚಿತ್ರದ ಚಿತ್ರೀಕರಣ ನಡೆಯಲಿದೆ ಎನ್ನಲಾಗುತ್ತಿದೆ. ಅದ್ದೂರಿ ಸೆಟ್​ ಸಹ ಹಾಕಲಾಗಿದೆ. ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ನಟಿಸುತ್ತಿದ್ದು, ಜಾಕ್​ ಮಂಜು ಚಿತ್ರಕ್ಕೆ ಬಂದವಾಳ ಹೂಡುತ್ತಿದ್ದಾರೆ.

ಪತಿ ಚಿರಂಜೀವಿ ಸರ್ಜಾ ಸಾವಿನ ಬೆನ್ನಲ್ಲೇ ಹೆಸರು ಬದಲಿಸಿಕೊಂಡ ಮೇಘನಾ!



ಇತ್ತೀಚೆಗಷ್ಟೇ ಅಗಲಿದ ಚಿರಂಜೀವಿ ಸರ್ಜಾ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಾಗಲೇ ಅವರಿಲ್ಲದೆ ಮೂರು ವಾರಗಳು ಕಳೆದವು. ದುಃಖದ ಮಡುವಿನಲ್ಲಿಯೇ ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ. ಅಣ್ಣನನ್ನು ಕಳೆದುಕೊಂಡ ದುಃಖ ಧ್ರುವನಿಗೆ ಬಾಧಿಸಿದರೆ, ಇಷ್ಟಪಟ್ಟು, ಕಷ್ಟಪಟ್ಟು ಪಡೆದುಕೊಂಡ ಪತಿ ಇನ್ನಿಲ್ಲ ಎಂಬ ಕೊರಗಿನಲ್ಲಿ ಗರ್ಭಿಣಿ ಮೇಘನಾ ಕಣ್ಣೀರಿಡುತ್ತಿದ್ದಾರೆ. ಇತ್ತ ಅಭಿಮಾನಿಗಳದ್ದು ಮತ್ತೊಂದು ಥರದ ಯಾತನೆ. ಒಟ್ಟಾರೆಯಾಗಿ ಚಿರು ಸರ್ಜಾ ಸಾವು ಕೇವಲ ಕುಟುಂಬಕ್ಕಷ್ಟೇ ನೋವು ತರಿಸಿಲ್ಲ. ಇಡೀ ನಾಡು ಅವರ ಸಾವಿಗೆ ಕಂಬನಿ ಮಿಡಿದಿದೆ. ಈ ನಡುವೆಯೇ ಪತಿ ಚಿರು ನೆನೆದು ಸೋಷಿಯಲ್​ ಮೀಡಿಯಾಗಳಲ್ಲಿ ಹಲವು ಪೋಸ್ಟ್ ಹಾಕಿದ್ದರು ಪತ್ನಿ ಮೇಘನಾ ರಾಜ್​, ಇದೀಗ ಹೆಸರನ್ನೂ ಬದಲಿಸಿಕೊಂಡಿದ್ದಾರೆ.


ಹೌದು, ಚಿರು ಅಗಲಿಕೆಯ ನೋವಿನಲ್ಲಿ ಸೋಷಿಯಲ್​ ಮೀಡಿಯಾ ಖಾತೆಗಳ ಹೆಸರನ್ನು ಮೇಘನಾ ಬದಲಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ಮೇಘ ಎಸ್​ ರಾಜ್​ ಹೆಸರಿನಲ್ಲಿದ್ದ ಖಾತೆಗಳೆಲ್ಲ, ಮೇಘನಾ ರಾಜ್​ ಸರ್ಜಾ ಎಂದು ಬದಲಾಗಿವೆ. ಇತ್ತೀಚೆಗಷ್ಟೇ ಹೊಸ ಹೆಸರನ್ನು ಅಪ್​ಡೇಟ್​ ಮಾಡಿದ್ದು, ಚಿರಂಜೀವಿಯನ್ನು ಹೆಸರಿನ ಜತೆಯಲ್ಲಿಯೇ ಇರಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿರಂಜೀವಿಯನ್ನು ನೆನೆದು ವಿವರವಾದ ಪತ್ರವೊಂದನ್ನು ಬರೆದು ಪೋಸ್ಟ್ ಮಾಡಿದ್ದರು ಮೇಘನಾ.


ಮೇಘನಾ ಪತ್ರದ ಸಾರಾಂಶ ಹೀಗಿದೆ.

ಚಿರು ನಾನು ಸಾಕಷ್ಟು ಬಾರಿ ಪ್ರಯತ್ನಿಸಿದೆ. ಆದರೆ, ನಾನು ಏನು ಹೇಳಬೇಕೆಂದುಕೊಂಡನೋ ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ನನಗೆ ನೀನು ಏನಾಗಿದ್ದೆ ಎಂಬುದನ್ನು ಜಗತ್ತಿನಲ್ಲಿರುವ ಎಲ್ಲ ಪದಗಳಿಂದ ವರ್ಣಿಸಲು ಆಗುವುದಿಲ್ಲ. ನನ್ನ ಸ್ನೇಹಿತ, ನನ್ನ ಪ್ರಿಯಕರ, ನನ್ನ ಪಾಲುದಾರ, ನನ್ನ ಮಗು, ನನ್ನ ವಿಶ್ವಾಸ ಹಾಗೂ ನನ್ನ ಪತಿ. ಇದೆಲ್ಲದಕ್ಕಿಂತ ಹೆಚ್ಚು ನೀನು. ನನ್ನ ಆತ್ಮದ ಒಂದು ಭಾಗ ನೀನು ಚಿರು.
ImageImage
ಮನೆಯ ಬಾಗಿಲನ್ನು ನೋಡಿದಾಗಲೆಲ್ಲಾ ಅಗಾಧ ನೋವು ನನ್ನ ಹೃದಯದಲ್ಲಿ ಆವರಿಸಿಕೊಳ್ಳುತ್ತದೆ. ಪ್ರತಿದಿನ, ಪ್ರತಿಕ್ಷಣ ನಿಮ್ಮನ್ನು ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ ಎಂದು ಗೊತ್ತಾದಾಗ ನನ್ನ ಹೃದಯದ ಮುಳುಗಡೆಯಾದಂತೆ ಭಾಸವಾಗುತ್ತದೆ. ನನ್ನ ಹೃದಯ ಸಾವಿರ ಸಾವುಗಳಂತೆ ನಿಧಾನ ಮತ್ತು ನೋವಿನಿಂದ ಕೂಡಿದೆ. ಆದರೆ, ನೀ ನನ್ನ ಸುತ್ತ ಇರುವೆ ಎಂಬ ಮ್ಯಾಜಿಕ್​ ಶಕ್ತಿಯು ಒಮ್ಮೆ ಬಂದು ಹೋಗುತ್ತದೆ. ಪ್ರತಿ ಕ್ಷಣ ನಾನು ಅಶಕ್ತಳೆಂಬ ಭಾವ ಕಾಡುತ್ತದೆ. ಆದರೂ ನೀನು ಗಾರ್ಡಿಯನ್​ ಏಂಜೆಲ್​ ರೀತಿ ನನ್ನ ಸುತ್ತಲೂ ಇರುತ್ತೀಯ ಎಂಬಂತೆ ಭಾಸವಾಗುತ್ತದೆ.
ImageImage
ನೀವು ನನ್ನನ್ನು ತುಂಬಾ ಪ್ರೀತಿಸುತ್ತೀರಿ, ನೀವು ನನ್ನನ್ನು ಒಬ್ಬಂಟಿಯಾಗಿ ಬಿಡಲು ಸಾಧ್ಯವೇ ಇಲ್ಲ. ನಿಮಗೆ ಸಾಧ್ಯವೇ ಚಿರು? ನಮ್ಮ ಪುಟಾಣಿಯೇ ನನಗೆ ನೀವು ನೀಡಿರುವ ಅದ್ಭುತವಾದ ಉಡುಗೊರೆ, ನಮ್ಮ ಪ್ರೀತಿಯ ಸಂಕೇತವಾಗಿದೆ. ಈ ಸಿಹಿಯಾದ ಉಡುಗೊರೆಗೆ ನಾನು ಶಾಶ್ವತವಾಗಿ ಋಣಿಯಾಗಿರುತ್ತೇನೆ. ಮಗುವಾಗಿ ನಿಮ್ಮನ್ನು ಮರಳಿ ಪಡೆಯುವುದಕ್ಕೆ ಕಾಯಲು ನನ್ನಿಂದ ಆಗುತ್ತಿಲ್ಲ. ಮರಳಿ ನಿಮ್ಮನ್ನು ಬಿಗಿಯಾಗಿ ಹಿಡಿದಿಕೊಳ್ಳುವುದಕ್ಕೆ ಕಾಯಲು ನನ್ನಿಂದ ಸಾಧ್ಯವಿಲ್ಲ. ನಿಮ್ಮ ಮಗು ಮುಖವನ್ನು ನೋಡುವುದಕ್ಕೆ ಕಾಯಲು ಆಗುತ್ತಿಲ್ಲ. ಇಡೀ ರೂಮಿನ ತುಂಬಿರುತ್ತಿದ್ದ ನಿಮ್ಮ ನಗೆಯನ್ನು ಕೇಳುವುದಕ್ಕೆ ಕಾಯಲು ಸಾಧ್ಯವಾಗುತ್ತಿಲ್ಲ. ನಾನು ನಿಮಗಾಗಿ ಕಾಯುತ್ತಿದ್ದರೆ, ಮತ್ತೊಂದು ಕಡೆಯಿಂದ ನೀವು ನನಗಾಗಿ ಕಾಯುತ್ತಿದ್ದೀರಾ. ನಾನು ಉಸಿರಾಡುವವರೆಗೂ ನೀವು ಬದುಕಿರುತ್ತೀರಿ, ನೀವು ನನ್ನಲ್ಲಿದ್ದೀರಿ ಐ ಲವ್​ ಯು ಎಂದು ಸುದೀರ್ಘವಾಗಿ ಮೇಘನಾ ಬರೆದುಕೊಂಡಿದ್ದರು.



ಲಾಕ್​ಡೌನ್​ ಮಧ್ಯಯೇ ದಿಗಂತ್- ಐಂದ್ರಿತಾ ಜಾಲಿ ಟ್ರಿಪ್.!




ಕೊರೊನಾ ವಿರುದ್ಧದ ಸಮರದಲ್ಲಿ ಲಾಕ್​ಡೌನ್ ಒಂದಷ್ಟು​ ಸಡಿಲಗೊಳ್ಳುತ್ತಿದ್ದಂತೆಯೇ ತಾರಾ ದಂಪತಿ ದಿಗಂತ್ ಹಾಗೂ​ ಐಂದ್ರಿತಾ ರೇ ಪ್ರವಾಸಕ್ಕೆ ಹೋಗಿದ್ದಾರೆ. ಐಂದ್ರಿತಾರ ಅಪ್ಪ-ಅಮ್ಮ ಹಾಗೂ ಸಾಕು ನಾಯಿಗಳೊಂದಿಗೆ ಕೊಡಗಿಗೆ ಹೋಗಿ, ಎಂಜಾಯ್ ಮಾಡಿದ್ದಾರೆ.






ಕೊರೊನಾ‌ ಬಗ್ಗೆ 10 ವರ್ಷ ಮುಂಚೆಯೇ ಮುನ್ಸೂಚನೆ ನೀಡಿತ್ತು ಈ ಸಿನಿಮಾ.!

Fact-Checking 'Contagion,' The Movie About A Global Virus Outbreak ...
ಕೊರೊನಾ ವೈರಸ್‌ ಹೆಮ್ಮಾರಿ ಜಗತ್ತನ್ನೇ ನಡುಗಿಸುತ್ತಿದೆ. ಆಫ್ರಿಕಾದಲ್ಲಿನ ಪುಟ್ಟ ಬಡ ರಾಷ್ಟ್ರಗಳಿಂದ ಹಿಡಿದು ಏಷ್ಯಾ, ಯುರೋಪ್‌, ಅಮೆರಿಕಾದಂಥ ಬಲಿಷ್ಠರು ಕೋವಿಡ್‌ ಕಪಿಮುಷ್ಠಿಗೆ ಸಿಕ್ಕಿ ಒದ್ದಾಡುತ್ತಿದ್ದಾರೆ. ಆದ್ರೆ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ ಈ ಸಾಂಕ್ರಾಮಿಕ ಹೆಮ್ಮಾರಿ ಬಗ್ಗೆ ಹಾಲಿವುಡ್‌ ಚಿತ್ರವೊಂದು 2011ರಲ್ಲಿಯೇ ಎಚ್ಚರಿಕೆ ನೀಡಿತ್ತು ಎನ್ನುವುದು. ಹೌದು 2011ರಲ್ಲಿ ತೆರೆ ಕಂಡ Contagion ಹಾಲಿವುಡ್‌ ಸಿನಿಮಾ Coronavirus ಬಗ್ಗೆ ನೇರವಾಗಿ ಹೇಳದಿದ್ರೂ ಇದೇ ಮಾದರಿಯ ಸಾಂಕ್ರಾಮಿಕ ರೋಗ ಎಲ್ಲೆಡೆ ಹಬ್ಬಿ, ಅದರಿಂದಾಗುವ ಪರಿಣಾಮಗಳನ್ನ ಮನಮುಟ್ಟುವಂತೆ ಅನಾವರಣಗೊಳಿಸಿದೆ.
ಮುನ್ನೆಚ್ಚರಿಕೆಯಾಗಿತ್ತಾ ಚಿತ್ರ?

ಬಹುಶಃ ನಾವು ಒದಿಕೊಂಡಂತೆ ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಮಾತಿನಂತೆ, ವೈದ್ಯರು ಕಾಣದ್ದನ್ನು ಸಿನಿಮಾ ನಿರ್ದೇಶಕರು ಕಂಡರಾ ಎನ್ನುವಂತಿದೆ. ಯಾಕಂದ್ರೆ ಈಗಿರುವ ಕೊರೊನಾ ವೈರಸ್‌ನ ಉಲ್ಲೇಖವಿಲ್ಲದಿದ್ರೂ, ಚಿತ್ರದ ವೈರಸ್‌ ಬಹುತೇಕ ಕೊರೊನಾವನ್ನೇ ಹೋಲುತ್ತೆ. ಹಾಗೇನಾ ಈಗ ನಡೆಯುತ್ತಿರುವ ಘಟನೆಗಳೆಲ್ಲಾ ಚಿತ್ರದಲ್ಲಿ ಬಂದು ಹೋಗುವ ಘಟನೆಗಳನ್ನೇ ಹೋಲುತ್ತಿರೋದು ಕಾಕತಾಳಿಯವಾ ಅಥವಾ ಮುನ್ನೆಚ್ಚರಿಕೆಯ ಗಂಟೆಯಾಗಿತ್ತಾ ಅನ್ನೋ ಅನುಮಾನ ಚಿತ್ರ ನೋಡಿದವರಲ್ಲಿ ಬಂದಿದ್ದರೇ ಅಚ್ಚರಿಯೇನಿಲ್ಲ. ಅಷ್ಟರಮಟ್ಟಿಗೆ ಆ ಸಿನಿಮಾ ಕರಾರುವಕ್ಕಾಗಿ ಮೂಡಿಬಂದಿತ್ತು.

ವೈಜ್ಞಾನಿಕ ಚಿತ್ರಗಳು ಮತ್ತು ಹಾಲಿವುಡ್‌
ಹೌದು, 2011ರಲ್ಲಿ ತೆರೆಕಂಡ ಕಂಟೇಜಿಯನ್‌ ಚಿತ್ರ ಬಹುತೇಕ ಕೊರೊನಾವೈರಸ್‌ನ್ನೇ ಹೋಲುವಂಥ ಸಾಂಕ್ರಾಮಿಕ ರೋಗದ ಬಗ್ಗೆ ಇದೆ. ವೈಜ್ಞಾನಿಕ ಚಿತ್ರಗಳನ್ನು ದೊಡ್ಡ ಪರದೆ ಮೇಲೆ ನೈಜ ರೀತಿಯಲ್ಲಿ ಚಿತ್ರಿಸುವಲ್ಲಿ ಹಾಲಿವುಡ್‌ಗೆ ಹಾಲಿವುಡ್ಡೇ ಸಾಟಿ. ಅತ್ಯಾಧುನಿಕ ತಂತ್ರಜ್ಞಾನ, ಆರ್ಥಿಕ ನೆರವು ಮತ್ತು ಇಡಿ ಜಗತ್ತಿನಾದ್ಯಂತ ಮಾರುಕಟ್ಟೆ ಹೊಂದಿರುವ ಹಾಲಿವುಡ್‌, ಸೈನ್ಸ್‌ ಫಿಕ್ಷನ್‌ ಚಿತ್ರಗಳನ್ನ ವೀಕ್ಷಕರಿಗೆ ನೈಜವಾಗಿ ಉಣಬಡಿಸುವಲ್ಲಿ ಎತ್ತಿದ ಕೈ. ಇದಕ್ಕೆ ಉದಾಹರಣೆಗಳೆಂದರೆ ಸ್ಟೀವನ್‌ ಸ್ಪಿಲ್‌ಬರ್ಗ್‌ ‘ಈಟಿ’, ರಿಚರ್ಡ್‌ ಅಟೆನ್‌ಬರ್ಗ್‌ರ, ‘ಜುರಾಸಿಕ್‌ ಪಾರ್ಕ್‌’, ‘ಔಟ್‌ ಬ್ರೇಕ್‌’ ಮತ್ತು ‘ಡೇ ಆಫ್ಟರ್‌ ಟೂಮಾರೋ’ ಅಂತಹ ಅದ್ಭುತ ಚಿತ್ರಗಳು.

ಕೊರೊನಾದಂಥದ್ದೇ ಕತೆ ಹೊಂದಿರುವ ಕಂಟೇಜಿಯನ್‌ ಚಿತ್ರ

ಇಂಥ ಚಿತ್ರಗಳ ಸಾಲಿಗೆ ಸೇರುವ ಸ್ಟೀವನ್‌ ಸೋಡೇನ್‌ಬರ್ಗ್‌ರ ‘ಕಂಟೇಜಿಯನ್‌’ ಸಾಂಕ್ರಮಿಕ ರೋಗ ಕ್ಷಿಪ್ರಗತಿಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವ ಮತ್ತು ಅದರಿಂದ ಆಗುವ ಘೋರ ಪರಿಣಾಮಗಳು, ಇವೆಲ್ಲವುಗಳ ನಡುವೆ ತೆರೆದುಕೊಳ್ಳುವ ಮಾನವ ಸಂಬಂಧಗಳು ಮತ್ತು ವರ್ತನೆಗಳನ್ನ ಮನಮುಟ್ಟುವಂತೆ ತೆರೆದಿಡುತ್ತದೆ.

ಬೆತ್‌ ಎಮ್‌ಹಾಫ್‌ ಎನ್ನವ ಮಲ್ಟಿನ್ಯಾಶನಲ್‌ ಕಂಪನಿ ಉದ್ಯೋಗಿ ಹಾಂಕಾಂಗ್‌ನಿಂದ ಅಮೆರಿಕದ ತನ್ನ ಊರು ಮಿನಿಯಾಪೊಲಿಸ್‌ಗೆ ಹಿಂದಿರುಗುವುದರೊಂದಿಗೆ ಕಥೆ ಮತ್ತು ಸಾಂಕ್ರಾಮಿಕ ವೈರಸ್‌ ಅನಾವರಣಗೊಳ್ಳುತ್ತಾ ಹೋಗುತ್ತದೆ. ಕೆಲ ದಿನಗಳಲ್ಲಿಯೇ ಆಕೆ ವೈರಸ್‌ನಿಂದ ಸಾಯುವುದಲ್ಲದೇ ಆಕೆಯ ಸಂಪರ್ಕಕ್ಕೆ ಬಂದ ಎಲ್ಲರೂ ಸಾವನ್ನಪ್ಪುತ್ತಾರೆ. ಆದ್ರೆ ಆಕೆಯ ಗಂಡ ಮಾತ್ರ ಯಾವುದೇ ತೊಂದರೆಯಾಗದೇ ಆರಾಮವಾಗಿರುತ್ತಾನೆ. ಯಾಕಂದ್ರೆ ಆತನ ರೋಗ ನಿರೋಧಕ ಶಕ್ತಿ ವೈರಸ್‌ಗಿಂತ ಬಲಿಷ್ಟವಾಗಿರುತ್ತೆ.

ವೈರಸ್‌ ಭಯಾನಕತೆಗಳ ಅನಾವರಣ
ಹೀಗೆ ವೈರಸ್‌ ಜಗತ್ತಿನಾದ್ಯಂತ ತನ್ನ ರುದ್ರನರ್ತನವನ್ನ ಆರಂಭಿಸುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೆರಿಕದ ಸಾಂಕ್ರಾಮಿಕ ರೋಗ ತಡೆ ಮತ್ತು ನಿರೋಧಕ ಸಂಸ್ಥೆ ರೋಗದ ಪತ್ತೆ ಮತ್ತು ಅದನ್ನು ತಡೆಯಬಹುದಾದ ಸಾಧ್ಯತೆಗಳ ಕುರಿತು ತನಿಖೆ ಮತ್ತು ಚಿಕಿತ್ಸೆ ಕುರಿತು ತಲೆಬಿಸಿಮಾಡಿಕೊಳ್ಳಲಾರಂಭಿಸುತ್ತವೆ. ನುರಿತ ತಜ್ಞರನ್ನ ವೈರಸ್‌ನ ಮೂಲ ಸ್ಥಳಕ್ಕೆ ತನಿಖೆಗೆ ಕಳಿಸಿದ್ರೆ, ಇನ್ನುಳಿದವರು ಅದನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಾರೆ. ಇನ್ನು ಕೆಲವರು ಈ ಭಯಂಕರ ಹೆಮ್ಮಾರಿಗೆ ಔಷಧ ಕಂಡು ಹಿಡಿಯುವ ಪ್ರಯತ್ನದಲ್ಲಿ ತೊಡಗುತ್ತಾರೆ.

ವೈದ್ಯರು ಮತ್ತು ವಿಜ್ಞಾನಿಗಳ ಹೋರಾಟದ ಅನಾವರಣ
ಈ ಪ್ರಯತ್ನದಲ್ಲಿ ಕೆಲವರು ವೈರಸ್‌ನಿಂದಾಗಿಯೇ ಪ್ರಾಣ ತೆತ್ತರೆ, ಕೆಲ ಅವಕಾಶವಾದಿಗಳು ಮುಗ್ಧ ಜನತೆಯ ದಾರಿ ತಪ್ಪಿಸಿ ಹೆಸರು ಮತ್ತು ಹಣ ಗಳಿಸಲು ತಪ್ಪು ಮಾಹಿತಿ ಹರುಡುತ್ತಾರೆ. ಮತ್ತೊಂದೆೆಡೆ ಸತತ ಪ್ರಯತ್ನಗಳ ನಂತರ ತಜ್ಞರು ಎಂಇವಿ-1 ವೈರಸ್‌ಗೆ ಔಷಧಿಯನ್ನ ಕಂಡುಹಿಡಿಯುತ್ತಾರೆ. ಅದಕ್ಕಾಗಿ ಒಬ್ಬ ವೈದ್ಯ ವಿಜ್ಞಾನಿ ತನ್ನ ಮೇಲೆಯೇ ಔಷಧಿಯನ್ನ ಪ್ರಯೋಗಿಸಿಕೊಳ್ಳುತ್ತಾಳೆ.

ಇದಕ್ಕೆ ಪ್ರೇರಣೆ ಎನ್ನುವಂತೆ ಈ ಹಿಂದೆ ಒಬ್ಬ ವಿಜ್ಞಾನಿ ಬ್ಯಾಕ್ಟೀರಿಯಾಗೆ ಔಷಧಿ ಸಂಶೋಧಿಸಲು ತನ್ನ ಮೇಲೆಯೇ ನಡೆಸಿದ ಪ್ರಯೋಗವನ್ನು ಉಲ್ಲೇಖಿಸುತ್ತಾಳೆ. ಈ ಮೂಲಕ ವೈದ್ಯರ ನಿಸ್ವಾರ್ಥ ಸೇವೆ ಮತ್ತು ಶ್ರಮಗಳನ್ನ ಪರಿಚಯಿಸುತ್ತಾಳೆ. ಅಂತಿಮವಾಗಿ ವೈರಸ್‌ಗೆ ಔಷಧಿಯ ಪತ್ತೆ ಮತ್ತು ಅದರ ಉತ್ಪಾದನೆ ಮತ್ತು ಸಾಂಕೇತಿಕವಾಗಿ ಮೊದಲ ಹಂತದಲ್ಲಿ ಫ್ರಂಟ್‌ಲೈನ್‌ ಕಾರ್ಯಕರ್ತರಿಗೆ ಔಷಧಿಯನ್ನ ವಿತರಿಸುವುದರೊಂದಿಗೆ ಚಿತ್ರ ಮುಗಿಯುತ್ತದೆ.

ಮಾನವನ ದೌರ್ಬಲ್ಯ ಮತ್ತು ಹಣದ ದಾಹದ ಅನಾವರಣ

ಆದ್ರೆ ಈ ಮೂಲಕ ಕೊರೊನಾವನ್ನ ಹೋಲುವ ಎಂಇವಿ-1 ಮತ್ತು ಅದರ ರೌದ್ರಾವತಾರ, ಅದಕ್ಕೆ ಸಿಲುಕಿ ನಲುಗುವ ಜಗತ್ತು, ವಿಜ್ಞಾನಿಗಳ ಹೋರಾಟ, ವೈದ್ಯರ ನಿಸ್ವಾರ್ಥ ಸೇವೆ, ಅವಕಾಶವಾದಿಗಳ ಸ್ವಾರ್ಥ, ಮಲ್ಟಿನ್ಯಾಶನಲ್‌ ಕಂಪನಿಗಳ ವ್ಯಾಪಾರ ಗುಟ್ಟು ಹಾಗೇನೆ ಜನರ ಹಾಹಾಕಾರ, ಅದರ ದುರುಪಯೋಗ, ಇವೆಲ್ಲವುಗಳ ಜತೆಗೆ ಈ ವೈರಸ್‌ನ್ನ ಜೈವಿಕ ಅಸ್ತ್ರವನ್ನಾಗಿ ದೇಶ-ದೇಶಗಳ ನಡುವಿನ ಪೈಪೋಟಿಯಲ್ಲಿ ಬಳಸಲಾಗ್ತಿದೆಯಾ ಎನ್ನೋ ಅನುಮಾನವನ್ನ ಎಲ್ಲಿಯೂ ಹೇಳದಿದ್ರೂ, ಜತೆ ಜತೆಗೆ ವ್ಯಕ್ತಪಡಿಸುವ ಈ ಚಿತ್ರ ಕೊರೊನಾ ಕುರಿತು ಮುನ್ನೆಚ್ಚರಿಕೆ ಕೊಟ್ಟಂತಿದೆ. ಎಲ್ಲಿಯೂ ಅಬ್ಬರವಿಲ್ಲ, ಕೃತಕವೂ ಆಗದೇ, ಸಹಜವಾಗಿ ನಮ್ಮ ಕಣ್ಮುಂದೆ ನಡೆಯುತ್ತಿರುವ ಘಟನೆಗಳಂತೆ ಚಿತ್ರ ವೈರಸ್‌ ಮತ್ತು ಅದರ ಪರಿಣಾಮಗಳ ಕುರಿತು ಅನಾವರಣಗೊಳಿಸುತ್ತದೆ

ದರ್ಶನ್​​​​​​​ ಪತ್ನಿ ವಾಸವಿರೋ ಅಪಾರ್ಟ್​​ಮೆಂಟ್​​ಗೂ ವೈರಸ್​ ಎಂಟ್ರಿ

ಅಬ್ಬಬ್ಬಾ. ಕೊರೊನಾ. ಯಾಕ್​ ಕೇಳ್ತೀರಾ ಈ ಹೆಮ್ಮಾರಿ ಕಥೆನಾ(?) ಕೊರೊನಾ ವೈರಸ್ ಅಂದರೆ ಜನ ಕನಸಿನಲ್ಲೂ ಬೆಚ್ಚಿ ಬೀಳುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದೊಂದು ವಾರದಿಂದ ರಾಜ್ಯದಲ್ಲಿ ಕೊರೊನಾ ರುದ್ರನರ್ತನ ಮಾಡ್ತಿದೆ. ಬೆಂಗಳೂರಿನ ಕಥೆಯಂತೂ ಹೇಳೋದೇ ಬೇಡ. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಕೊರೊನಾ ಅಂದ್ರೆ, ಒಂದೆರಡು ಏರಿಯಾಗಳು ನೆನಪಾಗುತ್ತಿದ್ವು. ಈಗ ನಗರದ ಗಲ್ಲಿ ಗಲ್ಲಿಗೂ ಕೊರೊನಾ ವಕ್ಕರಿಸ್ತಿದೆ. ಸೆಲೆಬ್ರೆಟಿಗಳ ಮನೆ ಸುತ್ತಾಮುತ್ತಾ ಪಾಸಿಟಿವ್​ ಪ್ರಕರಣಗಳು ವರದಿಯಾಗ್ತಿದ್ದು, ಆತಂಕ ಹೆಚ್ಚುವಂತಾಗಿದೆ.
Darshan, wife vow to move forward - The Hindu
ಖ್ಯಾತ ಕ್ರೀಡಾಪಟುಗಳನ್ನ ಕೂಡ ಕೊರೊನಾ ಬಿಡ್ತಿಲ್ಲ. ಇದೀಗ ಸಿನಿಮಾ ಸೆಲೆಬ್ರಿಟಿಗಳ ಮನೆವರೆಗೂ ಕೊರೊನಾ ಎಂಟ್ರಿ ಕೊಟ್ಟಿದೆ. ಕಿಚ್ಚ ಸುದೀಪ್​ ಅವರ ಜೆ. ಪಿ ನಗರದ ನಿವಾಸದ ಪಕ್ಕದಲ್ಲಿ ಕೊರೊನಾ ಪಾಸಿಟಿವ್​ ಪ್ರಕರಣ ಪತ್ತೆಯಾಗಿದೆ. ಇದು ಸಹಜವಾಗಿಯೇ ಸುದೀಪ್​ ಕುಟುಂಬ ಸದಸ್ಯರನ್ನ ಆತಂಕಕ್ಕೆ ದೂಡಿದೆ.
ಹೊಸಕೆರೆ ಹಳ್ಳಿಯಲ್ಲಿರುವ ಪ್ರೆಸ್ಟೀಜ್​ ಅಪಾರ್ಟ್​ಮೆಂಟ್​​​​ನಲ್ಲೀ ಕೊರೊನಾ ಪಾಸಿಟಿವ್​ ಪ್ರಕರಣ ವರದಿಯಾಗಿದೆ. ಇದೇ ಅಪಾರ್ಟ್​​ಮೆಂಟ್​ನಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಪತ್ನಿ ವಿಜಯಲಕ್ಷ್ಮಿ, ಸಿಲ್ಲಿ ಲಲ್ಲಿ ಖ್ಯಾತಿಯ ನಟ ರವಿ ಶಂಕರ್​ ಮತ್ತು ನಟಿ ಪೂಜಾ ಗಾಂಧಿ ವಾಸವಾಗಿದ್ದಾರೆ.
ದರ್ಶನ್​​​ ಪತ್ನಿ ವಿಜಯಲಕ್ಷ್ಮೀ ವಾಸವಾಗಿರುವ ಅಪಾರ್ಟ್​​ಮೆಂಟ್​ನಲ್ಲಿ ಕೊರೊನಾ ಪಾಸಿಟಿವ್​ ಪ್ರಕರಣ ವರದಿಯಾಗಿದ್ದು, ಒಂದಷ್ಟು ಗಾಳಿಸುದ್ದಿ ಹರಡಲು ಕಾರಣವಾಗಿತ್ತು. ವಿಜಯಲಕ್ಷ್ಮಿಯ ದರ್ಶನ್​​​​ ಅವರಿಗೂ ಕೊರೊನಾ ಪಾಸಿಟಿವ್​ ಇದೆ ಅಂತ ಯಾರೋ ಬುಧವಾರ ಸಂಜೆ ಸುಳ್ಳು ಸುದ್ದಿ ಹಬ್ಬಿಸಿದ್ರು. ಕೂಡಲೇ ಈ ಬಗ್ಗೆ ಟ್ವೀಟ್​ ಮಾಡಿ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ರು. 'ನನಗೆ ಕೊರೊನಾ ಬಂದಿದೆ ಅನ್ನೋದೆಲ್ಲ ಸುದ್ದಿ ಸುಳ್ಳು. ನಾನು ಆರೋಗ್ಯವಾಗಿದ್ದೇನೆ. ಎಲ್ಲರೂ ಸುರಕ್ಷಿತವಾಗಿರಿ' ಅಂತ ಟ್ವಿಟ್​ ಮಾಡಿದ್ದಾರೆ.
ಹೊಸಕೆರೆಹಳ್ಳಿಯ ಪ್ರೆಸ್ಟೀಜ್​ ಅಪಾರ್ಟ್​​ಮೆಂಟ್​ನಲ್ಲಿ ಸಿಲ್ಲಿ ಲಲ್ಲಿ ಖ್ಯಾತಿಯ ರವಿಶಂಕರ್​ ಗೌಡ ವಾಸವಾಗಿದ್ದಾರೆ. ಅವರ ಪ್ಲಾಟ್​​ನ ಎದುರು ಪ್ಲಾಟ್​ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವಿಷಯ ತಿಳಿದ ಸ್ನೇಹಿತರು ರವಿಶಂಕರ್​ ಅವರಿಗೆ ಧೈರ್ಯ ತುಂಬಿದ್ದಾರೆ. ಈ ಬಗ್ಗೆ ಅವರು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನಮ್ಮ ಅಪಾರ್ಟ್​​ಮೆಂಟ್​​​​​ನಲ್ಲಿ ನನ್ನ ಎದುರುಗಡೆಯ ಮನೆಗೆ ವಕ್ಕರಿಸಿತು ಕರೋನಾ. ನನ್ನ ಮಕ್ಕಳಿರುವ ಮನೆಯನ್ನು ದೇವರೆ ಕಾಪಾಡಬೇಕು. ಎಚ್ಚರ ಸ್ನೇಹಿತರೆ ಎಚ್ಚರ. ನಾವೀಗ ನಮ್ಮನೆ ಬಾಗಿಲನ್ನು 14 ದಿನ ತೆಗೆಯುವಂತೆಯೆ ಇಲ್ಲಾ. ದಿಗ್ಬಂಧನ ಎಂದು ಬಟ ರವಿಶಂಕರ್ ಅವರು ಟ್ವಿಟ್​ ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಸುದೀಪ, ಗಣಪ, ಸೃಜನ್ ಮಕ್ಕಳನ್ನು ಕರೆದುಕೊಂಡು ನಮ್ಮ ಮನೆಗೆ ಬಂದುಬಿಡು ಅಂದರು. ವಾವ್, ಇದಲ್ಲವೆ ಗೆಳೆತನ ಅಂದರೆ. ಹಾಗೆ ಕುಟುಂಬವನ್ನು ವಿಚಾರಿಸಿದ, ಸಂತೋಷ್ ಆನಂದ್ ರಾಮ್, ರಘುರಾಮ್, ರಾಜೇಶ್ ನಟರಂಗ, ಅಲಕನಂದ, ಚಂದ್ರ ಮಯೂರ, ಶ್ರೀಕಾಂತ್ ಹೆಬ್ಳೀಕರ್, ರಾಕಿ, ಸೌಂದರ್ಯ ಜಗದೀಶ್ ಎಲ್ಲರಿಗೂ ಧನ್ಯವಾದ ಎಂದು ನಟ ರವಿಶಂಕರ್ ಗೌಡ ಅವರು ತಮ್ಮ ಟ್ವಿಟರ್​ ಖಾತೆ ಬರೆದುಕೊಂಡಿದ್ದಾರೆ.
ಹೀಗೆ ಕೊರೊನಾ ವೈರಸ್​ ಸೆಲೆಬ್ರೆಟಿಗಳಿಗೂ ಶಾಕ್​ ಕೊಟ್ಟಿದೆ. ಜಾತಿ- ಮತ, ವಯಸ್ಸು, ಅಂತಸ್ತು ಅನ್ನೋ ಭೇಧ ಇಲ್ಲದೇ ಕೊರೊನಾ ಎಲ್ಲರಿಗೂ ಕಂಟಕವಾಗಿ ಪರಿಣಮಿಸಿದೆ. ಶೂಟಿಂಗ್​ ಇಲ್ಲದೇ ಮನೆಯಲ್ಲೇ ಕಾಲ ದೂಡುತ್ತಿರುವ ಸೆಲೆಬ್ರಿಟಿಗಳಿಗೂ ಈಗ ಕೊರೊನಾ ಆತಂಕ ತಂದಿದೆ. ಕೆಲ ಸಿನಿಮಾಗಳ ಶೂಟಿಂಗ್​ಗೆ ಅನುಮತಿ ಸಿಕ್ಕಿದ್ರು, ಸದ್ಯಕ್ಕೆ ಸೆಟ್​​ಗೆ ಹೋಗೋದಕ್ಕೆ ಭಯ ಪಡುವಂತಾಗಿದೆ. ಇದೀಗ ನೆಮ್ಮದಿಯಾಗಿ ಮನೆಯಲ್ಲೂ ಇರೋದಕ್ಕೆ ಬಿಡದೇ ಕೊರೊನಾ ಕಾಟ ಕೊಡ್ತಿದೆ.

ಜಗ್ಗೇಶ್‌ ಅವರು 'ಮೇಕಪ್'​ ಚಿತ್ರದಿಂದ 75 ಲಕ್ಷ ನಷ್ಟ ಅನುಭವಿಸಿದ್ರು

18 ವರ್ಷಗಳ ಹಿಂದೆ 'ಮೇಕಪ್'​ ಚಿತ್ರದಿಂದ 75 ಲಕ್ಷ ನಷ್ಟ..!




ಮೇಕಪ್​. 2002ರಲ್ಲಿ ತೆರೆಕಂಡ ಕಾಮಿಡಿ ಎಂಟ್ರಟ್ರೈನರ್​ ಸಿನಿಮಾ. ಪರಿಮಳ ಜಗ್ಗೇಶ್​​ ಈ ಚಿತ್ರಕ್ಕೆ ಬಂಡವಾಳ ಹಾಕಿದ್ರು. ಸಿಂಗೀತಂ ಶ್ರೀನಿವಾಸ್​ ನಿರ್ದೇಶನದ ಈ ಸಿನಿಮಾದಲ್ಲಿ ಸ್ತ್ರೀವೇಷಧಾರಿಯಾಗಿ ಜಗ್ಗೇಶ್​ ಮಿಂಚಿದ್ರು. ಎರಡು ಶೇಡ್​ಗಳಿದ್ದ ಪಾತ್ರದಲ್ಲಿ ದೊಡ್ಡಮ್ಮ ಅನ್ನೋ ಪಾತ್ರಕ್ಕೆ ವಿಭಿನ್ನವಾಗಿ ಮೇಕಪ್​ನಲ್ಲಿ ಜಗ್ಗೇಶ್​ ಬಣ್ಣ ಹಚ್ಚಿ ಪ್ರೇಕ್ಷಕರನ್ನ ರಂಜಿಸಿದರು. ಆದರೆ, ಆ ಸಿನಿಮಾ ಜಗ್ಗೇಶ್​ ಅವರಿಗೆ ಭಾರೀ ನಷ್ಟ ತಂದಿತ್ತು.

ಸಿನಿಮಾ ಚೆನ್ನಾಗಿದ್ರು, ಅವತ್ತಿನ ಕಾಲಕ್ಕೆ ಒಂದೂವರೆ ಕೋಟಿ ಬಂಡವಾಳ ಹಾಕಿ ಜಗ್ಗೇಶ್​ ಕೈ ಸುಟ್ಟುಕೊಂಡಿದರು. ಲೈಲಾ ಪಟೇಲ್​ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ರೆ, ಜಗ್ಗೇಶ್​ ಸಹೋದರ ಕೋಮಲ್​ ಮತ್ತು ಪುತ್ರ ಯತಿರಾಜ್​​​​ ಕೂಡ ಬಣ್ಣ ಹಚ್ಚಿದರು. ಆ ಚಿತ್ರದಿಂದ ಜಗ್ಗೇಶ್​ 75ಲಕ್ಷ ಕಳೆದುಕೊಂಡ ವಿಚಾರವನ್ನ ಇದೀಗ ಜಗ್ಗೇಶ್​ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ಧಾರೆ.

ಸಿನಿಮಾ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ನಿರ್ಮಾಪಕರಾಗುವ ಕನಸಿರುತ್ತದೆ. ಬೇರೆ ನಿರ್ಮಾಪಕರು ಹಣ ಮಾಡುವಾಗ ನಾವು ಯಾಕೆ ನಿರ್ಮಾಪಕರಾಗಬಾರದು ಅನ್ನೋ ಆಸೆ ಬರೋದು ಸಹಜ. ಜಗ್ಗೇಶ್​ ಅವರು ಕೂಡ ಅಂದು ಕನ್ನಡ ಪ್ರೇಕ್ಷಕರಿಗೆ ವಿಭಿನ್ನ ಬಗೆಯ ಸಿನಿಮಾ ನೀಡಬೇಕು ಅನ್ನೋ ಮನಸ್ಸು ಮಾಡಿದರು. ಮೇಕಪ್​ ಕಥೆಯನ್ನ ನಂಬಿ ಭಾರಿ ಮೊತ್ತದ ಬಂಡವಾಳ ಹಾಕಿದರು ಆದರೆ ಅವರ ಆಸೆ ಫಲಿಸಲಿಲ್ಲ.

ಅಂದು 75 ಲಕ್ಷ ಸಾಲಕ್ಕಾಗಿ ಜಗ್ಗೇಶ್​​ ಮನೆಯನ್ನ ಮಾರಿದ್ದರು. ಇಂದು ಅದು 35 ಕೋಟಿ ಆಸ್ತಿ. ಇದು ಅಂದಿನ ಕತೆ ವ್ಯಥೆ ಅಂತ ಜಗ್ಗೇಶ್​ ಬರೆದುಕೊಂಡಿದ್ದಾರೆ. ಮೇಕಪ್​ ಸಿನಿಮಾ ಸೋಲಿ ನಂತ್ರ ಜಗ್ಗೇಶ್​ ಕಥೆ ಮುಗಿಯಿತು ಅಂತ್ಲೇ ಕೆಲವರು ಅಂದುಕೊಂಡಿದರು ಆದರೆ ಜಗ್ಗೇಶ್​ ಕಾಸಿದ್ದವನೇ ಬಾಸು ಮತ್ತು ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಸಿನಿಮಾಗಳ ಮೂಲಕ ಮತ್ತೆ ಫೀನಿಕ್ಸ್​ ರೀತಿ ಎದ್ದು ಬಂದಿದರು.

ಬಹುನಿರೀಕ್ಷಿತ ಕೆಜಿಎಫ್-2ನಲ್ಲಿ ಮತ್ತೊಬ್ಬ ಹಿರಿಯ ನಟಿ ಎಂಟ್ರಿ

ಸದ್ಯ ಕೊನೆಯ ಹಂತದ ನಿರ್ಮಾಣದಲ್ಲಿರುವ ಕೆಜಿಎಫ್-2 ಚಿತ್ರಕ್ಕೆ ಮತ್ತೊಬ್ಬ ದಕ್ಷಿಣ ಭಾರತದ ಹಿರಿಯ ನಟಿ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಜಿಎಫ್-2 ಚಿತ್ರದ ಶೂಟಿಂಗ್ ಕೊನೆಯ ಹಂತಕ್ಕೆ ಬಂದಿದೆ. ಈ ವೇಳೆ ದಕ್ಷಿಣ ಭಾರತದ ಹಿರಿಯ ನಟಿ ಈಶ್ವರಿ ರಾವ್ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ದಕ್ಷಿಣ ಭಾರತದಲ್ಲಿ ತೆಲುಗು, ತಮಿಳು, ಮಾಲಿಯಾಳಂ ಸೇರಿದಂತೆ ಕನ್ನಡದಲ್ಲೂ ನಟನೆ ಮಾಡಿರುವ ಈಶ್ವರಿ ರಾವ್, ಕೆಜಿಎಫ್-2 ಚಿತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಲಾಗಿದೆ. ಚಿತ್ರಕ್ಕೆ ತಿರುವು ಕೊಡುವ ಒಂದು ಪಾತ್ರದಲ್ಲಿ ಈಶ್ವರಿಯವರು ನಟಿಸಿದ್ದಾರೆ ಎಂದು ಹೇಳಲಾಗಿದೆ.

ಆದರೆ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಮಾತ್ರ ಇನ್ನೂ ಖಚಿತವಾಗಿಲ್ಲ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ವಿಚಾರ ಈಶ್ವರಿಯವರು ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗುವಂತೆ ಮಾಡಿದೆ.


ದಕ್ಷಿಣ ಭಾರತದಲ್ಲೇ ಖ್ಯಾತ ನಟಿಯಾಗಿರುವ ಈಶ್ವರಿ ರಾವ್, ಪಂಚಭಾಷಾ ತಾರೆ. ಕೆಲ ಬಾಲಿವುಡ್ ಚಿತ್ರಗಳಲ್ಲೂ ನಟಿಸಿರುವ ಈಶ್ವರಿ 90ರ ದಶಕದಲ್ಲಿ ರಜನಿಕಾಂತ್, ಕಮಲ್ ಹಾಸನ್ ನಂತಹ ನಟರ ಜೊತೆ ನಟಿಸಿ ಸೈ ಎನಿಸಿಕೊಂಡ ನಟಿ. ಇತ್ತೀಚೆಗೆ ಬಿಡುಗಡೆಯಾದ ರಜಿನಿಕಾಂತ್ ಅವರ ಕಾಲ ಚಿತ್ರದಲ್ಲೂ ಈಶ್ವರಿ ನಟಿಸಿದ್ದಾರೆ. 1995ರಲ್ಲಿ ಎಸ್. ನಾರಾಯಣ್ ನಿರ್ದೇಶನದ ಮೇಘ ಮಾಲೆ ಎಂಬ ಕನ್ನಡ ಚಿತ್ರದಲ್ಲೂ ಈಶ್ವರಿಯವರು ಅಭಿನಯಿಸಿದ್ದರು.

ನಿರ್ದೇಶನ ಜೊತೆ ಮಗನೊಂದಿಗೆ ನಟಿಸುತ್ತಿರುವ ಕ್ರೇಜಿಸ್ಟಾರ್ ರವಿಚಂದ್ರನ್

ಸ್ಯಾಂಡಲ್ ವುಡ್ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಜನ್ಮದಿನವವನ್ನು ಈ ವರ್ಷ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ವೇಳೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಅವರು ತಮ್ಮ ಅಭಿಮಾನಿಗಳನ್ನು ಕೋರಿದ್ದಾರೆ. ಈ ನಡುವೆ ರವಿಮಾಮ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ತಾವು ಮತ್ತೆ ನಿರ್ದೇಶಕನ ಕ್ಯಾಪ್ ಧರಿಸುವುದನ್ನು ಕಾಣಬೇಕೆನ್ನುವ ಅವರ ಅಭಿಮಾನಿಗಳ ಆಸೆ ಶೀಘ್ರವೇ ಈಡೇರುವ ಭರವಸೆಯನ್ನು ಅವರು ನೀಡಿದ್ದಾರೆ.

ರವಿಚಂದ್ರನ್ ಅವರ ಪುತ್ರನ ಸಿನಿಮಾವನ್ನು ನಿರ್ದೇಶನ ಮಾಡುವ ಬಗ್ಗೆ ಸೂಚನೆ ನೀಡಿದ್ದಾರೆ. ನಟ-ನಿರ್ದೇಶಕ-ನಿರ್ಮಾಪಕ, ಅಭಿಮಾನಿಗಳ ಕ್ರೇಜಿ ಸ್ಟಾರ್ ತಮ್ಮ ಪುತ್ರನಿಗಾಗಿ ಸ್ಕ್ರಿಪ್ಟ್‌ನ ತಯಾರಿ ನಡೆಸಲು ಲಾಕ್‌ಡೌನ್ ಸಮಯವನ್ನು ಬಳಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ ಜತೆಗೆ ಅವರ ಎರಡನೇ ಮಗನಾದ ವಿಕ್ರಂ ರವಿಚಂದ್ರನ್ ತೆರೆಯ ಮೇಲೆ ಕಾಣಿಸಲಿದ್ದಾರೆ.


ಲಾಕ್‌ಡೌನ್ ವೇಳೆಯಲ್ಲಿ ಎಡಿಟ್ ಡೆಸ್ಕ್‌ನಲ್ಲಿ ನಿರತರಾಗಿರುವ ಹಿರಿಯ ನಟ ಚಿತ್ರಕಥೆಯ ಬಗ್ಗೆ ಸುಳಿವು ನೀಡಿಲ್ಲ. ನಾನು ರವಿ ಬೋಪಣ್ಣ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ, ಈ ನಡುವೆ ಮೂರು ಸ್ಕ್ರಿಪ್ಟ್‌ಗಳನ್ನು ಪೂರ್ಣಗೊಳಿಸಿದೆ. ಒಂದು ಚಿತ್ರದಲ್ಲಿ ತಂದೆ ಮತ್ತು ಮಗ ಒಟ್ಟಿಗೆಸೇರಲಿದ್ದೇವೆ. ನಾನು ಹಾಗು ವಿಕ್ರಮ್ ಆ ಚಿತ್ರದಲ್ಲಿ ಒಟ್ತಾಗಿ ಕಾಣಿಸಿಕೊಳ್ಳುತ್ತಿದ್ದು ಚಿತ್ರ ನಿರ್ದೇಶನ ನನ್ನದು ಆಗಿರಲಿದೆ. ಇದು ನನ್ನ ಕಡೆಯಿಂದ ಇನ್ನೊಂದು ವಿಶಿಷ್ಟ ಪ್ರಯತ್ನ. ಇದು ವಿನೂತನ ಚಿತ್ರಕಥೆಯನ್ನಿದು ಹೊಂದಿರಲಿದೆ. ರಾಜ್ಯವು ಲಾಕ್ ಡೌನ್ ನಿಂದ ಹೊರಬಂದ ನಂತರ ನಾನು ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುತ್ತೇನೆ. ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ತಿಳಿಸಿದ್ದಾರೆ.

ನೋಡುಗರ ಕಣ್ಮನ ಸೆಳೆಯುತ್ತಿರುವ ಜೂನಿಯರ್ ಯಶ್..!

ಯಶ್ ಮುದ್ದು ಮಗನನ್ನು ಎತ್ತಿಕೊಂಡಿದ್ದಾರೆ. ಮುಗ ಅಪ್ಪನ ತೋಳಲ್ಲಿ ನಗುಬೀರುತ್ತ ಫೋಟೋಗೆ ಪೋಸ್ ... ಅಪ್ಪನ ಜೊತೆ ಫೋಟೋಗೆ ಪೋಸ್ ಕೊಟ್ಟ ಜೂನಿಯರ್ ಯಶ್ ...ಅಪ್ಪನ ಜೊತೆ ಫೋಟೋಗೆ ಪೋಸ್ ಕೊಟ್ಟ ಜೂನಿಯರ್ ಯಶ್. ರಾಧಿಕಾ ಪಂಡಿತ್ ಇತ್ತೀಚಿಗೆ ಅಪ್ಪ-ಮಗ ಒಟ್ಟಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದರೆ. 

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...