Goddess Lakshmi: ಶ್ರೀಮಂತರಾಗಬೇಕಾದರೆ ಲಕ್ಷ್ಮಿ ದೇವಿ ನೆಲೆಸಿರುವ ಈ ಸ್ಥಳಗಳಿಗೆ ಹೋಗಿ.!
Lakshmi Blessings: ಲಕ್ಷ್ಮಿ ದೇವಿಯು ಯಾವ ಸ್ಥಳಗಳಲ್ಲಿ ನೆಲೆಸಿರುತ್ತಾಳೋ ಆ ಸ್ಥಳದಲ್ಲಿ ಎಂದಿಗೂ ಹಣ, ಆಸ್ತಿ, ಸಂತೋಷ, ನೆಮ್ಮದಿ, ಶಾಂತಿಗೆ ಯಾವುದೇ ಕೊರತೆಯಿರುವುದಿಲ್ಲ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯು ಯಾವ ಸ್ಥಳಗಳಲ್ಲಿ ನೆಲೆಸಿರುತ್ತಾಳೆ. ಲಕ್ಷ್ಮಿ ದೇವಿಯು ಇಂತಹ ಸ್ಥಳದಲ್ಲಿ ಮಾತ್ರ ನೆಲೆಸಿರುತ್ತಾಳಂತೆ ನೋಡಿ..
ಪುಣ್ಯದ ಸ್ಥಳಗಳು:
ಲಕ್ಷ್ಮಿ ದೇವಿಯು ಧಾರ್ಮಿಕ ಮತ್ತು ಧ್ಯಾನ ಕೇಂದ್ರಗಳಲ್ಲಿ ನೆಲೆಸುತ್ತಾಳೆ, ಅಲ್ಲಿ ಆತ್ಮದ ಶುದ್ಧೀಕರಣ ಮತ್ತು ಪ್ರೀತಿಯ ಪ್ರಸರಣವು ನಿಸ್ವಾರ್ಥ ಕ್ರಿಯೆಗಳ ಮೂಲಕ ನಡೆಯುತ್ತದೆ ಹಾಗಾಗಿ ಆಕೆ ಈ ಸ್ಥಳದಲ್ಲಿ ನೆಲೆಸಿರುತ್ತಾಳೆ. ಇಂತಹ ಸ್ಥಳಗಳಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳು ನಡೆಯುತ್ತಿರುತ್ತದೆ. ಮಂತ್ರ, ಸ್ತೋತ್ರಗಳು ನಮ್ಮಲ್ಲಿ ದನಾತ್ಮಕ ಶಕ್ತಿಯನ್ನು ತುಂಬುತ್ತದೆ.
ಶಾಲೆಗಳು ಮತ್ತು ಗುರುಕುಲಗಳು:
ಲಕ್ಷ್ಮಿಯು ಜ್ಞಾನ ಮತ್ತು ಶಿಕ್ಷಣದ ಕೇಂದ್ರಗಳಲ್ಲಿ ನೆಲೆಸುತ್ತಾಳೆ. ಅಲ್ಲಿ ಬುದ್ಧಿವಂತಿಕೆ, ಜ್ಞಾನ ಮತ್ತು ಪ್ರೀತಿಯ ಸ್ವರೂಪವನ್ನು ವಿವರಿಸಲಾಗುತ್ತದೆ. ಓರ್ವ ವ್ಯಕ್ತಿ ತನ್ನ ಜೀವನದಲ್ಲಿ ಸರಿಯಾದ ರೂಪವನ್ನು ಪಡೆದುಕೊಳ್ಳುವುದು ಶೈಕ್ಷಣಿಕ ಹಂತದಲ್ಲಿ. ಇಲ್ಲಿ ಶಿಕ್ಷಣವನ್ನು ಯಾವ ವ್ಯಕ್ತಿ ಸರಿಯಾಗಿ ಪಡೆದುಕೊಳ್ಳುತ್ತಾನೋ ಅವನ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹವೂ ಇರುತ್ತದೆ.
ಮನೆ:
ದೈವಿಕ ಮತ್ತು ಆಧ್ಯಾತ್ಮಿಕ ಸಂಸ್ಕೃತಿಯ ಪ್ರಕಾರ, ಮನೆಯು ಕೂಡ ದೇವಾಲಯವಿದ್ದಂತೆ. ಅಲ್ಲಿ ಯಾವಾಗಲೂ ದೇವಾನುದೇವತೆಗಳು ನೆಲೆಸಿರುತ್ತಾರೆ. ಓರ್ವ ವ್ಯಕ್ತಿ ತನ್ನ ಮನೆಯನ್ನು ಸ್ವಚ್ಛವಾಗಿ ಮತ್ತು ಆದರ್ಶವಾಗಿ ನಡೆಸುವ ವ್ಯಕ್ತಿ ಲಕ್ಷ್ಮಿ ದೇವಿಯ ಆಶೀರ್ವಾದಕ್ಕೆ ಪಾತ್ರನಾಗಿರುತ್ತಾನೆ. ಲಕ್ಷ್ಮಿ ದೇವಿಯು ಯಾವಾಗಲೂ ಇಂತಹ ಮನೆಗಳಲ್ಲಿ ನೆಲೆಸಿರುತ್ತಾಳೆ.
ಸಂತರ ಆಶ್ರಮಗಳು:
ಲಕ್ಷ್ಮಿ ದೇವಿಯು ಧಾರ್ಮಿಕ ಗುರುಕುಲಗಳು ಮತ್ತು ಆಧ್ಯಾತ್ಮಿಕ ಸಂತರ ಆಶ್ರಮಗಳಲ್ಲಿ ನೆಲೆಸುತ್ತಾಳೆ. ಅಲ್ಲಿ ಸತ್ಯ, ಪ್ರೀತಿ ಮತ್ತು ಶಾಂತಿಯನ್ನು ಕಲಿಸಲಾಗುತ್ತದೆ. ಗುರುಕುಲದಲ್ಲಿಯೂ ಕೂಡ ಜ್ಞಾನವು ಮನೆ ಮಾಡಿರುತ್ತದೆ. ಅಲ್ಲಿ ಶಿಸ್ತು, ಜೀವನ ಪಾಠ, ಸಂಯಮವನ್ನು ಕಲಿಸಿಕೊಡಲಾಗುತ್ತದೆ.
ಲಕ್ಷ್ಮಿ ದೇವಿಯು ಧಾರ್ಮಿಕ ಸಭೆಗಳು ಮತ್ತು ಸತ್ಸಂಗಗಳಲ್ಲಿ ನೆಲೆಸುತ್ತಾಳೆ, ಅಲ್ಲಿ ಸಂತರು ಮತ್ತು ಭಕ್ತರು ಭಜನೆ ಮತ್ತು ಕೀರ್ತನೆಗಳ ಮೂಲಕ ದೇವರನ್ನು ಸ್ತುತಿಸುತ್ತಾರೆ. ಇಲ್ಲಿ ಮನುಷ್ಯನು ತನ್ನ ಅಹಂಕಾರ, ದುರಾಸೆ, ದುಶ್ಚಟ, ಕೆಟ್ಟ ಆಲೋಚನೆಗಳನ್ನು ಬಿಟ್ಟು ದೇವರಲ್ಲಿ ತನ್ನನ್ನು ಲೀನವಾಗಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾನೆ. ಲಕ್ಷ್ಮಿ ದೇವಿಯ ವಾಸಸ್ಥಾನಗಳು ಭಾವನಾತ್ಮಕ, ಆಧ್ಯಾತ್ಮಿಕ ಮತ್ತು ನೈತಿಕ ಮಹತ್ವವನ್ನು ಹೊಂದಿವೆ.