Fitness Tipss: ತೂಕ ಇಳಿಸಿಕೊಳ್ಳಲು ಸರ್ಕಸ್​ ಮಾಡ್ಬೇಡಿ; ರಾತ್ರಿ ಹೊತ್ತು ಈ ಪಾನೀಯಗಳನ್ನು ಕುಡಿಯಿರಿ ಸಾಕು!

Fitness Tipss: ತೂಕ ಇಳಿಸಿಕೊಳ್ಳಲು ಸರ್ಕಸ್​ ಮಾಡ್ಬೇಡಿ; ರಾತ್ರಿ ಹೊತ್ತು ಈ ಪಾನೀಯಗಳನ್ನು ಕುಡಿಯಿರಿ ಸಾಕು!


ಇಂತಹ ವೇಳೆ ನಾವು ದೈನಂದಿನ ಜೀವನದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಿದ್ದೇವೆ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು. ತೂಕ ಹೆಚ್ಚಳವು ನಾವು ರಾತ್ರಿ ಹೊತ್ತು ಊಟದ ಸಮಯದಲ್ಲಿ ಏನು ಮತ್ತು ಎಷ್ಟು ತಿನ್ನುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.


ಯಾರಿಗೆ ಆದರೂ ತೂಕ ಇಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಇದಕ್ಕಾಗಿ ಕಟ್ಟುನಿಟ್ಟಾದ ಆಹಾರ ಪದ್ಧತಿ ಮತ್ತು ಹೆಚ್ಚು ವ್ಯಾಯಾಮ ಮಾಡಬೇಕಾಗುತ್ತದೆ. ಕೆಲವೊಮ್ಮೆ ಎಲ್ಲಾ ಪ್ರಯತ್ನಗಳನ್ನು ಮಾಡಿದ ನಂತರವೂ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬು ಕಡಿಮೆಯಾಗುವುದಿಲ್ಲ.

ಜೀ ನ್ಯೂಸ್ ವರದಿ ಪ್ರಕಾರ, ಇಂತಹ ವೇಳೆ ನಾವು ದೈನಂದಿನ ಜೀವನದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಿದ್ದೇವೆ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು. ತೂಕ ಹೆಚ್ಚಳವು ನಾವು ರಾತ್ರಿ ಹೊತ್ತು ಊಟದ ಸಮಯದಲ್ಲಿ ಏನು ಮತ್ತು ಎಷ್ಟು ತಿನ್ನುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.


ನೀವು ರಾತ್ರಿ ಸಮಯದಲ್ಲಿ ಪೂರ್ಣ ಅಥವಾ ಹೆಚ್ಚಿನ ಕ್ಯಾಲೋರಿ ಆಹಾರವನ್ನು ಸೇವಿಸಿದರೆ ದೊಡ್ಡ ತಪ್ಪು ಮಾಡುತ್ತಿದ್ದೀರಿ ಎಂದರ್ಥ. ಅಲ್ಲದೇ ಇದೇ ಕಾರಣದಿಂದಾಗಿ, ಹೊಟ್ಟೆಯ ಕೊಬ್ಬು ವೇಗವಾಗಿ ಹೆಚ್ಚಾಗುತ್ತಿರುತ್ತದೆ.

ಈ ಬಗ್ಗೆ ಮಾತನಾಡಿರುವ ಭಾರತದ ಖ್ಯಾತ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಪ್ರಕಾರ, ನೀವು ತೂಕವನ್ನು ಕಳೆದುಕೊಳ್ಳಬೇಕು ಎಂಬುವುದರ ಬಗ್ಗೆ ಗಂಭೀರ ನಿರ್ಧಾರ ತೆಗೆದುಕೊಂಡಿದ್ದರೆ, ರಾತ್ರಿ ಮಲಗುವ 2 ಗಂಟೆಗಳಿಗೂ ಮುನ್ನ ಊಟ ಮಾಡಿ.

ಏಕೆಂದರೆ ಊಟದ ನಂತರ ತಕ್ಷಣ ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಜೊತೆಗೆ ತೂಕ ಇಳಿಸಿಕೊಳ್ಳಲು ಕೆಲ ಪಾನೀಯಗಳನ್ನು ತಪ್ಪದೇ ರಾತ್ರಿ ಹೊತ್ತು ಕುಡಿಯಬೇಕಾಗುತ್ತದೆ. ಹಾಗಾದ್ರೆ ಆ ಪಾನೀಯಗಳು ಯಾವುವು ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.


ಅರಿಶಿನ ಹಾಲು: ಅರಿಶಿನದಲ್ಲಿ ಅನೇಕ ಔಷಧೀಯ ಗುಣಗಳು ಕಂಡುಬರುತ್ತವೆ, ಆದ್ದರಿಂದ ಈ ಮಸಾಲೆ ಪದಾರ್ಥವನ್ನು ಹೆಚ್ಚಾಗಿ ತಿನ್ನುವಂತೆ ಸಲಹೆ ನೀಡಲಾಗುತ್ತದೆ. ಸೂಪರ್ ಫುಡ್ಗಳ ಲಿಸ್ಟ್ನಲ್ಲಿ ಹಾಲು ಕೂಡ ಒಂದು. ಏಕೆಂದರೆ ಇದರಲ್ಲಿ ಬಹುತೇಕ ಎಲ್ಲಾ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇವೆರಡರ ಸಂಯೋಜನೆಯು ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯಕವಾಗಿದೆ. ಆದ್ದರಿಂದ ರಾತ್ರಿ ಹೊತ್ತು ಅರಿಶಿನ ಹಾಲನ್ನು ತಪ್ಪದೇ ಕುಡಿಯಿರಿ.


ಮೆಂತ್ಯ ಚಹಾ: ನೀವು ಫ್ಲಾಟ್ ಹೊಟ್ಟೆಯನ್ನು ಪಡೆಯಲು ಬಯಸಿದರೆ, ಇಂದಿನಿಂದಲೇ ರಾತ್ರಿ ಹೊತ್ತು ಮೆಂತ್ಯ ಚಹಾವನ್ನು ಕುಡಿಯಲು ಪ್ರಾರಂಭಿಸಿ. ನಿಮಗೆ ರಾತ್ರಿ ಹೊತ್ತು ಹೆಚ್ಚು ತಿನ್ನುವ ಅಭ್ಯಾಸವಿದ್ದರೆ, ಉತ್ತಮ ಜೀರ್ಣಕ್ರಿಯೆಯ ಅವಶ್ಯಕತೆ ಇದೆ. ಹಾಗಾಗಿ ಮೆಂತ್ಯ ಚಹಾವನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಬಹುದು ಮತ್ತು ತೂಕವನ್ನು ಇಳಿಸಿಕೊಳ್ಳಬಹುದು.


ಇದಕ್ಕಾಗಿ ಒಂದು ಲೋಟ ನೀರಿಗೆ ಒಂದು ಚಮಚ ಮೆಂತ್ಯವನ್ನು ಸೇರಿಸಿ ರಾತ್ರಿ ಇಡೀ ನೆನೆಯಲು ಬಿಡಿ. ಬೆಳಗ್ಗೆ ಈ ನೀರನ್ನು ಫಿಲ್ಟರ್ ಮಾಡಿ, ನಂತರ ರಾತ್ರಿ ವೇಳೆಗೆ ಸ್ವಲ್ಪ ಬಿಸಿ ಮಾಡಿ ಕುಡಿಯಿರಿ. ಇದಾದ ಕೆಲವೇ ದಿನಗಳಲ್ಲಿ ದೇಹದಲ್ಲಿ ಆಗುವ ಬದಲಾವಣೆಯನ್ನು ಕಾಣುತ್ತೀರಿ. 
(Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ.





ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...