ನವೆಂಬರ್‌ವರೆಗೆ ಮುಂದಿನ 5 ತಿಂಗಳು ಉಚಿತ ಅಕ್ಕಿ-ಬೇಳೆ ನೀಡಲಿದೆ ಕೇಂದ್ರ.!

ನವದೆಹಲಿ: ದೇಶದ ಸುಮಾರು 80 ಕೋಟಿ ಜನರಿಗೆ ಉಚಿತ ಧಾನ್ಯ ನೀಡುವ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆಯನ್ನು (ಪಿಎಂಜಿಕೆಎವೈ) ಇನ್ನೂ ಐದು ತಿಂಗಳು ವಿಸ್ತರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಂಗಳವಾರ ಸಂಜೆ ನಾಲ್ಕು ಗಂಟೆಗೆ ಮಾತನಾಡಿ ಇದನ್ನು ಘೋಷಿಸಿದ್ದಾರೆ. ಯೋಜನೆಯು ನವೆಂಬರ್‌ ವರೆಗೆ ಜಾರಿಯಲ್ಲಿ
ಇರಲಿದೆ.
Free ration items until November; Prime Minister Modi announces ...

ಉಚಿತ ಧಾನ್ಯ ವಿತರಣೆ ಯೋಜನೆಯ ವಿಸ್ತರಣೆಗೆ ₹90 ಸಾವಿರ ಕೋಟಿ ಬೇಕಾಗುತ್ತದೆ. ಕಳೆದ ಮೂರು ತಿಂಗಳು ಕೂಡ ಉಚಿತ ಧಾನ್ಯ ವಿತರಿಸಲಾಗಿದೆ. ಅದನ್ನೂ ಸೇರಿಸಿದರೆ ಒಟ್ಟು ವೆಚ್ಚವು ₹1.5 ಲಕ್ಷ ಕೋಟಿಯಾಗುತ್ತದೆ ಎಂದು ಪ್ರಧಾನಿ ವಿವರಿಸಿದರು.ಕೋವಿಡ್‌ ಹರಡುವಿಕೆ ತಡೆಗಾಗಿ ಲಾಕ್‌ಡೌನ್‌ ಹೇರಿದ ಬಳಿಕ ಏಪ್ರಿಲ್‌ನಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿತ್ತು.
How to apply for Ration Card: Modi Government is planning for ...
ಜುಲೈ ತಿಂಗಳಿಂದ ಹಬ್ಬದ ಋತು ಆರಂಭವಾಗುತ್ತದೆ. ಜನರ ಅಗತ್ಯಗಳು ಮತ್ತು ಖರ್ಚು ಹೆಚ್ಚುವ ಸಮಯ ಇದು. ಇದನ್ನೆಲ್ಲ ದೃಷ್ಟಿಯಲ್ಲಿ ಇರಿಸಿಕೊಂಡು ಉಚಿತ ಧಾನ್ಯ ವಿತರಣೆಯನ್ನು ದೀಪಾವಳಿ ಮತ್ತು ಛತ್‌ ಪೂಜಾವರೆಗೆ ವಿಸ್ತರಿಸಲಾಗಿದೆ ಎಂದು ಮೋದಿ ತಿಳಿಸಿದರು. ಅನ್‌ಲಾಕ್‌-2 ಆರಂಭದ ಮುನ್ನಾದಿನ ಪ್ರಧಾನಿ ಮಾತನಾಡಿದರು. ಮಾರ್ಚ್‌ 25ರಂದು ವಿಧಿಸಲಾಗಿದ್ದ ಲಾಕ್‌ಡೌನ್‌ ತೆರವು ಪ್ರಕ್ರಿಯೆಯ ಎರಡನೇ ಹಂತವು ಬುಧವಾರ ಆರಂಭವಾಗಲಿದೆ.
ಕೋವಿಡ್‌ ಪಿಡುಗಿನಿಂದಾಗಿ ಅರ್ಥ ವ್ಯವಸ್ಥೆ ತತ್ತರಿಸಿದೆ. ಉದ್ಯೋಗಗಳಿಗೆ ಕುತ್ತು ಬಂದಿದೆ. ಲಕ್ಷಾಂತರ ವಲಸೆ ಕಾರ್ಮಿಕರು ಕೆಲಸ ಕಳೆದುಕೊಮಡು ತಮ್ಮ ತವರಿಗೆ ಮರಳಿದ್ದಾರೆ. ಉಚಿತ ಧಾನ್ಯ ವಿತರಣೆಯ ವಿಸ್ತರಣೆಯು ಈ ಜನರ ಸಂಕಷ್ಟವನ್ನು ಕಡಿಮೆಗೊಳಿಸಲಿದೆ ಎಂದು ಹೇಳಲಾಗಿದೆ. ಬಿಹಾರದಲ್ಲಿ ಈ ವರ್ಷ ಚುನಾವಣೆ ನಡೆಯಲಿದೆ. ದೊಡ್ಡ ಸಂಖ್ಯೆಯ ವಲಸೆ ಕಾರ್ಮಿಕರು ಬಿಹಾರದವರು. ಹಾಗಾಗಿ, ಉಚಿತ ಧಾನ್ಯ ವಿತರಣೆ ವಿಸ್ತರಣೆಯು ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ.
PM Narendra Modi speech: From welfare schemes to One Nation One ...
ನಿರ್ಲಕ್ಷ್ಯ: ಪ್ರಧಾನಿ ಎಚ್ಚರಿಕೆ
ಅಂತರ ಕಾಯ್ದುಕೊಳ್ಳುವಿಕೆ, ವೈಯಕ್ತಿಕ ಶುಚಿತ್ವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಪ್ರಧಾನಿ ಸೂಚಿಸಿದ್ದಾರೆ.

'ಗ್ರಾಮದ ಮುಖ್ಯಸ್ಥ ಇರಲಿ ಪ್ರಧಾನಿಯೇ ಇರಲಿ, ಕಾನೂನಿಗಿಂತ ಯಾರೂ ಮೇಲೆ ಅಲ್ಲ' ಎಂದು ಮೋದಿ ಹೇಳಿದರು. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸದ ಕಾರಣಕ್ಕೆ ಸುಮಾರು ₹13 ಸಾವಿರ ದಂಡ ಕಟ್ಟಿದ ಬಲ್ಗೇರಿಯಾದ ಪ್ರಧಾನಿಯನ್ನು ಮೋದಿ ಉಲ್ಲೇಖಿಸಿದರು.
ಭಾರತದಲ್ಲಿ ಕೂಡ ಸ್ಥಳೀಯಾಡಳಿತ ಸಂಸ್ಥೆಗಳು ಇದೇ ಉಮೇದಿನಿಂದ ಕೆಲಸ ಮಾಡಬೇಕು. ದೇಶದ 130 ಕೋಟಿ ಜನರ ಜೀವ ರಕ್ಷಿಸುವ ಅಭಿಯಾನ ಇದು ಎಂದು ಮೋದಿ ಹೇಳಿದರು.
ಸಕಾಲದಲ್ಲಿ ಲಾಕ್‌ಡೌನ್‌ ಹೇರಿಕೆ ಮತ್ತು ಇತರ ನಿರ್ಧಾರಗಳು ಲಕ್ಷಾಂತರ ಜೀವಗಳನ್ನು ಉಳಿಸಿದೆ. ಆದರೆ, ಅನ್‌ಲಾಕ್‌-1ರ ಆರಂಭದಿಂದಲೇ ಜನರ ಸಾಮಾಜಿಕ ಮತ್ತು ವೈಯಕ್ತಿಕ ವರ್ತನೆಯಲ್ಲಿನ ನಿರ್ಲಕ್ಷ್ಯವು ಆತಂಕಕಾರಿ ಎಂದು ಅವರು ಎಚ್ಚರಿಸಿದ್ದಾರೆ.
ಆರಂಭದಲ್ಲಿ ನಾವು ಮುಖಗವಸು ಧರಿಸುವುದು, ಕೈ ತೊಳೆಯುವುದು ಮತ್ತು ಅಂತರ ಕಾಯ್ದುಕೊಳ್ಳುವಿಕೆ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇದ್ದೆವು. ಆದರೆ, ಈಗ ಇನ್ನಷ್ಟು ಎಚ್ಚರದಿಂದ ಇರಬೇಕಾದ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಕಳವಳಕಾರಿ ಎಂದು ಹೇಳಿದರು.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...