Chanakya Niti: ಈ 4 ವಿಚಾರಗಳ ಬಗ್ಗೆ ನೀವು ಎಚ್ಚರಿಕೆಯಿಂದಿರಲೇಬೇಕು.!

 Chanakya Niti: ಈ 4 ವಿಚಾರಗಳ ಬಗ್ಗೆ ನೀವು ಎಚ್ಚರಿಕೆಯಿಂದಿರಲೇಬೇಕು.!



ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಈ 4 ವಿಚಾರಗಳ ಬಗ್ಗೆ ಎಚ್ಚರಿಕೆ ತೆಗೆದುಕೊಂಡರೆ ಜೀವನದಲ್ಲಿ ಪ್ರಗತಿ, ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಹೇಳಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ, ನಾವು ಯಾವ 4 ವಿಚಾರಗಳ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು.?

ಹೈಲೈಟ್ಸ್‌:

ಚಾಣಕ್ಯ ನೀತಿಯಲ್ಲಿ ಎಚ್ಚರಿಕೆ

ಯಾವ ವಿಚಾರಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು.?

ಚಾಣಕ್ಯರು ನೀಡಿದ ಎಚ್ಚರಿಕೆ

Chanakya

ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರು ಪ್ರಾಚೀನ ಭಾರತದ ಮಹಾನ್ ರಾಜಕಾರಣಿ, ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ ಮತ್ತು ತಾತ್ವಿಕ ಗುರು. ಆಚಾರ್ಯ ಚಾಣಕ್ಯರನ್ನು ಕೌಟಿಲ್ಯ, ವಿಷ್ಣುಗುಪ್ತ ಎಂದೂ ಕರೆಯಲಾಗುತ್ತದೆ. ಹಾಗೂ ಮೌರ್ಯ ಸಾಮ್ರಾಜ್ಯದ ಸಂಸ್ಥಾಪಕರು. ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಹೇಳಿದ್ದರು. ಆಚಾರ್ಯ ಚಾಣಕ್ಯರ ನೀತಿಗಳಿಗೆ ಎಷ್ಟು ಶಕ್ತಿಯಿತ್ತೆಂದರೆ ಒಬ್ಬ ವ್ಯಕ್ತಿ ಎಷ್ಟೇ ಕಷ್ಟದಲ್ಲಿದ್ದರೂ ಚಾಣಕ್ಯರ ನೀತಿಗಳಿಂದ ಅದಕ್ಕೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿತ್ತು.


ಚಾಣಕ್ಯರಲ್ಲಿನ ಜ್ಞಾನದಿಂದಾಗಿ, ಅವರಲ್ಲಿನ ಬುದ್ಧಿ ಶಕ್ತಿಯಿಂದಾಗಿ ಜನರು ಇಂದಿಗೂ ಅವರ ತತ್ವಗಳನ್ನು ತಮ್ಮಲ್ಲಿ ರೂಢಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ವ್ಯಕ್ತಿಯನ್ನು ಸರಿಯಾದ ಮಾರ್ಗದತ್ತ ಚಾಣಕ್ಯರ ಈ ನೀತಿಗಳು ಪ್ರೇರೇಪಿಸುತ್ತದೆ. ಚಾಣಕ್ಯರು ತಮ್ಮ ನೀತಿಯಲ್ಲಿ, ಓರ್ವ ವ್ಯಕ್ತಿ ಯಾವುದೇ ಒಂದು ಕೆಲಸವನ್ನು ಮಾಡುವ ಮುನ್ನ ಇವುಗಳ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.


 

ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಲು ಕಾರಣವೇನು.? ಚಾಣಕ್ಯರು ನೀಡಿದ ಆ ಎಚ್ಚರಿಕೆ ಏನು.?

1. ಸಮಯದ ಪರಿಗಣನೆ:

ಆಚಾರ್ಯ ಚಾಣಕ್ಯರು ಯಾವುದೇ ಕೆಲಸವನ್ನು ಮಾಡುವ ಮೊದಲು ಸಮಯದ ಬಗ್ಗೆ ಕಾಳಜಿ ವಹಿಸಬೇಕು. ಸಮಯವನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ. ಯಾವುದೇ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡದಿದ್ದರೆ, ಅದು ಅಂತಿಮವಾಗಿ ವೈಫಲ್ಯಕ್ಕೆ ಕಾರಣವಾಗುತ್ತದೆ. ಯಾವುದೇ ಕೆಲಸದ ಯಶಸ್ಸಿನಲ್ಲಿ ಸಮಯವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣ ಮಾಡುವುದನ್ನು, ಕೆಲಸದ ಯೋಜನೆಗಳನ್ನು ರೂಪಿಸುವುದನ್ನುಅಭ್ಯಾಸ ಮಾಡಿಕೊಂಡಿರಬೇಕು.

2. ಸ್ನೇಹಿತರ ಆಲೋಚನೆಗಳು:


ಒಬ್ಬ ವ್ಯಕ್ತಿಯ ಯಶಸ್ಸಿನಲ್ಲಿ ಅವನ ನಿಜವಾದ ಸ್ನೇಹಿತರು ದೊಡ್ಡ ಪಾತ್ರವನ್ನು ವಹಿಸುತ್ತಾರೆ. ಜೀವನದಲ್ಲಿ ಉತ್ತಮ ಸ್ನೇಹಿತರನ್ನು ಹೊಂದಿದ್ದರೆ, ವ್ಯಕ್ತಿಯು ಯಶಸ್ಸಿನ ಮೆಟ್ಟಿಲುಗಳನ್ನು ಸುಲಭವಾಗಿ ಏರುತ್ತಾನೆ. ಆದ್ದರಿಂದ ನಿಜವಾದ ಸ್ನೇಹಿತರನ್ನು ಗುರುತಿಸುವುದು ಬಹಳ ಮುಖ್ಯ. ನೂರಾರು ಸ್ನೇಹಿತರನ್ನು ಹೊಂದುವ ಅವಶ್ಯಕತೆಯಿಲ್ಲ. ಓರ್ವ ಪ್ರಾಮಾಣಿಕ ಸ್ನೇಹಿತ ಅಥವಾ ಉತ್ತಮ ಸ್ನೇಹಿತ ಇದ್ದರೆ ಸಾಕು ಅವನೇ ನಿಮ್ಮನ್ನು ಯಶಸ್ಸಿನತ್ತ ಕರೆದುಕೊಂಡು ಹೋಗುತ್ತಾನೆ.


3. ಸ್ಥಳದ ಬಗ್ಗೆ ಗಮನವಿರಲಿ:

ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಸುಲಭವಾಗಿ ಉದ್ಯೋಗವನ್ನು ಪಡೆಯುವ ಸ್ಥಳದಲ್ಲಿ ವಾಸಿಸಬೇಕು. ಆದ್ದರಿಂದ, ನೀವು ಒಂದು ಸ್ಥಳದಲ್ಲಿ ವಾಸಿಸುವ ಮೊದಲು ಸ್ಥಳದ ಬಗ್ಗೆ ಯೋಚಿಸುವುದು ಬಹಳ ಮುಖ್ಯ. ವಾಸಿಸುವ ಸ್ಥಳ ನಿಮ್ಮ ದಿನನಿತ್ಯದ ಕಾರ್ಯಕ್ಕೆ ಸುಲಭವಾಗಿದೆಯೇ.? ನಿಮ್ಮ ಸುತ್ತಮುತ್ತಲಿನ ಜನರು ನಿಮಗೆ ಹೊಂದಿಕೊಂಡು ಹೋಗುವರೇ.? ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ನಂತರ ಆ ಸ್ಥಳ ಯೋಗ್ಯವೇ..? ಇಲ್ಲವೇ.? ಎಂಬುದನ್ನು ತಿಳಿದುಕೊಳ್ಳಿ.

4. ಆದಾಯ ಮತ್ತು ವೆಚ್ಚದ ಬಗ್ಗೆ ಗಮನವಿರಲಿ:

ಚಾಣಕ್ಯ ಕೂಡ ನುರಿತ ಅರ್ಥಶಾಸ್ತ್ರಜ್ಞನಾಗಿರುವುದರಿಂದ, ಒಬ್ಬ ವ್ಯಕ್ತಿಯು ತನ್ನ ಆದಾಯ ಮತ್ತು ವೆಚ್ಚವನ್ನು ಪರಿಗಣಿಸಬೇಕು ಎಂದು ಸಲಹೆ ನೀಡುತ್ತಾರೆ. ಒಬ್ಬ ವ್ಯಕ್ತಿಯ ಆದಾಯವು ಹೆಚ್ಚಿಲ್ಲದಿದ್ದರೆ ಮತ್ತು ಅವನ ವೆಚ್ಚಗಳು ಅಧಿಕವಾಗಿದ್ದರೆ, ಅವನ ಆರ್ಥಿಕ ಸ್ಥಿತಿಯು ಏರುಪೇರಾಗಬಹುದು. ಆದ್ದರಿಂದ ಒಬ್ಬ ವ್ಯಕ್ತಿಯು ಆದಾಯ ಮತ್ತು ವೆಚ್ಚವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆದಾಯಕ್ಕಿಂತ ಖರ್ಚು ಯಾವಾಗಲೂ ಹೆಚ್ಚಾಗಿರಬಾರದು.

ಆಚಾರ್ಯ ಚಾಣಕ್ಯರ ಪ್ರಕಾರ, ಯಾವ ವ್ಯಕ್ತಿ ಈ ಮೇಲಿನ 4 ವಿಚಾರಗಳ ಬಗ್ಗೆ ಎಚ್ಚರಿಕೆಯನ್ನು ತೆಗೆದುಕೊಂಡಿರುತ್ತಾರೋ ಅವರು ಜೀವನದಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ. ಅಂತವರ ಜೀವನದಲ್ಲಿ ವೈಫಲ್ಯ, ಸಮಸ್ಯೆಗಳು ಎಂಬುದೇ ಇರುವುದಿಲ್ಲ.



ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...