ಬೇವಿನ ಕಡ್ಡಿಯಲ್ಲಿ ಹಲ್ಲುಜ್ಜಿದರೆ ಬಾಯಿಯ ಆರೋಗ್ಯ ಚೆನ್ನಾಗಿರುತ್ತದೆ. ಬೇವಿನ ಬೀಜಗಳು ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಉತ್ತೇಜಿಸುತ್ತದೆ.
ಭಾರತದಲ್ಲಿ ಬೇವಿನ ಮರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಬೇವಿನ ಎಲೆಗಳು ಮತ್ತು ಬೀಜಗಳನ್ನು ಆಯುರ್ವೇದ ಔಷಧದಲ್ಲಿ ಬಳಸಲಾಗುತ್ತದೆ. ಬೇವಿನಲ್ಲಿ ಹಲವಾರು ಔಷಧೀಯ ಗುಣಗಳಿವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಯನ್ನು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.
ಬೇವಿನ ಕಡ್ಡಿಯಲ್ಲಿ ಹಲ್ಲುಜ್ಜಿದರೆ ಬಾಯಿಯ ಆರೋಗ್ಯ ಚೆನ್ನಾಗಿರುತ್ತದೆ. ಬೇವಿನ ಬೀಜಗಳು ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಇನ್ನೂ ಈ ಬಗ್ಗೆ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಜೊತೆಗೆ ಮಾತನಾಡಿರುವ ಉಜಾಲಾ ಸಿಗ್ನಸ್ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಡಯೆಟಿಷಿಯನ್ ಏಕ್ತಾ ಸಿಂಘವಾಲ್ ಅವರು, ಬೇವಿನ ಎಲೆ ಯಾವ ರೀತಿಯ ಪೋಷಕಾಂಶಗಳನ್ನು ಹೊಂದಿವೆ ಮತ್ತು ಅವುಗಳ ಪ್ರಯೋಜನಗಳೇನು ಎಂಬುವುದರ ಬಗ್ಗೆ ವಿವರಿಸಿದ್ದಾರೆ.
ಬೇವಿನಲ್ಲಿರುವ ಪೋಷಕಾಂಶಗಳು: ಬೇವಿನಲ್ಲಿ ವಿಟಮಿನ್ ಸಿ ಇದೆ. ಇದು ರೋಗನಿರೋಧಕ ಶಕ್ತಿ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು ದೇಹದಲ್ಲಿರುವ ಹಾನಿಕಾರಕ ವಸ್ತುಗಳ ವಿರುದ್ಧ ಹೋರಾಡುತ್ತವೆ. ಇದರಲ್ಲಿ ನಿಂಬಿನ್, ನಿಂಬಿಡಿನ್, ಲಿಮೋನಾಯ್ಡ್ಸ್ ನಂತಹ ರಾಸಾಯನಿಕಗಳಿವೆ. ಬೇವಿನ ಎಲೆ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಪರಿಣಾಮಗಳೊಂದಿಗೆ ಆರೋಗ್ಯವನ್ನು ಸುಧಾರಿಸುತ್ತಾರೆ. ಬೇವಿನಲ್ಲಿರುವ ವಿಟಮಿನ್ ಇ ಜೀವಕೋಶಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ. ಇವುಗಳಲ್ಲಿರುವ ಒಮೆಗಾ-6 ಕೊಬ್ಬಿನಾಮ್ಲಗಳು ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು ಎಂದಿದ್ದಾರೆ.
ಅನಾರೋಗ್ಯಕ್ಕಾಗಿ ಪರಿಶೀಲಿಸಿ: ಬೇವಿನ ಸೊಪ್ಪಿನಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಇದು ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಬೇವು ಮತ್ತು ಬೇವಿನ ಎಣ್ಣೆ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮದ ಮೇಲಿನ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದರಿಂದ ಮೊಡವೆ, ಎಸ್ಜಿಮಾದಂತಹ ಸಮಸ್ಯೆಗಳು ಬರುವ ಸಾಧ್ಯತೆ ಇರುವುದಿಲ್ಲ. ಬೇವಿನ ತೊಗಟೆ ಮತ್ತು ಬೇವಿನ ಎಲೆಯ ಸಾರದಿಂದ ನಿಮ್ಮ ಬಾಯಿ ಮತ್ತು ಹಲ್ಲುಗಳನ್ನು ಸ್ವಚ್ಛಗೊಳಿಸಬಹುದು.
ಇದು ಕುಳಿಗಳು ಮತ್ತು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಬೇವು ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಈ ಪ್ರಯೋಜನಗಳು ಸಂಧಿವಾತ ಮತ್ತು ಇತರ ಸಮಸ್ಯೆಗಳನ್ನು ತಡೆಯುತ್ತದೆ. ಮಧುಮೇಹ ಇರುವವರು ಬೇವಿನ ಪುಡಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಬಹುದು.
ಪುರಾಣಗಳು ಮತ್ತು ಸತ್ಯಗಳು: ಬೇವು ಎಲ್ಲಾ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ನಿಜವಲ್ಲ. ಇವು ಕೆಲವು ಚರ್ಮದ ಸಮಸ್ಯೆಗಳನ್ನು ಮಾತ್ರ ನಿವಾರಿಸಬಲ್ಲವು. ಇತರರಿಗೆ ವಿಭಿನ್ನ ಚಿಕಿತ್ಸೆಗಳು ಬೇಕಾಗಬಹುದು. ಮಧುಮೇಹ ಹೊಂದಿರುವವರು ವೈದ್ಯಕೀಯ ಚಿಕಿತ್ಸೆಯ ಬದಲಿಗೆ ಬೇವಿನ ಎಲೆ ತೆಗೆದುಕೊಂಡರೆ ಸಾಕು ಅಂದುಕೊಳ್ಳುತ್ತಾರೆ. ಆದರೆ ಇದು ನಿಜವಲ್ಲ. ಮಧುಮೇಹವು ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವವರು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು.
ಯಾರು ತಿನ್ನಬಾರದು: ಗರ್ಭಿಣಿಯರು ಹೆಚ್ಚಿನ ಪ್ರಮಾಣದಲ್ಲಿ ಬೇವುಗಳನ್ನು ಸೇವಿಸಿದರೆ ಅದು ಹುಟ್ಟುವ ಮಗುವಿಗೆ ಹಾನಿ ಮಾಡುತ್ತದೆ. ವಿವಿಧ ರೀತಿಯ ಔಷಧಗಳನ್ನು ಸೇವಿಸುವವರೂ ಕೂಡ ಬೇವಿನ ಎಲೆಯನ್ನು ತಿನ್ನಬಾರದು. ಈ ಸಂಯುಕ್ತಗಳು ರಕ್ತ ತೆಳುವಾಗಿಸುವ, ನೋವು ನಿವಾರಕಗಳು ಅಥವಾ ಪ್ರತಿಜೀವಕಗಳಂತಹ ಕೆಲವು ಔಷಧಿಗಳೊಂದಿಗೆ ಪ್ರತಿಕ್ರಿಯಿಸಬಹುದು.