ಕನ್ನಡ ಸಾಹಿತ್ಯ/ ಮಾಹಿತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕನ್ನಡ ಸಾಹಿತ್ಯ/ ಮಾಹಿತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗಂಗರು

 ಗಂಗರು

ಗಂಗರು ಸುಮಾರು ಕರ್ನಾಟಕವನ್ನು “ 600 ವರ್ಷ” ಗಳ ಕಾಲ ಆಳಿದರು
ಗಂಗರ ರಾಜ್ಯ ಕೋಲಾರ , ತುಮಕೂರು , ಬೆಂಗಳೂರು , ಮಂಡ್ಯ ಹಾಗೂ ಮೈಸೂರನ್ನ ಒಳಗೊಂಡಿತ್ತು .
ಗಂಗರು ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಸಾಮಾಂತರಾಗಿದ್ದರು .
“ಕೋಲಾರ ” ಅಥವಾ “ ಕುವಲಾಲ ” ಇವರ ಆರಂಭದ ರಾಜಧಾನಿ
ಗಂಗರ ಎರಡನೇ ರಾಜಧಾನಿ “ ತಲಕಾಡು “
ಗಂಗ ನಾಡಿನ ತಿರುಳು ಭಾಗವನ್ನು “ಗಂಗವಾಡಿ ” ಎಂದು ಕರೆಯಲಾಗುತ್ತಿತ್ತು .
ಗಂಗರಲ್ಲಿ ಪ್ರಸಿದ್ದನಾದ ದೊರೆ “ ಶ್ರೀ ಪುರುಷ”
ರಾಚಮಲ್ಲನ ಮಂತ್ರಿಯಾದ “ಚಾವುಂಡ ರಾಯನು ” ಶ್ರವಣ ಬೆಳಗೋಳದಲ್ಲಿ ಕ್ರಿ.ಶ.980 ರಲ್ಲಿ “ಗೊಮ್ಮಟೇಶ್ವರನ ” ಏಕಶಿಲಾ ಮೂರ್ತಿಯನ್ನು ಕೆತ್ತಿಸಿದನು .
ಗಂಗ ಮನೆತನವು ಕ್ರಿ.ಶ.೧೦೦೪ರಲ್ಲಿ ಚೋಳರಿಂದ ಸೋತು ಕೊನೆಗೊಂಡಿತು
ಚನ್ನಪಟ್ಟಣ್ಣದ “ ಮಾಕುಂದ ” ಹಾಗೂ ಬೆಂಗಳೂರು ಜಿಲ್ಲೆಯ ನೆಲಮಂಗಲ ಬಳಿಯ “ ಮನ್ನೇಯ ” ಇವರ ಿತರ ರಾಜಧಾನಿ .
ಗಂಗರನ್ನು “ ತಲಕಾಡಿನ ಗಂಗರು ” ಎಂದು ಪ್ರಸಿದ್ದರಾಗಿದ್ದರು .
ಗಂಗರ ರಾಜ ಮುದ್ರೆ ಅಥವಾ ರಾಜ ಲಾಂಛನ “ ಮದಗಜ ”
ಗಂಗರು “ ಗಂಗಟಕಾರರು ” ಎಂದು ಹೆಸರುವಾಸಿಯಾಗಿದ್ದರು .
ಗಂಗರು ಆಳಿತದ ಪ್ರದೇಶವನ್ನು “ ಗಂಗವಾಡಿ ಅಥವಾ ಗಂಗನಾಡು ” ಎಂದು ಕರೆಯುತ್ತಿದ್ದರು .
ಗಂಗರು ಸ್ವತಂತ್ರರಾಗಿ ಕ್ರಿ.ಶ. 350 – 600 ರವರೆಗೆ ಆಳ್ವಿಕೆ ಮಾಡಿದ್ದಾರೆ .
ಗಂಗರು ಚಾಲುಕ್ಯರ ಸಾಮಂತರಾಗಿ ಕ್ರಿ.ಶ.600 - 758 ರವರೆಗೆ ಆಳ್ವಿಕೆ ಮಾಡಿದರು .
ಗಂಗರು ರಾಷ್ಷ್ರಕೂಟರ ಸಾಮಾಂತರಾಗಿ ಕ್ರಿ.ಶ.757 – 973 ರವರೆಗೆ ಆಳ್ವಿಕೆ ಮಾಡಿದರು .
ಗಂಗರು ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 973 – 990 ರವರೆಗೆ ಆಳ್ವಿಕೆ ಮಾಡಿದರು .
“ತಲಕಾಡು ” ಗಂಗರ ಪ್ರಧಾನ ಆಡಳಿತ ಕೇಂದ್ರವಾಗಿತ್ತು .

ಗಂಗರ ಮೂಲ
ದೈವಿ ಸಿದ್ದಾಂತದ ಪ್ರಕಾರ ಇವರು ಇಕ್ಷಾಕು ವಂಶದವರೆಂದು
ಕಣ್ವ ಮೂವಗ ಪ್ರಕಾರ ಿವರು “ ಕಣ್ವ ” ವಂಶದವರು ಎಂದು
ತಮಿಳು ಮೂಲ - ಇವರು ಮೂಲತಃ “ಪೆರೂರು ” ಆಗಿದ್ದು ( ಕೊಯಮತ್ತೂರು ) ಇವರು ತಮಿಳು ಮೂಲದಿಂದ ಬಂದವರೆಂದು ಹೇಳಲಾಗಿದೆ .
ಕನ್ನಡ ಸಿದ್ದಾಂತದ ಪ್ರಕಾರ ಇವರು ಅಚ್ಚ ಕನ್ನಡಿಗರು - ಗಂಗರು ರಾಜಧಾನಿ ತಲಕಾಡು ದಕ್ಷಿಣ ಗಂಗೆ ಕಾವೇರಿ ನದಿಯ ದಡದಲ್ಲಿದ್ದರಿಂದ ಈ ವಂಶಕ್ಕೆ “ಗಂಗ ” ಎಂದು ಹೆಸರು ಬಂದಿದೆ .

ಗಂಗ ಮನೆತನದ ರಾಜರುಗಳು
ದಡಿಗ
ಒಂದನೇ ಮಾಧವ
ಎರಡನೇ ಮಾಧವ
ಮೂರನೇ ಮಾಧವ
ಅವನೀತ
ದುರ್ವಿನೀತ
ಶ್ರೀಪುರುಷ
ಎರಡನೇ ಶಿವಮಾರ
ಒಂದನೇ ರಾಚ ಮಲ್ಲ

ಗಂಗರ ರಾಜಕೀಯ ಇತಿಹಾಸ ( ದಡಿಗ or ಕೊಂಗುಣಿ ವರ್ಮ )
ಇವನು ಗಂಗ ವಂಶದ ಸ್ಥಾಪಕ
“ ಕುವಲಾಲ ಅಥವಾ ಕೋಲಾರ ” ಇವನ ರಾಜಧಾನಿ .
ಬಾಣರನ್ನು ಸೋಲಿಸಿ ಗಂಗ ವಂಶಕ್ಕೆ ಅಡಿಪಾಯ ಹಾಕಿದ
ಧರ್ಮ ಮಹಾರಾಜ ಹಾಗೂ ಬಾಣ ವಂಶದವನ ದಾವಲನ ಎಂಬುದು ಇವನ ಬಿರುದುದಳು .
ಈತನ ಗುರುವಿನ ಹೆಸರು - ಸಿಂಹ ನಂದಿ ( ಜೈನಗುರು )
ಸಿಂಹ ನಂದಿಯ ಇಚ್ಛೆಯ ಮೇರೆಗೆ ಶಿವಮೊಗ್ಗದ “ ದುಂಡಲಿ ” ಎಂಬಲ್ಲಿ ಒಂದು ಚೈತ್ಯಲಾಯವನ್ನು ನಿರ್ಮಿಸಿದನು .

ಒಂದನೇ ಮಾಧವ
ದಡಿಗನ ನಂತರ ಅಧಿಕಾರಕ್ಕೆ ಬಂದವನು
ಈತ ಸ್ವತಃ ಕವಿಯಾಗಿದ್ದನು ಹಾಗೂ ಕವಿಗಳಿಗೆ ಆಶ್ರಯ ನೀಡಿದ್ದನು
ಈತ ರಚಿಸಿದ ಕೃತಿ - “ ದತ್ತ ಸೂತ್ರ ”
ಇವನ ನಂತರ ಹರಿವರ್ಮ ಹಾಗೂ 2 ನೇ ಮಾಧವ ಆಳಿದರು

ಮೂರನೇ ಮಾಧವ
ಇವನು ತಂಡಂಗಾಲ ಮಾಧವ ಎಂದು ಹೆಸರಾಗಿದ್ದಾನೆ .
ಈತ ಕದಂಬ ಅರಸ ಕಾಕುಸ್ಥವರ್ಮನ ಮಗಳನ್ನು ವಿವಾಹವಾಗಿದ್ದ
ವಿಜಯ ಕೀರ್ತಿ - ಿವನ ದೀಕ್ಷಾ ಗುರುಗಳಾಗಿದ್ದರು .

ಅವನೀತ
ಈತ ಮೂರನೇ ಮಾಧವನ ಮಗ
ಈತ ಶಿವನ ಆರಾಧಕನಾಗಿದ್ದನು .
ಈತ ಸರ್ವಧರ್ಮ ಸಮನ್ವಯಿಯಾಗಿದ್ದನ್ನು
ಇತನನ್ನ ಶಾಸನಗಳು “ ಹರ ಚರಣಾರ ಎಂದ ಪ್ರಣಿಪಾತ ” ಎಂದು ಉಲ್ಲೇಕಿಸಿದೆ

ದುರ್ವಿನೀತ
ಈತ ಗಂಗರಲ್ಲಿ ಅತ್ಯಂತ ಪ್ರಸಿದ್ದ ದೊರೆ
ಈತನ ತಾಯಿ ಜೇಷ್ಠದೇವಿ ಹಾಗೂ ತಂದೆ ಅವಿನೀತ
ಈತ ವೈಷ್ಣವ ಮತಾವಲಂಬಿಯಾಗಿದ್ದನು
ಬಾರವಿಯ 15 ನೇ ದಗಂಕ್ಕೆ ಭಾಷ್ಯವನ್ನ ಬರೆದನು
ಇತ “ಗುಣಾಡ್ಯನ ” “ ವಡ್ಡ ಕಥಾವನ್ನು ” ಪೈಶಾಚಿ ಭಾಷೇಯಿಂದ ಸಂಸ್ಕೃತಕ್ಕೆ ತರ್ಜುಮೆ ಮಾಡಿದರು
ಿತನ ಗುರು - ಪುಷ್ಯಪಾದ ಅಥವಾ ದೇವಾನಂದಿ
ೀತನ ಬಿರುದುಗಳು - ಅವನೀತ ಸ್ತರ ಪೂಜಾಲಾಯ . ಅಹೀತ , ಅನೀತ ಹಾಗೂ ಧರ್ಮ ಮಹಾರಾಜ ಕುಲೋಥರ , ನೀತಿಶಾಸ್ತ್ರ ವಕ್ತ , ಪ್ರಯೋಕ್ಷ ಕುಶಲ
ಈತನ ಗುರುಗಳಿಂದ ದೇವಾನಂದಿಯು ಸಂಸ್ಕೃತ ವ್ಯಾಕರಣ ಶಬ್ದಾವತಾರ ವನ್ನು ಬರೆದಿದ್ದಾನೆ .

ಶ್ರೀಪುರಷ
ದುರ್ವಿನೀತ ನಂತರ ಅಧಿಕಾರಕ್ಕೆ ಬಂದವನು
ಈತ “ ಗಜಶಾಸ್ತ್ರ ” ಎಂಬ ಕೃತಿಯನ್ನ ರಚಿಸಿದರು
ಈತ ರಾಜಧಾನಿಯನ್ನು ಮಾಕುಂದದಿಂದ - ಮಾನ್ಯಪರಕ್ಕೆ ಬದಲಾಯಿಸಿದನು
ಒಂದನೇ ಶಿವಮಾರನಿಗೆ - ್ವನಿ ಮಹೇಂದ್ರ ಎಂಬ ಬಿರುದಿತ್ತು
“ತುಂಡಕ ಕದನ ” ದಲ್ಲಿ ಪಲ್ಲವರನ್ನು ಸೋಲಿಸಿದವನು
ಇವನ ಕಾಲದಲ್ಲಿ ಗಂಗರಾಜ್ಯ “ಶ್ರೀರಾಜ್ಯ ” ಎಂದು ಕರೆಸಿಕೊಂಡಿತು .
ಈತನ ಬಿರುದುಗಳು - ರಾಜಕೇಸರಿ , ಪೆರ್ಮಾಡಿ , ಶ್ರೀವಲ್ಲಭ , ಬೀಮಕೋಪ

ಎರಡನೇ ಶಿವಮಾರ
ಈತನ ಇನ್ನೊಂದು ಹೆಸರು - ಸೈಗೋತ
ಈತನ ಕೃತಿಗಳು - ಗಜಾಷ್ಮಕ , ಸೇತುಬಂಧ ಹಾಗೂ ಶಿವಮಾರ ತರ್ಕ
ಈತ ಶ್ರವಣಬೆಳಗೋಳದಲ್ಲಿ ಜೈನ ಬಸದಿಯನ್ನು ನಿರ್ಮಿಸಿದನು
ಈತನ ತಂದೆಯ ಹೆಸರು - ಶ್ರೀಪುರುಷ

ಎರಡನೇ ಬೂತುಗ
ಈತ “ ತತ್ಕೋಳಂ ಕದನದಲ್ಲಿ ” ಚೋಳರ ರಾಜಾದಿತ್ಯನನ್ನು ಕೊಂದನು .
ಆತನ ಬಿರುದು - ಮಹಾರಾಜಾದಿರಾಜ

ಮಂತ್ರಿ ಚಾವುಂಡರಾಯ
ಈತ ಗಂಗರ ಆಸ್ಥಾನದಲ್ಲಿ ಮಂತ್ರಿಯಾಗಿ ಹಾಗೂ ದಂಡನಾಯಕನಾಗಿದ್ದ
ಈತ ್ಜಿತಸೇನಾ ಭಟ್ಟರಕ ಹಾಗೂ ನೇಮಿಚಂದ್ರ ಮುನಿಯ ಅನುಯಾಯಿ
ಈತನ ಬಿರುದು - ಸತ್ಯವಿದಿಷ್ಠಿರ
ಈತನ ಕೃತಿಗಳು - ಸಂಸ್ಕೃತದಲ್ಲಿ “ಚರಿತ್ರಾಸಾರ ” ಕನ್ನಡದಲ್ಲಿ ಚಾವುಂಡರಾಯ ಪುರಣ ಅಥವಾ ಅಥವಾ “ ತ್ರಿಷಷ್ಠಿ ಲಕ್ಷಣ ಮಹಾಪುರರಣ ” ಹಾಗೂ ಲೋಕೋಪಾಕರ ( ವಿಶ್ವಕೋಶ )
ಈತನ ಮೊದಲ ಹೆಸರು - ಚಾವುಂಡರಾಜ
ರಾಚಮಲ್ಲನು ಚಾವುಂಡರಾಯನಿಗೆ ನೀಡಿದ ಬಿರುದು - “ರಾಯ ’
ಚಾವುಂಡರಾಯನ ಮಹಾತ್ಸಾಧಾನೆ - ಶ್ರವಣಬೆಳಗೋಳದ ಬಾಹುಬಲಿಯ ವಿಗ್ರಹ ನಿರ್ಮಾಣ
ಈತನ ಆಶ್ರಯ ಪಡೆದ ಕನ್ನಡದ ಹೆಸರಾಂತ ಕವಿ - ರನ್ನ
ಈತ ಗಂಗರ ಅರಸ 2ನೇ ಮಾರಸಿಂಹ ಆಳ್ವಿಕೆಯಲ್ಲಿ - ಪ್ರಧಾನ ಮಂತ್ರಿಯಾಗಿ ಹಾಗೂ ದಂಡನಾಯಕನಾಗಿ ನಿಯುಕ್ತಿಗೊಂಡ
4 ನೇ ರಾಚಮಲ್ಲ ಈತನಿಗೆ ನೀಡಿದ ಬಿರುದು - ಸಮರ ಪರಶುರಾಮ
ಗೋಣೂರು ಕದನದಲ್ಲಿ ಜಗದೇಕ ವೀರನನ್ನು ಸೋಲಿಸಿ “ವೀರ ಮಾರ್ತಂಡ ” ಎಂಬ ಬಿರುದು ಪಡೆದ .
ಪಾಂಡ್ಯ ಅರಸ ರಾಜಾದಿತ್ಯನನ್ನು ಸೋಲಿಸಿ “ರಣಸಂಗ ಸಿಂಗ ” ಎಂಬ ಬಿರುದನ್ನು ಪಡೆದ
ಈತನ ಬಿರುದು - ಭುಜ ವಿಕ್ರಮ , ಸಮರ ದುರಂಧರ
ಈತನ ತಾಯಿ - ಕಾಳಲಾದೇವಿ
ಗೊಮ್ಮಟೇಶ್ವರನನ್ನು ಕೆತ್ತಿನೆಯ ಮೇಲ್ವಿಚಾರಕ ಶಿಲ್ಪಿ - ಅರಿಪ್ಪಾನೇಮಿ
ಗೊಮ್ಮಟೇಶ್ವರ ವಿಗ್ರಹ ನಿರ್ಮಾಣವಾದದು - ಕ್ರಿ.ಶ.981 – 983
ಈತನ ಇನ್ನೊಂದು ಮಹಾನ್ ಕಾರ್ಯ - ಚಾವುಂಡರಾಯ ಬಸದಿಯ ನಿರ್ಮಾಣ

ಗಂಗರ ಆಢಳಿತ
ರಾಜ - ಆಡಳಿತದ ಮುಖ್ಯಸ್ಥ ಈತನನ್ನು “ ಧ್ಮಮಾಹಾರಾಜ” ರೆಂದು ಕರೆಯುತ್ತಿದ್ದರು .
ಮಂತ್ರಿ ಮಂಡಲ - ರಾಜನಿಗೆ ಸಹಾಯಕರಾಗಿದ್ದರು
ಪ್ರಧಾನ ಮಂತ್ರಿಯನ್ನು - ಸರ್ಮಾಧಿಕಾರಿ ಎಂದು ಕರೆಯುತ್ತಿದ್ದರು
ವಿದೇಶಾಂಗ ಮಂತ್ರಿಯನ್ನು - ಸಂಧಿ ವಿಗ್ರಹಿ ಎಂದು ಕರೆಯುತ್ತಿದ್ದರು
ಸೈನ್ಯದ ಮುಖ್ಯಸ್ಥ - ದಂಡನಾಯಕ ನಾಗಿರುತ್ತಿದ್ದ
ಖಜಾನೆ ಮುಖ್ಯಧಿಕಾರಿಯನ್ನು - ಹಿರಿಯ ಭಂಡಾರಿಕ ಎಂದು ಕರೆಯುತ್ತಿದ್ದರು
ರಾಜನ ಉಡುಪಗಳ ಉಸ್ತುವಾರಿಕ - ಮಹಾಪಸಾಯಿಕಿ
ಅರಮನೆಯ ಮೇಲ್ವಿಚಾರಕನನ್ನು - ಮನೆ ವರ್ಗಡೆ ಎಂದು ಕರೆಯುತ್ತಿದ್ದರು .
ಲೆಕ್ಕ ಪತ್ರಗಳ ವಿಭಾಗಾಧಿಕಾರಿಯನ್ನು - ಶ್ರೀಕರಣಿಕ ಎಂದು ಕರೆಯುತ್ತಿದ್ದರು
ರಾಜ್ಯವನ್ನು - ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು
ಪ್ರಾಂತ್ಯಗಳ ಮುಖ್ಯಸ್ಥ - ಪ್ರಾಂತ್ಯಾಧಿಕಾರಿ
ಪ್ರಾಂತ್ಯಗಳ ವಿಭಾಗಗಳು - ವಿಭಾಗ ಹಾಗೂ ಕಂಪನ
ವಿಷಯಗಳ ಮುಖ್ಯಸ್ಥ - ವಿಷಯ ಪತಿ
ಕಂಪನಗಳ ಮುಖ್ಯಸ್ಥ - ಗೌಡ ಅಥವಾ ನಾಡ ಗೌಡ
ನಗರಾಡಳಿತ ಮುಖ್ಯಸ್ಥ - ನಾಗರೀಕ
ಪಟ್ಟಣ್ಣದ ಮುಖ್ಯಸ್ಥ - ಪಟ್ಟಣ್ಣ ಸ್ವಾಮಿ
ಗ್ರಾಮಾಢಳಿತ - ಗೌಡ ಮತ್ತು ಕರಣಿಕನಿಗೆ ಸೇರಿತ್ತು .
ಗಜದಳದ ಮುಖ್ಯಸ್ಥ - ಗಜ ಸಹನಿ
ಅಶ್ವ ಪಡೆಯ ಮುಖ್ಯಸ್ಥ - ಅಶ್ವಾಧ್ಯಕ್ಷ
ಗಂಗರ ಕಾಲದ ನಾಣ್ಯಗಳು - ಪೊನ್ನ , ಸುವರ್ಣ , ಗದ್ಯಾಣ , ನಿಷ್ಕ , ಹಾಗೂ ಬೆಳ್ಳಿಯ ಪಣ , ಹಾಗೂ ಹಗ , ಕಾಸು
ಇವರ ಸಮಾಜದಲ್ಲಿ ರಾಜರ ಸ್ವಾಮಿ ನಿಷ್ಠೆಗೆ ಪ್ರಾಣತ್ಯಾಗ ಮಾಡುವ ಪದ್ದತಿ - ಗರುಡ ಪದ್ದತಿ , ಅಸ್ಥಿತ್ವದಲ್ಲಿತ್ತು
ಸಾಂಸ್ಕೃತಿಕ ಸಾಧನೆ
ಶ್ರವಣಬೆಳಗೋಳ ಹಾಗೂ ತಲಕಾಡು ಅವರ ಪ್ರಸಿದ್ದ ಶಿಕ್ಷಮ ಕೇಂದ್ರಗಳು
ಕಾಳಮುಬಾ , ಕಪಾಲಿಕಾ ಹಾಗೂ ಪಾಶುಪಥಿ - ಇವರ ಶೈವ ಪಂಥಗಳು
ಇವರ ಕಾಲದಲ್ಲಿ ಪ್ರಬಲವಾಗಿ ಬೆಳೆದ ಧರ್ಮ - ಜೈನ ಧರ್ಮ
ಗಂಗ ರಾಜ್ಯ ಸ್ಥಾಪನೆಗೆ ಕಾರಣನಾದ ಜೈನ ಮುನಿ - ಸಿಂಹ ನಂದಿ
ಶ್ರವಣಬೆಳಗೋಳ ಜೈನರ ಕಾಶಿ ಎಂದು ಪ್ರಸಿದ್ದಿಯಾಗಿದೆ

ಗಂಗರ ಆಶ್ರಯದಲ್ಲಿ ಬರೆಯಲ್ಪಟ್ಟ ಮಹಾ ಕೃತಿಗಳು

ದತ್ತಕ ಸೂತ್ರ - 2 ನೇ ಮಾಧವ
ಶೂದ್ರಂತ ಹಾಗೂ ಹರಿವಂಶ - ಗುಣವರ್ಮ
ಛಂದೋಬುದಿ - 1ನೇ ನಾಗವರ್ಮ
ಗಜಾಷ್ಟಕ , ಸೇತುಬಂಧ ,ಶಿವಮಾರ ತರ್ಕ - 2 ನೇ ಶಿವಮಾರ
ಚಂದ್ರ ಪ್ರಭಾ ಪುರಾಮ - ವೀರನಂದಿ
ಬೃಹತ್ ಕಥಾವನ್ನು ಸಂಸ್ಕೃತ ಭಾಷೆಗೆ ಅನುವಾದ ಹಾಗೂ ಭಾರವಿಯ ಕಿರತಾರ್ಜುನಿಯ ಕೃತಿಗೆ ಭಾಷ್ಯ - ದುರ್ವೀನಿತ
ಗಜಶಾಸ್ತ್ರ - ಶ್ರೀಪುರುಷ

ಕಲೆ ಮತ್ತು ವಾಸ್ತುಶಿಲ್ಪಕ್ಕೆ ಗಂಗರ ಕೊಡುಗೆ :-
ಇವರ ವಾಸ್ತು ಶಿಲ್ಪ ಕದಂಬರು ಹಾಗೂ ಪಲ್ಲವರ ಕಲೆಯ ಮಿಶ್ರಣವಾಗಿದೆ
ಮನ್ನೇಯ ಕಪಿಲಶ್ವರ ದೇವಾಲಾಯ - ವಾಸ್ತು ಶಿಲ್ಪಿ ದೃಷ್ಠಿಯಿಂದ ಪ್ರಸಿದ್ದಿ
ಗಂಗರ ಕಾಲದ ಪ್ರಮುಖ ಬಸದಿಗಳು - ಪಾಶ್ವನಾಥ ಬಸದಿ ಹಾಗೂ ಚಾವುಂಡರಾಯ ಬಸದಿ
ಶ್ರಣಬೆಳಗೋಳದಲ್ಲಿರುವ ಪ್ರಮುಖ ಸ್ಥಂಭಗಳು - ಮಾನಸ್ತಂಭ , ಬ್ರಹ್ಮದೇವರ ಸ್ತಂಭ ಹಾಗೂ ತ್ಯಾಗದ ಬ್ರಹ್ಮ ದೇವರ ಸ್ತಂಭ
ಗಂಗರ ಕಾಲದ ಅಭೂತ ಪೂರ್ವ ಶಿಲ್ಪ ಕಲಾ ಕೆತ್ತನೆ - ಶ್ರವಮಬೆಳಗೋಳದ ಗೊಮ್ಮಟ
ಇವರ ಕಾಲದಲ್ಲಿ ಪ್ರಸಿದ್ದ ನೃತ್ಯಗಾತಿ - ಬಾಚಲು ದೇವಿ
ಬಾಚಲು ದೇವಿಗೆ ಇದ್ದ ಬಿರುದುಗಳು - ನೃತ್ಯವಿಶಾರದೆ ಹಾಗೂ ಪಾತ್ರ ಜಗದವಳೆ

Extra tips

ವಾದಿಮದ ಗಜೇಂದ್ರ ಎಂದು ಹೆಸರು ಗಳಿಸಿದ್ದ ಬೌದ್ಧ ಪಂಡಿತ - ಪರಿವ್ರಾಜಕ
ವಾದಿಭು ಸಿಂಹ ಎಂಬ ಬಿರುದನ್ನು ಹೊಂದಿದ್ದವನು - ಮಾಧವಭಟ್ಟ
ಮಾಧವ ಭಟ್ಟನಿಗೆ ವಾದಿಭು ಸಿಂಹ ಎಂಬ ಬಿರುದನ್ನು ನೀಡಿದ ಗಂಗರ ಅರಸ - ಹರಿವರ್ಮ
ಮೂರನೇ ಮಾಧವನ ಮತ್ತೊಂದು ಹೆಸರು - ತಡಂಗಾಲ ಮಾಧವ
“ ಶಿಷ್ಯ ಪ್ರಿಯ ಹಾಗೂ ಅವನಿ ಮಹೇಂದ್ರ ” ಎಂಬ ಬಿರುದನ್ನು ಪಡೆದಿದ್ದವರು - ಒಂದನೇ ಶಿವಮಾರ
ನೀತಿ ಮಾರ್ಗ , ರಣ ವಿಕ್ರಮ ಎಂಬ ಬಿರುದನ್ನು ಹೊಂದಿದ್ದ ಅರಸ - ಎರೆಯಾಂಗ
ಗರುಡ ಪದ್ದತಿಯ ಮೂಲಕ ಅಸುನಿಗಿದವರ ಕುಟುಂಬಕ್ಕೆ ಬಲಿದಾನವಾಗಿ ನೀಡುತ್ತಿದ್ದ ಭೂಮಿಯನ್ನು - ಕೀಳ್ಗುಂಟೆ ಎಂದು ಕರೆಯುವರು
ಮಹೇಂದ್ರ ಕತಕ ಎಂಬ ಬಿರುದನ್ನು ಪಡೆದಿದ್ದವನು - ಎರೆಯಪು
ಘೂರ್ಜ ರಾಜಾಧಿರಾಜ ಎಂಬ ಬಿರುದನ್ನು ಹೊಂದಿದವನು - ಎರಡನೇ ಮಾರಸಿಂಹ
ಗಂಗರ ಪ್ರಮುಖ ಕಲೆ ಮತ್ತು ವಾಸ್ತು ಶಿಲ್ಪ ಕೇಂದ್ರ - ತಲಕಾಡು
ಗೊಮ್ಮಟೇಶ್ವರನ ವಿಗ್ರಹವನ್ನು ನಿಖರವಾದ ಅಳತೆ - 58.8 ಅಡಿ ಎತ್ತರ ಎಂದು ಗೊತ್ತುಮಾಡಿದ ಉಪಕರಣ - 1980 ರಲ್ಲಿ ಕರ್ನಾಟಕ ವಿ.ವಿ. ನಿಲಯದ ಭಾರತೀಯ ಕಲಾ ಸಂಸ್ಥೆಯ - Theodolight or Institute of Indian art
ಕರ್ನಾಟಕವನ್ನಾಳಿದ ಮನೆತನಗಳಲ್ಲಿಯೇ ದೀರ್ಘಕಾಲ ಆಳ್ವಿಕೆ ನಡೆಸಿದ ಮನೆತನ - ತಲಕಾಡಿನ ಗಂಗರು
ಕೋಲಾರದ ಪ್ರಾಚೀನ ಹೆಸರು - ಕುವಾಲಾಲ
ತಲಕಾಡಿನ ಪ್ರಾಚೀನ ಹೆಸರು - ಕಳವನ ಪುರ
ಗಂಗರ ರಾಜಧಾನಿ ತಲಕಾಡು ಪ್ರಸ್ತುತ ಈ ಜಿಲ್ಲೆಯಲ್ಲಿದೆ - ಮೈಸೂರು
ಗಂಗ ರಾಜ್ಯದ ಸ್ಥಾಪಕರು - ದಡಿಗ ಮತ್ತು ಮಾಧವರು
ಗಂಗರ ಕೊನೆಯ ರಾಜಧಾನಿ - ಮಾನ್ಯ ಪುರ
ಮಾನ್ಯಪುರ ಪ್ರಸ್ತುತ - ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿದೆ
ದುರ್ವೀನಿತನ ತಂದೆ ತಾಯಿಗಳು - ಅವನಿತ ಹಾಗೂ ಜೇಷ್ಠದೇವಿ
ದುರ್ವೀನಿತನ ಗುರುವಿನ ಹೆಸರು - ಪೂಜ್ಯಾಪಾದ
ಪೂಜ್ಯಪಾದನ ಕೃತಿ - ಶಬ್ದಾವತಾರ
ಪೆರ್ಮಾಡಿ ಎಂಬ ಬಿರುದು ಧರಿಸಿದ್ದ ಗಂಗರ ದೊರೆ - ಶ್ರೀಪುರುಷ
ಶ್ರೀಪುರುಷನ ಕಾಲದ ಗಂಗರ ರಾಜಧಾನಿ - ಮಾನ್ಯ ಪುರ
ಸೈಗೊಟ್ಟ ಶಿವಮಾರ ಎಂಬ ಬಿರುದುಳ್ಳ ಅರಸ - 2 ನೇ ಶಿವಮಾರ
ಗಂಗರ ಕೊನೆಯ ಪ್ರಮುಖ ದೊರೆ - 4 ನೇ ರಾಚಮಲ್ಲ
ವೀರ ಮಾರ್ತಾಂಡ ಎಂಬ ಬಿರುದ್ದನ್ನ ಹೊಂದಿದವರು - ಚಾವುಂಡರಾಯ
ಚಾವುಂಡ ರಾಯ ಪಾಂಡ್ಯ ಅರಸ ರಾಜ್ಯಾಧಿತ್ಯನನ್ನ ಸೋಲಿಸಿ ಧರಿಸಿದ್ದ ಬಿರುದು - ರಣಸಿಂಗ ಸಿಂಹ
ಚಾವುಂಡರಾಯನ ಕನ್ನಡ ಕೃತಿ ಚಾವುಂಡರಾಯ ಪುರಾಣದ ವಿಷಯ - ಜೈನ 24 ನೇ ತೀರ್ಥಂಕರನನ್ನು ಕುರಿತದ್ದಾಗಿದೆ
ಗಂಗರ ಕೊನೆಯ ಅರಸ - ರಕ್ಕಸ ಗಂಗ
ಗಂಗರ ಆಡಳಿತವನ್ನು ಕೊನೆಗಾಮಿಸಿದವನು - ಚೋಳ ದೊರೆ ಒಂದನೇ ರಾಜೇಂದ್ರ ಚೋಳ
ವರ್ಧಮಾನ ಪುರಾಣ ಕೃತಿಯ ಕರ್ತೃ - ಅಗಸ
ಸಮರಪರಶುರಾಮ ಹಾಗೂ ವೈರಿಕು ಕಾಲದಂಡ ಎಂಬ ಬಿರುದನ್ನು ಹೊಂದಿದ್ದವರು - ಚಾವುಂಡರಾಯ
ಗೊಮ್ಮಟೇಶ್ವರ ಈ ಬೆಟ್ಟದಲ್ಲಿದೆ - ವಿಂದ್ಯಾಗಿರಿ ಬೆಟ್ಟ
ಗೊಮ್ಮಟೇಶ್ವರ ಇರುವುದು - ಹಾಸನ ಜಿಲ್ಲೆಯಲ್ಲಿ
ಶ್ರವಣಬೆಳಗೋಳದ ಪ್ರಾಚೀನ ಹೆಸರು - ಕಾಥವಪುರಿ
ಗಂಗರ ಮೊದಲ ರಾಜಧಾನಿ - ಕುವಲಾಲ
ಗಂಗರ ಎರಡನೇ ರಾಜಧಾನಿ - ತಲಕಾಡು
ಗಂಗರ ಮೂರನೇ ರಾಜಧಾನಿ - ಮಾಕುಂದ
ಗಂಗರ ಕಾಲದ ಗಣ್ಯ ಕೇಂದ್ರ - ನಂದಿ ದುರ್ಗ ಅಥವಾ ನಂದಿ ಬೆಟ್ಟ
ದಡಿಗನಿಗೆ ಇರುವ ಇನ್ನೋಂದು ಹೆಸರು - ಕೊಂಗುಣಿವರ್ಮ
ಗೊಮ್ಮಟೇಶ್ವರನ ವಿಗ್ರಹ ನಿರ್ಮಾಣವಾದ ವರ್ಷ - ಕ್ರಿ.ಶ. 982
ಗಂಗರ ಕಾಲದ ಗ್ರಾಮದ ಮುಖ್ಯಸ್ಥ - ಪ್ರಭುಗಾವುಂಡ
ಗಂಗರ ಕಾಲದಲ್ಲಿದ್ದ ಹಿರಿಯ ರೈತರ ಸಮಿತಿ - ಪ್ರಜೆಗಾಮುಂಡ
ಗಂಗರ ಕಾಲದಲ್ಲಿದ ಕುಟುಂಬ ಪ್ರಮುಖರ ಕೂಟ - ಮಹಾಜನ
ಗಂಗರ ಕಾಲದಲ್ಲಿದ ದೊಡ್ಡ ನೆಯ್ಗೆಯ ಕೇಂದ್ರ - ವಿಜಯ ಪುರ
ಗಂಗರ ಕಾಲದ ಶಿಕ್ಷಣ ಕೇಂದ್ರಗಳು - ಮಠಗಳು , ಅಗ್ರಹಾರ , ಹಾಗೂ ಬ್ರಹ್ಮಪುರಿ
ಬ್ರಹ್ಮಪುರಿ ಎಂದರೆ - ಒಂದು ಪೇಟೆಯಲ್ಲಿನ ಬ್ರಾಹ್ಮಣರ ಬೀದಿ
ಗಂಗರ ಕಾಲದ ಪ್ರಸಿದ್ದ ವಿದ್ಯಾಕೇಂದ್ರ - ಶ್ರವಮಬೆಳಗೋಳ ಜೈನ ಮಠ
ಬಾಣನ “ ಕಾದಂಬರಿ ” ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು - ನಾಗವರ್ಮ
ಗಂಗರ ಕಾಲದಲ್ಲಿ ಭತ್ತ ಕುಟ್ಟುವಾಗ ಹೇಳುವ ಗೀತೆಗಳನ್ನು ಒಳಗೊಂಡ ಕೃತಿ - ಗಜಾಷ್ಟಕ
ಗಂಗರ ಕಾಲದ ಪಂಚಕೂಟ ಬಸದಿ ಇರುವ ಸ್ಥಳ - ಕದಂಬ ಹಳ್ಳಿ
ಬೆಂಗಳೂರಿನ ಮ್ಯೂಸಿಯಂ ನಲ್ಲಿರುವ ಗಂಗರ ಕಾಲದ ವೀರಗಲ್ಲಿನ ಹೆಸರು - ಬೇಗೂರು ವೀರಗಲ್ಲು

ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ಕರ್ತೃಗಳು

 ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ಕರ್ತೃಗಳು



ಶಾಸನಗಳು ಒಂದು ರಾಷ್ಟ್ರದ, ರಾಜ್ಯದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ನಮ್ಮ ನಾಡಿನ ರಾಜಕೀಯ ಇತಿಹಾಸವು ಮುಖ್ಯವಾಗಿ ಶಾಸನಗಳನ್ನು ಆಧರಿಸಿ ರಚನೆಯಾಗಿದೆ. ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶಾಸನಗಳಿಗೆ ಸಂಬಂಧಪಟ್ಟಂತೆ ಹಲವು ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯವಾಗಿದೆ. ಆ ನಿಟ್ಟಿನಲ್ಲಿ ‘ಸ್ಪರ್ಧಾಲೋಕ’ದಲ್ಲಿ ಕೆಲವು ಮಹತ್ವದ ಶಾಸನಗಳ ಕುರಿತು ವಿವರಗಳನ್ನು ನಿಮ್ಮ ಮುಂದೆ ಇಡಲು ಪ್ರಯತ್ನಿಸಲಾಗಿದೆ.

> ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ : ಹರಿಷೇಣ
> ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ : ಅಲಹಾ ಬಾದ್ ಸ್ತಂಭ ಶಾಸನ
> ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ : ಕೌಸಂಬಿ
> ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ : ಫೀರೋಜ್ ಷಾ ತುಘಲಕ್
> ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ : ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ
> ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು: ಮಿರತ್ ಶಾಸನ ಹಾಗೂ ತೋಪ್ರ ಶಾಸನ
> ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ : ಕಂದಾಹಾರ್
> ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ : ರುದ್ರದಾಮನ್
> ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು : ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು
> ತೆಲುಗಿನ ಪ್ರಥಮ ಶಾಸನ : ಕಲಿಮಲ್ಲ ಶಾಸನ
> ತಮಿಳಿನ ಪ್ರಥಮ ಶಾಸನ : ಮಾಂಗುಳಂ ಶಾಸನ
> ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ : ಅಶೋಕ
> ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ : ಬ್ರಾಹ್ಮಿ ಹಾಗೂ ಖರೋಷಠಿ
> ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ : 13 ನೇ ಶಿಲಾ ಶಾಸನ
> ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು : 1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್
> ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ : ಮಸ್ಕಿ ಶಾಸನ
> ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ : ಕೊಪ್ಪಳ
> ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ : ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ
> ನಿಟ್ಟೂರಿನ ಶಾಸನದ ರಚನಾಕಾರ : ಉಪಗುಪ್ತ
> ನಿಟ್ಟೂರಿನ ಶಾಸನದ ಲಿಪಿಕಾರ : ಚಡಪ
> ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ : 1950 ರಲ್ಲಿ
> ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ : ದೇವನಾಗರಿ
> ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ : ಬಬ್ರುಶಾಸನ
> ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ : ಶಕರ ಪ್ರಸಿದ್ದ ಅರಸ ರುದ್ರಧಮನ
> ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ : ಸಂಜಾನ್ ದತ್ತಿ ಶಾಸನ
> ದಂತಿದುರ್ಗ: ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ
> ಒಂದನೇ ಕೃಷ್ಣ : ಭಾಂಡ್ಕ ಮತ್ತು ತಾಳೇಗಾಂ ಶಾಸನ
> ಧೃವ : ಜೆಟ್ಟಾಯಿ ಶಾಸನ
> ಅಮೋಘವರ್ಷ : ಸಂಜನ ತಾಮ್ರ ಶಾಸನ
> ಬಾದಾಮಿ ಶಾಸನದ ಕರ್ತೃ : 1 ನೇ ಪುಲಿಕೇಶಿ
> ಮಹಾಕೂಟ ಸ್ತಂಭ ಶಾಸನದ ಕರ್ತೃ : ಮಂಗಳೇಶ
> ಮಹಾಕೂಟ ಸ್ತಂಭ ಶಾಸನ : ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ
> ರವಿ ಕೀರ್ತೀ : ಐಹೋಳೆ ಶಾಸನ
> ಐಹೋಳೆ ಶಾಸನ : ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ
> ಚಂದ್ರವಳ್ಳಿ ಶಾಸನದ ಕರ್ತೃ : ಮಯೂರವರ್ಮ (ಚಿತ್ರದುರ್ಗ)
> ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ : ಚಂದ್ರವಳ್ಳಿ ಶಾಸನ.
> ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ : ಚಂದ್ರವಳ್ಳಿ ಶಾಸನ
> ಕನ್ನಡದ ಮೊಟ್ಟ ಮೊದಲ ಶಾಸನ : ಹಲ್ಮಿಡಿ ಶಾಸನ.
> ಹಲ್ಮಿಡಿ ಶಾಸನ ಇಲ್ಲಿ ಇರುವುದು : ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ
> ಹಲ್ಮಿಡಿ ಶಾಸನದ ಕರ್ತೃ : ಕಾಕುಸ್ಥವರ್ಮ .
> ತಾಳಗುಂದ ಶಾಸನದ ಕರ್ತೃ : ಕವಿ ಕುಬ್ಜ
> ತಾಳಗುಂದ ಶಾಸನವನ್ನು ಬರೆಯಿಸಿದವರು : ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)
> ಮಹಿಪವೊಲು ತಾಮ್ರ ಶಾಸನದ ಕರ್ತೃ : ಶಿವಸ್ಕಂದ ವರ್ಮ .
> ವಾಯಲೂರು ಸ್ತಂಭ ಶಾಸನದ ಕರ್ತೃ : ರಾಜ ಸಿಂಹ .
> ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ : 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”
> ನಾನಾ ಘಾಟ್ ಶಾಸನದ ಕರ್ತೃ : ನಾಗನೀಕ .
> ಗುಹಾಂತರ ನಾಸಿಕ್ ಶಾಸನದ ಕರ್ತೃ : ಗೌತಮೀ ಬಾಲಾಶ್ರೀ
> ವೆಳ್ವಕುಡಿ ತಾಮ್ರ ಶಾಸನದ ಕರ್ತೃ : ಪರಾಂತಕ ಚೋಳ.

ಕರ್ನಾಟಕವನ್ನಾಳಿದ ಪ್ರಮುಖ ರಾಜಮನೆತನಗಳು

 ಕರ್ನಾಟಕವನ್ನಾಳಿದ ಪ್ರಮುಖ ರಾಜಮನೆತನಗಳು

೧) ಮೌರ್ಯರು

☛ರಾಜ್ಯದ ನಾನಾ ಭಾಗಗಳಲ್ಲಿ ದೊರೆತಿರುವ ಶಾಸನಗಳು ಕನ್ನಡನಾಡು ಉತ್ತರದ ಮೌರ್ಯರ ಆಡಳಿತಕ್ಕೆ ಕ್ರಿ.ಪೂ. 3ನೇ ಶತಮಾನದಲ್ಲಿ ಒಳಪಟ್ಟಿತ್ತು ಎಂದು ಸಾರುತ್ತವೆ. ಮೌರ್ಯರ ಹೆಸರಾಂತ ದೊರೆ ಅಶೋಕ (ಕ್ರಿ.ಪೂ. 273-233) ನ ಶಾಸನಗಳು ರಾಜ್ಯದ 11 ಸ್ಥಳಗಳಲ್ಲಿ ಕಂಡು ಬಂದಿವೆ.
☛ಚಂದ್ರಗುಪ್ತ ಮೌರ್ಯನು ತನ್ನ ಗುರು ಭದ್ರಬಾಹುವಿನೊಡನೆ ಕರ್ನಾಟಕದ ಶ್ರವಣ ಬೆಳಗೊಳದಲ್ಲಿ ಬಂದು ನೆಲೆಸಿದ್ದನು.
☛ಅಶೋಕನ ಕರ್ನಾಟಕದ ಪ್ರಾಂತ್ಯಗಳ ರಾಜಧಾನಿಗಳು : ಸುವರ್ಣಗಿರಿ, ಇಸಿಲ, ತೊಸಿಲ, ಸಂಪ.
☛ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತ ಸ್ಥಳಗಳು :
☛ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಅ.ಸಿದ್ದಾಪುರ, ಜಿ.ರಾಮೇಶ್ವರ.
☛ರಾಯಚೂರು ಜಿಲ್ಲೆಯ ಗವಿಮಠ,ಮಾಸ್ಕಿ, ಪಾಲ್ಕಿಗುಂಡು, ಕೊಪ್ಪಳ.
☛ಗುಲ್ಬರ್ಗಾ ಜಿಲ್ಲೆಯ ಸನ್ನತಿ.
☛ಬಳ್ಳಾರಿ ಜಿಲ್ಲೆಯ ನಿಟ್ಟೂರು, ಉದೇಗೊಳ್ಳಂ

೨) ಶಾತವಾಹನರು (ಕ್ರಿ.ಪೂ. 238 - ಕ್ರಿ.ಶ 225)

☛ಮೌರ್ಯರ ಸಾಮಂತರಾಗಿದ್ದ ಇವರು, ಮೌರ್ಯರ ನಂತರ ಸ್ವತಂತ್ರರಾಗಿ, (ಕ್ರಿ.ಪೂ. 225 ರವರೆಗೆ ಆಳ್ವಿಕೆ ನಡೆಸಿದರು. 
☛ಇವರ ರಾಜಧಾನಿ : ಪೈತಾನ್ ಅಥವಾ ಪ್ರತಿಷ್ಠಾನ.
☛ಇವರ ಲಾಂಛನ : ವರುಣ.
☛ಇವರೇ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸಿದವರು.
☛ಶಾತವಾಹನರ ಮೂಲ ಪುರುಷ : ಸಿಮುಖ.
☛ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ಗೌತಮಿಪುತ್ರ ಶಾತಕರ್ಣಿ
☛ಶಾತವಾಹನರನ್ನು ' ಶಾತಕರ್ಣಿಗಳೆಂದು' ಕರೆಯುತ್ತಾರೆ.

೩) ಬನವಾಸಿಯ ಕದಂಬರು (ಕ್ರಿ.ಶ 345 - 540)

☛ಈ ಸಂತತಿಯ ಸ್ಥಾಪಕ : ಮಯೂರವರ್ಮ (ಮಯೂರಶರ್ಮ) (345-360)
☛ಕದಂಬರ ರಾಜಧಾನಿ : ಬನವಾಸಿ (ಉ.ಕನ್ನಡ ಜಿಲ್ಲೆಯಲ್ಲಿದೆ)
☛ಬನವಾಸಿಗೆ ವನವಾಸಿ, ವೈಜಯಂತಿ, ಬೈಜಾಂಟಾಯಿನ್ ಎಂಬ ಹೆಸರುಗಳಿದ್ದವು.
☛ಇವರ ಲಾಂಛನ : ಸಿಂಹ.
☛ಕದಂಬರಲ್ಲಿ ಹಾನಗಲ್, ಚಂದಾವರ, ಗೋವೇ ಕದಂಬ ರೆಂದು ಮೂರು ಶಾಖೆಗಳಿದ್ದವು.
☛ಕದಂಬರ ಮೂಲದ ಬಗ್ಗೆ 'ಶಾಂತಿವರ್ಮನ ತಾಳಗುಂದ ಶಾಸನ' ತಿಳಿಸುತ್ತದೆ.
☛ ಕನ್ನಡದ ಪ್ರಪ್ರಥಮ ಶಾಸನ - ಕಾಕುತ್ಸವರ್ಮನ ಹಲ್ಮಿಡಿ ಶಾಸನ.

೪) ತಲಕಾಡಿನ ಗಂಗರು (ಕ್ರಿ.ಶ 350- 999)

☛ದಡಿಗ ಮತ್ತು ಮಾದವರು ಗಂಗ ವಂಶದ ಸ್ಥಾಪಕರು.
☛ಈ ಸಂತತಿಯ ಮೊದಲ ದೊರೆ : ದಡಿಗ (350 -400)
☛ಇವರ ಮೊದಲ ರಾಜಧಾನಿ : ಕೋಲಾರ ಬಳಿಯ ಕುವಲಾಲ
☛ಇವರ ಎರಡನೆಯ ರಾಜಧಾನಿ : ತಲಕಾಡು
☛ತಲಕಾಡಿನ ಮತ್ತೊಂದು ಹೆಸರು : ತಲವನಪುರ.
☛ಇವರ ಮೂರನೇ ರಾಜಧಾನಿ : ಚೆನ್ನಪಟ್ಟಣ ಬಳಿಯ ಮಾಕುಂದ
☛ಇವರ ಲಾಂಛನ : ಆನೆ(ಮದಗಜ)
☛ಈ ಸಂತತಿಯ ಅತ್ಯಂತ ಪ್ರಸಿದ್ಧ ದೊರೆ : ದುರ್ವಿನೀತ (540-600)
☛ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಕೆತ್ತಿಸಿದ ಚಾವುಂಡರಾಯ ಗಂಗರ ಆಸ್ಥಾನದಲ್ಲಿ ಮಂತ್ರಿ ಹಾಗೂ ದಂಡನಾಯಕನಾಗಿದ್ದನು.
☛ಚಾವುಂಡರಾಯನು 4ನೇ ರಾಚಮಲ್ಲನ ಪ್ರಧಾನಮಂತ್ರಿಯಾಗಿದ್ದನು.

೫) ಬಾದಾಮಿಯ ಚಾಲುಕ್ಯರು (ಕ್ರಿ.ಶ 500- 757)

☛ಈ ಸಂತತಿಯ ಸ್ಥಾಪಕ : ಜಯಸಿಂಹ
☛ಇವರ ರಾಜಧಾನಿ : ಬಾದಾಮಿ ಅಥವಾ ವಾತಾಪಿ (ಬಿಜಾಪುರ ಜಿಲ್ಲೆಯಲ್ಲಿದೆ)
☛ಈ ಸಂತತಿಯ ಅತ್ಯಂತ ಪ್ರಸಿದ್ಧ ದೊರೆ : ಇಮ್ಮಡಿ ಪುಲಕೇಶಿ (609-642)
☛ಇವರ ರಾಜ ಲಾಂಛನ : ವರಹ.
☛ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಭೇಟಿಯಿತ್ತ ವಿದೇಶಿ ಪ್ರವಾಸಿಗ : ಚೀನಾದ ಬೌದ್ಧ ಯಾತ್ರಿಕ ಹ್ಯೂಯನ್ ತ್ಸಾಂಗ್.
☛ಬಾದಾಮಿಯ ಚಾಲುಕ್ಯರ ನಿರ್ಮಿತ ಐಹೊಳೆಯನ್ನು 'ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ' ಎನ್ನುವರು.

೬) ಮಾನ್ಯಖೇಟದ ರಾಷ್ಟ್ರಕೂಟರು (ಕ್ರಿ.ಶ 345 - 540)

☛ಈ ಸಂತತಿಯ ಸ್ಥಾಪಕ : ದಂತಿದುರ್ಗ
☛ಇವರ ರಾಜಧಾನಿ : ಮಾನ್ಯಖೇಟ ಅಥವಾ ಮಾಲಖೇಡವಾಗಿತ್ತು.
☛ಇವರ ಲಾಂಛನ : ಗರುಡ
☛ಈ ಸಂತತಿಯ ಅತ್ಯಂತ ಹೆಸರಾಂತ ದೊರೆ :ಅಮೋಘವರ್ಷ ನೃಪತುಂಗ (814-878)
☛ಕ್ರಿ.ಶ 851 ರಲ್ಲಿ ಅರಬ್ ಪ್ರವಾಸಿ ಸುಲೈಮಾನ್ ನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು.

೭) ಕಲ್ಯಾಣದ ಚಾಲುಕ್ಯರು (ಕ್ರಿ.ಶ 973-1156 ಹಾಗೂ 1183-1200)

☛ಇಮ್ಮಡಿ ತೈಲಪ ಕಲ್ಯಾಣದ ಚಾಲುಕ್ಯ ಸಂಸ್ಥಾನದ ಸ್ಥಾಪಕ
☛ಇವರ ರಾಜಧಾನಿ : ಕಲ್ಯಾಣ
☛ಈ ಸಂತತಿಯ ಅತ್ಯಂತ ಪ್ರಮುಖ ದೊರೆ : 6ನೇ ವಿಕ್ರಮಾದಿತ್ಯ (1076-1126)
☛1156 ರಲ್ಲಿ ಸಿಂಹಾಸನವನ್ನು ಕಳೆದುಕೊಂಡ ಇವರ ದೊರೆಗಳು ಪುನಃ 1183 ರಿಂದ 1200 ರವರೆಗೆ ರಾಜ್ಯಭಾರ ನಡೆಸಿದರು.

೮) ಕಲ್ಯಾಣಿಯ ಕಲಚೂರಿಗಳು (ಕ್ರಿ.ಶ 1156 - 1183)

☛ಕೇವಲ ಸಾಮಂತರಾಗಿ ಅಧಿಕಾರ ನಡೆಸುತ್ತಿದ್ದ ಕಲ್ಯಾಣಿಯ ಕಲಚೂರಿಗಳು ಬಿಜ್ಜಳ (1156-1168) ನಿಂದಾಗಿ ಅಲ್ಪಕಾಲ ಸ್ವತಂತ್ರವಾಗಿ ರಾಜ್ಯಭಾರ ನಡೆಸಿದರು.
☛ಹೆಸರಾಂತ ಸಮಾಜ ಸುಧಾಕರ ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು.

೯) ದ್ವಾರಸಮುದ್ರದ ಹೊಯ್ಸಳರು (ಕ್ರಿ.ಶ 985 - 1346)

☛ಈ ಸಂತತಿಯ ಮೂಲ ಪುರುಷ : ಸಳ.
☛ಇವರ ರಾಜಧಾನಿ : ಹಳೇಬೀಡು ಅಥವಾ ದ್ವಾರಸಮುದ್ರವಾಗಿತ್ತು.
☛ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ವಿಷ್ಣುವರ್ಧನ ಅಥವಾ ಬಿಟ್ಟಿದೇವ (1108-1152)
☛ಬೇಲೂರಿನ ಚೆನ್ನಕೇಶವ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಹೊಯ್ಸಳರ ಕೊಡುಗೆಗಳಾಗಿವೆ.

೧೦) ವಿಜಯನಗರ ಸಾಮ್ರಾಜ್ಯ (ಕ್ರಿ.ಶ 1336 - 1565)

ವಿದ್ಯಾರಣ್ಯರ ಸಹಾಯದಿಂದ ಹಕ್ಕ -ಬುಕ್ಕ ಸಹೋದರರಿಂದ ಸ್ಥಾಪಿತವಾದ ಈ ಸಾಮ್ರಾಜ್ಯವನ್ನು ಹಲವಾರು ಸಂತತಿಯ ರಾಜರು ವೈಭವದಿಂದ ಆಳಿದರು. 
☛ಇವರ ರಾಜಧಾನಿ : ಹಂಪಿ
☛ತುಳುವ ಸಂತತಿಯ ಕೃಷ್ಣದೇವರಾಯ (1519 - 1529) ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಬಲ ಹಾಗೂ ಖ್ಯಾತ ದೊರೆ.
☛1565 ರ ತಾಳೀಕೋಟೆ ಯುದ್ಧದಿಂದ ವಿಜಯನಗರ ಸಾಮ್ರಾಜ್ಯ ಪತನವಾಯಿತು.

೧೧) ಬಹಮನಿ ಸಾಮ್ರಾಜ್ಯ (ಕ್ರಿ.ಶ 1347 - 1527)

☛ಈ ಬಹಮನಿ ಸಾಮ್ರಾಜ್ಯದ ಸ್ಥಾಪಕ: ಅಲ್ಲಾವುದ್ದೀನ್ ಹಸನ್ ಬಹಮನ್ ಷಾ.
☛ಈ ಮುಸ್ಲಿಂ ಸಾಮ್ರಾಜ್ಯದ ರಾಜಧಾನಿಗಳು : ಗುಲ್ಬರ್ಗಾ ಹಾಗೂ ಬೀದರ್.

ಕರ್ನಾಟಕದ ಕನ್ನಡದ ಮೊದಲುಗಳು Karnataka Kannada firsts


# ಕನ್ನಡದ ಪ್ರಾಚೀನತೆ – 1 ನೆ ಶತಮಾನ . (ಗ್ರೀಕ್ ಪ್ರಹಸನಗಳಲ್ಲಿ ‘ದೀನ ‘ ಮತ್ತು ‘ದಮ್ಮಾರ’ ಎಂಬ ಕನ್ನಡ ಪದಗಳ ಬಳಕೆ – ಸಂಶೋಧನೆ ಎಂ. ಗೋವಿಂದ ಪೈ )
# ಉಪಲಬ್ದವಿರುವ ಕನ್ನಡದ ಮೊದಲ ಶಾಸನ – ಹಲ್ಮಿಡಿ ಶಾಸನ (ಕ್ರಿ. ಶ.450)
# ತ್ರಿಪದಿ ಛಂದಸ್ಸಿನಲ್ಲಿರುವ ಮೊದಲ ಶಾಸನ – ಕಪ್ಪೆ ಅರೆಭಟ್ಟನ ಶಾಸನ (ಕ್ರಿ. ಶ .700)
# ಕನ್ನಡದ ಮೊದಲ ಶಾಸ್ತ್ರ ಗ್ರಂಥ – ಕವಿರಾಜ ಮಾರ್ಗ (ಕ್ರಿ.ಶ. 850)
# ಕನ್ನಡದ ಮೊದಲ ಗದ್ಯ ಕೃತಿ – ವಡ್ಡಾರಾಧನೆ (ಕ್ರಿ ಶ.920)
# ಕನ್ನಡದ ಆದಿ ಕವಿ – ನಾಡೋಜ ಪಂಪ (ಕ್ರಿ. ಶ.940)
# ಮೊದಲ ಕಾವ್ಯ – ಆದಿಪುರಾಣ (ಪಂಪ .ಕ್ರಿ.ಶ.941)
# ಮೊದಲ ಕವಯಿತ್ರಿ ಮತ್ತು ವಚನಕಾರ್ತಿ- ಅಕ್ಕಮಹಾದೇವಿ (ಕ್ರಿ.ಶ.1150)
# ಮೊದಲು ಅಚ್ಚಾದ ಕನ್ನಡದ ಕೃತಿ – ‘ಎ ಗ್ರಾಮರ್ ಆಫ್ ದಿ ಕರ್ನಾಟಕ ಲಾಂಗ್ವೇಜ್ ‘ (ವಿಲಿಯಂ ಕೇರಿ ಕ್ರಿ. ಶ1890)

# ಕನ್ನಡದ ಮೊದಲ ಮುಸ್ಲಿಂ ಕವಿ – ಶಿಶುನಾಳ ಶರೀಪ ಸಾಹೇಬರು (ಕ್ರಿ. ಶ.1819)
# ಕನ್ನಡದ ಮೊದಲ ದೊರೆ – ಕದಂಬ ವಂಶದ ಮಯೂರವರ್ಮ.
# ಮೊದಲ ಶಿಲ್ಪ- ಬನವಾಸಿಯ ನಾಗಶಿಲ್ಪ
# ಮೊದಲ ಕೆರೆ – ಚಂದ್ರವಳ್ಳಿ ( ಚಿತ್ರದುರ್ಗ )
# ಮೊದಲ ಶಾಸನ – ಹಲ್ಮಿಡಿ ಶಾಸನ ( ಕ್ರಿ.ಶ. 450 )
# ಮೊದಲ ಕೋಟೆ – ಬಾದಾಮಿ ( ಕ್ರಿ. ಶ. 543)
# ಕನ್ನಡದ ಮೊದಲ ನಾಟಕ – ಸಿಂಗರಾಯನ ಮಿತ್ರವಿಂದಾಗೋವಿಂದ
# ಕನ್ನಡದ ಮೊದಲ ದಿನ ಪತ್ರಿಕೆ – ಸೂರ್ಯೋದಯ ಪ್ರಕಾಶಿಕ
# ಕನ್ನಡದ ಮೊದಲ ವಚನಕಾರ್ತಿ – ಅಕ್ಕಮಹಾದೇವಿ
# ಕನ್ನಡದ ಮೊದಲ ರಾಷ್ಟ್ರಕವಿ – ಗೋವಿಂದ ಪೈ

# ಕನ್ನಡದ ಮೊದಲ ಪತ್ರಿಕೆ – ಮಂಗಳೂರು ಸಮಾಚಾರ ಸ್ಥಾಪಕ -ಫಾದರ್ ಹರ್ಮನ್ ನೊಗ್ಲಿಂಗ್ -1842
# ಮೊದಲ ಗದ್ಯ ಕೃತಿ – ವಡ್ಡಾರಾಧನೆ.
# ಮೊದಲ ಕಾವ್ಯ – ಆದಿಪುರಾಣ.
# ಮೊದಲ ಪಂಪ ಪ್ರಶಸ್ಥಿ ವಿಜೇತ ಕವಿ – ಕುವೆಂಪು
# ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಸರ್. ಎಂ. ವಿಶ್ವೇಶ್ವರಯ್ಯ.
# ಜ್ಞಾನ ಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡ ಕೃತಿ ಮತ್ತು ಕವಿ – ಶ್ರೀ ರಾಮಾಯಣ ದರ್ಶನಂ ( ಕುವೆಂಪು )
# ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ – ಬೇಡರ ಕಣ್ಣಪ್ಪ
# ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡದ ಗಾಯಕ – ಶಿವಮೊಗ್ಗ ಸುಬ್ಬಣ್ಣ
# ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ – ಜಯದೇವಿತಾಯಿ ಲಿಗಾಡೆ ( 1984 )

# ಕನ್ನಡದ ಮೊದಲ ವರ್ಣಚಿತ್ರ – ಅಮರಶಿಲ್ಪಿ ಜಕಣಾಚಾರಿ
# ಕನ್ನಡ ಕೆಲಸಕ್ಕೆ ಡಾಕ್ಟರೇಟ್ ಪ್ರಶಸ್ತಿ ಪಡೆದ ಮೊದಲಿಗ – ಫರ್ಡಿನೆಂಡ್ ಕಿಟ್ಟೆಲ್ (ಕನ್ನಡ -ಇಂಗ್ಲೀಷ್ ನಿಘಂಟು)
# ಕನ್ನಡ ರಂಗಭೂಮಿಯ ಮೊದಲ ನಾಯಕಿ ನಟಿ – ಎಲ್ಲೂಬಾಯಿ ಗುಳೇದಗುಡ್ಡ.
# ಕರ್ನಾಟಕದಲ್ಲಿ ತಯಾರಾದ ಮೊದಲ ಮೂಕ ಚಿತ್ರ – ಮೃಚ್ಛಕಟಿಕ
# ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ಪತ್ರಿಕೆ – ಉದಯವಾಣಿ
# ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ – ರಾಮಗಾಣಿಗ.
# ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಮಹಿಳೆ ಮತ್ತು ಕನ್ನಡಿಗ – ಅನುಪಮಾ ನಿರಂಜನ, ಬಸವರಾಜ ಕಟ್ಟಿಮನಿ.
# ಕನ್ನಡದ ಮೊದಲ ನವೋದಯ ಕವಿತ್ರಿ – ಬೆಳಗೆರೆ ಜಾನಕಮ್ಮ.
# ಕನ್ನಡದ ಪ್ರಥಮ ತ್ರಿಪದಿ ಶಾಸನ -ಬಾದಾಮಿ ಶಾಸನ
# ಕನ್ನಡದ ಪ್ರಥಮ ರಾಜವಂಶ – ಕದಂಬರು

# ಸ್ವಾತಂತ್ರ್ಯ ಕಹಳೆ ಊದಿದ ಭಾರತದಲ್ಲೇ ಪ್ರಥಮ ಕನ್ನಡ ಪ್ರಾಂತ್ಯ-ಕಿತ್ತೂರು
# ಕರ್ನಾಟಕ ಮೊದಲ ವಿಶ್ವವಿದ್ಯಾಲಯ-ಮ್ಯೆಸೂರು
# ಭಾರತರತ್ನ ಪ್ರಶಸ್ತಿ ಪಡೆದ ಪ್ರಥಮ ಕನ್ನಡ ವಿಜ್ನಾನಿ-ಸರ್.ಸಿ.ವಿ.ರಾಮನ್.
# ರೈಟ್ ಸಹೋದರರಿಗಿಂತ 8 ವರ್ಷ ಮೊದಲೇ (1895) ಮುಂಬಯಿಯಲ್ಲಿ 2000 ಅಡಿ ಎತ್ತರಕ್ಕೆವಿಮಾನ ಹಾರಿಸಿದ ಕನ್ನಡಿಗ – ಆನೇಕಲ್ ಸುಬ್ಬರಾಯ ಶಾಸ್ತ್ರಿ.
# ಕನ್ನಡದ ಪ್ರಥಮ ನಾಡಗೀತ-ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಕವಿ : ನಾರಾಯಣ ಹುಯಿಲಗೋಳ
# ಕನ್ನಡದ ಪ್ರಥಮ ಭಾವಗೀತಗಳ ಕ್ಯಾಸೆಟ್ -ನಿತ್ಯೋತ್ಸವ
# ವಿದೇಶದಲ್ಲಿ ಚಿತ್ರಿಸಿದ ಮೊದಲ ಕನ್ನಡ ಚಿತ್ರ-ಸಿಂಗಾಪುರದಲ್ಲಿ ರಾಜಾಕುಳ್ಳ
# ಕನ್ನಡದ ಪ್ರಥಮ ಚಿತ್ರ ನಿರ್ಮಾಪಕ-ಎಂ. ವಿ ರಾಜಮ್ಮ.
# ಚಿತ್ರರಂಗದ ಪ್ರಥಮ ವಾಕ್ಚಿತ್ರ-ಭಕ್ತಧ್ರುವ

# ಕನ್ನಡ ರಂಗಮಂಟಪದ ಮೇಲೆ ಪ್ರಥಮ ಬಾರಿಗೆ ಜೀವಂತ ಪ್ರಾಣಿ ತಂದ ಕನ್ನಡಿಗ-ಗುಬ್ಬಿವೀರಣ್ಣ
# ಕರ್ನಾಟಕ ಪ್ರಶಸ್ತಿ , ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಪ್ರಥಮ ಕನ್ನಡ ಚಲನಚಿತ್ರ ನಟ-ಡಾ. ರಾಜ್ ಕುಮಾರ್
# ಕರ್ನಾಟಕದ ಪ್ರಥಮ ಚಿತ್ರಮಂದಿರ-ಪ್ಯಾರಾಮೊಂಟು.
# ಭಾರತ ಹಾಕಿ ತಂಡದ ಮೊದಲ ನಾಯಕರಾಗಿದ್ದ ಕನ್ನಡಿಗ-ಎಂ. ಪಿ ಗಣೇಶ್.
# ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಥಮ ಕನ್ನಡತಿ-ಶಾಂತ ರಂಗಸ್ವಾಮಿ.
# ಭಾರತ ಶ್ರೀ, ಭಾರತ ಕಿಶೋರ್, ಭಾರತ್ ಕುಮಾರ್ ಪ್ರಶಸ್ತಿಗಳನ್ನು
# ಒಂದೇ ವರ್ಷದಲ್ಲಿ ಗಳಿಸಿದ ದೇಹಧಾರ್ಡ್ಯ ಪಟು-ಕನ್ನಡಿಗ ರೇಮಂಡ್ ಡಿಸೋಜಾ
# ನಾಟರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಫಿಲಿಪ್ಯೆನ್ಸ್ ಮ್ಯಾಗ್ಸಸ್ಸೇ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ-ಕೆ.ವಿ ಸುಬ್ಬಣ್ಣ
# ಅಭಿನಯಿಸಿದ ಮೊದಲ ಚಿತ್ರಕ್ಕೇ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ನಾಯಕ-ದಿ. ಶಂಕರನಾಗ್

# ಮೊದಲ ವರ್ಣಚಲನಚಿತ್ರ -ಸತಿಸುಲೋಚನಾ.
# ಕನ್ನಡ ಭಾಷೆಯ ಮೊದಲ ಪದ – ಇಸಿಲ.
# ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
# ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.
ಬನ್ನಿ ಎಲ್ಲರು ಕಲಿಯೋಣ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿ ಹೋಂದೊಣ

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...