ಈರುಳ್ಳಿಯಲ್ಲಿ ಅಡಗಿರುವ ಚಮತ್ಕಾರಗಳು

ಆರೋಗ್ಯಕರವಾದ ಆಹಾರ ಪದ್ಧತಿಯನ್ನು ಅನುಸರಿಸುವುದರ ಜೊತೆಗೆ ದೇಹದ ತೂಕವನ್ನು ನಿರ್ವಹಣೆ ಮಾಡಿಕೊಳ್ಳಲು ಈರುಳ್ಳಿಯನ್ನು ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವನೆ ಮಾಡಬಹುದು. ನಮ್ಮ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಜೊತೆಗೆ ಹೃದಯ ರಕ್ತನಾಳಕ್ಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಸರಿಪಡಿಸುತ್ತದೆ ಮತ್ತು ಮಧುಮೇಹ ಸಮಸ್ಯೆಯನ್ನು ದೂರಮಾಡುತ್ತದೆ.

https://youtu.be/PNmMZjdXAAM?si=dWrITXGU5AQIv9Kb


ಈರುಳ್ಳಿಯ ಪ್ರಯೋಜನಗಳು

ಈರುಳ್ಳಿಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿ ಅಂಶಗಳು ಇರುವ ಕಾರಣ ಮತ್ತು ಇವುಗಳಲ್ಲಿ ಕರಗುವ ನಾರಿನ ಅಂಶ ಹೆಚ್ಚಾಗಿ ಸಿಗುತ್ತದೆ ಎನ್ನುವ ಕಾರಣಕ್ಕೆ ಇದನ್ನು ಶಕ್ತಿಯುತವಾದ ಪ್ರೀ ಬಯೋಟಿಕ್ ಆಹಾರವಾಗಿ ಸೇವನೆ ಮಾಡಬಹುದು.

  • ಒಂದು ಕಪ್ ಹೆಚ್ಚಿದ ಈರುಳ್ಳಿಯಲ್ಲಿ ದೇಹಕ್ಕೆ ಅಗತ್ಯವಾಗಿ ಬೇಕಾದ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಕಬ್ಬಿಣ,ಮೆಗ್ನೀಷಿಯಂ, ಫಾಸ್ಫರಸ್, ಪೊಟ್ಯಾಶಿಯಂ ಹಾಗೂ ಇನ್ನಿತರ ಅಂಶಗಳು ಸಿಗುತ್ತವೆ.
  • ಈರುಳ್ಳಿಯಲ್ಲಿ ಕಂಡುಬರುವ ಕರಗುವ ನಾರಿನ ಅಂಶ ದೀರ್ಘಕಾಲ ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ಉಂಟು ಮಾಡುವ ಜೊತೆಗೆ ಕ್ಯಾಲೋರಿಗಳನ್ನು ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೇರದಂತೆ ನೋಡಿಕೊಳ್ಳುತ್ತದೆ.
  • ಇದರ ಜೊತೆಗೆ ದೇಹದ ತೂಕಕ್ಕೆ ಅನುಗುಣವಾಗಿ ಬೇಕಾದ ಫ್ಲೇವನಾಯ್ಡ್ ಅಂಶಗಳು ಇದರಲ್ಲಿ ಕಂಡುಬರುತ್ತವೆ. ದೇಹದಲ್ಲಿ ಕೊಬ್ಬಿನ ಅಂಶವನ್ನು ನಿಯಂತ್ರಣ ಮಾಡಿ ಮೆಟಬಾಲಿಸಂ ಪ್ರಕ್ರಿಯೆ ಚುರುಕುಗೊಳ್ಳಲು ಇದು ನೆರವಾಗುತ್ತದೆ.

ಈರುಳ್ಳಿ ಸೇವನೆಯಿಂದ ಸಿಗುವ ಇನ್ನಿತರ ಆರೋಗ್ಯ ಪ್ರಯೋಜನಗಳು

  • ಈರುಳ್ಳಿಯಲ್ಲಿ ಪ್ರೆಬಯೋಟಿಕ್ ಇನ್ಸುಲಿನ್ ಅಂಶ ಹೆಚ್ಚಾಗಿದ್ದು, ಕರುಳಿನ ಭಾಗದ ಆರೋಗ್ಯಕ್ಕೆ ಇದು ಉತ್ತಮವಾದ ಒಂದು ತರಕಾರಿ ಆಗಿದೆ ಎಂದು ಹೇಳಬಹುದು.
  • ಕರುಳಿನ ಭಾಗದಲ್ಲಿ ಸಹಕಾರಿಯಾಗಿ ಕೆಲಸ ಮಾಡುವ ಬ್ಯಾಕ್ಟೀರಿಯಾಗಳ ಅಭಿವೃದ್ಧಿಯನ್ನು ಕಂಡುಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಮಧುಮೇಹ ಸಮಸ್ಯೆ ಇರುವವರಿಗೆ ಮತ್ತು ಇದರ ರೋಗಲಕ್ಷಣ ಇರುವ ಜನರಿಗೆ ಅನುಕೂಲಕರವಾಗಿ ಕೆಲಸ ಮಾಡುತ್ತದೆ.
  • ಇನ್ನೊಂದು ಮುಖ್ಯ ವಿಚಾರ ಎಂದರೆ ಈರುಳ್ಳಿಯಲ್ಲಿ ಕಂಡುಬರುವ ವಿಟಮಿನ್ ಸಿ ಅಂಶ, ದೇಹದಲ್ಲಿ ಕೊಲಾಜನ್ ಅಂಶದ ಉತ್ಪತ್ತಿಯನ್ನು ಹೆಚ್ಚು ಮಾಡಿ ಚರ್ಮಕ್ಕೆ ಹಾಗೂ ತಲೆ ಕೂದಲಿಗೆ ಅನುಕೂಲಕರವಾಗಿ ಕೆಲಸ ಮಾಡಲಿದೆ.
  • ಈರುಳ್ಳಿ ಸೇವನೆಯಿಂದ ನಿಮ್ಮ ದೇಹಕ್ಕೆ ಕ್ಯಾಲ್ಸಿಯಂ ಅಂಶ ಕೂಡ ಹೆಚ್ಚು ಸಿಗಲಿದ್ದು, ಮೂಳೆಗಳಿಗೆ ಹಾಗೂ ಹಲ್ಲುಗಳ ಬಲವರ್ಧನೆಗೆ ಹೆಚ್ಚು ಸಹಾಯಕವಾಗಲಿದೆ.
  • ಈರುಳ್ಳಿಯಲ್ಲಿ ಸುಮಾರು 25 ಬಗೆಯ ಆಂಟಿಆಕ್ಸಿಡೆಂಟ್ ಅಂಶಗಳು ಸಿಗಲಿದ್ದು, ಕ್ಯಾನ್ಸರ್, ಮಧುಮೇಹ ಹಾಗೂ ಹೃದಯದ ಕಾಯಿಲೆಗಳಿಗೆ ಇದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.
  • ದೇಹಕ್ಕೆ ಅಗತ್ಯವಾದ ಅಂಶಗಳಾದ ವಿಟಮಿನ್ ಸಿ, ವಿಟಮಿನ್ 6, ಪೊಟ್ಯಾಸಿಯಮ್, ಮ್ಯಾಂಗನೀಸ್, ತಾಮ್ರವು ಈರುಳ್ಳಿಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ಮೂಳೆ ಆರೋಗ್ಯ ಮತ್ತು ಆಲ್ಝೈಮರ್ ನಂತರ ನರಸಂಬಂಧಿ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...