#ಓಂನಮೋಸೂರ್ಯದೇವ
🌼 ಹಿಂದೂ ಧರ್ಮದಲ್ಲಿ ಸೂರ್ಯ ದೇವನನ್ನು ಪ್ರಮುಖ ದೇವನೆಂದು ಪರಿಗಣಿಸಲಾಗುತ್ತದೆ. ಸೂರ್ಯ ದೇವನನ್ನು ಆಧ್ಯಾತ್ಮಿಕ ಗುರುಗಳು ಎಂದು ಪರಿಗಣಿಸಲಾಗುತ್ತದೆ ಮತ್ತು ನಮ್ಮ ಜೀವನಕ್ಕೆ ಬಹಳ ಮುಖ್ಯ. ಸೂರ್ಯ ದೇವರನ್ನು ಬ್ರಹ್ಮಾಂಡದ ಮುಖ್ಯ ಸೃಷ್ಟಿಕರ್ತ ಎಂದು ಪರಿಗಣಿಸಲಾಗುತ್ತದೆ, ಅವರು ಜೀವನವನ್ನು ಬೆಳಕು, ಶಕ್ತಿ ಮತ್ತು ಜೀವನದ ಶಕ್ತಿಯಿಂದ ತುಂಬುತ್ತಾರೆ. ಆತನನ್ನು ಸರ್ವೋಚ್ಚ ದೇವತೆಯಾಗಿ ಪೂಜಿಸಲಾಗುತ್ತದೆ ಮತ್ತು ಆತನ ಆರಾಧನೆಗೆ ಅದ್ಭುತವಾದ ಮಹತ್ವವಿದೆ. ಅವನು ಎಲ್ಲಾ ಜೀವಿಗಳಿಗೆ ಜೀವವನ್ನು ನೀಡುತ್ತಾನೆ. ಮತ್ತು ಪ್ರತಿಯೊಬ್ಬರನ್ನು ತನ್ನ ವೇಗದಿಂದ ಚಲಿಸುವಂತೆ ಮಾಡುತ್ತಾನೆ. ಸೂರ್ಯ ದೇವರ ಆರಾಧನೆಯು ಮಾನವ ಜೀವನದಲ್ಲಿ ಯಶಸ್ಸು, ಸಂತೋಷ ಮತ್ತು ಸಮೃದ್ಧಿಯನ್ನು ತುಂಬುತ್ತದೆ. ಆದ್ದರಿಂದ, ನಾವು ಸೂರ್ಯ ದೇವರನ್ನು ನಮ್ಮ ಜೀವನದ ಪ್ರಮುಖ ಭಾಗವೆಂದು ಪರಿಗಣಿಸುತ್ತೇವೆ. ಹಿಂದೂ ಧರ್ಮದಲ್ಲಿ ಸೂರ್ಯನನ್ನು ಸರ್ವೋಚ್ಚ ದೇವತೆ ಎಂದು ಪರಿಗಣಿಸಲಾಗುತ್ತದೆ ಮತ್ತು ಅವನ ಮಂತ್ರಗಳಿಗೆ ಅಪಾರ ಪ್ರಾಮುಖ್ಯತೆ ಇದೆ. ಸೂರ್ಯ ಮಂತ್ರವನ್ನು ಪಠಿಸುವುದರಿಂದ ನಮಗೆ ಆತ್ಮವಿಶ್ವಾಸ, ಶಕ್ತಿ ಮತ್ತುಶಾಂತಿ ಸಿಗುತ್ತದೆ. ಭಾನುವಾರ ಆಗಿರಬಹುದು ಅಥವಾ ಯಾವುದೇ ದಿನವಾಗಿರಬಹುದು ಸೂರ್ಯ ದೇವನ ಯಾವಮಂತ್ರಗಳನ್ನು ಪಠಿಸಬೇಕು.?
🌼 ಮೊದಲನೇ ಸೂರ್ಯ ಮಂತ್ರ :
'' ಓಂ ಹ್ರೀಂ ಘ್ರೀಂ ಸೂರ್ಯಾಯ ನಮಃ"
ಈ ಸೂರ್ಯ ಮಂತ್ರಗಳನ್ನು ಪಠಿಸುವುದರಿಂದ ಸೂರ್ಯ ದೇವನ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ
ಮತ್ತು ಸಂಪತ್ತು, ಆರೋಗ್ಯ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಸೂರ್ಯ ದೇವನ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿಯೂ ನೀವು ಈ ಸೂರ್ಯಮಂತ್ರಗಳನ್ನು ಪಠಿಸುವುದು ಪ್ರಯೋಜನಕಾರಿಯಾಗಿರುತ್ತದೆ.
🌼 ಎರಡನೇ ಸೂರ್ಯ ಮಂತ್ರ :
'' ಆದಿತ್ಯ ಹೃದಯಂ ಪುಣ್ಯಂ ಸರ್ವ ಶತ್ರು ವಿನಾಶನಂ ''
ಈ ಸೂರ್ಯ ಮಂತ್ರವನ್ನು ನೀವು ಪಠಿಸುವುದರಿಂದ ರೋಗಗಳು, ತೊಂದರೆಗಳು ಮತ್ತು ದುಃಖಗಳು ನಿವಾರಣೆಯಾಗುತ್ತದೆ ಮತ್ತು ಸಂತಾನ ಭಾಗ್ಯವನ್ನು ಪಡೆದುಕೊಳ್ಳುವ ವರವನ್ನು ಕರುಣಿಸುತ್ತಾನೆ. ಆರೋಗ್ಯದ ಸಮಸ್ಯೆಗಳನ್ನು ಹೊಂದಿರುವವರು ಸೂರ್ಯ ದೇವನ ಈ ಮಂತ್ರವನ್ನು ಪಠಿಸಬೇಕು ಮತ್ತು ಸಾಧ್ಯವಾದರೆ ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸಬೇಕು.
🌼 ಮೂರನೇ ಸೂರ್ಯ ಮಂತ್ರ :
" ಓಂ ಘೃಣಿ ಸೂರ್ಯಾಯ ನಮಃ ''
ಈ ಮಂತ್ರವನ್ನು ಪಠಿಸುವುದರಿಂದ ಸೂರ್ಯ ದೇವನ ಅಶುಭ ಪರಿಣಾಮಗಳಿಂದ ರಕ್ಷಣೆ ದೊರೆಯುತ್ತದೆ. ಜೀವನದಲ್ಲಿ ಸಮೃದ್ಧಿ ಮತ್ತು ಯಶಸ್ಸನ್ನು ನೀವು ತಂದುಕೊಳ್ಳಬಹುದು. ನೀವು ಕೆಲಸದಲ್ಲಿ ಪ್ರಗತಿಯನ್ನು ಪಡೆದುಕೊಳ್ಳಲು ಬಯಸಿದರೆ ಅಥವಾ ಉದ್ಯೋಗದಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ ಭಾನುವಾರದ ದಿನವಾಗಿರಬಹುದು ಅಥವಾ ಪ್ರತಿನಿತ್ಯ ಕೂಡ ನೀವು ಈ ಸೂರ್ಯ ಮಂತ್ರವನ್ನು ಪಠಿಸಬೇಕು.
🌼 ನಾಲ್ಕನೇ ಸೂರ್ಯ ಮಂತ್ರ :
'' ಓಂ ಶ್ರೀಂ ಹ್ರೀಂ ಸೂರ್ಯಾಯ ನಮಃ ''
ಈ ಮಂತ್ರವನ್ನು ಪಠಿಸುವುದರಿಂದ ಸಂಪತ್ತು ಬರುತ್ತದೆ ಮತ್ತು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನೀವು ಸಾಲದ ಸಮಸ್ಯೆಯಿಂದ ನೊಂದಿದ್ದರೆ ಅಥವಾ ಹಣ ನಿಮ್ಮ ಕೈಯಲ್ಲಿ ಅನಿವಾರ್ಯಕ್ಕಿಂತ ಹೆಚ್ಚು ಖರ್ಚಾಗುತ್ತಿದ್ದರೆ ಪ್ರತಿನಿತ್ಯಸೂರ್ಯ ದೇವನ ಈ ಮಂತ್ರವನ್ನು ಪಠಿಸಿ. ಸೂರ್ಯದೇವನಿಗೆ ಮುಖಮಾಡಿ ಕುಳಿತು ನೀವು ಈ ಮಂತ್ರವನ್ನು ಪಠಿಸಬೇಕು.
🌼 ಐದನೇ ಸೂರ್ಯ ಮಂತ್ರ :
'' ಆದಿತ್ಯ ಹೃದಯ ಸ್ತೋತ್ರ "
ಈ ಸ್ತೋತ್ರವು ಸೂರ್ಯನನ್ನು ಪ್ರಾರ್ಥಿಸುವುದಕ್ಕಾಗಿ ಮತ್ತು ಸೂರ್ಯನ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ಪಠಿಸಬೇಕು. ಈ ಸೂರ್ಯ ಮಂತ್ರವನ್ನು ಯಾವ ವ್ಯಕ್ತಿ ಪಠಿಸುತ್ತಾನೋ ಅವನು ತನ್ನೆಲ್ಲಾ ಆರೋಗ್ಯದಸಮಸ್ಯೆಗಳಿಂದ, ರೋಗಗಳಿಂದ ಮುಕ್ತಿ ಹೊಂದುತ್ತಾನೆ.
🌼 ಆರನೇ ಸೂರ್ಯ ಮಂತ್ರ :
'' ಓಂ ಆದಿತ್ಯಾಯ ವಿದ್ಮಹೇ
ದಿವಾಕರಾಯ ಧೀಮಹಿ
ತನ್ನೋ ಸೂರ್ಯಃ ಪ್ರಚೋದಯಾತ್ "
ಈ ಮಂತ್ರವನ್ನು ಪಠಿಸುವುದರಿಂದ ಧ್ಯಾನ, ಗ್ರಹಿಕೆ ಮತ್ತು ಶಕ್ತಿಯನ್ನು ನೀಡುತ್ತದೆ ಮತ್ತು ಸಮಸ್ಯೆಗಳನ್ನು ಪರಿಹರಿಸುತ್ತದೆ. ಈ ಮಂತ್ರವನ್ನು ನೀವು ನಿಮ್ಮ ಮಕ್ಕಳಿಗೆ ಓದುವಂತೆ ಅಥವಾ ಪಠಿಸುವಂತೆ ಸಲಹೆ ನೀಡಬಹುದು.
🙏🌷_ ಕೃಷ್ಣಾರ್ಪಣಮಸ್ತು _🌷🙏
ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ ಭವೇತ್ ||
ಓಂ ಶಾಂತಿಃ ಶಾಂತಿಃ ಶಾಂತಿಃ
༻﹡﹡﹡﹡﹡﹡﹡༺ ༻﹡﹡﹡﹡﹡﹡﹡༺