'ಓಂ' ಪದವು ಸೃಷ್ಟಿಯ ಆದಿ ಮತ್ತು ಅಂತ್ಯವನ್ನು ಪ್ರತಿಬಿಂಬಿಸುತ್ತದೆ. ಓಂಕಾರವನ್ನು ಪಠಿಸಿದರೆ ನಿಮ್ಮೆಲ್ಲಾ ಆಸೆಗಳು ನೆರವೇರುತ್ತದೆ. ವೈಜ್ಞಾನಿಕವಾಗಿಯೂ ಸಾಬೀತಾಗಿರುವಂತೆ ಓಂಕಾರವನ್ನು ಪ್ರತಿದಿನ ಪಠಿಸಿದರೆ ನಿಮ್ಮ ಒತ್ತಡಗಳೆಲ್ಲಾ ನಿವಾರಣೆಯಾಗಿ ಮನಸ್ಸು ಆಹ್ಲಾದಕರವಾಗಿರುತ್ತದೆ.
ಓಂ ಎನ್ನುವುದು ಒಂದು ಅಕ್ಷರವಲ್ಲ. ಅದು ಅ ಉ ಮ ಎಂಬ ಮೂರು ಅಕ್ಷರಗಳ ಸಂಗಮ. ಅ ಎಂದರೆ ಸೃಷ್ಟಿ, ಉ ಎಂದರೆ ವಿಕಸನ, ಮ ಎಂದರೆ ಮೌನ ಹಾಗೂ ವಿನಾಶ. ಹಾಗಾಗಿ ಈ ಒಂದೇ ಪದವು ಸೃಷ್ಟಿಯ ಆದಿ ಮತ್ತು ಅಂತ್ಯವನ್ನು ಪ್ರತಿಬಿಂಬಿಸುತ್ತದೆ. ಓಂಕಾರವನ್ನು ಪಠಿಸಿದರೆ ನಿಮ್ಮೆಲ್ಲಾ ಆಸೆಗಳು ನೆರವೇರುತ್ತದೆ. ವೈಜ್ಞಾನಿಕವಾಗಿಯೂ ಸಾಬೀತಾಗಿರುವಂತೆ ಓಂಕಾರವನ್ನು ಪ್ರತಿದಿನ ಪಠಿಸಿದರೆ ನಿಮ್ಮ ಒತ್ತಡಗಳೆಲ್ಲಾ ನಿವಾರಣೆಯಾಗಿ ಮನಸ್ಸು ಆಹ್ಲಾದಕರವಾಗಿರುತ್ತದೆ.
ಮುಂಜಾನೆ ಎದ್ದು ಸ್ನಾನಾದಿ ಕರ್ಮಗಳನ್ನು ಮುಗಿಸಿ, ಮ್ಯಾಟ್ ಹಾಸಿ ಕುಳಿತುಕೊಳ್ಳಿ, ನಿಮ್ಮ ಕಣ್ಣುಗಳನ್ನು ಮುಚ್ಚಿ ನಿರಾಳರಾಗಿ, ನಿಮ್ಮ ಎರಡೂ ಹುಬ್ಬಿನ ಮಧ್ಯಭಾಗವನ್ನು ಕೇಂದ್ರೀಕರಿಸಿ, ಓಂಕಾರವನ್ನು ನಿಧಾನವಾಗಿ ಪಠಿಸಿ. 21 ಬಾರಿ ಪಠಿಸುವುದು ಒಳ್ಳೆಯದು, ನಿಮ್ಮ ಉಸಿರಾಟದ ಮೂಲಕ ಪಠಣವನ್ನು ಲೆಕ್ಕಹಾಕಬಹುದು. ಓಂಕಾರವನ್ನು ಗಟ್ಟಿಧ್ವನಿಯಲ್ಲಿ ಅಥವಾ ಮೆಲುಧ್ವನಿಯಲ್ಲೂ ಪಠಿಸಬಹುದು. ಈ ನಿಯಮಗಳನ್ನು ಅನುಸರಿಸಿಕೊಂಡು ಮಾಡಿದರೆ ಖಂಡಿತವಾಗಿಯೂ ನಿಮ್ಮಲ್ಲಿ ಆಗುವಂತಹ ಬದಲಾವಣೆಯನ್ನು ಗಮನಿಸಬಹುದು.
- ಹದಿನೈದು ದಿನಗಳ ನಿರಂತರ ಓಂಕಾರದ ಪಠಣದಿಂದ ಒತ್ತಡಗಳೆಲ್ಲಾ ನಿವಾರಣೆಯಾಗಿ, ಮನಸ್ಸು ಶಾಂತವಾಗುವುದು, ಸಂಶೋಧನೆಯ ಪ್ರಕಾರ ಓಂಕಾರವು ದೇಹದಲ್ಲಿರುವ ಅಡ್ರಿನಲಿನ್ ಸ್ರಾವವನ್ನು ಕಡಿಮೆಗೊಳಿಸುತ್ತದೆ, ಇದರಿಂದಾಗಿ ಮಾನಸಿಕ ಒತ್ತಡವು ನಿಧಾನವಾಗಿ ಕಡಿಮೆಯಾತ್ತದೆ ಎಂದು ಹೇಳಲಾಗುತ್ತದೆ
- ಇದು ಮನಸ್ಸಿನಲ್ಲಿರುವ ಭಯ, ಅಸಮಾಧಾನವನ್ನು ನಿವಾರಣೆಗೊಳಿಸುತ್ತದೆ.
- ಓಂಕಾರದ ಪಠಣವು ನಿಮ್ಮ ಸುತ್ತಲಿನ ವಾತಾವರಣವನ್ನು ಶುದ್ಧಗೊಳಿಸಿ, ಧನಾತ್ಮಕ ಕಂಪನವನ್ನು ಉಂಟುಮಾಡುತ್ತದೆ
- ಓಂಕಾರದ ಉಚ್ಛಾರಣೆಯು ದೇಹದಲ್ಲಿರುವ ಎಲ್ಲಾ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ
- ಓಂಕಾರದ ಪಠಣದಿಂದ ನಿಮ್ಮ ಹೃದಯದ ಆರೋಗ್ಯ ವೃದ್ಧಿಯಾಗುವುದು ಹಾಗೂ ರಕ್ತಸಂಚಾರವೂ ಆರೋಗ್ಯಕರವಾಗುವುದು
- ಜೀರ್ಣಾಂಗವ್ಯವಸ್ಥೆಯನ್ನು ಸುಧಾರಿಸುತ್ತದೆ
- ಓಂಕಾರವು ನಿಮ್ಮಲ್ಲಿರುವ ಉದಾಸೀನತೆಯನ್ನು ಬದಿಗೆ ಸರಿಸಿ, ಉತ್ಸಾಹವನ್ನು ಹೆಚ್ಚಿಸುತ್ತದೆ
- ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ, ಮಲಗುವ ಮುನ್ನ 5ನಿಮಿಷ ಓಂಕಾರವನ್ನು ಪಠಿಸಿ
- ಓಂಕಾರದ ಪಠಣದಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುವುದು
- ಮನುಷ್ಯನ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯವನ್ನು ಹೆಚ್ಚಿಸುವುದು
- ಓಂಕಾರ ಪದವನ್ನು ಉಚ್ಚರಿಸುವಾಗ ನಿಮ್ಮ ದೇಹದಲ್ಲಿ ಉಂಟಾಗುವ ಕಂಪನವನ್ನು ಗಮನಿಸಬಹುದು, ಈ ಕಂಪನವು ಬೆನ್ನು ಮೂಳೆಗೆ ಒಳ್ಳೆಯದು. ಇದರಿಂದಾಗಿ ಬೆನ್ನುಮೂಳೆಯ ಕಾರ್ಯಕ್ಷಮತೆ ಹೆಚ್ಚಾಗುವುದು.
- ಓಂಕಾರದ ಉಚ್ಚಾರಣೆಯು ಗಂಟಲಿನ ಆರೋಗ್ಯಕ್ಕೂ ಒಳ್ಳೆಯದು, ಇದು ಥೈರಾಯ್ಡ್ ಗ್ರಂಥಿಯನ್ನು ಆರೋಗ್ಯವಾಗಿಡುವುದು
- ಓಂಕಾರ ಪದವು ನಿಮ್ಮ ದೇಹದಲ್ಲಿ ಹೊಸ ಶಕ್ತಿಯನ್ನು ಪ್ರವಹಿಸಿ, ಯಾವುದೇ ಕೆಲಸದಲ್ಲೂ ನಿಮ್ಮ ಆತ್ಮವಿಶ್ವಾಸ ವೃದ್ಧಿಯಾಗುವಂತೆ ಮಾಡುತ್ತದೆ.
- ಏಕಾಗ್ರತೆಯು ವೃದ್ಧಿಯಾಗಿ, ನಿಮ್ಮ ಗುರಿಯನ್ನು ಸಾಧಿಸಲು ಓಂಕಾರವು ಸಹಕರಿಸುವುದು
- ಓಂಕಾರ ಪಠಣವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸ್ವಯಂಪ್ರತಿರೋಧಕವನ್ನು ಉಂಟುಮಾಡುವುದು
- ಓಂಕಾರವನ್ನು ಪಠಿಸುವವರಿಗೆ ಮಾತ್ರವಲ್ಲದೇ, ಅವರ ಸುತ್ತಮುತ್ತಲಿನವರೂ ಓಂಕಾರದ ಕಂಪನವನ್ನು ಅನುಭವಿಸುವುದರಿಂದ ಇತರರಿಗೂ ಉಪಯೋಗವಾಗುವುದು
- ಓಂಕಾರವನ್ನು ಪಠಿಸುವುದರಿಂದ ನಿಮ್ಮ ಭಾವನೆಗಳ ಮೇಲೆ ನಿಯಂತ್ರಣವನ್ನು ಸಾಧಿಸಬಹುದು