Bhagavad Gita In Kannada: ಭಗವದ್ಗೀತೆಯು ನಮ್ಮ ಜೀವನವನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗಲು ಸಹಾಯ ಮಾಡುವ ಅಸ್ತ್ರವಾಗಿದೆ. ಭಗವದ್ಗೀತೆಯ ಯಾವೆಲ್ಲಾ ತತ್ವಗಳನ್ನು ನಾವು ಅನುಸರಿಸುವುದರಿಂದ ನಮ್ಮ ಜೀವನ ಸುಖವಾಗಿರುತ್ತದೆ.? ಭಗವದ್ಗೀತೆಯ ಈ ತತ್ವಗಳನ್ನು ತಪ್ಪದೇ ಪಾಲಿಸಿ..
ಭಗವದ್ಗೀತೆ ಕೇವಲ ಧಾರ್ಮಿಕ ಪರಿಕಲ್ಪನೆಗಳನ್ನು ಬೋಧಿಸುವುದಿಲ್ಲ, ಆದರೆ ಇದು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಧನಾತ್ಮಕ ಬದಲಾವಣೆಯನ್ನು ಉತ್ತೇಜಿಸುತ್ತದೆ. ಇದು ಜ್ಞಾನ ಮತ್ತು ಚಿಂತನೆಯ ವಿಶಿಷ್ಟ ನಿಧಿಯಾಗಿದ್ದು, ಇದು ಮನುಷ್ಯನ ಜೀವನದ ಪ್ರತಿ ಕ್ಷಣದಲ್ಲಿ ಮಾರ್ಗದರ್ಶಕನಾಗಿ ಕಾರ್ಯನಿರ್ವಹಿಸುತ್ತದೆ. ನಾವು ನಮ್ಮ ಜೀವನವನ್ನು ಸರಿಯಾದ ಮಾರ್ಗದಲ್ಲಿ ಬದಲಾಯಿಸಿಕೊಳ್ಳಬೇಕಾದರೆ ಭಗವದ್ಗೀತೆಯ ಯಾವೆಲ್ಲಾ ತತ್ವಗಳನ್ನು ನಾವು ಅಳವಡಿಸಿಕೊಳ್ಳಬೇಕು ನೋಡಿ..
ಧರ್ಮದ ಅರ್ಥವನ್ನು ಅರ್ಥಮಾಡಿಕೊಳ್ಳಲು ಭಗವದ್ಗೀತೆಯು ಒಂದು ಪ್ರಮುಖ ಪಾಠವನ್ನು ನೀಡುತ್ತದೆ. ಧರ್ಮ ಎಂದರೇನು.? ಧರ್ಮಕ್ಕೆ ನಾವು ಪ್ರಾಮುಖ್ಯತೆಯನ್ನೇಕೆ ನೀಡಬೇಕು ಎಂಬುದರ ಕುರಿತು ಭಗವದ್ಗೀತೆಯು ಪಾಠವನ್ನು ಕಲಿಸುತ್ತದೆ. ಈ ಕಾರಣಕ್ಕಾಗಿ ನಾವು ಭಗವದ್ಗೀತೆ ಧರ್ಮಕ್ಕೆ ನೀಡಿರುವ ಸ್ಥಾನವನ್ನು ಅರ್ಥಮಾಡಿಕೊಳ್ಳಬೇಕು. ಯಾವ ವ್ಯಕ್ತಿ ಧರ್ಮದ ಬಗ್ಗೆ ತಿಳಿದುಕೊಳ್ಳಬೇಕೆಂದು ಬಯಸುತ್ತಾನೋ ಅವನು ಭಗವದ್ಗೀತೆಯನ್ನು ಓದಬೇಕು.
ಕರ್ಮ ಯೋಗ
ಇದು ಕ್ರಿಯೆಗಳನ್ನು ನಿಸ್ವಾರ್ಥವಾಗಿ ಮಾಡುವುದು ಮತ್ತು ಜೀವನದಲ್ಲಿ ಶ್ರೇಷ್ಠತೆಯನ್ನು ಸಾಧಿಸುವುದು ಹೇಗೆ ಎಂಬುದನ್ನು ಹೇಳುತ್ತದೆ. ಯಾವುದೇ ರೀತಿಯಾದ ಪ್ರತಿಫಲವನ್ನು ಬಯಸದೇ ನಾವು ಕೆಲಸವನ್ನು ಮಾಡಬೇಕೆಂದು ಭಗವದ್ಗೀತೆಯಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ಕೆಲಸವನ್ನು ನಾವು ಮಾಡಿದರೆ ಅದರ ಫಲವನ್ನು ದೇವರಿಗೆ ಬಿಡಬೇಕು. ಸ್ವಾರ್ಥತೆ ಇಲ್ಲದೆ, ನಿರೀಲಕ್ಷೆಯಿಲ್ಲದೆ ನಾವು ಕೆಲಸವನ್ನು ಮಾಡಬೇಕು.
ಭಕ್ತಿ ಯೋಗ
ಭಗವದ್ಗೀತೆಯು ಭಕ್ತಿ ಯೋಗದ ಮೂಲಕ ದೇವರ ಕಡೆಗೆ ಭಕ್ತಿಯ ಮಹತ್ವವನ್ನು ವಿವರಿಸುತ್ತದೆ. ನಮ್ಮನ್ನು ನಾವು ದೇವರಿಗೆ ಯಾವ ಮೂರ್ಗದ ಮೂಲಕ ಸಮರ್ಪಿಸಿಕೊಳ್ಳಬಹುದು ಎಂಬುದನ್ನು ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ್ದನು. ದೇವರ ಅನುಗ್ರಹಕ್ಕಾಗಿ ಅಥವಾ ದೇವರ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ಭಕ್ತಿಯ ಮಾರ್ಗವನ್ನು ಪಾಲಿಸಬೇಕೆಂದು ಹೇಳಲಾಗಿದೆ.
ಜ್ಞಾನ ಯೋಗ
ಜ್ಞಾನೋದಯವನ್ನು ಹೇಗೆ ಸಾಧಿಸಬಹುದು ಮತ್ತು ಜೀವನವನ್ನು ಹೇಗೆ ಅರ್ಥಮಾಡಿಕೊಳ್ಳಬಹುದು ಎಂಬುದನ್ನು ಭಗವದ್ಗೀತೆಯು ನಮಗೆ ವಿವರಿಸುತ್ತದೆ. ಜ್ಞಾನದ ಮಾರ್ಗದಲ್ಲಿ ನಡೆದಾಗ ಮಾತ್ರ ನಮ್ಮ ಕಾರ್ಯದಲ್ಲಿ ಯಶಸ್ಸು ಸಾಧ್ಯವಾಗಿರುತ್ತದೆ. ಜ್ಞಾನಿಯಾದವನಿಗೆ ಮಾತ್ರ ತನ್ನ ಜೀವನವನ್ನು ಹೇಗೆ ನಡೆಸಬೇಕೆಂಬುದು ಸರಿಯಾಇ ತಿಳಿದಿರುತ್ತದೆ.
ಮೋಕ್ಷದ ಮಾರ್ಗ
ಭಗವದ್ಗೀತೆ ಆಧ್ಯಾತ್ಮಿಕ ಉನ್ನತಿಗಾಗಿ ಮೋಕ್ಷದ ನಿಜವಾದ ಮಾರ್ಗವನ್ನು ಹೇಳುತ್ತದೆ. ಶ್ರೀಕೃಷ್ಣನು ಇದರಲ್ಲಿ ಸಾವು ಎಂಬುದು ಖಚಿತ. ಆದರೆ ಮೋಕ್ಷ ಎಂಬುದು ನಮ್ಮ ಅವರವರ ಭಾವಕ್ಕೆ ಸೀಮಿತವಾಗಿದ್ದು ಎಂದು ಹೇಳಿದ್ದಾರೆ. ಆಧ್ಯಾತ್ಮದ ಮೂಲಕ ನಾವು ಮೋಕ್ಷವನ್ನು ಕಂಡುಕೊಳ್ಳಬಹುದೆಂದು ಶ್ರೀಕೃಷ್ಣನು ಹೇಳಿದ್ದಾನೆ. ಈ ಕಾರಣಕ್ಕಾಗಿ ಆಧ್ಯಾತ್ಮಿಕತೆಯನ್ನು ನಾವು ಅಭ್ಯಾಸ ಮಾಡಬೇಕು.