ಕಳಪೆ ಮಟ್ಟದ ಶಾಂಪೂ, ಕಂಡೀಷನರ್, ಕೇಶ ಬಣ್ಣ ಹಾಗೂ ಅಧಿಕ ಸಮಯಗಳ ಕಾಲ ಎ.ಸಿ ಕೆಳಗೆ ಕುಳಿತು ಕೆಲಸ ಮಾಡುವುದರಿಂದಲೂ ಕೂದಲು ಬಹುಬೇಗ ತನ್ನ ಆರೋಗ್ಯ ಹಾಗೂ ಬಣ್ಣವನ್ನು ಕಳೆದುಕೊಳ್ಳುತ್ತದೆ. ಕೂದಲ ಬಣ್ಣವನ್ನು ಬದಲಿಸಿಕೊಳ್ಳುವುದು ಇಂದಿನ ದಿನದಲ್ಲಿ ಒಂದು ಫ್ಯಾಷನ್ ಆಗಿರಬಹುದು. ಆದರೆ ಕಪ್ಪು ಕೂದಲುಗಳ ಮಧ್ಯೆ ಇಣುಕುವ ಬಿಳಿ ಕೂದಲುಗಳು ನಮ್ಮ ಆಕರ್ಷಣೆಯನ್ನು ಕುಂದಿಸುತ್ತವೆ. ಜೊತೆಗೆ ವಯಸ್ಸಾದ ಚಿಹ್ನೆಯನ್ನು ನೀಡುವುದು. ಹಾಗಾಗಿ ಅದರ ನಿವಾರಣೆಗೆ ಸಾಕಷ್ಟು ಚಿಕಿತ್ಸೆ ಹಾಗೂ ಪರಿಹಾರ ಕ್ರಮವನ್ನು ಕೈಗೊಳ್ಳಲು ಜನ ಮುಂದಾಗುವುದು ಉಂಟು.
ಇಂತಹ ಒಂದು ಸಮಸ್ಯೆಗೆ ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಬದಲು ನೈಸರ್ಗಿಕ ಉತ್ಪನ್ನಗಳನ್ನು ಬಳಸಬಹುದು. ಅವುಗಳಿಂದ ಉತ್ತಮ ಪರಿಹಾರ ಕಂಡುಕೊಳ್ಳಬಹುದು. ನೈಸರ್ಗಿಕ ಉತ್ಪನ್ನಗಳಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗದು. ಜೊತೆಗೆ ಬಿಳಿಕೂದಲುಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತವೆ. ಅಂತಹ ಅದ್ಭುತ ನೈಸರ್ಗಿಕ ಉತ್ಪನ್ನಗಳು ನಿಮಗೆ ಅಚ್ಚರಿಯನ್ನು ಮೂಡಿಸಬಲ್ಲವು. ಹಾಗಾದರೆ ಅವು ಯಾವವು? ಅವುಗಳ ಬಳಕೆ ಹೇಗೆ ಎನ್ನುವುದನ್ನು ತಿಳಿಯೋಣ...
ನೆಲ್ಲಿಕಾಯಿ
ವಿಟಮಿನ್ ಸಿ ಅನ್ನು ಸಮೃದ್ಧವಾಗಿ ಪಡೆದುಕೊಂಡಿರುವ ನೈಸರ್ಗಿಕ ಉತ್ಪನ್ನ. ಇದು ಕೂದಲ ಆರೈಕೆಯಲ್ಲಿ ಅತ್ಯುತ್ತಮ ಪಾತ್ರವಹಿಸುತ್ತದೆ. ಇದರಿಂದ ಕೂದಲ ಆರೋಗ್ಯವನ್ನು ಸುಲಭವಾಗಿ ಕಾಪಾಡಬಹುದು. ಕೆಲವು ವಿಧಾನಗಳನ್ನು ಅನುಸರಿಸಿದರೆ ನಿಮ್ಮ ಬಿಳಿಕೂದಲು ಸಮಸ್ಯೆ ನಿವಾರಣೆಯಾಗುವುದು.
*ಅಗತ್ಯ ಸಾಮಾಗ್ರಿಗಳು:
* ಒಂದು ಕಪ್ ನೆಲ್ಲಿಕಾಯಿ ಚೂರು.
* ಎರಡು ಕಪ್ ತೆಂಗಿನ ಎಣ್ಣೆ.
ಬಳಕೆಯ ವಿಧಾನ
*ಒಂದು ಕಪ್ ನೆಲ್ಲಿಕಾಯಿ ಚೂರು/ ಪೀಸ್ ಗಳನ್ನು ತೆಗೆದುಕೊಳ್ಳಿ.
*ಎರಡು ಕಪ್ ಅಷ್ಟು ತೆಂಗಿನ ಎಣ್ಣೆಗೆ ಸೆರಿಸಿ, ಚೆನ್ನಾಗಿ ಕುದಿಸಿ.
*ಬಳಿಕ ಎಣ್ಣೆಯನ್ನು ಆರಲು ಬಿಡಿ.
*ತಣ್ಣಗಾದ ಎಣ್ಣೆಯನ್ನು ನೆತ್ತಿ ಹಾಗೂ ಕೂದಲುಗಳ ಬುಡಕ್ಕೆ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ.
*ಈ ವಿಧಾನವನ್ನು ಹದಿನೈದು ನಿಗಳ ಕಾಲ ನಿರಂತರವಾಗಿ ಅನುಸರಿಸಿದರೆ ಬಿಳಿ ಕೂದಲು ಹಾಗೂ ಬೂದು ಕೂದಲುಗಳ ಸಮಸ್ಯೆ ನಿವಾರಣೆಯಾಗುವುದು.
ಶುಂಠಿ ರಸ
ಶುಂಠಿ ಅದ್ಭುತ ಔಷಧೀಯ ಗುಣವನ್ನು ಒಳಗೊಂಡಿದೆ. ಇದರ ಬಳಕೆಯಿಂದ ಕೂದಲ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದು.
ಬೇಕಾಗುವ ಸಾಮಾಗ್ರಿ:
* ಶುಂಠಿ.
* ಜೇನುತುಪ್ಪ.
ಬಳಸುವ ವಿಧಾನ
*ಶುಂಠಿಯನ್ನು ಜಜ್ಜಿ ಅದರ ರಸವನ್ನು ತೆಗೆದುಕೊಳ್ಳಿ.
*ಒಂದು ಟೇಬಲ್ ಚಮಚ ಶುಂಠಿ ರಸಕ್ಕೆ ಅದೇ ಪ್ರಮಾಣದಲ್ಲಿ ಜೇನುತುಪ್ಪವನ್ನು ಬೆರೆಸಿ, ಸೇವಿಸಿ.
*ನಿತ್ಯವೂ ಈ ಮಿಶ್ರಣವನ್ನು ಸೇವಿಸುವುದರಿಂದ ಬಿಳಿ ಕೂದಲ ಸಮಸ್ಯೆ ಸೇರಿದಂತೆ ಇತರ ಕೇಶರಾಶಿಯ ಸಮಸ್ಯೆಗಳು ಬಗೆಹರಿಯುವವು.
ತೆಂಗಿನ ಎಣ್ಣೆ
ತೆಂಗಿನೆಣ್ಣೆ ಕೂದಲ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಕಪ್ಪು ಮತ್ತು ಹೊಳೆಯುವ ಕೂದಲು ನಿಮ್ಮದಾಗಬೇಕೆಂದರೆ ತೆಂಗಿನ ಎಣ್ಣೆಯ ಆರೈಕೆ ಮಾಡುವುದು ಉತ್ತಮ.
ಬೇಕಾಗುವ ಸಾಮಾಗ್ರಿಗಳು:
* ತೆಂಗಿನ ಎಣ್ಣೆ
* ನಿಂಬೆ ರಸ.
ಬಳಸುವ ವಿಧಾನ
*ಒಂದು ಬೌಲ್ನಲ್ಲಿ 1 ಟೇಬಲ್ ಚಮಚ ತೆಂಗಿನೆಣ್ಣೆ ತೆಗೆದುಕೊಳ್ಳಿ.
*ಅದಕ್ಕೆ ಅರ್ಧ ನಿಂಬೆ ಕಡಿಯ ರಸವನ್ನು ಸೇರಿಸಿ.
*ಚೆನ್ನಾಗಿ ಮಿಶ್ರಗೊಳಿಸಿ, ನೆತ್ತಿ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.
*20-30 ನಿಮಿಷಗಳ ಕಾಲ ಬಿಟ್ಟು, ಮೃದುವಾದ ಶಾಂಪೂವಿನಿಂದ ಸ್ವಚ್ಛಗೊಳಿಸಿ.
*ಉತ್ತಮ ಪರಿಹಾರಕ್ಕೆ ವಾರಕ್ಕೊಮ್ಮೆ ಈ ಕ್ರಮವನ್ನು ಅನುಸರಿಸಿ.
ಕರಿಬೇವು
ಕರಿಬೇವು ಅದ್ಭುತ ಔಷಧೀಯ ಗುಣವನ್ನು ಒಳಗೊಂಡಿದೆ. ಇದು ಕೂದಲು ಉದುರುವುದು ಹಾಗೂ ಅದರ ಬಣ್ಣಗಳ ಸಂರಕ್ಷಣೆ ಮಾಡುವುದು.
ಬೇಕಾಗುವ ಸಾಮಾಗ್ರಿ:
* ಕರಿಬೇವು.
* ತೆಂಗಿನ ಎಣ್ಣೆ
* ಮೊಸರು/ಮಜ್ಜಿಗೆ.
ಬಳಸುವ ವಿಧಾನ
*ಒಂದು ಬೌಲ್ ತೆಂಗಿನ ಎಣ್ಣೆಗೆ ಒಂದು ಹಿಡಿ ಕರಿಬೇವಿನ ಎಲೆಯನ್ನು ಸೇರಿಸಿ.
*ಉರಿಯಲ್ಲಿ ಇಟ್ಟು ಚೆನ್ನಾಗಿ ಕುದಿಸಿ.
*ನಂತರ ಎಣ್ಣೆಯನ್ನು ಆರಲು ಬಿಡಿ.
*ಆರಿದ ಎಣ್ಣೆಯನ್ನು ನಿತ್ಯವೂ ಕೂದಲಿಗೆ ಅನ್ವಯಿಸಬಹುದು.
*ತಲೆ ಸ್ನಾನ ಮಾಡುವ ಮುನ್ನ ಈ ಎಣ್ಣೆಗೆ ಮೊಸರು ಅಥವಾ ಮಜ್ಜಿಗೆಯನ್ನು ಮಿಶ್ರಮಾಡಿ, ತಲೆಗೆ ಅನ್ವಯಿಸಬಹುದು.
*ಇದರಿಂದಲೂ ಕೂದಲು ಹೊಳಪು ಹಾಗೂ ಕಪ್ಪು ಬಣ್ಣವನ್ನು ಪಡೆದುಕೊಳ್ಳುವುದು.
ಮೆಹೆಂದಿ
ಬಹಳ ತಂಪು ಹಾಗೂ ಸುಂದರ ಬಣ್ಣವನ್ನು ನೀಡುವ ನೈಸರ್ಗಿಕ ಉತ್ಪನ್ನ ಮೆಹೆಂದಿ. ಇದು ತಲೆಯಲ್ಲಿ ಇರುವ ಬಿಳಿಕೂದಲ ಬಣ್ಣವನ್ನು ಬದಲಿಸುವುದರ ಜೊತೆಗೆ ಬಿಳಿ ಕೂದಲು ಉಂಟಾಗುವುದನ್ನು ತಡೆಯುವುದು.
ಬೇಕಾಗುವ ಸಾಮಾಗ್ರಿಗಳು:
* 2 ಟೀ ಚಮಚ ಮೆಹೆಂದಿ/ಗೋರಂಟಿ ಪುಡಿ.
* 1 ಟೀ ಚಮಚ ಮೆಂತ್ಯ ಪೇಸ್ಟ್.
* 2 ಟೀ ಚಮಚ ತುಳಸಿ ಎಲೆಯ ಪೇಸ್ಟ್.
* 3 ಟೀ ಚಮಚ ಕಾಫಿ ಪುಡಿ.
* 3 ಟೀ ಚಮಚ ಪುದೀನ ರಸ.
* 1 ಟೀ ಚಮಚ ಮೊಸರು.
ಬಳಸುವ ವಿಧಾನ
*ಒಂದು ಬೌಲ್ ಅಲ್ಲಿ ಮೆಹೆಂದಿ ಪುಡಿ, ಮೆಂತ್ಯ ಪೇಸ್ಟ್, ತುಳಸಿ ಪೇಸ್ಟ್, ಕಾಫಿ ಪುಡಿ, ಪುದೀನ ರಸ ಹಾಗೂ ಮೊಸರನ್ನು ಸೇರಿಸಿ, ಮಿಶ್ರಗೊಳಿಸಿ.
*ಮಿಶ್ರಣವನ್ನು ನೆತ್ತಿ ಹಾಗೂ ಕೂದಲ ಬುಡಕ್ಕೆ ಅನ್ವಯಿಸಿ.
*ಅರ್ಧ ಗಂಟೆಯ ಬಳಿಕ ಮೃದು ನೀರಿನಲ್ಲಿ ತೊಳೆಯಿರಿ.
*ವಾರಕ್ಕೊಮ್ಮೆ ಈ ಕ್ರಮ ಅನುಸರಿಸುವುದರಿಂದ ಕೂದಲಿಗೆ ಅಗತ್ಯವಾದ ಎಲ್ಲಾ ಪೋಷಕಾಂಶ ಗಳು ದೊರೆಯುವುದು. ಜೊತೆಗೆ ಕೂದಲು ಕಪ್ಪು ಬಣ್ಣವನ್ನು ಪಡೆದುಕೊಳ್ಳುವುದು.
ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...
ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...
-
ಈ ಯೋಗಾಸನಗಳನ್ನು ಮಾಡಿದರೆ, ಆಗ ಕೈಯಲ್ಲಿ ಕೆಟ್ಟದಾಗಿ ಬೆಳೆದಿರುವ ಕೊಬ್ಬನ್ನು ಸರಿಯಾದ ರೀತಿಯಲ್ಲಿ ಕರಗಿಸಬಹುದು. ಕೈಗಳ ತೋಳಿನ ಕೊಬ್ಬನ್ನು ಕರಗಿಸುವ ಯೋಗ ಭಂಗಿಗಳು ದೇಹ...
-
ತತ್ಸಮ-ತದ್ಭವ [ಕೃಪೆ-ಕಣಜ.ಕಾಂ ] (ಸೂಚನೆ:- ನುಡಿ ಅಥವಾ ಬರಹ ಆನ್ ಮಾಡಿಕೊಂಡು ಯ...
-
ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನಬೇಕೇ ಅಥವಾ ಬೇಡವೇ? ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಇದು ಅತ್ಯುತ್ತಮ ಮೂಲವಾಗಿದ್ದರೂ, ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್...
-
ಹೊಟ್ಟೆಯ ಕೊಬ್ಬಿನಿಂದ ಬಳಲುತ್ತಿದ್ದೀರಾ? ಅದನ್ನು ಕಳೆದುಕೊಳ್ಳಲು ಈ ಸರಳ ಸಲಹೆಯನ್ನು ಅನುಸರಿಸಿ ಹೊಟ್ಟೆಯ ಸುತ್ತ ಹೆಚ್ಚಿನ ಕೊಬ್ಬು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ...
-
Goddess Lakshmi: ಶ್ರೀಮಂತರಾಗಬೇಕಾದರೆ ಲಕ್ಷ್ಮಿ ದೇವಿ ನೆಲೆಸಿರುವ ಈ ಸ್ಥಳಗಳಿಗೆ ಹೋಗಿ.! Lakshmi Blessings: ಲಕ್ಷ್ಮಿ ದೇವಿಯು ಯಾವ ಸ್ಥಳಗಳಲ್ಲಿ ನೆಲೆಸಿರುತ್ತ...
-
ಶ್ರೀವಿಜಯನು, ಕನ್ನಡದ ಮೊಟ್ಟ ಮೊದಲ ಆಧಾರಗ್ರಂಥವಾಗಿರುವ 'ಕವಿರಾಜಮಾರ್ಗ'ದ ಕರ್ತೃವಾಗಿದ್ದಾನೆ. ಕವಿರಾಜಮಾರ್ಗದ ಕರ್ತೃ ಯಾರೆಂಬ ಚರ್ಚೆಯು ನಡೆಯುತ್ತಿತ್ತು. ಇತ್ತ...
-
Fitness Tipss: ತೂಕ ಇಳಿಸಿಕೊಳ್ಳಲು ಸರ್ಕಸ್ ಮಾಡ್ಬೇಡಿ; ರಾತ್ರಿ ಹೊತ್ತು ಈ ಪಾನೀಯಗಳನ್ನು ಕುಡಿಯಿರಿ ಸಾಕು! ಇಂತಹ ವೇಳೆ ನಾವು ದೈನಂದಿನ ಜೀವನದಲ್ಲಿ ಕೆಲವು ತಪ್ಪುಗಳನ...
-
ತಲಕಾಡನ್ನು ಆವರಿಸಿರುವ ಮರಳಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ, ಇದು ಇಂದು ಕರೆಯಲ್ಪಡುವ ಹಲವಾರು ಪ್ರದೇಶಗಳನ್ನು ಆಳಿದ ಪ್ರಬಲ ಗಂಗರ ಒಂದು ಕಾಲದಲ್ಲಿ ಭವ್ಯವಾದ ರಾಜಧ...
-
ಭೂಮಿತಾಯಿಯಾ ಚೊಚ್ಚಿಲ ಮಗ |Bhumitayiya Chocchila Maga|Da.Ra.Bendre “ಭೂಮಿತಾಯಿಯ ಚೊಚ್ಚಿಲಮಗ”, ದ.ರಾ.ಬೇಂದ್ರೆಯವರು ಬರೆದ ಕನ್ನಡ ಕವನ. “ಭೂಮಿತಾಯಿಯ ಚೊಚ್ಚಿಲಮಗ”...
-
ಈ ಋತುವಿನಲ್ಲಿ ಕೀಲು ನೋವುಗಳನ್ನು ಪರಿಣಾಮಕಾರಿಯಾಗಿ ನಿವಾರಿಸಲು 5 ನೈಸರ್ಗಿಕ ಮಾರ್ಗಗಳು! ಕೀಲುಗಳು, ನಮ್ಮ ದೇಹದಲ್ಲಿನ ಮೂಳೆಗಳ ಸಭೆಯ ಬಿಂದುಗಳು, ಅವುಗಳ ವಿವಿಧ ಆಕಾರಗ...