ಎದೆಯಲ್ಲಿ ಕಫ ಕಟ್ಟಿದ್ದೆಯಾ! ಹಾಗಿದ್ದರೆ ಇಲ್ಲಿದೆ ನೋಡಿ! Cough problem reducing ...


Cough Problem: ಬೇಸಿಗೆ ಶುರುವಾಗುವ ಮುನ್ನ ಕಾಡುವ ಕಫದ ಸಮಸ್ಯೆಗೆ ಇಲ್ಲಿದೆ ಮನೆಮದ್ದು!



ಚಳಿಗಾಲದ ಸಮಯಕ್ಕಿಂತ, ಚಳಿಗಾಲದ ದಿನಗಳು ಮುಗಿದು ಇನ್ನೇನು ಬೇಸಿಗೆಯ ದಿನಗಳು ಶುರುವಾಗುತ್ತವೆ ಎನ್ನುವ ಸಮಯದಲ್ಲಿ ಕಫದ ಸಮಸ್ಯೆ ಕೆಲವರನ್ನು ಬಾಧಿಸುತ್ತದೆ. ಇದು ಸಾಕಷ್ಟು ಸಮಸ್ಯೆ ಉಂಟು ಮಾಡುತ್ತದೆ. ಹಾಗಾಗಿ ಚಳಿಗಾಲದ ಋತು ಕೊನೆಗೊಳ್ಳುವ ದಿನಗಳಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಚಳಿಗಾಲದಲ್ಲಿ (Winter) ಶೀತ, ಜ್ವರ ಮತ್ತು ಕಫದ ಸಮಸ್ಯೆ (Cough Problem) ಸಾಮಾನ್ಯವಾಗಿರುತ್ತದೆ. ಚಳಿಗಾಲ ಇನ್ನೇನು ಹೋಗುತ್ತಿದೆ ಎನ್ನುವಾಗಲೂ ಕಫದ ಸಮಸ್ಯೆ ಕಾಡುತ್ತದೆ. ಹೀಗೆ ಚಳಿಗಾಲ ಹೋಗುವ ಸಮಯದಲ್ಲಿ ಶುರುವಾಗುವ ಕಫದ ಸಮಸ್ಯೆ ಬಗ್ಗೆ ಸೂಕ್ತ ಕಾಳಜಿ (Care) ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಇದು ಹಲವು ಆರೋಗ್ಯ (Health) ಸಮಸ್ಯೆ ಹುಟ್ಟು ಹಾಕುವಂತೆ ಮಾಡುತ್ತದೆ. ಕಫದ ಸಮಸ್ಯೆ ತುಂಬಾ ಕಿರಿಕಿರಿ ಉಂಟು ಮಾಡುತ್ತದೆ. ಎದೆಯ ಭಾಗದಲ್ಲಿ ಏನೋ ಸಿಲುಕಿದಂತೆ ಭಾಸವಾಗುತ್ತದೆ. ಗಂಟಲು ನೋವು (Throat Pain) ಕಾಡುತ್ತದೆ. ಕೆಲವೊಮ್ಮೆ ಕಫ ಸಹಿತ ಕೆಮ್ಮಿನ ಸಮಸ್ಯೆ ಸಹ ಬಾಧಿಸುತ್ತದೆ. ಮೂಗು ಸೋರುವಿಕೆಯು ಆರೋಗ್ಯ ಸಮಸ್ಯೆ ಹೆಚ್ಚು ಮಾಡುತ್ತದೆ.


ಚಳಿಗಾಲ ಹೋಗುವ ಸಮಯದಲ್ಲಿ ಬಾಧಿಸುವ ಕಫದ ಸಮಸ್ಯೆ

ಚಳಿಗಾಲದ ಸಮಯಕ್ಕಿಂತ, ಚಳಿಗಾಲದ ದಿನಗಳು ಮುಗಿದು ಇನ್ನೇನು ಬೇಸಿಗೆಯ ದಿನಗಳು ಶುರುವಾಗುತ್ತವೆ ಎನ್ನುವ ಸಮಯದಲ್ಲಿ ಕಫದ ಸಮಸ್ಯೆ ಕೆಲವರನ್ನು ಬಾಧಿಸುತ್ತದೆ. ಇದು ಸಾಕಷ್ಟು ಸಮಸ್ಯೆ ಉಂಟು ಮಾಡುತ್ತದೆ. ಹಾಗಾಗಿ ಚಳಿಗಾಲದ ಋತು ಕೊನೆಗೊಳ್ಳುವ ದಿನಗಳಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.


ಕಫದ ಸಮಸ್ಯೆ ಬಗ್ಗೆ ಆಯುರ್ವೇದ ಸೂಕ್ತ ಪರಿಹಾರ ನೀಡುತ್ತದೆ ಎಂಬ ನಂಬಿಕೆಯಿದೆ. ಕಫದ ಸಮಸ್ಯೆ ಬಗ್ಗೆ ಆಯುರ್ವೇದ ವೈದ್ಯರು ಏನ್ ಹೇಳ್ತಾರೆ ಎಂದು ಇಲ್ಲಿ ನೋಡೋಣ. ಈ ಋತುವಿನಲ್ಲಿ ವಾತಾವರಣದಲ್ಲಿ ಉಂಟಾಗುವ ಬದಲಾವಣೆ ಹಾಗೂ ದೇಹದ ಅಸಮತೋಲನದಿಂದ ದೇಹದಲ್ಲಿ ಕಫ ದೋಷ ಸಮಸ್ಯೆ ಹೆಚ್ಚುತ್ತದೆ.


ಇದರಿಂದಾಗಿ ದೇಹದಲ್ಲಿ ಯಾವುದೇ ಉತ್ಸಾಹ ಇರುವುದಿಲ್ಲ. ಭಾರವಾದ ಭಾವನೆ, ಆಲಸ್ಯೆ ಅನುಭವಿಸುವುದು ಸಾಮಾನ್ಯ ಆಗಿದೆ ಅಂತಾರೆ ತಜ್ಞರು.

ಕಫ ದೋಷದಿಂದ ಉಂಟಾಗುವ ಅಸಮತೋಲನದ ಲಕ್ಷಣಗಳು ಯಾವವು?

ಆಯುರ್ವೇದ ತಜ್ಞೆ ಡಾ.ವರಲಕ್ಷ್ಮಿ ಅವರು ಹೇಳುವ ಪ್ರಕಾರ, ಕಫ ದೋಷ ಹೆಚ್ಚಾದರೆ ಕಾಯಿಲೆ ಬಂದಿರುವ ವ್ಯಕ್ತಿಯು ದೇಹದಲ್ಲಿ ಭಾರ ಮತ್ತು ಆಲಸ್ಯ ಅನುಭವಿಸುತ್ತಾನೆ. ಹಾಗೂ ಇಡೀ ದಿನ ಯಾವುದೇ ಕೆಲಸ ಮಾಡಲು ಉತ್ಸಾಹವಿರದೇ,

ದೈನಂದಿನ ಕೆಲಸವನ್ನೂ ಸಹ ಹಾಳು ಮಾಡಿಕೊಳ್ಳುತ್ತಾನೆ. ಹೀಗಾಗಿ ಈ ಕಫದ ಸಮಸ್ಯೆ ತಪ್ಪಿಸಲು ನೀವು ಕೆಲವು ಅಭ್ಯಾಸಗಳನ್ನು ಮಾಡಿದರೆ ಅದು ನಿಮ್ಮನ್ನು ಸಮಸ್ಯೆಯಿಂದ ಹೊರಗೆ ಬರುವಂತೆ ಮಾಡುತ್ತದೆ.
ಜಾಹೀರಾತು


ಪ್ರತಿದಿನ ಉತ್ತರಾನಾ ಸ್ನಾನ ಮಾಡಿ

ಆಯುರ್ವೇದ ವೈದ್ಯರ ಪ್ರಕಾರ, ತ್ರಿಫಲದಂತಹ ಗಿಡಮೂಲಿಕೆಯ ಪುಡಿಯನ್ನು ಸ್ನಾನಕ್ಕೆ ಬಳಕೆ ಮಾಡಬೇಕು. ಸ್ನಾನ ಮಾಡುವಾಗ ಈ ಪುಡಿಯನ್ನು ಚರ್ಮಕ್ಕೆ ಅನ್ವಯಿಸಿ. ಇದು ದೇಹದಿಂದ ಹೆಚ್ಚುವರಿ ದ್ರವದ ಅಂಶ ತೆಗೆದು ಹಾಕಲು ಸಹಾಯ ಮಾಡುತ್ತದೆ. ಮತ್ತು ದೇಹದ ಭಾರ ನಿವಾರಣೆ ಮಾಡುತ್ತದೆ.

ವಾರಕ್ಕೊಮ್ಮೆ ಉಪವಾಸ

ಕಫ ದೋಷ ಸರಿ ಮಾಡಲು ಆಯುರ್ವೇದದಲ್ಲಿ ಉಪವಾಸ ಮಾಡುವುದನ್ನು ಅತ್ಯಂತ ಪ್ರಯೋಜನಕಾರಿ ಎಂದು ಹೇಳಲಾಗಿದೆ. ಈ ಚಿಕಿತ್ಸೆಯಲ್ಲಿ ನೀವು ಭಾರವಾದ ಆಹಾರ ಸೇವನೆ ತ್ಯಜಿಸಬೇಕು.


ಹಾಗೂ ಲಘು ಆಹಾರ ಸೇವನೆ ಮಾಡಬೇಕು. ಅಲ್ಲದೇ ದೇಹವನ್ನು ಹಗುರಗೊಳಿಸಲು ವಾರಕ್ಕೊಮ್ಮೆ ಉಪವಾಸ ಮಾಡುವುದು ತುಂಬಾ ಪ್ರಯೋಜನ ನೀಡುತ್ತದೆ.
ಜಾಹೀರಾತು


ಕಹಿ ಆಹಾರ ಪದಾರ್ಥಗಳನ್ನು ಊಟದಲ್ಲಿ ಸೇರಿಸಿ

ಊಟದಲ್ಲಿ ಕ್ರಮೇಣ ಕಹಿ ರುಚಿ ಹೊಂದಿರುವ ತರಕಾರಿ ಸೇವನೆ ಮಾಡಿ. ಇಂತಹ ಆಹಾರಗಳು ಹಲವು ಆರೋಗ್ಯ ಸಮಸ್ಯೆ ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದು ರುಚಿಯಲ್ಲಿ ಸ್ವಲ್ಪ ಕಹಿ ಮತ್ತು ವಾಸನೆಯಲ್ಲಿ ಕಟು ಆಗಿದೆ.

ಈ ಆಹಾರವು ಕಫ ದೋಷ ಸಮತೋಲನ ಆಗಲು ಸಹಾಯ ಮಾಡುತ್ತದೆ. ಜೊತೆಗೆ ಸಿಹಿ ಮತ್ತು ಹುಳಿ ಆಹಾರ ಸೇವನೆ ಕಡಿಮೆ ಮಾಡಿ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...