ಬಾಯಿ ಹುಣ್ಣು ಶಮನಕ್ಕೆ ಕೊಬ್ಬರಿ ಹಾಲಿನಿಂದ ಅದ್ಭುತ ಮನೆಮದ್ದು!!

ಬಾಯಿ ಹುಣ್ಣು ಶಮನಕ್ಕೆ ಏನೆಲ್ಲ ಮಾಡಬಹುದು ಮತ್ತು ಇದನ್ನು ಮನೆಮದ್ದು ಬಳಸಿ ಹೇಗೆ ಪರಿಹರಿಸಿಕೊಳ್ಳಬಹುದು ಅನ್ನೋದನ್ನ ನಾವು ಈ ದಿನದ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಸ್ನೇಹಿತರೇ ತಪ್ಪದೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ಮತ್ತು ಇಂತಹ ಆರೋಗ್ಯ ಮಾಹಿತಿಯನ್ನು ತಪ್ಪದೇ ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ ಮತ್ತು ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ.

ಬಾಯಿ ಹುಣ್ಣಿನ ಸಮಸ್ಯೆ ಇದು ಎಲ್ಲರಲ್ಲಿಯೂ ಕೂಡ ಕಾಡುವಂತಹ ಒಂದು ಸಮಸ್ಯೆ. ಕೆಲವರಿಗೆ ಈ ಸಮಸ್ಯೆ ಯಾವಾಗಲೂ ಕೂಡ ಕಾಡುತ್ತಲೇ ಇರುತ್ತದೆ. ಈ ಬಾಯಿ ಹುಣ್ಣಿನ ಸಮಸ್ಯೆ ಆದಾಗ ಏನನ್ನೂ ಸೇವಿಸುವುದಕ್ಕೂ ಕೂಡ ಆಗುವುದಿಲ್ಲ‌. ಆಗ ಬಾಯಿ ಹುಣ್ಣಿನ ಸಮಸ್ಯೆಗೆ ಏನು ಮಾಡೋದಪ್ಪಾ ಅಂತ ತಲೆ ಮೇಲೆ ಕೈ ಎತ್ತಿಕೊಂಡು ಕುಳಿತುಬಿಡುತ್ತೇವೆ ಅಷ್ಟೂ ನೋವನ್ನು ನೀಡುತ್ತದೆ ಈ ಒಂದು ಬಾಯಿ ಹುಣ್ಣಿನ ಸಮಸ್ಯೆ.


ಬಾಯಿ ಹುಣ್ಣಿನ ಸಮಸ್ಯೆ ಯಾಕೆ ಬರುತ್ತದೆ ಅನ್ನುವುದನ್ನು ತಿಳಿಯುವುದಾದರೆ ದೇಹದಲ್ಲಿ ಬಿ ಕಾಂಪ್ಲೆಕ್ಸ್ ಅನ್ನು ಒಂದು ವಿಟಮಿನ್ ಅಂಶ ಕಡಿಮೆಯಾದರೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಾ ಇರುತ್ತದೆ. ಮತ್ತು ಪದೇ ಪದೇ ಟೂತ್ ಪೇಸ್ಟ್ ಅನ್ನು ಬಳಸುವುದರಿಂದ ಕೂಡ ಈ ಸಮಸ್ಯೆ ಜನರಲ್ಲಿ ಕಾಡುತ್ತಾ ಇರುತ್ತದೆ. ಆಹಾರ ಪದ್ಧತಿಯಲ್ಲಿ ಹೆಚ್ಚಿನ ಉಷ್ಣಾಂಶ ಉಳ್ಳ ಆಹಾರವನ್ನು ಸೇವನೆ ಮಾಡುವುದರಿಂದ ಮತ್ತು ಬಾಯಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇದ್ದರೆ ಕೆಲವೊಮ್ಮೆ ಹಲ್ಲುಗಳು ಹುಳುಕಾಗಿದ್ದರೂ ಕೂಡ ಈ ಬಾಯಿ ಹುಣ್ಣಿನ ಸಮಸ್ಯೆ ಬರುತ್ತದೆ. ಮತ್ತು ಇದರ ಶಮನಕ್ಕೆ ಏನು ಮಾಡಬಹುದು ಅನ್ನೋದನ್ನು ಈ ಕೆಳಗೆ ಪೂರ್ತಿಯಾಗಿ ತಿಳಿಸಲಾಗಿದೆ.

ಮೊದಲನೆಯದಾಗಿ ಈ ಒಂದು ಸಮಸ್ಯೆ ಕಂಡಲ್ಲಿ ಹೆಚ್ಚು ಜನರು ಹಲವಾರು ರೀತಿಯ ಮಾತ್ರೆಗಳನ್ನು ನುಂಗಲು ಮುಂದಾಗುತ್ತಾರೆ. ಆದರೆ ಇದನ್ನು ಮಾತ್ರೆಗಳನ್ನು ನುಂಗಿ ಪರಿಹರಿಸಿ ಕೊಳ್ಳುವುದರ ಬದಲು ಮನೆ ಮದ್ದನ್ನು ಬಳಸಿ ಆರಾಮವಾಗಿ ಈ ಪರಿಹಾರದಿಂದ ಶಮನವನ್ನು ಪಡೆದುಕೊಳ್ಳಬಹುದಾಗಿದೆ. ಬಾಯಿ ಹುಣ್ಣಿನ ಸಮಸ್ಯೆ ಬಂದ ಕೂಡಲೇ ಬಿ ಕಾಂಪ್ಲೆಕ್ಸ್ ವಿಟಮಿನ್ ಅಂಶವು ಹೆಚ್ಚಾಗಿರುವಂತಹ ಆಹಾರವನ್ನು ಸೇವಿಸಬೇಕು. ನಂತರ ಪ್ರತಿ ಒಂದು ಗಂಟೆಗೆ ಬಿಸಿನೀರನ್ನು ತೆಗೆದುಕೊಂಡು ಬಾಯಿಯನ್ನು ಸ್ವಚ್ಛ ಮಾಡಿಕೊಳ್ಳುತ್ತಾ ಇರಬೇಕು ಈ ರೀತಿ ಮಾಡುವುದರಿಂದ ಸ್ವಲ್ಪ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ಇದನ್ನು ಪ್ರತಿದಿನ ಮಾಡುವುದರಿಂದ ಬೇಗನೆ ಇದರಿಂದ ಉಪಶಮನವನ್ನು ಪಡೆದುಕೊಳ್ಳಬಹುದು.


ಮೆಂತೆಯನ್ನು ನೀರಿನಲ್ಲಿ ಕುದಿಸಿ ಆ ನೀರಿನಿಂದ ಬಾಯಿಯನ್ನು ಸ್ವಚ್ಛ ಮಾಡಿಕೊಳ್ಳಬೇಕು ಅಥವಾ ತೆಂಗಿನ ಹಾಲಿನಿಂದ ಒಂದು ಹುಣ್ಣಿಗೆ ನಯವಾಗಿ ಮಸಾಜ್ ಮಾಡಿಕೊಳ್ಳುವುದರಿಂದ ಕೂಡ ಈ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬಹುದು. ಬಿಸಿ ನೀರಿಗೆ ಉಪ್ಪನ್ನು ಬೆರೆಸಿ ಅದರಿಂದ ಕೂಡ ಬಾಯಿಯನ್ನು ಮುಕ್ಕಳಿಸುವುದರಿಂದ ಈ ಸಮಸ್ಯೆ ದೂರವಾಗುತ್ತದೆ ಮತ್ತು ಅರಿಶಿನ ಅಥವಾ ಜೇನು ತುಪ್ಪವನ್ನು ತೆಗೆದುಕೊಂಡು ಹುಣ್ಣಾಗಿರುವಂತಹ ಜಾಗಕ್ಕೆ ಹಚ್ಚುವುದರಿಂದ ಈ ಸಮಸ್ಯೆ ದೂರವಾಗುತ್ತದೆ.

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...