ಕೊರೋನಾಘಾತದ ನಡುವೆಯೇ ಸಮಾಧಾನದ ಸಂಗತಿ; 24 ಗಂಟೆಗಳಲ್ಲಿ ದೇಶದಲ್ಲಿ 11,264 ಸೋಂಕಿತರು ಗುಣಮುಖ

ಜಗತ್ತಿನಾದ್ಯಂತದ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ರವಿವಾರ 60 ಲಕ್ಷವನ್ನು ದಾಟಿದೆ. ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಸಾಂಕ್ರಾಮಿಕವು ವೇಗವಾಗಿ ಹರಡುತ್ತಿದ್ದು, ಮುಂದಿನ ಕೆಲವು ವಾರಗಳು ಆ ದೇಶಗಳಿಗೆ ಸಂಕಷ್ಟದ ದಿನಗಳಾಗಿರುವ ಸಾಧ್ಯತೆಯಿದೆ.

ಅದೇ ವೇಳೆ, ಜಗತ್ತಿನ ಹೆಚ್ಚಿನ ದೇಶಗಳು ಸಾಂಕ್ರಾಮಿಕವನ್ನು ತಡೆಯಲು ಹೇರಲಾಗಿದ್ದ ಬೀಗಮುದ್ರೆಗಳನ್ನು ಹಂತಹಂತವಾಗಿ ತೆರೆಯಲು ಆರಂಭಿಸಿವೆ ಹಾಗೂ ನೆಲಕಚ್ಚಿರುವ ಆರ್ಥಿಕತೆಗಳನ್ನು ಸರಿಪಡಿಸಲು ಮುಂದಾಗಿವೆ.


ದಕ್ಷಿಣ ಅಮೆರಿಕ ಖಂಡದಲ್ಲಿ ಸಾಂಕ್ರಾಮಿಕದ ಕೇಂದ್ರಬಿಂದುವಾಗಿರುವ ಬ್ರೆಝಿಲ್‌ನಲ್ಲಿ 5 ಲಕ್ಷ ಸೋಂಕು ಪ್ರಕರಣಗಳು ದಾಖಲಾಗಿವೆ. ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಅದು ಈಗ ಅಮೆರಿಕದಿಂದ ಮಾತ್ರ ಹಿಂದಿದೆ. ಅಲ್ಲಿ ಕೊರೋನ ವೈರಸ್‌ನಿಂದಾಗಿ ಸಂಭವಿಸಿರುವ ಸಾವಿನ ಸಂಖ್ಯೆ 30,000ವನ್ನು ಸಮೀಪಿಸುತ್ತಿದೆ. ಅದೇ ವೇಳೆ, ಜಗತ್ತಿನಾದ್ಯಂತ ಕೋವಿಡ್-19ರಿಂದಾಗಿ ಮೃತಪಟ್ಟವರ ಸಂಖ್ಯೆ 3,68,000ವನ್ನು ದಾಟಿದೆ.

ಭಾರತ ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಅತ್ತ ದೆಹಲಿಯಿಂದ ಸಮಾಧಾನದ ಸಂಗತಿಯೊಂದು ಬಂದಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 11,264 ಸೋಂಕಿತರು ಗುಣಮುಖರಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 11,264 ಕೋವಿಡ್-19 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದು ಒಂದು ದಿನದಲ್ಲಿ ಅತಿ ಹೆಚ್ಚು ಚೇತರಿಸಿಕೊಂಡ ರೋಗಿಗಳ ಪ್ರಮಾಣ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ....

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...