ಉತ್ತಮ ಯಶಸ್ವಿ ಜೀವನಕ್ಕೆ ಅಬ್ದುಲ್ ಕಲಾಂ ಅವರ ನುಡಿಮುತ್ತುಗಳು | Abdul Kalam Inspi...


Dr. APJ Abdul Kalam Quotes | ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರವರ ನುಡಿಮುತ್ತುಗಳು!




  1. ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ, ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ.

  2. ಇತರರಿಗಾಗಿ ನಿಮ್ಮ ಸ್ವಂತಿಕೆಯನ್ನು ಎಂದಿಗೂ ಬಿಟ್ಟುಕೊಡಬೇಡಿ. ಏಕೆಂದರೆ ಈ ಪ್ರಪಂಚದಲ್ಲಿ ನಿಮ್ಮ ಪಾತ್ರವನ್ನು ನಿಮಗಿಂತ ಚೆನ್ನಾಗಿ ಯಾರೂ ನಿಭಾಯಿಸಲು ಸಾಧ್ಯವಿಲ್ಲ!

  3. ನೀವಂದುಕೊಂಡಿದ್ದನ್ನು ಸಾಧಿಸಲು ಮೊಟ್ಟಮೊದಲನೆಯದಾಗಿ ಬೇಕಿರುವುದು ಗುರಿಯೆಡೆಗಿನ ಏಕಾಗ್ರಚಿತ್ತ ಬದ್ಧತೆ ಅದರಲ್ಲಿ ಪ್ರೀತಿ!

  4. ನಿದ್ರೆಯಲ್ಲಿ ಕಾಣುವುದು ಕನಸಲ್ಲ, ನಿದ್ದೆ ಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು!

  5. ಸೋಲೆಂಬ ರೋಗಕ್ಕೆ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ಮದ್ದು, ಇದು ಯಾರಲ್ಲಿರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ!

  6. ಒಬ್ಬರನ್ನ ಸೋಲಿಸೋದು ಸುಲಭ ಆದರೆ ಒಬ್ಬರ ಮನಸ್ಸನ್ನು ಗೆಲ್ಲೋದು ಕಷ್ಟ!

  7. ಈ ಜಗತ್ತು ನಾವು ಹೇಳುವ ಸತ್ಯಕ್ಕಿಂತ ಮಿಗಿಲಾಗಿ ನಮ್ಮ ಕುರಿತು ಇತರರು ಹೇಳುವ ಸುಳ್ಳನ್ನು ನಂಬುತ್ತದೆ!

  8. ಸೂರ್ಯನಂತೆ ಪ್ರಜ್ವಲಿಸಬೇಕಾದರೆ, ಮೊದಲು ಸೂರ್ಯನಂತೆ ದಹಿಸಬೇಕು.

  9. ನಿಮ್ಮ ಮೊದಲ ಗೆಲುವಿನ ಬಳಿಕ ವಿಶ್ರಾಂತಿ ತೆಗೆದುಕೊಳ್ಳಬೇಡಿ. ಏಕೆಂದರೆ, ಒಂದೊಮ್ಮೆ ನೀವು ಎರಡನೇ ಪ್ರಯತ್ನದಲ್ಲಿ ವಿಫಲರಾದರೆ ನಿಮ್ಮ ಮೊದಲ ಗೆಲುವು ಕೇವಲ ಅದೃಷ್ಟ ಎಂದು ಹೇಳಲು ಹೆಚ್ಚಿನ ತುಟಿಗಳು ಕಾಯುತ್ತಿರುತ್ತವೆ.

  10. ನಮಗೆಲ್ಲರಿಗೂ ಸಮಾನ ಪ್ರತಿಭೆ ಇಲ್ಲ. ಆದರೆ, ನಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ನಮಗೆಲ್ಲರಿಗೂ ಸಮಾನ ಅವಕಾಶವಿದೆ!

  11. ನೀವು ನಿಮ್ಮ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ, ನಿಮ್ಮ ಅಭ್ಯಾಸಗಳನ್ನು ಬದಲಾಯಿಸುವ ಅವಕಾಶ ನಿಮಗಿದೆ ಮತ್ತು ನಿಮ್ಮ ಅಭ್ಯಾಸಗಳು ಖಂಡಿತಾ ನಿಮ್ಮ ಭವಿಷ್ಯವನ್ನು ಬದಲಾಯಿಸುತ್ತವೆ

  12. ನಿಮ್ಮ ಧ್ಯೇಯದಲ್ಲಿ ಯಶಸ್ವಿಯಾಗಲು, ನೀವು ನಿಮ್ಮ ಗುರಿಯ ಬಗ್ಗೆ ಏಕ ಮನಸ್ಸಿನ ಭಕ್ತಿ ಹೊಂದಿರಬೇಕು!

  13. ದೊಡ್ಡ ಗುರಿ, ಜ್ಞಾನದ ಸಂಪಾದನೆ, ಕಠಿಣ ಪರಿಶ್ರಮ ಮತ್ತು ದೃಢ ಹಾಗೂ ಸತತ ಪ್ರಯತ್ನ ಎಂಬ ನಾಲ್ಕು ವಿಷಯಗಳನ್ನು ಅನುಸರಿಸಿದರೆ ಏನು ಬೇಕಾದರೂ ಸಾಧಿಸಬಹುದು!

  14. ಯಶಸ್ಸಿನ ಬಗೆಗಿನ ನನ್ನ ವ್ಯಾಖ್ಯಾನವು ಸಾಕಷ್ಟು ಪ್ರಬಲವಾಗಿದ್ದರೆ ಸೋಲು ನನ್ನನ್ನು ಎಂದಿಗೂ ಹಿಂದಿಕ್ಕುವುದಿಲ್ಲ.

  15. ನಿಮ್ಮ ಕೊನೆಯ ತಪ್ಪೇ ನಿಮ್ಮ ಅತ್ಯುತ್ತಮ ಶಿಕ್ಷಕ.

  16. ಮತ್ತೊಬ್ಬರನ್ನು ಸೋಲಿಸುವುದು ಬಲು ಸುಲಭ. ಆದರೆ, ಮತ್ತೊಬ್ಬರನ್ನು ಗೆಲ್ಲುವುದು ಬಲು ಕಷ್ಟ.

  17. ನಿಮ್ಮ ಕೆಲಸವನ್ನು ಪ್ರೀತಿಸಿ, ಆದರೆ ನಿಮ್ಮ ಕಂಪನಿಯನ್ನು ಅತಿಯಾಗಿ ಪ್ರೀತಿಸಬೇಡಿ, ಏಕೆಂದರೆ ಯಾವಾಗ ನಿಮ್ಮ ಕಂಪನಿ ನಿಮ್ಮನ್ನು ಪ್ರೀತಿಸುವುದನ್ನು ನಿಲ್ಲಿಸುತ್ತದೆ ಎಂಬುದು ಯಾರಿಗೆ ಗೊತ್ತು?

  18. ನೊಣಗಳು ಸುಂದರವಾದ ದೇಹವನ್ನು ಬಿಟ್ಟು ಗಾಯದ ಮೇಲೆಯೇ ಕುಳಿತುಕೊಳ್ಳುವ ಹಾಗೆ, ಕೆಲವರು ನಮ್ಮಲ್ಲಿರುವ ಸದ್ಗುಣಗಳನ್ನು ತಳ್ಳಿಹಾಕಿ ಲೋಪದೋಷಗಳನ್ನು ಮಾತ್ರ ಹುಡುಕುತ್ತಾರೆ.

  19. ಯಶಸ್ವಿಯಾಗುವ ನಮ್ಮ ನಿರ್ಣಯವು ಸಾಕಷ್ಟು ಬಲವಾಗಿದ್ದರೆ ವಿಫಲತೆಯು ನಮ್ಮ ನ್ನು ಏನು ಮಾಡಲಾಗದು.

  20. ಅದೃಷ್ಟದ ಮೇಲೆ ಎಂದಿಗೂ ನಂಬಿಕೆ ಇಡಬೇಡಿ. ನಿಮ್ಮ ಕಠಿಣ ಶ್ರಮದ ಮೇಲೆ ನಂಬಿಕೆ ಇಡಿ, ಯಶಸ್ಸು ನಿಮ್ಮದಾಗುತ್ತದೆ.

  21. ಕೇವಲ ಯಶಸ್ಸಿನ ಕತೆಗಳನ್ನೇ ಹೆಚ್ಚು ಓದಬೇಡಿ. ಏಕೆಂದರೆ ಯಶಸ್ಸಿನ ಕತೆಗಳಲ್ಲಿ ನಿಮಗೆ ಸಂದೇಶಗಳಷ್ಟೇ ಸಿಗುತ್ತದೆ. ಸೋಲಿನ ಕತೆಗಳನ್ನು ಓದಿ, ನೀವು ಯಶಸ್ವಿಯಾಗಲು ಉತ್ತಮ ಚಿಂತನೆಗಳು ಕುಡಿಯೊಡೆಯುತ್ತದೆ.

  22. ಕಪ್ಪು ಬಣ್ಣ ಭಾವನಾತ್ಮಕವಾಗಿ ಕೆಟ್ಟದು. ಆದರೆ ಪ್ರತಿಯೊಂದು ಕಪ್ಪುಹಲಗೆಯು ವಿದ್ಯಾರ್ಥಿಯ ಜೀವನವನ್ನು ಪ್ರಕಾಶಮಾನವಾಗಿಸುತ್ತದೆ.

  23. ದೊಡ್ಡ ಗುರಿ, ಜ್ಞಾನ ಹೆಚ್ಚಿಸಿಕೊಳ್ಳುವುದು, ಕಠಿಣ ಪರಿಶ್ರಮ ಮತ್ತು ಧೃಢ ನಿಷ್ಠೆ ಇವುಗಳನ್ನು ನೀವು ನಿರಂತರವಾಗಿ ಪಾಲಿಸಿದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು

  24. ಸೋಲೆಂಬ ರೋಗಕ್ಕೆ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವೇ ಮದ್ದು. ಇದು ಯಾರಲ್ಲಿ ಇರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ!

  25. ಬದುಕಿನ ಯಶಸ್ಸು ಮತ್ತು ಸಂತೋಷದ ಅರಿವಾಗುವುದು ಕಷ್ಟಗಳನ್ನು ಅನುಭವಿಸಿದ ಮನುಷ್ಯನಿಗೆ ಮಾತ್ರ!

  26. ಈ ಸಮಾಜವೇ ಒಂದು ವಿಚಿತ್ರ. ಮಾತನಾಡಿದರೆ ಮಾತಿನಲ್ಲಿರುವ ತಪ್ಪನ್ನು ಹುಡುಕುತ್ತಾರೆ, ಮೌನಿಯಾದರೆ ನಮ್ಮನ್ನೇ ತಪ್ಪಾಗಿ ಚಿತ್ರಿಸುತ್ತಾರೆ.

  27. ನಿಮ್ಮನ್ನು ದ್ವೇಷಿಸುವವರನ್ನು ನೀವು ಯಾವತ್ತೂ ದ್ವೇಷಿಸಬೇಡಿ. ಏಕೆಂದರೆ ನೀವು ಅವರಿಗಿಂತ ಉತ್ತಮರೆಂದು ಅವರಷ್ಟೇ ಯೋಚಿಸುತ್ತಾರ.

  28. ನೀವು ತಪ್ಪು ಮಾಡಿದಾಗ ಅದನ್ನು ಮುಜುಗುರವಿಲ್ಲದೆ ಒಪ್ಪಿಕೊಂಡು ಸರಿಯಾದ ದಾರಿಯಲ್ಲಿ ನಡೆಯಿರಿ.

  29. ಒಳ್ಳೆಯ ಜನರು ನಿಮಗೆ ಸಂತೋಷವನ್ನು ಕೊಟ್ಟರೆ, ಕೆಟ್ಟ ಜನ ನಿಮಗೆ ಅನುಭವವನ್ನು ಕೊಡುತ್ತಾರೆ.

  30. ಜ್ಞಾನ ಎಂಬುದು ಎಂದಿಗೂ ನಿಂತ ನೀರಾಗಬಾರದು. ಸದಾ ಹೆಚ್ಚುತ್ತಲೇ ಇರಬೇಕು. ಇದು ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ ಪಡೆಯಲು ಬೇಕಾದ ಪ್ರಮುಖ ಅಸ್ತ್ರ!

  31. ಪ್ರತಿಯೊಬ್ಬರೂ ಜೀವನದಲ್ಲಿ ದುಃಖವನ್ನು ಅನುಭವಿಸುತ್ತಾರೆ, ಈ ದುಃಖವು ಎಲ್ಲರಲ್ಲೂ ತಾಳ್ಮೆಯನ್ನು ಪರೀಕ್ಷಿಸುತ್ತದೆ.

  32. ದೇಶದಲ್ಲಿನ ಅತ್ಯುತ್ತಮ ಮಿದುಳುಗಳನ್ನು ತರಗತಿ ಕೊಠಡಿಗಳ ಕೊನೆಯ ಬೆಂಚುಗಳಲ್ಲಿ ಕಾಣಬಹುದು.

  33. ಯಾರೂ ಪರಿಶ್ರಮ ಜೀವಿಯೋ ಆತನಿಗೆ ದೇವರು ಸದಾ ಸಹಾಯ ಮಾಡುತ್ತಾನೆ.



ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...