ಭಾರತದ ಬರೋಬರಿ 4.60 ಕೋಟಿ ಹೆಣ್ಮಕ್ಕಳು ಕಾಣೆ...!

ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ಮತ್ತು ಬಾಲ್ಯ ವಿವಾಹ ಹೆಚ್ಚಾಗಿದ್ದು, ಕಳೆದ 50 ವರ್ಷದಲ್ಲಿ 4.60 ಕೋಟಿ ಹೆಣ್ಣು ಮಕ್ಕಳು ಜೀವವನ್ನು ಕಳೆದುಕೊಂಡಿದ್ದಾರೆ ಅಥವಾ ಕಾಣೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್​ಎಫ್​ಪಿಎ) ಸಿದ್ಧಪಡಿಸಿರುವ ವಿಶ್ವ ಜನಸಂಖ್ಯಾ ವರದಿ ತಿಳಿಸಿದೆ. ವಿಶ್ವದಲ್ಲಿ ಒಟ್ಟಾರೆಯಾಗಿ 14.20 ಕೋಟಿ ಮಹಿಳೆಯರು ನಾಪತ್ತೆಯಾಗಿದ್ದಾರೆ.

India's Preference for Boys Leaves 63 Million Women, Girls Missing ...
2013-2017ರ ಐದು ವರ್ಷದ ವರದಿಯನ್ನು ಅವಲೋಕಿಸಿದಾಗ ಪ್ರತಿ ವರ್ಷ ಲಿಂಗ ತಾರತಮ್ಯ ಆಧಾರಿತ ಭ್ರೂಣಹತ್ಯೆಯಿಂದಾಗಿ ಸರಾಸರಿ 12 ಲಕ್ಷ ಹೆಣ್ಣು ಮಕ್ಕಳ ಜನನವೇ ಆಗಿಲ್ಲ. ಅದರಲ್ಲಿ ಶೇ. 50 ಪಾಲನ್ನು ಚೀನಾ ಹೊಂದಿದ್ದರೆ ಶೇ. 40 ಪಾಲನ್ನು ಭಾರತ ಹೊಂದಿದೆ. ದೇಶದಲ್ಲಿ ವರ್ಷವೊಂದಕ್ಕೆ 4.60 ಲಕ್ಷ ಹೆಣ್ಣು ಮಕ್ಕಳನ್ನು ಹುಟ್ಟುವ ಮುನ್ನವೇ ಸಾಯಿಸಲಾಗುತ್ತಿದೆ.

ಇಂಡಿಯಾ ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಂನ 2018ರ ವರದಿಯ ಪ್ರಕಾರ ದೇಶದಲ್ಲಿ 1000 ಗಂಡು ಮಕ್ಕಳಿಗೆ ಕೇವಲ 899 ಹೆಣ್ಣು ಮಕ್ಕಳ ಜನನವಾಗುತ್ತಿದೆ. ಹರಿಯಾಣ, ಉತ್ತರಾಖಂಡ, ದೆಹಲಿ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಮತ್ತು ಬಿಹಾರದಲ್ಲಿ ಸಾವಿರ ಗಂಡು ಮಕ್ಕಳಿಗೆ 900ಕ್ಕೂ ಕಡಿಮೆ ಹೆಣ್ಣು ಮಕ್ಕಳ ಅನುಪಾತವಿದೆ.
Finding the data on missing girls - The Hindu
ನಾವು ಭಾರತವನ್ನು ಬದಲಾಯಿಸಬೇಕಿದೆ. ಸಮಾನತೆ, ಸೌಹಾರ್ದತೆಯಿಂದ ಕೂಡಿತ ದೇಶವನ್ನಾಗಿ ಮಾಡಬೇಕಿದೆ. ಎಲ್ಲ ಕ್ಷೇತ್ರದಲ್ಲೂ ಹೆಣ್ಣಿಗೆ ಸಮಾನ ಹಕ್ಕು ಸಿಗುವಂತೆ ಮಾಡಬೇಕು ಎಂದು ಯುಎನ್​ಎಫ್​ಪಿಎನ ಭಾರತದ ಪ್ರತಿನಿಧಿ ಅಜೆಂಟಿನಾ ಮಟವೇಲ್ ತಿಳಿಸಿದ್ದಾರೆ.

ಕೋವಿಡ್​ನಿಂದ ಪರಿಸ್ಥಿತಿ ಗಂಭೀರ
ಕರೊನಾ ಕಾರಣದಿಂದಾಗಿ ಲಾಕ್​ಡೌನನ್ನು ಇನ್ನೂ ಆರು ತಿಂಗಳ ಕಾಲ ಮುಂದುವರಿಸಿದರೆ ಆ ಸಮಯದಲ್ಲಿ 1.30 ಕೋಟಿ ಬಾಲ್ಯ ವಿವಾಹ ಆಗಲಿದೆ. 2030ರೊಳಗೆ 20 ಲಕ್ಷ ಹೆಣ್ಣು ಮಕ್ಕಳ ಜನನಾಂಗ ಛೇದನದ ಹೀನಕಾರ್ಯಗಳು ನಡೆಯಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
  • ವಿಶ್ವದಾದ್ಯಂತ ಕಾಣೆಯಾದ ಮಹಿಳೆಯರು: 14.20 ಕೋಟಿ
  • ಹೆಣ್ಣು ಭ್ರೂಣ ಹತ್ಯೆ (ವರ್ಷಕ್ಕೆ): 12 ಲಕ್ಷ
  • ಚೀನಾದ ಪಾಲು: ಶೇ. 50
  • ಭಾರತದ ಪಾಲು: ಶೇ. 40
  • ದೇಶದಲ್ಲಿ ಲಿಂಗಾನುಪಾತ: 1000 ಗಂಡಿಗೆ 899 ಹೆಣ್ಣು

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...