ಭಾರೀ ಬೇಡಿಕೆ ಉಂಟಾಗಿರುವ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿಗಳು.!


ಕೊರೋನಾ ಸೋಂಕಿನ ಭಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸೋಂಕಿತರು ನಾನಾ ಆಸ್ಪತ್ರೆಗಳಲ್ಲಿ ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಕೊರೋನಾ ಬಾರದಂತೆ ತಡೆಯೋದು ಹೇಗೆ? ಸೋಂಕು ಇಲ್ಲದವರು ವೈರಸ್ ತಮ್ಮ ಹತ್ತಿರಕ್ಕೂ ಬಾರದಂತೆ ತಡೆಯೋಕೆ ಮಾರ್ಗಗಳಿವೆಯಾ? ಇದೆ ಎನ್ನುತ್ತಿದ್ದಾರೆ ಆಯುರ್ವೇದ ತಜ್ಞರು. ಯಾವೆಲ್ಲಾ ಗಿಡಮೂಲಿಕೆಗಳು, ಹಣ್ಣು, ತರಕಾರಿಗಳು ಈ ವಿಚಾರದಲ್ಲಿ ಆರೋಗ್ಯಕ್ಕೆ ಸಹಕಾರಿ ಎಂಬ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ...
ಕೋವಿಡ್ ಮಣಿಸಲು ಆಯುರ್ವೇದ‌ ಔಷಧ ಪ್ರಯೋಗ ...

ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ ಯಾವ ಕಾಯಿಲೆಯೂ ನಮ್ಮನ್ನು ಬಾಧಿಸುವುದಿಲ್ಲ. ಅದರಲ್ಲೂ ಕೊರೋನಾ ವೈರಸ್ ಸೋಂಕಂತೂ ಹತ್ತಿರಕ್ಕೂ ಸುಳಿಯುವುದಿಲ್ಲ. ಹಾಗಾಗಿ, ಕೊರೋನಾದಿಂದ ಬಚಾವಾಗಬೇಕು ಎಂದರೆ ಮೊದಲು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಆಯುರ್ವೇದದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ನಾನಾ ಔಷಧಿಗಳಿವೆ. ತಮ್ಮ ಹತ್ತಿರದವರು ಯಾರಿಗೂ ಕೊರೋನಾ ಇಲ್ಲದಿದ್ದರೂ ನಮ್ಮ ರೋಗ ನಿರೋಧಕ ಶಕ್ತಿ ಉತ್ತಮ ಮಾಡಿಕೊಳ್ಳುವುದರ ಬಗ್ಗೆ ಗಮನ ಹರಿಸಬೇಕು. ಆಗ ಮಾತ್ರ ಕೊರೋನಾ ಕಾಡುವ ಚಾನ್ಸೇ ಇಲ್ಲವಾಗುತ್ತದೆ.

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಅರಿಶಿನ, ಮೆಣಸಿನಕಾಳು, ಅಮೃತಬಳ್ಳಿ ಮುಂತಾದ ಒಂದಷ್ಟು ಪದಾರ್ಥಗಳು ದೊಡ್ಡ ಮಟ್ಟಿಗೆ ಪ್ರಯೋಜನಕಾರಿಯಾಗಬಲ್ಲವು. ಪ್ರತಿದಿನ ಶುಂಠಿ, ತುಳಸಿ ಮುಂತಾದ ವಸ್ತುಗಳನ್ನು ಕಷಾಯದ ರೂಪದಲ್ಲಿ ಬಳಸುವುದು ಕೂಡ ಅತ್ಯುತ್ತಮ ಪರಿಹಾರ. ಮನೆ ಮತ್ತು ಸುತ್ತಲಿನ ಸ್ಥಳದ ಸ್ವಚ್ಛತೆ ಕಾಪಾಡಿಕೊಳ್ಳುವುದರ ಬಗ್ಗೆಯೂ ಗಮನ ಹರಿಸಬೇಕು. ಧೂಳು, ಕಲುಷಿತ ವಾತಾವರಣ, ತಣ್ಣಗಿನ ನೀರು ಮತ್ತು ಆಹಾರಗಳಿಂದ ದೂರವಿರಬೇಕು. ಫ್ರೆಶ್ ಆಗಿ ತಯಾರಿಸಿದ ಆಹಾರವನ್ನು ಬಿಸಿಯಾಗಿಯೇ ಸೇವಿಸಬೇಕು. ಬೀದಿ ಬದಿಯ ಆಹಾರಗಳನ್ನು ಸೇವಿಸಲೇಬಾರದು. ದಾಳಿಂಬೆ, ಕಿತ್ತಳೆ, ಮೂಸಂಬಿ, ಸೇಬು ಮುಂತಾದ ಹಣ್ಣುಗಳು ಕೂಡ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಕೊರೊನಾಗೆ ಆಯುರ್ವೇದ ಔಷಧ ಕಂಡು ಹಿಡಿದೆ ...
ಮನೆಯಲ್ಲೇ ಇರುವ ನಾನಾ ಸಾಮಗ್ರಿಗಳು ದೇಹದ ಆರೋಗ್ಯ ಕಾಪಾಡುವುದರ ಜೊತೆಗೆ ಕಾಯಿಲೆಗಳು ಯಾವುದೇ ಪ್ರಭಾವ ಬೀರದಂತೆ ತಡೆಯುತ್ತವೆ. ಅದರಲ್ಲೂ ಅಮೃತ ಬಳ್ಳಿ, ಶುಂಠಿ, ಅರಿಶಿನ ಮತ್ತು ಕಾಳು ಮೆಣಸು ವೈರಸ್​ಗಳನ್ನು ಕೊಲ್ಲುವ ಶಕ್ತಿ ಹೊಂದಿರುತ್ತವೆ. ಇದೆಲ್ಲದರ ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಸೂಕ್ತ ಆಹಾರ ಕೂಡ ನಿಮ್ಮ ದಿನಚರಿಯಲ್ಲಿ ಇರಬೇಕು. ಆಗ ದೇಹ ಎಲ್ಲ ಬಗೆಯ ಸೋಂಕಿನ ವಿರುದ್ಧ ಹೋರಾಡಲು ಸಜ್ಜಾಗಿರುತ್ತದೆ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...