ನೀವು ಯಾವಾಗಲೂ ಯಂಗ್ ಆಗಿ ಫಿಟ್ ಆಗಿರಬೇಕು ಎಂದು ಬಯಸಿದರೆ, ಎಕ್ಸರ್ ಸೈಜ್ ಮಾಡುವುದರ ಜೊತೆ ಜೊತೆಗೆ ಸರಿಯಾದ ನಿದ್ರೆ ಸಹ ಮಾಡಬೇಕು. ಇದರಿಂದ ನೀವು ಯಂಗ್ ಮತ್ತು ಅಕ್ಟಿವ್ ಆಗಿರೋದು ಖಂಡಿತಾ..
ನಿದ್ರೆ : ಶರೀರದ ಶಕ್ತಿ ಹೆಚ್ಚಿಸಲು ಹಾಗೂ ಅದನ್ನು ಸದಾ ಕಾಲ ಆರೋಗ್ಯಯುತವಾಗಿರಿಸಲು ಸರಿಯಾದ ಮತ್ತು ಪೂರ್ಣ ನಿದ್ರೆ ಅಗತ್ಯ. ಪ್ರತಿ ದಿನ ಏಳರಿಂದ ಎಂಟು ಗಂಟೆಗಳ ನಿದ್ರೆ ಪಡೆದುಕೊಳ್ಳುವುದು ಅತ್ಯಗತ್ಯ. ಇದರಿಂದ ಶರೀರ ಆರೋಗ್ಯಯುತವಾಗಿರುತ್ತದೆ. ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ನೀವು ತುಂಬಾ ಸಮಯದವರೆಗೂ ಯಂಗ್ ಆಗಿ ಕಾಣಬಲ್ಲಿರಿ.
ಡೈಲಿ ರುಟೀನ್ : ಪ್ರತಿ ದಿನ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಬೆಳಗ್ಗೆ ಎದ್ದೇಳುವುದು, ವ್ಯಾಯಾಮ ಮಾಡುವುದು, ಪಾರ್ಕ್‌ನಲ್ಲಿ ನಡೆದಾಡುವುದು. ಇದನ್ನು ಪ್ರತಿದಿನ ಮಾಡುತ್ತಾ ಬಂದರೆ ಶರೀರ ತುಂಬಾ ಸಮಯದವರೆಗೂ ಫಿಟ್ ಆಗಿರುತ್ತದೆ. ಅದೇ ರೀತಿ ರಾತ್ರಿ ನಿದ್ರೆ ಮಾಡಲು ಸಹ ಸರಿಯಾದ ರುಟೀನ್ ಫಾಲೋ ಮಾಡಬೇಕು.
ಕಿರು ನಿದ್ರೆ ಮಾಡುವುದು : ಕೆಲಸದ ನಡುವೆ ಆಗಾಗ ನಿದ್ರೆ ಮಾಡಿದರೆ ದೈಹಿಕ ಶಕ್ತಿ ಕುಂದುತ್ತದೆ. ಇದರ ಬದಲಾಗಿ ನೀವು ಇತರ ಕೆಲಸಗಳನ್ನು ಮಾಡಬಹುದು. ಇದರ ಬದಲಾಗಿ ರ್ಗಾನಿಂಗ್ ಮಾಡಿ, ಇಷ್ಟವಾದ ಹವ್ಯಾಸಗಳಲ್ಲಿ ನಿಮ್ಮ ನೀವು ತೊಡಗಿಸಿ. ಇದರಿಂದ ಶರೀರ ಸಕ್ರಿಯವಾಗುತ್ತದೆ.
ರಾತ್ರಿ ಕಾಫಿ ಸೇವನೆ ಮಾಡಬೇಡಿ : ಪದೇ ಪದೆ ಕಾಫಿ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ ಅಲ್ಲ. ರಾತ್ರಿಯಂತೂ ಕಾಫಿ ಕುಡಿಯಲೇಬೇಡಿ. ಕಾಫಿಯಲ್ಲಿರುವ ಆಮ್ಲೀಯ ಗುಣ ಮತ್ತು ಆಹಾರದಲ್ಲಿರುವ ಪ್ರೋಟಿನ್ ಜೀರ್ಣ ಕ್ರಿಯೆ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಬೇಗನೆ ವಯಸ್ಸಾದಂತೆಯೂ ಕಾಣುತ್ತದೆ.
ವ್ಯಾಯಾಮ ಮಾಡಿ : ಪ್ರತಿ ದಿನ ತಪ್ಪದೆ ಕನಿಷ್ಟ ಪಕ್ಷ 20 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ಇದರಿಂದ ನಿಮಗೆ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ. ದಿನವಿಡೀ ಫ್ರೆಶ್ ಆಗಿರಬಹುದು. ಯಾವಾಗಲು ಯಂಗ್ ಆಗಿ ಕಾಣುತ್ತೀರಿ.