ಕನ್ನಡ
ನುಡಿಗಟ್ಟುಗಳು
ಗಾಯದ
ಮೇಲೆ ಬರೆ ಎಳೆ : ಕಷ್ಟದ ಮೇಲೆ ಕಷ್ಟಕೊಡು .
ಗಾಳ
ಹಾಕು : ಪ್ರಲೋಭನೆ ತೋರಿಸು ; ಮರುಳು ಗೊಳಿಸು .
ಗಾಳಿ
ಗುದ್ದಿ ಮೈ ನೋಯಿಸಿಕೊಳ್ಳು : ವ್ಯರ್ಥವಾದ
ಕೆಲಸದಲ್ಲಿ ತೊಡಗು
ಗಾಳಿಗೆ
ತೂರಿಬಿಡು : ನಿರ್ಲಕ್ಷಿಸು
ಗಾಳಿಗೋಪುರ
ಕಟ್ಟು : ಬರಿಯ ಕಲ್ಪನೆಗಳನ್ನು ಮಾಡುತ್ತಿರು .
ಗಾಳಿ
ಬೀಸು : ಪ್ರಭಾವ ಬೀರು ; ಮುಗಿಯಲು ಬಿಡದಿರು .
ಗಾಳಿ
ಸಮಾಚಾರ : ಖಚಿತವಲ್ಲದ ವಾರ್ತೆ ; ಹಾರಿಕೆ ಸುದ್ದಿ .
ಗಾಳಿ
ಹಾಕು : ಉತ್ತೇಜಿಸು .
ಗುಟುಕುನೀರು
ಕುಡಿಸು : ಪ್ರತೀಕಾರಮಾಡು ; ತೊಂದರೆಕೊಡು .
ಗುಡ್ಡವನ್ನು
ಬೆಟ್ಟ ಮಾಡು : ಸಣ್ಣದನ್ನು ದೊಡ್ಡದು ಮಾಡಿಹೇಳು .
ಗುಡಾರ
ಎತ್ತು : ಹೊರಡು .
ಗೋಣು
ಚೆಲ್ಲು : ಸಾಯು .
ಗೋತ
ಹೊಡಿ : ಸಾಯು .
ಗೋರಿ
ತೋಡು : ಹಾಳುಮಾಡು ; ಚಕ್ರಹಾಕು
ಹಾಳು
ಮಾಡಿಕೊಳ್ಳು . : ತಪ್ಪಿಸಿಕೊಳ್ಳು ; ಮೋಸಮಾಡು ,
ಚಕಾರವೆತ್ತು
: ಆಕ್ಷೇಪಣೆ ಮಾಡು .
ಚಟ್ಟಿಯಾಗು
: ಅರೆದುಹೋಗು ; ಕಷ್ಟಕ್ಕೆ ಸಿಕ್ಕು .
ಚಳ್ಳೆಹಣ್ಣು
ತಿನ್ನಿಸು : ಕಷ್ಟಕೊಡು ; ಮೋಸಪಡಿಸು .
ಚಿಟಿಕೆ
ಚಪ್ಪರ : ಸಂಕ್ಷೇಪವಾಗಿ ; ತೀವ್ರಗತಿಯಿಂದ .
ಚಿಟುಕು
, ಮುಳ್ಳಾಡಿಸು : ಬಿಡದೆ ಒಂದೇ ಸಮನೆ ತೊಂದರೆ ಪಡಿಸು .
ಜನ್ಮ
ಜಾಲಾಡು : ಚೆನ್ನಾಗಿ ಬಯ್ಯು
ಜುಟ್ಟು
ಕೈಗೆ ಸಿಗು : ವಶವಾಗು ; ಹಿಡಿತಕ್ಕೆ ಸಿಕ್ಕು .
ಜೇಬಿಗೆ
ತೂತು ಬೀಳು : ಹಣ ಖರ್ಚಾಗು .
ಜೇಬಿಗೆ
ಹಾಕಿಕೊಳ್ಳು : ವಶಮಾಡಿಕೊಳ್ಳು .
ಟೋಪಿ
ಹಾಕು : ಮೋಸಮಾಡು ,
ಡಂಗುರ
ಹೊಡ : ಸಾರು ; ಘೋಷಿಸು
ಡುಂಕಿ
ಹೊಡೆ : ಅನುತ್ತೀರ್ಣನಾಗು
ತಂಪುಹೊತ್ತಿನಲ್ಲಿ
ನೆನೆ : ಬಹಳ ಕೃತಜ್ಞತೆಯನ್ನು ತೋರಿಸು .
ತಣ್ಣೀರೆರಚು
: ಉತ್ಸಾಹಭಂಗಮಾಡು
ತನ್ನ
ಕಾಲ ಮೇಲೆ ತಾನು ನಿಲ್ಲು : ಸ್ವಾವಲಂಬಿಯಾಗು .
ತಲೆ
ಎತ್ತಿ ತಿರುಗು : ಮರ್ಯಾದೆಯಿಂದ ಬದುಕು ,
ತಲೆ
ಓಡದಿರು : ಏನೂ ತೋಚದಿರು .
ತಲೆಕೆರೆ
: ಚಿಂತಿಸು .
ತಲೆ
ಕೊಡು : ಭಾರವಹಿಸಿಕೊಳ್ಳು .
ತಲೆಗೆಕಟ್ಟು
: ಒತ್ತಾಯದಿಂದ ಹೇರು , ಜವಾಬ್ದಾರಿ ಹೊರಿಸು .
ತಲೆಗೆ
ತರು : ತೊಂದರೆಗೆ ಸಿಕ್ಕಿಸು .
ತಲೆಗೆಹಚ್ಚಿಕೊಳ್ಳು
: ಬಹಳವಾಗಿ ಚಿಂತಿಸು .
ತಲೆಗೆ
ಹತ್ತು : ಅರ್ಥವಾಗು . ತಲೆಗೆ ಹಿಡಿ ,ಅರ್ಥವಾಗು
ತಲೆ
ತಪ್ಪಿಸು : ಜಾರಿಕೊಳ್ಳು ; ಕೈಗೆ ಸಿಗದಿರು .
ತಲೆತಾಕು
: ಕಷ್ಟಬರು ; ಅನುಭವಕ್ಕೆ ಬರು .
ತಲೆ
ತಿನ್ನು : ಕಾಡು ; ಕಾಡಿಸು .
ತಲೆ
ತಿರುಗು : ಬುದ್ದಿ ಬದಲಾಗು ; ಅಹಂಕಾರ ಪುಟಾಗು .
ತಲೆ
ತೊಳೆದುಕೊಳ್ಳು : ಸಂಬಂಧವನ್ನು ಸಂಪೂರ್ಣವಾಗಿ ಕಳೆದುಕೊಳ್ಳು .
ತಲೆದೂಗು
: ಮೆಚ್ಚುಗೆ ಸೂಚಿಸು ತಲೆ ಬಿದ್ದುಹೋಗು : ತುಂಬ ಶ್ರಮವಾಗು ; ಸಾಯು .
ತಲೆ
ಬಿಸಿಯಾಗು : ಕೋಪ , ಕೆಲಸ ಮುಂತಾದವುಗಳಿಂದ ಮೆದುಳಿಗೆ ಹೆಚ್ಚು ಶ್ರಮವಾಗು ,ಕಾತುರಕ್ಕೊಳಗಾಗು
ತಲೆ
ಬೋಳಿಸು : ನಷ್ಟವಾಗು
ತಲೆಭಾರ
: ದೊಡ್ಡ ಹೊಣೆಗಾರಿಕೆ ,
ತಲೆ
ಮಾಸಿದವ : ದುರದೃಷ್ಟವಂತ ; ಅನುನುಭವಿ .
ತಲೆಯ
ಮೇಲೆ ಕಲ್ಲುಹಾಕು : ನಾಶಮಾಡು , ತೊಂದರೆ ಯುಂಟುಮಾಡು
ತಲೆಯಮೇಲೆ
ಕೂರಿಸಿಕೊಳ್ಳು : ಅತಿ ಮುದ್ದುಮಾಡು : ತುಂಬ ಸಲಿಗೆ ಕೊಡು
ತಲೆಯ
ಮೇಲೆ ಕೈ ಹೊತ್ತು ಕುಳಿತು
ಕೊಳ್ಳು : ಏನೂ ತೋಚದಂತಾಗು : ಚಿಂತಿತನಾಗು .
ತಲೆಯ
ಮೇಲೆ ಚಪಡಿ ಎಳೆ : ನಾಶಮಾಡು ; ತೊಂದರೆ ಯುಂಟುಮಾಡು
ನೆಲಸಮಮಾಡು
: ನಾಶಮಾಡು .
ನೊಗಕ್ಕೆ
ತಲೆಕೊಡು : ಭಾರ ವಹಿಸಿಕೊಳ್ಳು
ನೊಣಹೊಡೆ
: ಕೆಲಸವಿಲ್ಲದೆ ಸೋಮಾರಿಯಾಗಿ ಕುಳಿತಿರು .
ಪಂಚಪ್ರಾಣ
: ಅತಿಪ್ರಿಯ ವಸ್ತು ಅಥವಾ ವ್ಯಕ್ತಿ .
ಪಂಚಾಂಗ
ಓದು : ಒಣಹರಟೆ ಹೊಡೆ .
ಪಂಚಾಂಗ
ಬಿಚ್ಚು : ಒಣಹರಟೆಗೆ ಪ್ರಾರಂಭಿಸು .
ಪಾಠಕಲಿಸು
: ಬುದಿಕಲಿಸು .
ಪಾತಾಳಕ್ಕಿಳಿದು
ಹೋಗು : ದುಃಖದಿಂದ ಕುಸಿದು ಹೋಗು .
ಪಾಷಾಣ
ಹೃದಯ : ಕಠಿಣ ಮನಸ್ಸು .
ಪಿಷ್ಟಪೇಷಣ
: ಹೇಳಿದ್ದನ್ನೇ ತಿರುಗಿ ತಿರುಗಿ ಹೇಳುವುದು .
ಪುಕ್ಕ
ಕತ್ತರಿಸು : ಗರ್ವ ಇಳಿಸು ; ಹತೋಟಿಯಲ್ಲಿಡು .
ಪುಸ್ತಕದ
ಬದನೆಕಾಯಿ : ಪುಸ್ತಕದಲ್ಲಿ ಹೇಳಿದ್ದು ಮಾತ್ರ ಅನುಭವಕ್ಕೆ ಬಾರದ್ದು : ವ್ಯವಹಾರ ಜ್ಞಾನ ಇಲ್ಲದ . ಪ್ರಪಂಚ ಕಾಣದವ : ಅನುಭವವಿಲ್ಲದವ .
ಪ್ರಾಣ
ಹಿಂಡು : ಬಹಳವಾಗಿ ಪೀಡಿಸು ; ಕಾಟಕೊಡು .
ಪ್ರಾಣಹೋಗು
: ಬಹಳ ಕಷ್ಟವಾಗು .
ಬಡಪಟ್ಟಿಗೆ
: ಸುಲಭವಾಗಿ
ಬಣ್ಣ
ಕಟ್ಟಿ ಹೇಳು : ಉಪ್ಪೇಕ್ಷಿಸಿ ಹೇಳು .
ಬಣ್ಣ
ಕಟ್ಟು : ಕಳೆಯೇರಿಸು ; ಇಲ್ಲದ್ದನ್ನು ಸೇರಿಸು .
ಬಣ್ಣದ
ಚಿಟ್ಟೆ : ಸೊಗಸುಗಾತಿ ,
ಬಣ್ಣ
ಬದಲಾಯಿಸು : ಸ್ವಭಾವ ಅಥವಾ ಧೋರಣೆ ಯನ್ನು ಬದಲಾಯಿಸು ; ಒಂದೊಂದು ಸಲ ಒಂದೊಂದು ತೆರನಾಗಿರು
.
ಬಣ್ಣ
ಬಯಲಿಗೆ ಬರು : ಒಳಗುಟ್ಟು ಗೊತ್ತಾಗು ; ರಹಸ್ಯ ಬಯಲಾಗು .
ಬದ್ಧಕಂಕಣನಾಗು
: ಸಂಕಲ್ಪ ಮಾಡಿದವನಾಗು .
ಬಲವಂತ
ಮಾಘಸ್ನಾನ : ಒತ್ತಾಯದ ಕೆಲಸ .
ಬಲಿಯಾಗು
: ನಾಶಕ್ಕೆ ಗುರಿಯಾಗು .
ಬಲೆಗೆ
ಬೀಳು : ವಶಕ್ಕೆ ಸಿಕ್ಕು .
ಬಳೆ
ತೊಡಿಸು : ಬಂಧಿಸು ; ಕೋಳ ಹಾಕು ; ಅವಮಾನ ಪಡಿಸು .
ಬಳಗೂಡು
: ಹೇಡಿಯಾಗು .
ಬಾದರಾಯಣ
ಸಂಬಂಧ : ಸುತ್ತು ಬಳಸಿನ ಸಂಬಂಧ .
ಬಾಯಿಕಟ್ಟು
: ಮಾತನಾಡದಿರು ; ದಾಕ್ಷಿಣ್ಯಕ್ಕೆ ಸಿಕ್ಕು ; ದಾಕ್ಷಿಣ್ಯಕ್ಕೆ ಸಿಕ್ಕಿಸು .
ಎದೆಯ
ಮೇಲೆ ಕೈಯಿಟ್ಟು ಹೇಳು : ಪ್ರಮಾಣ ಮಾಡಿ ಹೇಳು .
ಎಮ್ಮೆತಮ್ಮಣ್ಣ
: ಮಂದಬುದ್ಧಿಯವ
ಎರಡು
ನಾಲಗೆ : ಒಂದೊಂದು ಸಲ ಒಂದೊಂದು ರೀತಿ
ಹೇಳುವುದು .
ಎರಡುಬಗೆ
: ದ್ರೋಹವನ್ನು ಚಿಂತಿಸು ; ಭೇದ ಮಾಡು .
ಎರಡೆಣಿಸು
: ದ್ರೋಹವನ್ನು ಚಿಂತಿಸು ; ಭೇದ ಮಾಡು .
ಎಲ್ಲರ
ಬಾಯಲ್ಲೂ ಇರು : ಪ್ರಸಿದ್ಧವಾಗಿರು .
ಎಲೆ
ಎಂಜಲು ಮಾಡು : ನೆಪಮಾತ್ರಕ್ಕೆ ಊಟಮಾಡು .
ಎಳ್ಳಷ್ಟು
: ಅತ್ಯಲ್ಪ .
ಎಳ್ಳುನೀರು
ಬಿಡು : ಶಾಶ್ವತವಾಗಿ ಋಣವನ್ನು ಕಡಿದುಕೊಳ್ಳು ; ಕೈಬಿಡು .
ಏತಿಯೆಂದರೆ
ಪ್ರೀತಿಯೆನ್ನು : ಹೇಳಿದುದಕ್ಕೆ ವಿರುದ್ಧವಾಗಿ ಹೇಳು .
ಏಳನೆಯ
ತಿಂಗಳಿನಲ್ಲಿ ಹುಟ್ಟಿದವ : ಅವಸರಪಡುವವ .
ಏಳು
ಕೆರೆಯ ನೀರು ಕುಡಿದವ : ಬಹಳ ಅನುಭವ ಶಾಲಿ .
ಒಂಟಿಕಾಲಿನ
ಮೇಲೆ ನಿಲ್ಲು : ಬಹಳ ಕುತೂಹಲ ದಿಂದಿರು ; ಬಹಳ ಕಾತರದಿಂದಿರು .
ಒಂದು
ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚು : ಪಕ್ಷಪಾತಮಾಡು .
ಒಂದು
ಕಾಲು ಒಳಗೆ , ಒಂದು ಕಾಲು ಹೊರಗೆ : ಗಡಿಬಿಡಿಯಲ್ಲಿರು ; ಯಾವ ಪಕ್ಷಕ್ಕೂ ಸೇರದಿರು .
ಒಗ್ಗರಣೆ
ಹಾಕು : ಅತಿಶಯವಾಗಿ ಹೇಳು ; ಇಲ್ಲದಿರು ವುದನ್ನೂ ಬೆರೆಸಿ ಹೇಳು .
ಒಡಕುಬಾಯಿ
: ಗುಟ್ಟು ನಿಲ್ಲದ ಬಾಯಿ .
ಒಡಕುಹಣೆಯುವ
: ದುರದೃಷ್ಟವಂತ ; ಹತಭಾಗ್ಯ .
ಒಣಜಂಬ
: ವ್ಯರ್ಥ ಅಹಂಕಾರ ,
ಒಣಜಗಳ
: ನಿಷ್ಪಲ ಹೋರಾಟ ,
ಒಣ
ಪಾಂಡಿತ್ಯ : ರಸಗ್ರಹಣಮಾಡದ ಪಾಂಡಿತ್ಯ .
ಒಣಹರಟೆ
: ಪೊಳ್ಳುಮಾತುಗಳಿಂದ ಕೂಡಿದ ಹರಟೆ ; ಉಪಯೋಗವಿಲ್ಲದ ಹರಟೆ .
ಒರೆಗೆ
ಹಚ್ಚು : ಚೆನ್ನಾಗಿ ಪರೀಕ್ಷಿಸು .
ಓಂ
ಪ್ರಥಮ : ಮೊತ್ತ ಮೊದಲು .
ಓಗೊಡು
: ಪ್ರತ್ಯುತ್ತರ ಕೊಡು ; ಒಪ್ಪಿಗೆ ಸೂಚಿಸು .
ಓನಾಮ
: ಪ್ರಾರಂಭದ ಪಾಠ
ಕಣ್ಣುಗುಡ್ಡೆ
ಮೇಲೆ ಹೋಗು : ಬಹಳ ಕಷ್ಟವಾಗು .
ಕಣ್ಣುತಪ್ಪಿಸು
: ಮರೆಯಾಗು
ಕಣ್ಣುತಾಗು
: ದೃಷ್ಟಿಯಾಗು .
ಕಣ್ಣುತಿರುಗು
: ಗಮನ ಹರಿ
ಕಣ್ಣು
ಬಿಡು : ಹುಟ್ಟು ; ದಯೆತೋರಿಸು , ಲಕ್ಷದಲ್ಲಿ ತಂದುಕೊಳ್ಳು .
ಕಣ್ಣು
ಬೀಳು : ಲಕ್ಷ ಬೀಳು .
ಕಣ್ಣು
ಮುಚ್ಚಿ : ಹಿಂದೆ ಮುಂದೆ ನೋಡದೆ .
ಕಣ್ಣುಮುಚ್ಚು
: ಸಾಯು .
ಕ
ಕಣ್ಣುರಿ : ಅಸೂಯೆ ; ಹೊಟ್ಟೆಕಿಚ್ಚು .
ಕಣ್ಣುಹಾಕು
: ಆಶಿಸು .
ಕಣ್ಣುಹಾಯಿಸು
: ಮೇಲು ಮೇಲಕ್ಕೆ ನೋಡು ; ಸೂಲವಾಗಿ ಪರಿಶೀಲಿಸು .
ಕಣ್ಮರೆಸು
: ಸಮಾಧಾನಮಾಡು .
ಕಣ್ಮಣಿ
: ಪ್ರೀತಿಪಾತ್ರವಾದದ್ದು
.
ಕತ್ತರಿಹಾಕು
: ಕದಿ ; ಕಿತ್ತುಕೊಳ್ಳು .
ಕತ್ತಿಕಟ್ಟು
: ಯುದ್ಧಕ್ಕೆ ಸಿದ್ಧವಾಗು ; ದ್ವೇಷಿಸು .
ಕತ್ತಿ
ಮಸೆ : ಹಗೆಸಾಧಿಸು .
ಕತ್ತೆದುಡಿತ
: ವಿಪರೀತ ಕೆಲಸ .
ಕನಸಿನ
ಗಂಟು : ಅಲಭ್ಯವಾದುದು .
ಕನಸಿನ
ಗೋಪುರ : ಭ್ರಮೆ ; ಫಲಿಸದ ಆಸೆ .
ಕನ್ನಡಿಯೊಳಗಿನ
ಗಂಟು : ಅಲಭ್ಯವಾದುದು .
ಕಪಾಲಮೋಕ್ಷ
: ಕೆನ್ನೆಗೆ ಏಟು .
ಕಪಿಮುಷ್ಟಿ
: ಬಿಗಿಯಾದ ಹಿಡಿತ .
ಕಬ್ಬಿಣದ
ಕಡಲೆ : ತುಂಬ ಗಹನವಾದ ಸಂಗತಿ ; ಅತ್ಯಂತ ಕಠಿನವಾದ ವಿಷಯ .
ಕರುಳು
ಕತ್ತರಿಸು : ಮನಸ್ಸಿಗೆ ತೀಕ್ಷ್ಮವಾದ ನೋವುಂಟು ಮಾಡು .
ಕರುಳು
ಕಿತ್ತುಬರು : ಬಹಳ ದುಃಖವಾಗು .
ಕರುಳುಹಿಂಡು
: ಬಹಳ ಸಂಕಟವಾಗು ; ಹೃದಯ ಕಲಕು .
ಕಲ್ಲುಮನಸ್ಸು
: ಕಠಿಣ ಮನಸ್ಸು ,
ಕಲ್ಲುಹಾಕು
: ವಿಘ್ನವುಂಟುಮಾಡು .
ಕಸದ
ಬುಟ್ಟಿಯಲ್ಲಿ ಹಾಕು : ಅಲಕ್ಷಿಸು ತಿರಸ್ಕರಿಸು .
ಕಾಮಾಲೆಕಣ್ಣಿನಿಂದ
ನೋಡು : ಸಹಜವಲ್ಲದ ದೃಷ್ಟಿಯಿಂದ ನೋಡು
ಕಾಲಾಡು
: ತಿರುಗಾಡು ; ಸುತ್ತಾಡು ,
ಕಾಲಿಗೆ
ಬುದ್ಧಿಹೇಳು : ಓಡು .
ಕಾಲುಕಟ್ಟು
: ಯಾಚಿಸು ; ದೈನ್ಯದಿಂದ ಕೇಳು .
ಕಾಲೂರು
: ನೆಲೆಯಾಗಿ ನಿಲ್ಲು
ಕಾಲೆಳೆದುಕೊಂಡು
ಹೋಗು : ನಿಧಾನವಾಗಿ ನಡೆ .
ಕಾಸಿಗೂ
ಕಡೆ : ಅಪ್ರಯೋಜಕ .
ಕಾಸಿಗೊಂದು
ಕೊಸರಿಗೆರಡು : ಬಹಳ ಅಗ್ಗವಾಗಿ ಸಿಗುವ
ಕಿಡಿಕಾರು
: ಸಿಟ್ಟಿಗೇಳು ; ಉರಿದುಬೀಳು .
ಕಿರುಬೆರಳಲ್ಲಿ
ಕುಣಿಸು : ಹೇಳಿದಂತೆ ಕೇಳುವ ಹಾಗೆ ಮಾಡು .
ಕಿವಿಕಚ್ಚು
: ಚಾಡಿ ಹೇಳು .
ಕಿವಿಕೊಟ್ಟು
ಕೇಳು : ಗಮನವಿಟ್ಟು ಕೇಳು .
ಕಿವಿಕೊಡು
: ತಲ್ಲೀನತೆಯಿಂದ ಕೇಳು .
ಕಿವಿಗೆ
ಬೀಳು : ಆಕಸ್ಮಿಕವಾಗಿ ಕೇಳು .
ಕಿವಿಗೆ
ಹಬ್ಬವಾಗು : ಕೇಳಿ ಸಂತೋಷವುಂಟಾಗು .
ಕಿವಿ
ನೆಟ್ಟಗಾಗು : ಕೇಳುವ ಆಸಕ್ತಿ ಹೆಚ್ಚಾಗು .
ಕಿವಿಯ
ಮೇಲೆ ಹಾಕಿಕೊಳ್ಳು : ಸರಿಯಾಗಿ ಕೇಳು .
ಕುಡಿವ
ನೀರು ಅಲ್ಲಾಡದೆ : ಏನೂ ತೊಂದರೆಯಾಗಿದೆ .
ಕುತ್ತಿಗೆ
ಕೊಯ್ಯ : ಮೋಸಮಾಡು ; ವಿಶ್ವಾಸಘಾತ ಮಾಡು .
ಕುತ್ತಿಗೆಗೆ
ಕಟ್ಟಿಕೊಳ್ಳು : ಹೊಣೆ ಹೊತ್ತು ಕೊಳ್ಳು ; ಮದುವೆ ಯಾಗು .
ಕುರುಡುನಂಬಿಕೆ
: ವಿವೇಕವಿಲ್ಲದ ನಂಬಿಕೆ .
ಕೂದಲು
ಕೊಂಕದಿರು : ಕೆಡುಕಾಗದಿರು .
ಕೂಪಮಂಡೂಕ
: ಸಂಕುಚಿತ ವಿಚಾರವುಳ್ಳವ ; ಲೋಕಾನು ಭವವಿಲ್ಲದವ .
ಕೈ
ಇಡು : ಕಾರ್ಯದಲ್ಲಿ ತೊಡಗು ; ಉದ್ಯೋಗಿಸು .
ಕೈಕಚ್ಚು
: ನಷ್ಟವಾಗು . ಕೈಕಟ್ಟಿ ಕೂಡು : ನಿರುಪಾಯನಾಗು .
ಕೈಕಟ್ಟು
: ನಿಯಂತ್ರಿಸು ; ತಡೆ . ಕೈಕಾಲು ಬಿಡು : ಧೈರ್ಯಗೆಡು .
ಕೈಕೊಡು
: ಮೋಸಮಾಡು .
ಎರಡು
ಬಗೆ : ದ್ರೋಹವನ್ನು
ಚಿಂತಿಸು , ಭೇದ ಮಾಡು
ಅಂಗೈನಲ್ಲಿ – ಚೆನ್ನಾಗಿ ತಿಳಿದಿರುವುದು
ಅಂತರ್ಲಾಗ ಹಾಕು – ಬಹಳ ಪ್ರಯತ್ನ ಪಡು
ಅಜ್ಜಿಕತೆ
– ಕಟ್ಟುಕತೆ
ಅಡ್ಡಕ್ಕೇರಿಸು
– ಹೊಗಳಿ ಉಬ್ಬಿಸು
ಅಡ್ಡದಾರಿ ಹಿಡಿ – ಕೆಟ್ಟ ಚಾಳಿಯಲ್ಲಿ ತೊಡಗು
ಅನ್ನಕ್ಕೆ ಕಲ್ಲು ಹಾಕು : – ಜೀವನ ಮಾರ್ಗ ಹಾಳು ಮಾಡು
ಅಮಾಸ್ಯೆಗೊಮ್ಮೆ
ಹುಣ್ಣಿಮೆಗೊಮ್ಮೆ : – ಬಹಳ ಅಪರೂಪವಾಗಿ
ಅರೆದು ಕೂಡಿಸು : – ಚೆನ್ನಾಗಿ
ತಿಳಿಯುವಂತೆ ಹೇಳಿಕೊಡು
ಅರ್ಧಚಂದ್ರ
ಪ್ರಯೋಗ ಮಾಡು : – ಕತ್ತು ಹಿಡಿದು ನೂಕು
ಅಳಿಲು
ಸೇವೆ : – ನಿಷ್ಠೆಯಿಂದ ಮಾಡುವ ಅಲ್ಪಸೇವೆ
ಉಭಯ
ಸಂಕಟ : – ಸಂದಿಗ್ಧ ಸ್ಥಿತಿ
ಒಗ್ಗರಣೆ ಹಾಕು : – ಇಲ್ಲದಿರುವುದನ್ನು ಬೆರಸಿ ಹೇಳು
ಎಡವಿದ
ಕಡ್ಡಿ ಎತ್ತದಿರು : – ಸೋಮಾರಿಯಾಗು
ಎದೆ
ಭಾರವಾಗು – ದುಃಖವಾಗು
ಎದೆಯ
ಮೇಲೆ ಕೈಯಿಟ್ಟು ಹೇಳು – ಪ್ರಮಾಣ ಮಾಡು
ಎಳ್ಳಷ್ಟು
: – ಅತ್ಯಲ್ಪ
ಏಳು
ಕೆರೆಯ ನೀರು ಕುಡಿದವ : -ಬಹಳ ಅನುಭವ ಶಾಲಿ
ಏಳು ತಿಂಗಳಿನಲ್ಲಿ ಹುಟ್ಟಿದವ : – ಅವಸರ ಪಡುವವ
ಒಂದು
ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಪಕ್ಷಪಾತ ಮಾಡುವವ
ಎದೆಯ
ಮೇಲಿನ ಭಾರ ಇಳಿ : – ಹೊಣೆಗಾರಿಕೆ ಕಡಿಮೆಯಾಗು
ಎಳ್ಳು
ನೀರು ಬಿಡು : -ಶಾಶ್ವತವಾಗಿ ಋಣವನ್ನು ಕಡಿದು ಕೊಳ್ಳು
ಒಡಕು
ಬಾಯಿ : – ಯಾವುದನ್ನು ಉಳಿಸಿಕೊಳ್ಳದೇ ಆಡುವವ
ಒರೆಗೆ
ಹಚ್ಚು : – ಚೆನ್ನಾಗಿ ಪರೀಕ್ಷಿಸು
ಕಂತೆಪುರಾಣ
: – ಯಾರಿಗೂ ಬೇಡವಾದ ಹಳೆಯ ವಿಚಾರ
ಕಂಬಿ
ಕೀಳು : – ಓಡಿಹೋಗು
ಕಚ್ಚೆ
ಕಟ್ಟು : – ಸಿದ್ಧನಾಗು
ಕಟ್ಟು
ಕತೆ : – ಸುಳು ಮಾತು ಸುಳ್ಳು ಪ್ರಸಂಗ
ಕಂಕಣ
ಬದ್ಧನಾಗು : – ಸಂಕಲ್ಪ ಮಾಡು
ಕಡಿವಾಣ
ಹಾಕು : – ಹತೋಟಿಯಲ್ಲಿಡು
ಕಣ್ಣಿಗೆ
ಮಣ್ಣೆರಚು : – ಮೋಸಮಾಡು
ಕಣ್ಣಿನಲ್ಲಿ
ಎಣ್ಣೆಹಾಕಿ ನೋಡು : – ಸೂಕ್ಷ್ಮವಾಗಿ ಪರಿಶೀಲಿಸು
ಕಣ್ಣಿರಿನಲ್ಲಿ
ಕೈ ತೊಳೆ : – ಬಹಳ ದುಃಖ , ಕಷ್ಟವನ್ನು ಅನುಭವಿಸು
ಕಣ್ಣುತಾಗು
: – ದೃಷ್ಟಿಯಾಗು
ಕಣ್ಮಣಿ
– ಪ್ರೀತಿ ಪಾತ್ರವಾದುದ್ದು
ಕತ್ತಿಮಸೆ
– ಹಗೆ ಸಾಧಿಸು
ಕಪಾಳಮೋಕ್ಷ
– ಕೆನ್ನೆಗೆ ಏಟು
ಕಪಿಮುಷ್ಟಿ
: ಬಿಗಿಯಾದ
ಹಿಡಿತ
ಕಬ್ಬಿಣದ
ಕಡಲೆ : – ಅತ್ಯಂತ ಕಠಿಣವಾದ ವಿಷಯ
ಕಲ್ಲು
ಹಾಕು : – ವಿಘ್ನ ಉಂಟುಮಾಡು
ಕಾಲಿಗೆ
ಬುದ್ಧಿ ಹೇಳು : – ಓಡು ಕಿಡಿಕಾರು
ಕಿಡಿಕಾರು : ಉರಿದು ಬೀಳು
ಕಿವಿ
ಕಚ್ಚು : ಚಾಡಿ ಹೇಳು
ಕುತ್ತಿಗೆ ಕೊಯ್ಯ : ಮೋಸ ಮಾಡು , ವಿಶ್ವಾಸ ಘಾತಮಾಡು
ಕೂಪ
ಮಂಡೂಪ : ಲೋಕಾನುಭಾವವಿಲ್ಲದವ
ಕೈ
ಕೊಡು : ಮೋಸ
ಮಾಡು
ಕೈ ಬಿಸಿ ಮಾಡು
: ಲಂಚ ಕೊಡು
ಗಂಟು
ಕಟ್ಟು : ಹೊರಡಲು
ಸಿದ್ಧವಾಗು
ಗಂಟು
ತಿನ್ನು : ಕೊಟ್ಟ
ಹಣ ಕೊಡದೆ ಮೋಸ ಮಾಡು
ಅಂಗೈನಲ್ಲಿ:
ಚೆನ್ನಾಗಿ ತಿಳಿದಿರುವುದು .
ಅಂಗೈಯಲ್ಲಿ
ಜೀವ ಹಿಡಿದುಕೊಳ್ಳು : ಬಹಳ ಭಯ ಹಾಗೂ ಎಚ್ಚರಿಕೆಗಳಿಂದ
ಕೂಡಿರು .
ಅಂತರ್ಲಾಗ
ಹಾಕು : ಬಹಳ ಪ್ರಯತ್ನಮಾಡು .
ಅಗ್ರತಾಂಬೂಲ
: ಮೊದಲ ಮರ್ಯಾದೆ .
ಅಗ್ರಪೀಠ
: ಮುಖ್ಯ ಸ್ಥಾನ ; ಮೊದಲ ಮರ್ಯಾದೆ .
ಅಗ್ರವೀಳ್ಯ
: ಮೊದಲ ಮರ್ಯಾದೆ .
ಅಜ್ಜನ
ಕಾಲದ್ದು : ಬಹಳ ಹಳೆಯದು .
ಅಜ್ಜಿಕತೆ
: ಕಟ್ಟುಕತೆ .
ಅಟ್ಟಕ್ಕೇರಿಸು
: ಹೊಗಳಿ ಉಬ್ಬಿಸು .
ಅಡಕೆ
ಕೊಡು : ಬೀಳ್ಕೊಡು .
ಅಡ್ಡದಾರಿ
ಹಿಡಿ : ಕೆಟ್ಟಚಾಳಿಯಲ್ಲಿ ತೊಡಗು .
ಅನ್ನ
ಕಿತ್ತುಕೊಳ್ಳು : ಜೀವನಮಾರ್ಗವನ್ನು ಕೆಡಿಸು ,
ಅನ್ನಕ್ಕೆ
ಕಲ್ಲುಹಾಕು : ಜೀವನಮಾರ್ಗವನ್ನು ಹಾಳು ಮಾಡು .
ಅನ್ನದ
ದಾರಿ : ಬದುಕುವ ಮಾರ್ಗ .
ಅಮಾವಾಸ್ಯೆಗೊಮ್ಮೆ
ಹುಣ್ಣಿಮೆಗೊಮ್ಮೆ : ಬಹಳ ಅಪರೂಪವಾಗಿ ,
ಅರೆದು
ಕುಡಿಸು : ಚೆನ್ನಾಗಿ ತಿಳಿಯುವಂತೆ ಹೇಳಿ ಕೊಡು .
ಅರ್ಧಚಂದ್ರ
ಪ್ರಯೋಗಮಾಡು : ಕತ್ತು ಹಿಡಿದು ನೂಕು .
ಅವತಾರ
ಮುಗಿ : ಶಕ್ತಿ , ಪ್ರಭಾವ ಮುಂತಾದುವೆಲ್ಲ ತೀರ ತಗ್ಗಿ ಹೋಗು ; ಸಾಯು .
ಅಳಲೆಕಾಯಿ
ಪಂಡಿತ : ನಕಲಿ ವೈದ್ಯ .
ಅಳಿಲುಸೇವೆ
: ನಿಷ್ಠೆಯಿಂದ ಮಾಡುವ ಅಲ್ಪಸೇವೆ .
ಅಳೆದು
ಸುರಿದು : ಹಿಂದೆಮುಂದೆ ಯೋಚಿಸಿ .
ಆಕಾಶಕ್ಕೆ
ಏಣಿ ಇಡು : ಅಸಾಧ್ಯವಾದ ಕೆಲಸಕ್ಕೆ ಕೈಹಾಕು ಆಕಾಶಕ್ಕೆ ಹಾರು : ಅತ್ಯಾನಂದಪಡು .
ಆಕಾಶಕ್ಕೇರು
: ಹೆಚ್ಚಿನ ಆನಂದಪಡು ; ಜಂಬ ಮಾಡು
ಆಕಾಶದಿಂದ
ಇಳಿದುಬರು : ದೊಡ್ಡಗುಣಗಳಿಂದ ಕೂಡಿರು .
ಆಟ
ನಡೆ : ಪ್ರಭಾವ ಬೀರು
ಆಹುತಿಯಾಗು
: ಬಲಿಯಾಗು ; ನಾಶಹೊಂದು .
ಇಂದ್ರ
ಚಂದ್ರ ಅನ್ನು : ಅತಿಯಾಗಿ ಹೊಗಳು
ಇಕ್ಕಳ
ಹಾಕು : ಒತ್ತಾಯದ ಪ್ರಚೋದನೆ ಮಾಡು ,
ಇತಿಶ್ರೀ
: ಮುಕ್ತಾಯ ; ಕೊನೆ ಇಲ್ಲಿಯ ಕಡ್ಡಿಯನ್ನು ಅಲ್ಲಿ ಎತ್ತಿ ಇಡದಿರು ಯಾವ ಕೆಲಸವನ್ನೂ ಮಾಡದಿರು . ಇಹಲೋಕದ ಯಾತ್ರೆ ಮುಗಿಸು : ಸಾಯು
ಉಕ್ಕಿನ
ಕಡಲೆ : ತುಂಬ ಗಹನವಾದ ಸಂಗತಿ ; ಅತ್ಯಂತ ಕಠಿನವಾದ ವಿಷಯ .
ಉತ್ಸವಮೂರ್ತಿ
: ಚೆಲುವ ; ಕೆಲಸಮಾಡದೆ ಆಲಸ್ಯ ದಿಂದಿರುವವನು .
ಉಪ್ಪಿಡು
: ಅನ್ನಹಾಕು ; ಕಾಪಾಡು .
ಉಪ್ಪಿಲ್ಲ
ಹುಳಿಯಿಲ್ಲ : ನೀರಸವಾದುದು ; ಸ್ವಾರಸ್ಯವಿಲ್ಲದ್ದು .
ಉಪ್ಪುಖಾರ
ಹಚ್ಚು : ಇಲ್ಲದ್ದನ್ನು ಸೇರಿಸು .
ಉಭಯಸಂಕಟ
: ಸಂದಿಗ್ಧ ಸ್ಥಿತಿ .
ಉರಿದುಬೀಳು
: ಬಹುವಾಗಿ ರೇಗು .
ಉರಿ
ಹೊತ್ತಿಸು : ತುಂಬ ರೇಗಿಸು ; ವೈಷಮ್ಯ ಹುಟ್ಟಿಸು .
ಎಂಜಲಿಗೆ
ಕೈಯೊಡ್ಡು : ಹಂಗಿಗೆ ಒಳಗಾಗು .
ಎಂಜಲುಕೈಯಲ್ಲಿ
ಕಾಗೆ ಓಡಿಸದವ : ಜಿಪುಣ ,
ಎಕ್ಕಹುಟ್ಟಿಹೋಗು
: ಹಾಳಾಗು .
ಎಡವಿದ
ಕಡ್ಡಿ ಎತ್ತದಿರು : ಸೋಮಾರಿಯಾಗು .
ಎತ್ತಂಗಡಿಯಾಗು
: ವರ್ಗವಾಗು ; ದಿವಾಳಿ ತೆಗೆ
ಎತ್ತಿದ
ಕೈ : ಪ್ರವೀಣ .
ಎತ್ತಿದವರ
ಕೈಗೂಸು : ಸ್ವಬುದ್ಧಿಯಿಲ್ಲದವ .
ಎದುರುಹಾಕಿಕೊಳ್ಳು
: ವಿರೋಧ ಕಟ್ಟಿಕೊಳ್ಳು
ಎದೆಗಟ್ಟಿ
ಮಾಡಿಕೊಳ್ಳು : ಧೈರ್ಯ ತಂದುಕೊಳ್ಳು
ಎದೆತಟ್ಟಿ
ಹೇಳು : ಧೈರ್ಯದಿಂದ ಹೇಳು .
ಎದೆತುಂಬಿಬರು
: ಭಾವೋದ್ವೇಗವುಂಟಾಗು .
ಎದೆಭಾರವಾಗು
: ದುಃಖವಾಗು .
ಎದೆಮಾಡು
: ಸಾಹಸಮಾಡು .
ಎದೆಯ
ಮೇಲಿನ ಭಾರ ಇಳಿ : ಹೊಣೆಗಾರಿಕೆ ಕಡಿಮೆಯಾಗು .
ಎದೆಯ
ಮೇಲೆ ಕುಳಿತುಕೊಳ್ಳು : ಮೇಲ್ವಿಚಾರಣೆ ನಡೆಸಿ ಕೆಲಸ ತೆಗೆದುಕೊಳ್ಳು ; ಅತಿ ಅವಸರ ಪಡಿಸು
ಓಬಿರಾಯನ
ಕಾಲ : ಬಹಳ ಪ್ರಾಚೀನ ಕಾಲ
ಕಂಕಣಬದ್ಧನಾಗು
: ಸಂಕಲ್ಪ ಮಾಡು .
ಕಂತಪುರಾಣ
: ಯಾರಿಗೂ ಬೇಡವಾದ ಹಳೆಯ ವಿಚಾರ .
ಕಂತೆಬಿಚ್ಚು
: ಹಳೆಯ ಮತ್ತು ಸುಳ್ಳಾದ ವಿಷಯವನ್ನು ಹೇಳತೊಡಗು .
ಕಂಬಕೀಳು
: ಓಡಿಹೋಗು . ಕಗ್ಗಂಟು : ಬಗೆಹರಿಸಲಾಗದ ಸಮಸ್ಯೆ .
ಕಚ್ಚೆಕಟ್ಟು
: ಸಿದ್ಧನಾಗು .
ಕಟ್ಟಿಟ್ಟ
ಬುತ್ತಿ : ಅನುಭವಿಸಲೇಬೇಕಾಗಿರುವುದು .
ಕಟ್ಟಿಡು
: ಮಾಸಲಾಗಿಡು ; ಬದಿಗಿರಿಸು .
ಕಟ್ಟುಕತೆ
: ಸುಳ್ಳುಮಾತು ; ಸುಳ್ಳು ಪ್ರಸಂಗ .
ಕಟ್ಟೆಪುರಾಣ
: ಕಾಡುಹರಟೆ ; ವ್ಯರ್ಥಚರ್ಚೆ .
ಕಡಿದು
ತೋರಣಕಟ್ಟು : ಶಿಕ್ಷಿಸು .
ಕಡಿವಾಣ
ಹಾಕು : ಹತೋಟಿಯಲ್ಲಿಡು .
ಕಣಕ್ಕೆ
ಇಳಿ : ಕರೆಗೆ ಸಿದ್ಧನಾಗಿ ನಿಲ್ಲು , ಹೋರಾಟಕ್ಕೆ ತೊಡಗು .
ಕಣ್ಣಾಡಿಸು
: ಸ್ಕೂಲವಾಗಿ ಪರಿಶೀಲಿಸು ; ಮೇಲು ಮೇಲಕ್ಕೆ ನೋಡು .
ಕಣ್ಣಿಗೆ
ಮಣ್ಣೆರಚು : ಮೋಸಮಾಡು .
ಕಣ್ಣಿಗೆಹಬ್ಬವಾಗು
: ( ಸುಂದರ ದೃಶ್ಯಗಳನ್ನು ) ನೋಡಿ ಬಹಳ ಸಂತೋಷವುಂಟಾಗು .
ಕಣ್ಣಿಗೆ
ಹೊಡೆ : ಸ್ಪಷ್ಟವಾಗಿ ಕಾಣಿಸಿಕೊಳ್ಳು .
ಕಣ್ಣಿನಲ್ಲಿ
ಎಣ್ಣೆ ಹಾಕಿನೋಡು : ಜಾಗರೂಕತೆಯಿಂದ ಹುಡುಕು ; ಸೂಕ್ಷ್ಮವಾಗಿ ಪರಿಶೀಲಿಸು .
ಕಣ್ಣಿನಲ್ಲಿ
ಕಣ್ಣಿಟ್ಟು ನೋಡು : ಬಹಳ ಎಚ್ಚರಿಕೆಯಿಂದ ನೋಡು .
ಕಣ್ಣಿನಲ್ಲಿ
ರಕ್ತಬರು : ಬಹಳ ಯಾತನೆಯಾಗು : ಬಹಳ ಕಷ್ಟಪಡು .
ಕಣ್ಣಿನಿಂದ
ಕೆಂಡಕಾರು : ಬಹಳ ಸಿಟ್ಟಾಗು .
ಕಣ್ಣೀರಿನಲ್ಲಿ
ಕೈತೊಳೆ : ಬಹಳ ದುಃಖವನ್ನೂ ಕಷ್ಟವನ್ನೂ ಅನುಭವಿಸು .
ಕಣ್ಣುಕಣ್ಣು
ಬಿಡು : ಮಿಡುಕಾಡು ; ಒದ್ದಾಡು ; ಪರದಾಡು .
ಕಣ್ಣುಕೀಳು
: ನೋಟವನ್ನು ಬೇರೆಡೆಗೆ ಬದಲಿಸು
ಕಣ್ಣು
ಕೆಂಡಮಾಡು :ಬಹಳ ಸಿಟ್ಟಾಗು .
ಕಣ್ಣು
ಕೆಂಪಾಗು : ಕೋಪವುಂಟಾಗು .