🙏🏼🙏🏼*ನಿಮ್ಮನ್ನು ನೀವು ಸಾಬೀತು ಮಾಡಬೇಕಿರುವುದು ಎಲ್ಲಿ ಗೊತ್ತೇ?*🙏🏼🙏🏼
ಒಂದು ಸ್ಪರ್ದೆ ಏರ್ಪಾಟಾಗಿತ್ತು ," ಪ್ರತಿಯೊಬ್ಬರೂ ನೀವು ಸಾಕಿರುವ ಪ್ರಾಣಿಯನ್ನು ಕರೆತನ್ನಿ ಯಾವುದು ವೇಗವಾಗಿ ಓಡುತ್ತದೆಯೋ ಅದಕ್ಕೆ ಪ್ರಶಸ್ತಿ ಕೊಡುತ್ತೇವೆ" ಎಂದರು.
ಊರವರೆಲ್ಲರೂ ತಮ್ಮತಮ್ಮ ಮನೆಯಲ್ಲಿದ್ದ ನಾಯಿಗಳನ್ನು ಹಿಡಿದು ತಂದು,ಈಗ ವೇಗವಾಗಿ ಓಡಿ ಸ್ಪರ್ದೆ ಗೆಲ್ಲಬೇಕೆಂದು ಅವರವರ ನಾಯಿಗೆ ಹೇಳಿಕೊಟ್ಟರು.
ಅದರಲ್ಲೊಬ್ಬ ಸಾಕಿದ ಚಿರತೆಯನ್ನೂ ಕೂಡ ತಂದಿದ್ದ! ಸೇರಿದ್ದ ಸಾರ್ವಜನಿಕರು ದಿಗ್ಭ್ರಮೆಯಾಗಿದ್ದರು,'ಚಿರತೆಯ ಸರಿಸಮನಾಗಿ ಈ ನಾಯಿಗಳು ಓಡುವುದುಂಟಾ?' ಎಂದು.
ಸ್ಪರ್ದೆ ಶುರುವಾದದ್ದೇ ತಡ ಎಲ್ಲಾ ನಾಯಿಗಳೂ ದೌಡಾಯಿಸಿದವು,ಧೂಳೆಬ್ಬಿಸಿಕೊಂಡು ಪೇರಿ ಕಿತ್ತವು,ಮೊದಲ ಸ್ಥಾನ ಪಡೆಯಲು ಉಲ್ಕಾ ವೇಗ ಕಾಪಾಡುತ್ತಾ ಓಡತೊಡಗಿದವು ಆದರೆ ಚಿರತೆ ಮಾತ್ರ ಉಹ್ಞೂಂ, ಅಲುಗಾಡಲಿಲ್ಲ,ನಿರುಮ್ಮಳವಾಗಿ ಸುಮ್ಮನೆ ಕೂತಿತ್ತು. ಅದನ್ನು ನೋಡಿ ಸಿಟ್ಟಾದ ಮಾಲೀಕ ಚಿರತೆಯ ಬಳಿ ಹೋಗಿ 'ನಿನಗೇನು ಬರಬಾರದ್ದು ಬಂದಿದೆ? ಯಾಕೆ ಹೀಗೆ ಮಾಡಿದೆ? ಓಡಿದ್ದಿದ್ದರೆ ನೀನೇ ಅಲ್ಲವಾ ಗೆಲ್ಲುತ್ತಿದ್ದದ್ದು' ಎಂದ.
ಆಗ ಚಿರತೆಯು 'ಕೆಲವು ಸಲ ಎಲ್ಲರಿಗಿಂತ ನಾವೇ ಶ್ರೇಷ್ಟ ಎಂದು ಪ್ರತಿಪಾದಿಸಹೊರಡುವುದು ಅನೇಕ ಸಲ ನಮಗೆ ನಾವೇ ಅವಮಾನ ಮಾಡಿಕೊಂಡದ್ದಕ್ಕೆ ಸಮಾನವಾಗುತ್ತದೆ,ಅದಲ್ಲದೆ ಅನಗತ್ಯ ಜಾಗದಲ್ಲಿ ನಮ್ಮನ್ನು ನಾವು ಸಾಬೀತುಪಡಿಸಬೇಕಾದ ಅವಶ್ಯಕತೆಯೇ ಇರುವುದಿಲ್ಲ,ಹಾಗಾಗಿ ನನ್ನ ವೇಗದ ಜೊತೆ ನಾಯಿಗಳ ವೇಗದ ಸ್ಪರ್ದೆ ಇಟ್ಟಾಗ ನಾನು ಸುಮ್ಮನಿರುವುದೇ ಸೂಕ್ತ ಉತ್ತರ ಎನಿಸಿಕೊಳ್ಳುತ್ತದೆ ' ಎಂದಿತು
ನೀವೂ ಅಷ್ಟೇ ಎಲ್ಲ ಜಾಗದಲ್ಲೂ ನೀವೆಂದರೇನು ಎಂದು ಅರ್ಥ ಮಾಡಿಸಲು ಹೊರಡಬೇಡಿ,ತಾತ್ಸಾರವಷ್ಟೇ ಕೆಲವು ಜಾಗಗಳಲ್ಲಿ ಸೂಕ್ತ ಉತ್ತರವಾಗಿರುತ್ತದೆ,ಕೇವಲ ಒಂದು ಅಸಹ್ಯಕರ ನೋಟ ಸಾಕು.