ಮೌನದ ಶಕ್ತಿ

🙏🏼🙏🏼*ಮೌನದ ಶಕ್ತಿ*🙏🏼🙏🏼

ಒಬ್ಬ ರೈತ, ತನ್ನ ಮನೆಯ ಉಗ್ರಾಣವನ್ನು ಶುಚಿಗೊಳಿಸಿ, ದವಸ  ಧಾನ್ಯ, ಬೇಳೆ ಕಾಳು  ಸಾಮಾನು- ಸರಂಜಾಮುಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಕೆಲಸ ಮಾಡುತ್ತಿದ್ದನು. ಶುಚಿ ಗೊಳಿಸುವಾಗ ಅದು ಹೇಗೋ ಅವನ ಕೈಯಲ್ಲಿದ್ದ ವಾಚು ಬಿದ್ದು ಹೋಯಿತು. ರೈತ ಚಿಕ್ಕವನಿರುವಾಗ ಅವನ ತಂದೆ ಪ್ರೀತಿಯಿಂದ ತೆಗೆದು ಕೊಟ್ಟ ವಾಚು. ರೈತನಿಗೆ ಅದರ ಮೇಲೆ ಬಹಳ ಅಭಿಮಾನ. ಕೆಲಸ ಬಿಟ್ಟು ಹುಡುಕ ತೊಡಗಿದ ಎಷ್ಟೇ ಹುಡುಕಿದರೂ ಸಿಗಲಿಲ್ಲ. ಅವನಿಗೆ ಕೆಲಸ ಮಾಡಿದ ಆಯಾಸ, ವಾಚು ಕಳೆದು ಹೋದ ಬೇಸರ ಆಗಿತ್ತು. ಕೆಲಸ ಮುಂದುವರಿಸಲಾಗದೆ  ಉಗ್ರಾಣ  ಬಿಟ್ಟು ಹೊರಗೆ ಬರುತ್ತಾನೆ. ಮನೆಯ ಮುಂದಿನ ಅಂಗಳದಲ್ಲಿ ನಾಲ್ಕಾರು ಮಕ್ಕಳು ಸೇರಿಕೊಂಡು ಬುಗುರಿ ಆಡುತ್ತಿದ್ದರು. ಯೋಚಿಸಿದ ರೈತ, ಆ ಮಕ್ಕಳನ್ನು ಕರೆದು, ನೋಡಿ ಮಕ್ಕಳೇ ಉಗ್ರಾಣದಲ್ಲಿ ಕೆಲಸ ಮಾಡುವಾಗ ನನ್ನ  ಕೈ ಗಡಿಯಾರ  ಬಿದ್ದು ಕಳೆದು ಹೋಗಿದೆ. ನಾನು ಹುಡುಕಿದೆ ಸಿಗಲಿಲ್ಲ. ನೀವೆಲ್ಲ ಸೇರಿ ಹುಡುಕಿಕೊಟ್ಟರೆ ನಿಮಗೆ ಒಳ್ಳೆಯ ಬಹುಮಾನ ಕೊಡುವೆ ಎಂದನು.

ಮಕ್ಕಳು ಬಹುಮಾನದಾಸೆಗೆ ಉಗ್ರಾಣದೊಳಗೆ ಹೋಗಿ ಎಲ್ಲಾ ಕಡೆ ಜಾಲಾಡಿ ಹುಡುಕಿದವು. ಯಾರಿಗೂ ವಾಚು ಸಿಗಲಿಲ್ಲ. ಮಕ್ಕಳಿಗೂ ಆಯಾಸವಾಗಿತ್ತು. ಸಂಜೆಯಾಗುತ್ತಿತ್ತು. ಮಕ್ಕಳು ಮನೆಗೆ ಹೊರಟವು. ಇನ್ನು ತನ್ನ ವಾಚು ಸಿಗುವುದಿಲ್ಲ ಎಂದು ರೈತ ಉಗ್ರಾಣದ ಬಾಗಿಲು ಹಾಕಲು ಹೊರಟಿದ್ದನು.‌ ಅಲ್ಲೇ ನಿಂತಿದ್ದ ಒಬ್ಬ ಬಾಲಕ, ಅಣ್ಣ ನನಗೆ ಇನ್ನೊಮ್ಮೆ  ಗಡಿಯಾರ ಹುಡುಕಿ ಕೊಡುವ ಅವಕಾಶ ಕೊಡುವಿರಾ? ಎಂದು ಕೇಳಿತು. ರೈತನು ಒಲ್ಲದ ಮನಸ್ಸಿನಿಂದ ಒಪ್ಪಿ ,ನಾನು ಸ್ವಲ್ಪ ಹೊತ್ತಿಗೆ ಬರುತ್ತೇನೆ. ಅಷ್ಟರೊಳಗೆ ಸಿಕ್ಕರೆ ಸರಿ ಎಂದು ಹೇಳಿ ಹೋದ. 

ರೈತ ತನ್ನ ಕೆಲಸ ಮುಗಿಸಿ ಬಂದು ನೋಡುತ್ತಾನೆ. ಹುಡುಗನ ಕೈಯಲ್ಲಿ ಗಡಿಯಾರ ಇತ್ತು. ರೈತನಿಗೆ ಸಂತೋಷವಾಯಿತು. ಇಷ್ಟು ಬೇಗ ನಿನಗೆ ಹೇಗೆ ಸಿಕ್ಕಿತು ಎಂದು. ಬಾಲಕನನ್ನು ಕೇಳಿದ, ಎಲ್ಲರೂ ಹೋಗಿದ್ದರಿಂದ ಉಗ್ರಾಣ ಪ್ರಶಾಂತ ವಾಗಿತ್ತು ಸದ್ದಿರಲಿಲ್ಲ. ನಾನು ನಿಧಾನವಾಗಿ  ಎಚ್ಚರಿಕೆ ಯಿಂದ ಹುಡುಕುತ್ತಿದ್ದೆ  ಏನಾದರೂ ಶಬ್ದ ಕಿವಿಗೆ ಬೀಳುತ್ತದೆಯೇ? ಎಂದು ಕಿವಿಗೊಟ್ಟು ಕೇಳುತ್ತಿದ್ದೆ. ನಿಶ್ಯಬ್ದದಲ್ಲಿ ಗಡಿಯಾರದ ಟಿಕ್ ಟಿಕ್ ಟಿಕ್ ಶಬ್ದ ಕೇಳಿತು. ನಿಮ್ಮ ಕೈಗಡಿಯಾರ ಸಿಕ್ಕಿತು ಎಂದ. ರೈತನು ಬಾಲಕನನ್ನು ಹೋಗಳಿ ಒಳ್ಳೆಯ ಬಹುಮಾನ ಕೊಟ್ಟು ಕಳಿಸಿದ.

ಶಬ್ದಗಳು ಮಾಡದೇ ಇರುವ ಕೆಲಸವನ್ನು ಮೌನ ಮಾಡುತ್ತದೆ. ಮೌನದ ಶಕ್ತಿಗೆ 
ಶರಣಾಗದವರಿಲ್ಲ. ‘ಮೌನ’ ಹೇಳುವುದು ಸುಲಭ ಆಚರಣೆ ಮಾಡುವುದು ಕಷ್ಟ.  ಮನಸ್ಸು ಶಾಂತವಾಗಿದ್ದರೆ, ಬುದ್ಧಿ ಕೆಲಸ ಮಾಡುತ್ತದೆ. ಶಾಂತಿ ಮತ್ತು ತಾಳ್ಮೆಯಿಂದ ಬುದ್ಧಿ ಚುರುಕಾಗಿ ಮಾಡುವ ಕೆಲಸ ಸರಿಯಾಗುತ್ತದೆ.‌ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳುವ ಮಾರ್ಗದತ್ತ ಕೊಂಡಯ್ಯುತ್ತದೆ.

ಯಾರು ಓದುವನೋ, ಬರೆಯುವನೋ,
ಗಮನಿಸುವನೋ, ವಿಚಾರ ಮಾಡುವನೋ,
ಪಂಡಿತರ ನಡುವೆ ಜೀವಿಸುವನೋ, ಅವನ ಬುದ್ಧಿಯು
ಸೂರ್ಯನ ಕಿರಣಗಳು ಬಿದ್ದ ಕಮಲದ ಎಲೆಗಳಂತೆ ಅರಳುತ್ತದೆ. ಅಲ್ವಾ ನೀವು ಏನಂತೀರಿ ಸ್ನೇಹಿತರೆ ?

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...