ನೀವೆಂದೂ ಕೇಳಿರದ ಶ್ರೀಕೃಷ್ಣನ ಜೀವನದ ಆಶ್ಚರ್ಯಕರವಾದ ಸತ್ಯ ಸಂಗತಿಗಳು Untold Storie...




ಆತ್ಮಿಯರೇ ನಮಸ್ಕಾರ..

ನೀವೆಂದೂ ಕೇಳಿರದ ಶ್ರೀಕೃಷ್ಣನ ಜೀವನದ ಆಶ್ಚರ್ಯಕರವಾದ ಸತ್ಯ ಸಂಗತಿಗಳನ್ನು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ ಪೂರ್ಣ ನೋಡಿ..

ಕನ್ನಡ ಮಿಷನ್‌ ಟಿವಿ ಚಾನೆಲ್‌ಗೆ ಸ್ವಾಗತ..

ಸದಾಕಾಲ ಹಸನ್ಮುಖಿಯಾಗಿ, ಜೀವನದ ಎಲ್ಲ ಕಷ್ಟ, ಸುಖ, ನೋವು, ನಲಿವು, ಅಟ್ಟಹಾಸ ಎಲ್ಲವನ್ನೂ ಕಂಡು, ಜಗಕ್ಕೆ ಜೀವನ ಪಾಠ ಹೇಳಿದ ಮಹಾನುಭಾವ ಶ್ರೀಕೃಷ್ಣ. ಯಾವುದರ ಮೇಲೂ ಮೋಹವಿರಬಾರದು. ಏಕೆಂದರೆ, ಈ ಲೋಕದಲ್ಲಿ ಯಾವುದೂ ನಮ್ಮದಲ್ಲ ಅನ್ನುವುದನ್ನ ನಾವು ಶ್ರೀಕೃಷ್ಣನನ್ನು ನೋಡಿ ಕಲಿಯಬೇಕು.

ಇಂಥ ಶ್ರೀಕೃಷ್ಣನ ಜೀವನದಲ್ಲಿ ನಡೆದ ಕೆಲ ಸತ್ಯ ಘಟನೆಗಳ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯ ಸತ್ಯ.., ಹಲವರ ನೆಚ್ಚಿನ ದೇವರು ಶ್ರೀಕೃಷ್ಣ. ನೋಡಲು ಸುಂದರ, ಹೇಳಿರುವ ಜೀವನ ಪಾಠವೂ ಅತ್ಯದ್ಭುತ, ಅಲಂಕಾರ ಪ್ರಿಯ. ಹೀಗೆ ಹಲವು ವಿಶೇಷ ಗುಣಗಳು ಶ್ರೀಕೃಷ್ಣನಲ್ಲಿದೆ. ಹಾಗಾಗಿ ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಶ್ರೀಕೃಷ್ಣನ ವೇಷ ಹಾಕೇ ಹಾಕುತ್ತಾರೆ.

ಪ್ರತೀ ತಾಯಂದಿರುವ ತಮ್ಮ ಗಂಡು ಮಕ್ಕಳಿಗೆ ಹೆಣ್ಣಿನ ವೇಷ ಹಾಕೇ ಹಾಕುತ್ತಾರೆ. ತನ್ನ ಮಗ ಹೆಣ್ಣು ಮಕ್ಕಳ ಬಟ್ಟೆ ಹಾಕಿದಾಗ, ಹೇಗೆ ಕಾಣುತ್ತಾನೆ ಎಂದು ನೋಡುವ ಕುತೂಹಲ ಎಲ್ಲ ತಾಯಂದಿರಿಗೂ ಇರುತ್ತದೆ. ಹಾಗಾಗಿ ಜೀವನದಲ್ಲಿ ಒಮ್ಮೆಯಾದರೂ ಈ ಆಸೆಯನ್ನು ಅವರು ಈಡೇರಿಸಿಕೊಳ್ಳುತ್ತಾರೆ. ಅಲ್ಲದೇ ಹೆಣ್ಣು ಮಗುವಿಗಾಗಲಿ, ಗಂಡು ಮಗುವಿಗಾಗಲಿ ಕಾಡಿಗೆ ಹಚ್ಚೇ ಹಚ್ಚುತ್ತಾರೆ. ಆದರೆ ಇದರ ಹಿಂದೆ ಶ್ರೀಕೃಷ್ಣನ ಜೀವನದ ಒಂದು ಘಟನೆ ಅಡಗಿದೆ.

ಶ್ರೀಕೃಷ್ಣನ ತಾಯಿ ಯಶೋಧೆ ಕೂಡ ತನ್ನ ಮಗ ಶ್ರೀಕೃಷ್ಣನ ಮೇಲೆ ಯಾವುದೇ ದುಷ್ಟ ಶಕ್ತಿಗಳು, ರಾಕ್ಷಸರ ದೃಷ್ಟಿ ಬೀಳದಿರಲು ಎಂದು ಶ್ರೀಕೃಷ್ಣನಿಗೆ ಹೆಣ್ಣು ಮಕ್ಕಳ ಉಡುಪಿ ಹಾಕುತ್ತಿದ್ದಳಂತೆ. ಮತ್ತು ಕಾಡಿಗೆ ಹಚ್ಚುತ್ತಿದ್ದಳಂತೆ. ಅದೇ ಪದ್ಧತಿಯನ್ನು ಇಂದಿನ ಕಾಲದ ತಾಯಂದಿರು ಅನುಸರಿಸುತ್ತಿದ್ದಾರೆ. ಆದರೆ ಈ ಸತ್ಯ ಮಾತ್ರ ಗೊತ್ತಿರಲಿಕ್ಕಿಲ್ಲ.

ಇನ್ನು ಎರಡನೇಯ ಸತ್ಯ.., ಶ್ರೀಕೃಷ್ಣನನ್ನು ಬೆಣ್ಣೆ ಕಳ್ಳನೆಂದು ಕರೆಯಲಾಗುತ್ತಿತ್ತು. ಏಕೆಂದರೆ, ಆತ ತಾಯಿ ಮಾಡಿದ್ದ ಬೆಣ್ಣೆಯನ್ನು ಕದ್ದು ತಿನ್ನುತ್ತಿದ್ದ. ಹಾಗಾಗಿಯೇ ಇಂದಿಗೂ ಶ್ರೀಕೃಷ್ಣನಿಗೆ ಬೆಣ್ಣೆಯನ್ನೇ ಪ್ರಥಮ ನೈವೇದ್ಯವನ್ನಾಗಿ ಇಡಲಾಗುತ್ತದೆ. ಇನ್ನು ಶ್ರೀಕೃಷ್ಣ ಬೆಣ್ಣೆ ಕದ್ದು, ಅದರಲ್ಲಿ ದೊಡ್ಡ ಭಾಗವನ್ನು ಮಂಗಗಳಿಗೆ ಹಂಚುತ್ತಿದ್ದರು. ಬಳಿಕ ಸಣ್ಣ ಭಾಗವನ್ನು ತಾವು ತಿನ್ನುತ್ತಿದ್ದರು. ಏಕೆಂದರೆ, ವಾನರರು ಯಾರೆಂದು ಅವರಿಗೆ ತಿಳಿದಿದ್ದು, ಕಳೆದ ಜನ್ಮದಲ್ಲಿ ರಾಮನ ಅವತಾರದಲ್ಲಿದ್ದಾಗ, ತನಗೆ ಸಹಾಯ ಮಾಡಿದ್ದೇ ವಾನರರು ಎಂಬ ಕಾರಣಕ್ಕೆ, ಶ್ರೀಕೃಷ್ಣ ವಾನರರಿಗೆ ಬೆಣ್ಣೆ ಹಂಚುತ್ತಿದ್ದ.

ಮೂರನೇಯ ಸತ್ಯ.. ಉಜ್ಜಯನಿಯಲ್ಲಿ ಶ್ರೀಕೃಷ್ಣ ಗುರುಕುಲ ಸೇರಿ, ಅಲ್ಲಿಯೇ ಶಿಕ್ಷಣ ಪಡೆದಿದ್ದ. ಆ ಆಶ್ರಮದಲ್ಲಿ ಶ್ರೀಕೃಷ್ಣನಿಗೆ ಸಾಂದೀಪನ ಋಷಿಗಳು, ಪಾಠ ಹೇಳುತ್ತಿದ್ದರು. ಇದೇ ವೇಳೆ ಶ್ರೀಕೃಷ್ಣನಿಗೆ ಸುಧಾಮನೆಂಬ ಗೆಳೆಯ ಸಿಕ್ಕಿದ್ದು. ಶಿಕ್ಷಣವೆಲ್ಲ ಮುಗಿದ ಬಳಿಕ ಸಾಂದೀಪನ ಗುರುಗಳ ಬಳಿ ಹೋಗಿ, ಶ್ರೀಕೃಷ್ಣ ಗುರುದಕ್ಷಿಣೆಯಾಗಿ ನಾನೇನು ಕೊಡಲಿ ಎಂದು ಕೇಳುತ್ತಾನೆ. ಆದರೆ ತನಗೇನೂ ಬೇಡವೆಂದು ಸಾಂದೀಪನ ಗುರುಗಳು ನಿರಾಕರಿಸುತ್ತಾರೆ. ಆದರೂ ಬಿಡದ ಶ್ರೀಕೃಷ್ಣ ಗುರುದಕ್ಷಿಣೆ ಕೇಳಲೇಬೇಕೆಂದು ಹಠ ಮಾಡುತ್ತಾನೆ.

ಶ್ರೀಕೃಷ್ಣನ ಬಲ ಗೊತ್ತಿದ್ದ ಸಾಂದೀಪನ ಮುನಿಗಳು, ನನಗೊಬ್ಬ ಮಗನಿದ್ದ. ಅವನು ಆಡುತ್ತ ಸಮುದ್ರದ ಬಳಿ ಹೋದ. ಆಗ ಸಮುದ್ರದ ಅಲೆಗಳು ಬಂದು, ಅವನನ್ನು ಆವರಿಸಿ, ಕೊಂಡೊಯ್ಯಿತು. ಅಂದಿನಿಂದ ನನ್ನ ಮಗ ನನ್ನಿಂದ ದೂರವಾಗಿದ್ದಾನೆ, ಸಮುದ್ರದ ಅಲೆಗಳಿಂದ ಅವನನ್ನು ಪುನಃ ಕರೆತರಲು ಸಾಧ್ಯವಾದರೆ, ಕರೆ ತಾ ಎನ್ನುತ್ತಾರೆ.

ಆಗ ಸಮುದ್ರದ ಬಳಿ ಹೋದ ಶ್ರೀಕೃಷ್ಣನಿಗೆ ಈ ಕೆಲಸ ಶಂಖಾಸುರನದ್ದು ಎಂದು ಗೊತ್ತಾಗತ್ತದೆ. ಅವನು ಸಮುದ್ರದ ಬಳಿ ಬಂದವರನ್ನು ಕರೆದುಕೊಂಡು ಹೋಗಿ, ಸಮುದ್ರದ ಆಳದಲ್ಲಿರಿಸಿಕೊಳ್ಳುತ್ತಾನೆ ಎಂದು ಶ್ರೀಕೃಷ್ಣ ಅರಿಯುತ್ತಾನೆ. ಬಳಿಕ ಸಮುದ್ರದ ಆಳಕ್ಕೆ ಹೋಗಿ, ಶಂಖಾಸುರನೊಂದಿಗೆ ಯುದ್ಧ ಮಾಡಿ, ಸಾಂದೀಪನ ಗುರೂಜಿಯ ಮಗನೊಂದಿಗೆ ಇನ್ನೂ ಹಲವರ ಪ್ರಾಣ ರಕ್ಷಣೆ ಮಾಡುತ್ತಾನೆ.

ನಾಲ್ಕನೇಯ ಸತ್ಯ.. ಶ್ರೀವಿಷ್ಣುವಿನ ವಾಹನವಾದ ಶೇಷನಾಗ, ಪ್ರತೀ ಅವತಾರದಲ್ಲೂ ಶ್ರೀವಿಷ್ಣುವಿಗೆ ಸಾಥ್ ಕೊಟ್ಟಿದ್ದಾನೆ.
ಅದೇ ರೀತಿ ರಾಮಾಯಣ ಕಾಲದಲ್ಲಿ ವಿಷ್ಣು ರಾಮನಾದರೆ, ಶೇಷ ಲಕ್ಷ್ಮಣನಾಗಿದ್ದ. ಆದರೆ ಶ್ರೀವಿಷ್ಣುವಿನ ಬಳಿ ದೂರು ಹೇಳಿದ ಶೇಷನಾಗ, ನೀವು ಯಾವಾಗಲೂ ನನ್ನ ಅಣ್ಣನಾಗಿರುತ್ತೀರಿ. ನನ್ನ ಮಾತನ್ನು ನೀವು ಕೇಳುವುದೇ ಇಲ್ಲ. ಮುಂದಿನ ಅವತಾರದಲ್ಲಿ ನಾನು ನಿಮ್ಮ ಅಣ್ಮನಾಗಬೇಕು. ನೀವು ನನ್ನ ಮಾತು ಕೇಳಬೇಕು ಎನ್ನುತ್ತಾನೆ. ಈ ಕಾರಣಕ್ಕಾಗಿಯೇ ಶ್ರೀಕೃಷ್ಣನ ರೂಪದಲ್ಲಿ ಶ್ರೀವಿಷ್ಣು ತಮ್ಮನಾಗಿ ಜನಸಿದರೆ, ಬಲರಾಮನ ರೂಪದಲ್ಲಿ ಶೇಷನಾಗ ಅಣ್ಣನಾಗಿ ಜನಿಸುತ್ತಾನೆ. ಆದರೆ ಶ್ರೀಕೃಷ್ಣನ ಮಾತೇ ಶಾಸನವಾಗಿರುತ್ತಿತ್ತು. ಅಣ್ಣನಾಗಿದ್ದರೂ, ಬಲರಾಮ ತಮ್ಮನ ಮಾತಿಗೆ ಬೆಲೆ ಕೊಡುತ್ತಿದ್ದ.

ಐದನೇಯ ಸತ್ಯ. ಶ್ರೀಕೃಷ್ಣ ನೋಡಲು ಅದೆಷ್ಟು ಸುಂದರವಾಗಿದ್ದಾನೆ. ಕೈಯಲ್ಲಿ ಕೊಳಲು, ರೇಷ್ಮೆ ಬಟ್ಟೆ, ಒಡವೆ, ನಾಮ, ನವಿಲುಗರಿ, ಹೀಗೆ ಶ್ರೀಕೃಷ್ಣ ಅಲಂಕಾರ ಭೂಷಿತನೆಂದು ನಾವು ಹೇಳುತ್ತೇವೆ. ಹಾಗಾದರೆ ಶ್ರೀಕೃಷ್ಣ ಹೇಗೆ ಕಾಣುತ್ತೇವೆ ಎಂದು ನಮಗೆ ಹೇಗೆ ಗೊತ್ತು..? ಹಿಂದಿನ ಕಾಲದಿಂದಲೂ ಶ್ರೀಕೃಷ್ಣನ ರೂಪ ಲಾವಣ್ಯವನ್ನು ನಾವು ಇದೇ ರೀತಿ ವರ್ಣಿಸುತ್ತ ಬಂದಿದ್ದೇವೆ. ಇದಕ್ಕೆ ಕಾರಣ, ಉತ್ತರೆ.

ಅರ್ಜುನನ ಪುತ್ರ, ಅಭಿಮನ್ಯುವಿನ ಪತ್ನಿ ಉತ್ತರೆ, ಶ್ರೀಕೃಷ್ಣನ ರೂಪ ಲಾವಣ್ಯವನ್ನು ವಿವರಸಿದ್ದಳು. ಅದರದ್ದೇ ಆಧಾರದ ಮೇಲೆ ನಮ್ಮ ಪೂರ್ವಜರು, ಶ್ರೀಕೃಷ್ಣನ ಚಿತ್ರ ಬರೆದಿದ್ದಾರೆ. ಇನ್ನು ಉತ್ತರೆಗೆ ಹೇಗೆ ಶ್ರೀಕೃಷ್ಣನ ರೂಪ ಲಾವಣ್ಯದ ಬಗ್ಗೆ ಗೊತ್ತು ಎನ್ನುವುದಕ್ಕೆ ಉತ್ತರ, ವಜ್ರನಾಭಿ. ವಜ್ರನಾಭಿ ಎಂದರೆ, ಶ್ರೀಕೃಷ್ಣನ ಮರಿ ಮೊಮ್ಮಗನೆಂದು ಪುರಾಣ ಕಥೆಯಲ್ಲಿ ಉಲ್ಲೇಖವಾಗಿದೆ. ವಜ್ರನಾಭಿ ಯಾವ ರೀತಿ ತನ್ನ ಅಜ್ಜ ಶ್ರೀಕೃಷ್ಣನ ರೂಪವನ್ನು ಹೇಳಿದ್ದಾನೋ, ಅದೇ ರೀತಿ ಉತ್ತರೆ, ಶ್ರೀಕೃಷ್ಣನ ಜೀವನ ವಿವರಿಸಿದ್ದಳು. ವಜ್ರನಾಭಿಯೇ ಮೊದಲನೇಯದಾಗಿ ಶ್ರೀಕೃಷ್ಣನ ಚಿತ್ರ ಬಿಡಿಸಿದ್ದ.

ಆರನೇಯ ಸತ್ಯ. ಯುದ್ಧದ ಸಮಯದಲ್ಲಿ ಶ್ರೀಕೃಷ್ಣ ವಜ್ರದಂತೆ ಗಟ್ಟಿಯಾಗುತ್ತಿದ್ದರು. ವಜ್ರ ಎಂದರೆ, ಕಲ್ಲಿಗಿಂತ ಗಟ್ಟಿಯಾದ ಲೋಹ. ಅದೇ ರೀತಿ ಶ್ರೀಕೃಷ್ಣ ನೋಡಲು ಆಕರ್ಷಕವಾಗಿ, ಸೌಮ್ಯವಾಗಿ, ಸದಾಕಾಲ ಮಂದಸ್ಮಿತರಾಗಿರುತ್ತಿದ್ದರೋ, ಯುದ್ಧದ ಸಮಯ ಬಂದಾಗ, ವಜ್ರದಂತೆ ಕಠೋರವಾಗಿರುತ್ತಿದ್ದರು.

ಏಳನೇಯ ಸತ್ಯ. ಒಮ್ಮೆ ಶ್ರೀಕೃಷ್ಣ ಅನಾರೋಗ್ಯಕ್ಕೀಡಾಗಿದ್ದ. ಆಗ ಶ್ರೀಕೃಷ್ಣನ ಚಿಕಿತ್ಸೆಗೆ ಬಂದ ವೈದ್ಯರು, ಇವರನ್ನು ಹೆಚ್ಚು ಪ್ರೀತಿಸುವವರು, ತಮ್ಮ ಪಾದದ ಧೂಳನ್ನು ತಂದು ಇವರ ಹಣೆಗೆ ಹಚ್ಚಬೇಕು.

ಆಗಲಷ್ಟೇ ಇವರು ಆರೋಗ್ಯವಂತರಾಗಲು ಸಾಧ್ಯ ಎಂದರು. ಶ್ರೀಕೃಷ್ಣನಿಗೆ 16 ಸಾವಿರ ಪತ್ನಿಯರಿದ್ದರೂ ಕೂಡ, ಅರಮನೆಯಲ್ಲಿ, ಶ್ರೀಕೃಷ್ಣನ ಇಷ್ಟದ 8 ಪತ್ನಿಯರಿದ್ದರು. ಆದರೆ ಆ 8 ಪತ್ನಿಯರು ತಮ್ಮ ಪತಿಗೆ ದೇವರ ಸ್ಥಾನ ಕೊಟ್ಟಿದ್ದೇವೆ. ನಮ್ಮ ಪಾದದ ಧೂಳನ್ನು ಅವರ ಹಣೆಗೆ ಹಚ್ಚಲು ನಮ್ಮ ಮನಸ್ಸು ಒಪ್ಪುತ್ತಿಲ್ಲ. ಬೇರೆ ಮದ್ದು ಇದ್ದರೆ ಹೇಳಿ ಎನ್ನುತ್ತಾರೆ.

ಆದರೆ ವೈದ್ಯರು, ಬೇರೆ ಯಾವ ಮದ್ದು ಕೂಡ ಶ್ರೀಕೃಷ್ಣನ್ ಆರೋಗ್ಯ ಸುಧಾರಿಸಲು ಸಹಕರಿಸುವುದಿಲ್ಲ. ಇದೊಂದೇ ಮದ್ದು ಎನ್ನುತ್ತಾರೆ. ಬಳಿಕ, ಗೋಪಿಕೆಯರಿಗೆ ಈ ವಿಚಾರ ತಿಳಿದಾಗ, ಅವರು ತಮ್ಮ ಪಾದದ ಧೂಳನ್ನು ಶ್ರೀಕೃಷ್ಣನಿಗೆ ಕಳುಹಿಸುತ್ತಾರೆ. ಆಗ ವೈದ್ಯರು ನಾವು ಶ್ರೀಕೃಷ್ಣನ ಅಷ್ಟ ಪತ್ನಿಯರಲ್ಲಿ ಅವರ ಪಾದದ ಧೂಳು ಕೊಡು ಎಂದಾಗ, ಅವರ್ಯಾರೂ ಇದಕ್ಕೆ ಒಪ್ಪಲಿಲ್ಲ. ಏಕೆಂದರೆ, ಪತ್ನಿಯ ಧೂಳು ಪತಿಯ ಹಣೆ ತಾಕಿದರೆ, ಪತ್ನಿಗೆ ನರಕ ಪ್ರಾಪ್ತಿಯಾಗುತ್ತದೆ ಎಂಬ ಭಯ ಅವರಿಗಿತ್ತು. ನಿಮಗೆ ಆ ಭಯವಿಲ್ಲವೇ ಎಂದು ಕೇಳುತ್ತಾರೆ. ಅದಕ್ಕೆ ಗೋಪಿಕೆಯರು ಹೇಳುತ್ತಾರೆ, ಶ್ರೀಕೃಷ್ಣನಿಗಾಗಿ ನಾವು ನರಕಕ್ಕೂ ಹೋಗಲು ಸಿದ್ಧ. ನಾವು ಶ್ರೀಕೃಷ್ಣನನ್ನು ಅಷ್ಟು ಪ್ರೀತಿಸುತ್ತೇವೆ ಎನ್ನುತ್ತಾರೆ.

ಎಂಟನೇಯ ಸತ್ಯ. ನೀವು ಹಿಂದಿಯ ಥ್ರೀ ಈಡಿಯಟ್ಸ್ ಸಿನಿಮಾ ನೋಡಿದ್ರೆ, ಅದರಲ್ಲಿ ಅಮೀರ್‌ಖಾನ್ ಹೆಸರು ನಿಮಗೆ ಗೊತ್ತಿರುತ್ತದೆ. ರಾಂಛೋಡ್ ದಾಸ್. ಈ ಹೆಸರಿಗೂ ಶ್ರೀಕೃಷ್ಣನಿಗೂ ಸಂಬಂಧವಿದೆ. ಏಕೆಂದರೆ, ರಾಂಛೋಡ್ ದಾಸ್ ಅನ್ನೋದು ಶ್ರೀಕೃಷ್ಣನ ಇನ್ನೊಂದು ಹೆಸರು. ರಾಂಛೋಡ್ ಅಂದರೆ, ರಣರಂಗವನ್ನು ಬಿಟ್ಟು ಓಡುವುದು ಎಂದರ್ಥ. ಶ್ರೀಕೃಷ್ಣ ಯುದ್ಧ ಭೂಮಿಯನ್ನು ಬಿಟ್ಟು ಓಡಿ ಹೋಗಿದ್ದ. ಏಕೆಂದರೆ, ಆ ಸಂದರ್ಭದಲ್ಲಿ ಯುದ್ಧ ಮಾಡುವುದು ಉಚಿತವಲ್ಲ ಎಂದು ಅವನಿಗೆ ಅನ್ನಿಸಿತ್ತು. ಜರಾಸಂಧ ಯುದ್ಧ ಭೂಮಿಗೆ ಬಂದ ಸಂದರ್ಭದಲ್ಲಿ, ನಾನು ಇವನೊಂದಿಗೆ ಯುದ್ಧ ಮಾಡಿದರೆ, ಮುಂದಿನ ನಿರ್ಣಯಕ್ಕೆ ತೊಂದರೆಯಾಗುತ್ತದೆ ಎಂದು ತಿಳಿದ ಶ್ರೀಕೃಷ್ಣ, ಯುದ್ಧ ಭೂಮಿ ಬಿಟ್ಟು ಓಡುತ್ತಾನೆ. ಹಾಗಾಗಿ ಅವನಿಗೆ ರಾಂಛೋಡ್ ದಾಸ್ ಎಂಬ ಹೆಸರು ಬಂತು.

ಒಂಭತ್ತನೇಯ ಸತ್ಯ. ಶ್ರೀಕೃಷ್ಣನಿಗೆ ಜಯದೇವ ಎಂಬ ಪರಮಭಕ್ತನಿದ್ದ. ಅವನೇ ಗೀತ ಗೋವಿಂದ ಎಂಬ ಪುಸ್ತಕ ಬರೆದಿದ್ದು.

ಈ ಪುಸ್ತಕದಲ್ಲಿ ಶ್ರೀಕೃಷ್ಣ ಮತ್ತು ರಾಧೆಯ ಪ್ರೇಮಕಥೆ ಬರೆಯಲಾಗಿದೆ. ಜಯದೇವ ಶ್ರೀಕೃಷ್ಣನ ಜೀವನ ಚರಿತ್ರೆ ಬರೆಯುವಾಗ, ಒಂದು ಸತ್ಯ ಬರೆಯ ಬೇಕಿತ್ತು. ರಾಧೆ ಶ್ರೀಕೃಷ್ಣನಿಗಾಗಿ ಕಾಯುತ್ತ ಕುಳಿತಾಗ, ಶ್ರೀಕೃಷ್ಣ ರಾಧೆಯ ಬಳಿ ಬರುತ್ತಾನೆ. ರಾಧೆ ಶ್ರೀಕೃಷ್ಣನ ಎದೆಯ ಮೇಲೆ ಒಂದು ಸ್ತ್ರೀಯ ಕೂದಲನ್ನು ಕಂಡು, ದುಃಖಿತಳಾಗಿ, ಇನ್ನೆಂದಿಗೂ ಶ್ರೀಕೃಷ್ಣನನ್ನು ಭೇಟಿಯಾಗಬಾರದೆಂದು ನಿರ್ಧರಿಸುತ್ತಾಳೆ. ಈ ಮೂಲಕ ರಾಧಾ ಕೃಷ್ಣರ ಪ್ರೇಮಕಥೆ ಅಂತ್ಯವಾಗುತ್ತದೆ.

ಆದರೆ ತನ್ನ ಆರಾಧ್ಯದೈವ ಶ್ರೀಕೃಷ್ಣನ ಬಗ್ಗೆ ತಾನು ಹೇಗೆ ಈ ಬರಹ ಬರೆಯಲಿ ಎಂದು ಜಯದೇವ ಆಲೋಚಿಸುತ್ತಾನೆ. ಒಂದು ಪುಟ್ಟ ವಿರಾಮ ತೆಗೆದುಕೊಂಡು, ಮತ್ತೆ ಬರೆಯುವುದನ್ನು ಆರಂಭಿಸೋಣ ಎಂದು ಪತ್ನಿಯ ಬಳಿ, ನೀನು ಅಡುಗೆ ಮಾಡು, ನಾನು ಸ್ನಾನ ಮಾಡಿ ಬರುತ್ತೇನೆಂದು ಹೇಳುತ್ತಾನೆ. ಜಯದೇವ ಸ್ನಾನ ಮಾಡಿ ಬಂದು, ಅರ್ಧಕ್ಕೆ ನಿಲ್ಲಿಸಿ ಹೋಗಿದ್ದ ಬರಹವನ್ನು ಪೂರ್ತಿ ಮಾಡುತ್ತಾನೆ.

ಬಳಿಕ ಪತ್ನಿಯ ಬಳಿ ಊಟ ಬಡಿಸುವಂತೆ ಕೇಳುತ್ತಾನೆ. ಪತ್ನಿ ಊಟ ಬಡಿಸುತ್ತಾಳೆ. ಜಯದೇವ ಊಟ ಮಾಡುತ್ತಾನೆ. ಪತಿಯ ಎಂಜಿಲು ತಟ್ಟೆಯಲ್ಲಿ ಪತ್ನಿ ಊಟ ಮಾಡುವುದು ಹಿಂದೂ ಧರ್ಮದ ಹಳೆಯ ಪದ್ಧತಿ. ಅದರಂತೆ ಜಯದೇವನ ಪತ್ನಿ, ಜಯದೇವ ಉಂಡ ತಟ್ಟೆಯಲ್ಲಿ ಊಟ ಮಾಡುತ್ತಾಳೆ.

ಇನ್ನೇನು ಊಟ ಮುಗಿಸಿ, ಕೈ ತೊಳೆಯಬೇಕು ಎನ್ನುವಷ್ಟರಲ್ಲಿ, ಸ್ನಾನದ ಕೋಣೆಯಿಂದ ಬಂದ ಜಯದೇವ, ನೀನು ನನ್ನನ್ನು ಬಿಟ್ಟು ಊಟ ಮಾಡುತ್ತಿದ್ದಿಯಾ..? ಎಂದು ಪತ್ನಿಯನ್ನು ಪ್ರಶ್ನಿಸುತ್ತಾನೆ. ಆಗ ಪತ್ನಿ, ನೀವು ಇದೇನು ಮಾತನಾಡುತ್ತಿದ್ದೀರಿ..? ಈಗಷ್ಟೇ ಊಟ ಮುಗಿಸಿ, ಹೋದಿರಲ್ಲ. ನಾನು ಅದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದೇನೆ ಎನ್ನುತ್ತಾಳೆ. ಜಯದೇವನಿಗೆ ಇಲ್ಲೇನು ನಡೆಯುತ್ತಿದೆ ಎಂಬುದೇ ಗೊತ್ತಾಗುವುದಿಲ್ಲ.

ತಕ್ಷಣ ಹೋಗಿ, ಶ್ರೀ ಕೃಷ್ಣನ ಬಗ್ಗೆ ಬರೆಯುತ್ತಿದ್ದ ಬರಹವನ್ನು ನೋಡುತ್ತಾನೆ. ಆಶ್ಚರ್ಯಗೊಳ್ಳುತ್ತಾನೆ. ಭಕ್ತ ಶ್ರೀಕೃಷ್ಣನ ಪ್ರೇಮ ಕಥೆಯನ್ನ ಯಾವ ರೀತಿ ಬರೆಯಲಿ ಎಂದು ಕಳವಳದಲ್ಲಿದ್ದ. ಆದರೆ ಭಕ್ತನ ಕಳವಳವನ್ನು ಬಗೆ ಹರಿಸಿದ್ದ ಶ್ರೀಕೃಷ್ಣ, ಸ್ವತಃ ತಾನೇ ಬಂದು, ಬರಹ ಪೂರ್ಣಗೊಳಿಸಿ, ಭಕ್ತನ ಮನೆಯಲ್ಲಿ ಊಟ ಮಾಡಿ ಹೋಗಿರುತ್ತಾನೆ.

ಬಳಿಕ ತನ್ನ ಆರಾಧ್ಯದೈವ ಶ್ರೀಕೃಷ್ಣ ಬಂದು, ಊಟ ಮಾಡಿದ ತಟ್ಟೆಯಲ್ಲೇ ತನ್ನ ಪತ್ನಿ ಊಟ ಮಾಡಿದ್ದಾಳೆಂದು ತಿಳಿದ ಜಯದೇವ, ತನ್ನ ಪತ್ನಿ ತನಗಿಂತ ಅದೃಷ್ಟವಂತಳು. ಆಕೆ ಶ್ರೀಕೃಷ್ಣನ ದರ್ಶನ ಮಾಡಿದ್ದಾಳೆ. ಶ್ರೀಕೃಷ್ಣನಿಗೆ ಉಣ ಬಡಿಸಿದ್ದಾಳೆ. ಶ್ರೀೃಷ್ಣನ ಪ್ರಸಾದ ತಿಂದಿದ್ದಾಳೆಂದು ಅರಿಯುತ್ತಾನೆ. ಅಂದಿನಿಂದ ಜಯದೇವ, ಪತ್ನಿ ತಿಂದ ತಟ್ಟೆಯಲ್ಲಿ ತಾನು ಊಟ ಮಾಡಲು ಶುರು ಮಾಡುತ್ತಾನೆ.

ಇಲ್ಲಿಗೆ ಈ ವಿಚಾರ ಪೂರ್ಣವಾಯಿತು. ಶ್ರೀಕೃಷ್ಣಾರ್ಪಣಮಸ್ತು...

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...