ಮಾತು ಮನೆ ಕೆಡಿಸ್ತು ತೂತು ಒಲೆ ಕೆಡಿಸ್ತು

ಮಾತು ಮನೆ ಕೆಡಿಸ್ತು ತೂತು ಒಲೆ ಕೆಡಿಸ್ತು , ಎಂಥಾ ಮಹತ್ವವಾದ ಗಾದೆ ಇದು. ಅನವಶ್ಯಕವಾದ ಮಾತಿನ ದ್ವೇಶಿಯಾದ ನನ್ನಂತವರಿಗೆ ಇದು ವೇದ ವಾಕ್ಯ (ವೇದಕ್ಕಿಂತ ಗಾದೇನೆ ಮೇಲು ಅನ್ನೊ ಗಾದೆಯ ಪ್ರಕಾರ). ಇಲ್ಲಿ ಗಾದೆಯ ಮೊದಲನೇ ಭಾಗವನ್ನು ಮಾತ್ರವೇ ಗಮನಿಸಲಾಗಿದೆ.. ನಾವು ಜೀವನಕ್ಕೆ ಎಷ್ಟು ಬೇಕೊ ಅಷ್ಟು  ಮಾತಾಡೊದರಿಂದ ಎನೂ ಅನಾಹುತ ಅಗಲ್ಲ. ಅನವಶ್ಯಕವಾಗಿ ಆಡುವ ಅಥವಾ ಆಡಿದ ಮಾತುಗಳು ಅನಾಹುತಕ್ಕೆ ಕಾರಣ. ಎಲ್ಲಿ ಬೇಡವೊ ಅಲ್ಲಿ ಏಡೆಯಿಲ್ಲದೆ ಮತಿಯಿಲ್ಲದೆ ಆಡಿದ  ಮಾತುಗಳು ಖಂಡಿತ ಮನೆಯನ್ನು ಕೆಡಿಸುತ್ತದೆ, ಮನವನ್ನು ಕೆಡಿಸುತ್ತದೆ ಎಲ್ಲಕ್ಕಿಂತ ಹೆಚ್ಚಾಗಿ ಮಾತಾಡುವವನ ಅರೊಗ್ಯವನ್ನು ಕೆಡಿಸುತ್ತದೆ. ನಿಜ ಮಾತಾಡುವುದು ಮನುಷ್ಯನ ಆರೊಗ್ಯವನ್ನು ಕೆಡಿಸುತ್ತದೆ. ನಾವು ಮಾತಾಡುವಾಗ, ಉಸಿರಾಡುವುದಿಲ್ಲ. ಅಂದರೆ ನಾವು ಮಾತಾಡುತ್ತಿರುವಾಗ ಉಸಿರಾಡುವುದನ್ನು ನಿಲ್ಲಿಸಿರುತ್ತೇವೆ. ನೀವು ಶಂಕರ್ ಮಹಾದೇವನ್ ನ ಬ್ರೆತ್ ಲೆಸ್ ಎಂಬ ಹಾಡನ್ನು ಕೇಳಿದ್ದರೆ ನಾನು ಹೇಳುತ್ತಿರುವುದು ಸುಲಭವಾಗಿ ಅರ್ಥವಾಗುತ್ತದೆ. ಆತ ಸುಮಾರು ಮೂರು ನಿಮಿಶಗಳಕಾಲ ಸತತವಾಗಿ ಹಾಡನ್ನು ಹಾಡಿದ್ದಾನೆ, ಹಾಡಿನ ಕೊನೆಯಲ್ಲಿ ಆತ ದೀರ್ಘವಾಗಿ ಉಸಿರೆಳೆದುಕೊಳ್ಳುವುದನ್ನು ನೀವು ಕೇಳಿರಬಹುದು. ಹೀಗಾಗಿ, ವಾಚಾಳಿಗಳೂ ಉಸಿರಾಡುವುದನ್ನು ಮರೆತು ಮಾತಿಗಿಳಿದಿರುತ್ತಾರೆ, ಆವೇಶಭರಿತವಾದ ಮಾತು ಇನ್ನೂ ಅಪಾಯಕಾರಿ, ಯಾಕೆಂದರೆ ಇದು ಉಸಿರಾಡುವುದನ್ನು ಮರೆಸುವುದರೊಂದಿಗೆ ನಮ್ಮ ಹೃದಯದ ಬಡಿತವನ್ನು ಏರಿಸುತ್ತದೆ. ಹೀಗೆ ಉಸಿರಾಡುವುದನ್ನು ಮರೆತರೆ, ನಮ್ಮ ದೇಹಕ್ಕೆ ಸತತವಾಗಿ ಬೇಕಾಗಿರುವ ಆಮ್ಲಜನಕ ನಮ್ಮ ದೇಹವನ್ನು ಸೇರದೇ ನಮ್ಮ ಆರೋಗ್ಯ ಕೆಡಬಹುದು.
ಮನುಷ್ಯನ ದೇಹದಲ್ಲಿ ಎಲ್ಲಾ ಎರಡೆರೆಡು, ಎರಡು ಕೈ, ಎರಡು ಕಾಲು, ಎರಡು ಕಿವಿ, ಎರಡು ಕಣ್ಣು ಆದರೆ ಒಂದೇ ಬಾಯಿ. ಸಧ್ಯ ನಮಗೇನಾದರು ಎರಡು ಬಾಯಿದ್ದಿದ್ದರೆ, ನಮ್ಮ ವಾಚಾಳಿ ಮಿತ್ರರು ತಿನ್ನುವಾಗಲೂ ಮಾತು ಮುಂದುವರೆಸುತ್ತಿದರೇನೊ. ಮಾತು ಬೆಳ್ಳಿ ಮೌನ ಬಂಗಾರ, ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಗಳು ಮಾತಿನ ಬೆಲೆ ಮತ್ತು ಮಾತನ್ನು ಹೇಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಹೇಳುತ್ತದೆ . ಬುದ್ಧ ಆಸೆಯೆ ದುಃಖಕ್ಕೆ ಮೂಲ ಎಂದು ಸಾರಿದ್ದರೆ, ನಾವು ಅನವಶ್ಯಕವಾದ ಮಾತೇ ದುಃಖಕ್ಕೆ ಮೂಲ ಎಂದು ಡಂಗುರ ಸಾರಿ ಹೇಳಬಹುದೇನೊ!!
ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ಗಾದೆ, ಆಡಿದ ಮಾತನ್ನು ಮತ್ತೆ ಹಿಂದೆ ತೆಗೆದುಕೊಳ್ಳಲು ಅಗುವುದಿಲ್ಲ ಅದು ಕೈ ಜಾರಿದ ಮುತ್ತು ಒಡೆದಂತೆ ಎಂದು ಹೇಳುತ್ತದೆ. ಮಾತು ಹೇಗಿರಬೇಕೆಂದರೆ ನಮ್ಮ ಬಸವಣ್ಣನವರು ಈ ವಚನದಲ್ಲಿ ಹೇಳಿರುವಂತಿರಬೇಕು.
ನುಡಿದರೆ ಮುತ್ತಿನಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು
ಇದನ್ನು ಓದುತ್ತಿರುವ ವಾಚಾಳಿ ಮಿತ್ರರೆಲ್ಲಾ ನನಗೆ ಹಿಡಿ ಶಾಪ ಹಾಕಿ, “ಮಾತಿನನಗರ” ವೊಂದನ್ನು ಸ್ಥಾಪಿಸಿ, ಅಲ್ಲಿ ವಾಚಾಳಿಗಳಿಗೆ ಮಾತ್ರ ಸ್ವಾಗತ ಎಂಬ ನಿಯಮವನ್ನು ಹಾಕಿ, ಮಾತಿನ ದ್ವೇಶಿಗಳನ್ನು  ಚಂದ್ರಲೋಕಕ್ಕೆ ಹೊರಗಟ್ಟುವ ಆಂದೋಲನವನ್ನು ಶುರುಮಾಡಲಿದ್ದಾರಂತೆ!!

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...