ಪದವಿ ತೆಗೆದುಕೊಳ್ಳಬೇಕು ಆಗಿದ್ದಾರೆ 10 ಗಿಡಗಳನ್ನು ನೆಡಬೇಕು. ಇತ್ತೀಚೆಗೆ ಎಲ್ಲಿ ನೋಡಿದರೂ ಕೂಡ ರಸ್ತೆ ಮಾಡಬೇಕು ಅದು ಇದು ಎಂದು ದೊಡ್ಡದಾಗಿ ಬೆಳೆದಿರುವ ಬೃಹತ್ ಮರಗಳನ್ನು ಕಡಿದು ಕಡಿದು ಹಾಕುತ್ತಾರೆ ಆದರೆ ಪರಿಸರ ಅನ್ನು ನಾವು ಬೆಳೆಸಬೇಕು ಆದರೆ ನಾವೇ ಅದನ್ನು ನಾಶ ಮಾಡುತ್ತೇವೆ ಮರಗಳನ್ನು ಕಾಡಿದರೆ ಏನು ಆಗಲ್ಲ ಎಂದು ನಾವು ಅಂದು ಕೊಳ್ಳುತ್ತೇವೆ ಆದರೆ ಪರಿಸರವನ್ನು ನಾಶ ಮಾಡಿದರೆ ಅದರಿಂದ ನಮಗೆ ತೊಂದರೆ ಎಂಬುದನ್ನು ಜನರು ಮರೆತೇ ಬಿಡುತ್ತಾರೆ. ಈ ಪ್ರವಾಹ ಜಲಪಾತ ಭೂಕಂಪ ಇಂತಹ ಸಮಸ್ಯೆ ಆಗುವುದೆಲ್ಲಾ ಏಕೆ ಹೇಳಿ ನಾವು ಪರಿಸರವನ್ನು ನಾಶ ಮಾಡುವುದರಿಂದ. ಹಾಗಾಗಿ ಇಲ್ಲೊಂದು ರಾಷ್ಟ್ರ ಇದೆ ಅಲ್ಲಿ ಈ ಪರಿಸರ ನಾಶ ತಡೆಯಲು ಏನೆಲ್ಲಾ ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ ಗೊತ್ತೇ ಹೌದು ಹಿಂದೆ ಇದ್ದ ಕಾಡನ್ನು ನಾಶ ಮಾಡಿ ಇವಾಗ ಅದೆಲ್ಲವನ್ನೂ ಸೈಟ್ ಮಾಡಿ ಮನೆ ಕಟ್ಟುತ್ತಾರೆ ಇದೆಲ್ಲವನ್ನೂ ಕೂಡ ನಿಲ್ಲಿಸಲು ಫಿಲಿಫೈನ್ಸ್ ಎಂಬ ರಾಷ್ಟ್ರ ಇದೆ ಇಲ್ಲಿ ಪರಿಸರ ಉಳಿಸಲು ಹೇಗೆ ಕಾನೂನು ಜಾರಿ ಮಾಡಿದ್ದಾರೆ ಗೊತ್ತೇ ಬನ್ನಿ ತಿಳಿಯೋಣ
ಫಿಲಿಫೈನ್ಸ್ ರಾಷ್ಟ್ರದಲ್ಲಿ ಮರ ಗಿಡಗಳು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದನ್ನು ಕಂಡು ಹೀಗೆ ಪರಿಸರ ನಾಶ ಆದರೆ ಮುಂದೆ ಒಂದು ದಿನ ದೊಡ್ಡದಾದ ಗಂಡಾಂತರ ಎದುರಿಸಬೇಕು ಎಂದು ತಿಳಿದು ಅಲ್ಲಿನ ಸರಕಾರ ಜಾರಿಗೆ ತಂದಿರುವ ಕಾನೂನು ಎಂದರೆ ವಿದ್ಯಾಭ್ಯಾಸ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ತಾವು ಓದುತ್ತಿರುವ ಶಿಕ್ಷಣ ಮುಗಿಸಬೇಕು ಎಂದಾದರೆ ಪ್ರತಿಯೊಬ್ಬರೂ ಕೂಡ ಕನಿಷ್ಟ ಹತ್ತು ಗಿಡಗಳನ್ನು ಬೆಳೆಸಬೇಕು ಆಗಿದ್ದಾರೆ ಮಾತ್ರ ಅವರಿಗೆ ಅವರ ಪದವಿ ಸಂಪೂರ್ಣವಾಗಿ ಮುಗಿಯುವುದು ಇಲ್ಲ ಎಂದರೆ ಅವರ ಪದವಿಯನ್ನು ನಿರಾಕರಿಸುತ್ತಾರೆ. ಇದು ಕೇಳಲು ವಿಚಿತ್ರ ಆದರೆ ಖಂಡಿತ ಸತ್ಯ ಇದರಿಂದ ಅ ರಾಷ್ಟ್ರದಲ್ಲಿ ಪರಿಸರ ಎಂಬುದು ಉಳಿಯುತ್ತಿದೆ. ಈ ಕಾನೂನನ್ನು ಜಾರಿಗೆ ಬಂದಾಗಿನಿಂದ ಸುಮಾರು ಒಂದುವರ್ಷದಲ್ಲಿ 180 ದಶಲಕ್ಷ ಅಷ್ಟು ಮರಗಳು ಬೆಳೆಸುವ ಯೋಜನೆ ಹಾಕಿಕೊಂಡಿದೆ.
ನಿಜವಾಗಲೂ ಈ ಒಂದು ಯೋಜನೆ ತುಂಬಾ ಅತ್ಯುತ್ತಮವಾದದ್ದು ಇದರಿಂದ ನಮ್ಮ ಪರಿಸರವನ್ನು ನಾವು ಕಾಪಾಡಿಕೊಳ್ಳಬಹುದು ಜೊತೆಗೆ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು ಇದರ ಜೊತೆಗೆ ಮುಂದೆ ಆಗುವ ದೊಡ್ಡ ದೊಡ್ಡ ಅನುಹುತ ಗಳನ್ನ ನಾವು ತಡೆಯಲು ಸಹಕಾರಿ ಜೊತೆಗೆ ನಾವು ಪರಿಸರವನ್ನು ಉಳಿಸುವುದರಿಂದ ಪ್ರಾಣಿ ಪಕ್ಷಿಗಳು ಕೂಡ ಸಂತೋಷವಾಗಿ ನೆಮ್ಮದಿಯಿಂದ ಜೀವನ ನೆಡೆಸಲು ಸಹಾಯ ಆಗುತ್ತದೆ. ಹಾಗಾಗಿ ಈ ಫಿಲಿಫೈನ್ಸ್ ರಾಷ್ಟ್ರದಲ್ಲಿ ಇರುವ ಕಾನೂನು ಎಲ್ಲ ಕಡೆ ಕೂಡ ಜಾರಿ ಆಗಬೇಕು ಆಗ ಪ್ರತಿಯೊಬ್ಬರೂ ನೆಮ್ಮದಿಯಿಂದ ಜೀವನ ಮಾಡಲು ಸಹಾಯ ಆಗುತ್ತದೆ. ಪರಿಸರ ಉಳಿಸಬೇಕು ಬೆಳೆಸಬೇಕು. ಪರಿಸರ ನಾಶ ಮಾಡುವುದು ಮಹಾ ಪಾಪ ಇದರಿಂದ ನಮಗೆ ತೊಂದರೆ ಹಾಗಾಗಿ ಇನ್ನು ಮುಂದೆ ಆದರೂ ಎಚ್ಚೆತ್ತುಕೊಂಡು ಪರಿಸರ ಉಳಿಸೋಣ.