ನಿರ್ದೇಶನ ಜೊತೆ ಮಗನೊಂದಿಗೆ ನಟಿಸುತ್ತಿರುವ ಕ್ರೇಜಿಸ್ಟಾರ್ ರವಿಚಂದ್ರನ್

ಸ್ಯಾಂಡಲ್ ವುಡ್ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಜನ್ಮದಿನವವನ್ನು ಈ ವರ್ಷ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ವೇಳೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಅವರು ತಮ್ಮ ಅಭಿಮಾನಿಗಳನ್ನು ಕೋರಿದ್ದಾರೆ. ಈ ನಡುವೆ ರವಿಮಾಮ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ತಾವು ಮತ್ತೆ ನಿರ್ದೇಶಕನ ಕ್ಯಾಪ್ ಧರಿಸುವುದನ್ನು ಕಾಣಬೇಕೆನ್ನುವ ಅವರ ಅಭಿಮಾನಿಗಳ ಆಸೆ ಶೀಘ್ರವೇ ಈಡೇರುವ ಭರವಸೆಯನ್ನು ಅವರು ನೀಡಿದ್ದಾರೆ.

ರವಿಚಂದ್ರನ್ ಅವರ ಪುತ್ರನ ಸಿನಿಮಾವನ್ನು ನಿರ್ದೇಶನ ಮಾಡುವ ಬಗ್ಗೆ ಸೂಚನೆ ನೀಡಿದ್ದಾರೆ. ನಟ-ನಿರ್ದೇಶಕ-ನಿರ್ಮಾಪಕ, ಅಭಿಮಾನಿಗಳ ಕ್ರೇಜಿ ಸ್ಟಾರ್ ತಮ್ಮ ಪುತ್ರನಿಗಾಗಿ ಸ್ಕ್ರಿಪ್ಟ್‌ನ ತಯಾರಿ ನಡೆಸಲು ಲಾಕ್‌ಡೌನ್ ಸಮಯವನ್ನು ಬಳಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ ಜತೆಗೆ ಅವರ ಎರಡನೇ ಮಗನಾದ ವಿಕ್ರಂ ರವಿಚಂದ್ರನ್ ತೆರೆಯ ಮೇಲೆ ಕಾಣಿಸಲಿದ್ದಾರೆ.


ಲಾಕ್‌ಡೌನ್ ವೇಳೆಯಲ್ಲಿ ಎಡಿಟ್ ಡೆಸ್ಕ್‌ನಲ್ಲಿ ನಿರತರಾಗಿರುವ ಹಿರಿಯ ನಟ ಚಿತ್ರಕಥೆಯ ಬಗ್ಗೆ ಸುಳಿವು ನೀಡಿಲ್ಲ. ನಾನು ರವಿ ಬೋಪಣ್ಣ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ, ಈ ನಡುವೆ ಮೂರು ಸ್ಕ್ರಿಪ್ಟ್‌ಗಳನ್ನು ಪೂರ್ಣಗೊಳಿಸಿದೆ. ಒಂದು ಚಿತ್ರದಲ್ಲಿ ತಂದೆ ಮತ್ತು ಮಗ ಒಟ್ಟಿಗೆಸೇರಲಿದ್ದೇವೆ. ನಾನು ಹಾಗು ವಿಕ್ರಮ್ ಆ ಚಿತ್ರದಲ್ಲಿ ಒಟ್ತಾಗಿ ಕಾಣಿಸಿಕೊಳ್ಳುತ್ತಿದ್ದು ಚಿತ್ರ ನಿರ್ದೇಶನ ನನ್ನದು ಆಗಿರಲಿದೆ. ಇದು ನನ್ನ ಕಡೆಯಿಂದ ಇನ್ನೊಂದು ವಿಶಿಷ್ಟ ಪ್ರಯತ್ನ. ಇದು ವಿನೂತನ ಚಿತ್ರಕಥೆಯನ್ನಿದು ಹೊಂದಿರಲಿದೆ. ರಾಜ್ಯವು ಲಾಕ್ ಡೌನ್ ನಿಂದ ಹೊರಬಂದ ನಂತರ ನಾನು ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುತ್ತೇನೆ. ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ತಿಳಿಸಿದ್ದಾರೆ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...