ಬಹುನಿರೀಕ್ಷಿತ ಕೆಜಿಎಫ್-2ನಲ್ಲಿ ಮತ್ತೊಬ್ಬ ಹಿರಿಯ ನಟಿ ಎಂಟ್ರಿ

ಸದ್ಯ ಕೊನೆಯ ಹಂತದ ನಿರ್ಮಾಣದಲ್ಲಿರುವ ಕೆಜಿಎಫ್-2 ಚಿತ್ರಕ್ಕೆ ಮತ್ತೊಬ್ಬ ದಕ್ಷಿಣ ಭಾರತದ ಹಿರಿಯ ನಟಿ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಜಿಎಫ್-2 ಚಿತ್ರದ ಶೂಟಿಂಗ್ ಕೊನೆಯ ಹಂತಕ್ಕೆ ಬಂದಿದೆ. ಈ ವೇಳೆ ದಕ್ಷಿಣ ಭಾರತದ ಹಿರಿಯ ನಟಿ ಈಶ್ವರಿ ರಾವ್ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ದಕ್ಷಿಣ ಭಾರತದಲ್ಲಿ ತೆಲುಗು, ತಮಿಳು, ಮಾಲಿಯಾಳಂ ಸೇರಿದಂತೆ ಕನ್ನಡದಲ್ಲೂ ನಟನೆ ಮಾಡಿರುವ ಈಶ್ವರಿ ರಾವ್, ಕೆಜಿಎಫ್-2 ಚಿತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಲಾಗಿದೆ. ಚಿತ್ರಕ್ಕೆ ತಿರುವು ಕೊಡುವ ಒಂದು ಪಾತ್ರದಲ್ಲಿ ಈಶ್ವರಿಯವರು ನಟಿಸಿದ್ದಾರೆ ಎಂದು ಹೇಳಲಾಗಿದೆ.

ಆದರೆ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಮಾತ್ರ ಇನ್ನೂ ಖಚಿತವಾಗಿಲ್ಲ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ವಿಚಾರ ಈಶ್ವರಿಯವರು ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗುವಂತೆ ಮಾಡಿದೆ.


ದಕ್ಷಿಣ ಭಾರತದಲ್ಲೇ ಖ್ಯಾತ ನಟಿಯಾಗಿರುವ ಈಶ್ವರಿ ರಾವ್, ಪಂಚಭಾಷಾ ತಾರೆ. ಕೆಲ ಬಾಲಿವುಡ್ ಚಿತ್ರಗಳಲ್ಲೂ ನಟಿಸಿರುವ ಈಶ್ವರಿ 90ರ ದಶಕದಲ್ಲಿ ರಜನಿಕಾಂತ್, ಕಮಲ್ ಹಾಸನ್ ನಂತಹ ನಟರ ಜೊತೆ ನಟಿಸಿ ಸೈ ಎನಿಸಿಕೊಂಡ ನಟಿ. ಇತ್ತೀಚೆಗೆ ಬಿಡುಗಡೆಯಾದ ರಜಿನಿಕಾಂತ್ ಅವರ ಕಾಲ ಚಿತ್ರದಲ್ಲೂ ಈಶ್ವರಿ ನಟಿಸಿದ್ದಾರೆ. 1995ರಲ್ಲಿ ಎಸ್. ನಾರಾಯಣ್ ನಿರ್ದೇಶನದ ಮೇಘ ಮಾಲೆ ಎಂಬ ಕನ್ನಡ ಚಿತ್ರದಲ್ಲೂ ಈಶ್ವರಿಯವರು ಅಭಿನಯಿಸಿದ್ದರು.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...