ದಿನೇದಿನೇ ದುರ್ಬಲವಾಗುತ್ತಿರುವ ಕೊರೋನಾ ವೈರಸ್ : ನೆಮ್ಮದಿ ತರುವ ಸುದ್ದಿ

ಕೊರೊನಾ ವೈರಸ್ ಸೋಂಕು ಹೆಚ್ಚಾಗ್ತಿರುವ ಮಧ್ಯೆಯೇ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಕೊರೊನಾ ವೈರಸ್ ನಿಧಾನವಾಗಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ. ಇನ್ನು ಮುಂದೆ ಅದ್ರ ಅಬ್ಬರ ಕಡಿಮೆಯಾಗಲಿದೆ ಎಂದು ಇಟಲಿಯ ಉನ್ನತ ವೈದ್ಯರು ಹೇಳಿದ್ದಾರೆ.

ಕೊರೊನಾ ವೈರಸ್ ಈಗ ದುರ್ಬಲಗೊಳ್ಳುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಜಿನೋವಾದ ಸ್ಯಾನ್ ಮಾರ್ಟಿನೊ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಡಾಕ್ಟರ್ ಮ್ಯಾಟಿಯೊ ಬಸೆಟ್ಟಿ ಈ ಮಾಹಿತಿಯನ್ನು ಸುದ್ದಿ ಸಂಸ್ಥೆ ಎಎನ್‌ಎಸ್‌ಎಗೆ ನೀಡಿದ್ದಾರೆ. ಈ ವೈರಸ್ ಎರಡು ತಿಂಗಳ ಹಿಂದೆ ಇದ್ದ ಸಾಮರ್ಥ್ಯವನ್ನು ಹೊಂದಿಲ್ಲ. ಸ್ಪಷ್ಟವಾಗಿ ಈ ಸಮಯದ COVID-19 ವೈರಸ್ ಭಿನ್ನವಾಗಿದೆ ಎಂದಿದ್ದಾರೆ.

ಕಳೆದ 10 ದಿನಗಳಲ್ಲಿ ತೆಗೆದ ಸ್ವ್ಯಾಬ್ ಮಾದರಿಗಳು ಇದನ್ನು ಸ್ಪಷ್ಟಪಡಿಸಿದೆ. ವೈರಲ್ ಲೋಡ್ ಪ್ರಮಾಣವು ಒಂದು ಅಥವಾ ಎರಡು ತಿಂಗಳ ಹಿಂದೆ ಇದ್ದಕ್ಕಿಂತ ಈಗ ಕಡಿಮೆಯಾಗಿದೆ ಎಂದು ತೋರಿಸುತ್ತದೆ.

ಕೊರೊನಾ ವೈರಸ್‌ನಿಂದ ಹೆಚ್ಚು ಪ್ರಭಾವಿತವಾದ ದೇಶಗಳಲ್ಲಿ ಇಟಲಿ ಒಂದು. ಕೊರೊನಾ ಸಾವಿನ ವಿಷ್ಯದಲ್ಲಿ ಇಟಲಿ ಮೂರನೇ ಸ್ಥಾನದಲ್ಲಿದೆ. ಮೇ ತಿಂಗಳಲ್ಲಿ ಹೊಸ ಸೋಂಕುಗಳು ಮತ್ತು ಸಾವುಗಳಲ್ಲಿ ತೀವ್ರ ಕುಸಿತ ಕಂಡು ಬಂದಿದೆ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...