
ಕೊರೊನಾ ವೈರಸ್ ಇಡೀ ಜಗತ್ತನ್ನೇ ಹಿಂಡಿ ಹಿಪ್ಪೆ ಮಾಡಿದೆ. ಕೊರೊನಾ ಅನ್ನೋ ಹೆಸರು ಕೇಳಿದ್ರೆ ಸಾಕು ಭಯ ಪಡುವಂತೆ ಮಾಡಿದೆ. ಮುಖ ಮುಚ್ಚಿ ಓಡಾಡುವಂತ ಪರಿಸ್ಥತಿಯನ್ನು ನಿರ್ಮಾಣ ಮಾಡಿದೆ. ಮನೆಯಿಂದ ಆಚೆ ಹೋಗುವ ಮುನ್ನ ಮುಖಕ್ಕೆ ಮಾಸ್ಕ್ ಹಾಕುವುದು ಕಡ್ಡಾಯವಾಗಿದೆ. ಪ್ರಪಂಚದಾದ್ಯಂತ ಜನರು ಕೊರೊನಾದಿಂದ ತಪ್ಪಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಆದರೆ ಆಶ್ಚರ್ಯವೆಂಬಂತೆ ಒಂದು ಸುದ್ದಿ ಹೊರ ಬಿದ್ದಿದೆ. ಮುಂದಿನ ದಿನಗಳಲ್ಲಿ ಮನುಷ್ಯ ಬಿಡುವ ಹೂಸಿನಿಂದಲೂ ಕೊರೊನಾ ವೈರೆಸ್ ಹರಡಬಹುದು ಎಂಬ ಸಂಗತಿಯನ್ನು ಸಂಶೋಧನೆಯೊಂದು ಬಹಿರಂಗ ಪಡಿಸಿದೆ.
ಹೂಸು ದುರ್ವಾಸನೆ ಬೀರುತ್ತೆ. ಆದರೆ ಅದು ಮನುಷ್ಯನಲ್ಲಿರುವ ಸಹಜ ಕ್ರಿಯೆ. ಆದರೆ ಇಲ್ಲಿ ಯೋಚಿಸಬೇಕಾದ ವಿಷಯ ಎಂದರೆ ಹೂಸು ಕೂಡ ಕೊರೊನಾ ಸೋಂಕು ಹರಡಲು ಒಂದು ಹೊಸ ಮಾದರಿಯಾಗಬಹುದು! ಎಂಬುದು. ಇಲ್ಲಿಯವರೆಗೆ, ವಿಶ್ವಾದ್ಯಂತ 74.44 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು ಸಾವಿನ ಪ್ರಮಾಣವು 4,18,126 ಕ್ಕೆ ತಲುಪಿದೆ.
ಸಂಶೋಧನೆ ಏನು ಹೇಳುತ್ತದೆ? Gas Mask ಹಾಕ್ಕೋಬೇಕಾ!
ಆಸ್ಟ್ರೇಲಿಯಾದ ವೈದ್ಯರೊಬ್ಬರು ಇತ್ತೀಚೆಗೆ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಗಾಳಿಯಿಂದ ಕೊರೊನಾ ವೈರಸ್ ಸೋಂಕು ಹರಡುವಿಕೆಯ ನಡುವಿನ ಸಂಭಾವ್ಯ ಸಂಬಂಧದ ಬಗ್ಗೆ ನಾಗರಿಕರನ್ನು ಎಚ್ಚರಿಸಿದ್ದಾರೆ. ವೈದ್ಯ ಲೋಕವು ಫೇಸ್ ಮಾಸ್ಕ್ ಬಳಸುವ ಮೂಲಕ ಕೊರೊನಾ ತಡೆಗಟ್ಟುವಿಕೆಯ ಬಗ್ಗೆ ಮಾತನಾಡುತ್ತಿದೆ.
ಆದರೆ ಸಾಮಾಜಿಕ ದೂರವನ್ನು ಹೊರತುಪಡಿಸಿ, ಮುನ್ನೆಚ್ಚರಿಕೆ ಕ್ರಮವಾಗಿ ಇನ್ಮುಂದೆ ಜನ ಪರಸ್ಪರ ಹತ್ತಿರವಿರಲೂ ಸಹ ಪ್ರಯತ್ನಿಸಬಾರದು ಎಂದು ಹೂಸಿನ ಬಗ್ಗೆ ಎಚ್ಚರಿಸುತ್ತಾ ಸಕಾಲಿಕ ಸಲಹೆ ನೀಡಿದರು. ಹಾಗಾಗಿ ಕಪರೊನಾ ಕಾಲದಲ್ಲಿ.. ಹೂಸಿನ ಹಾವಳಿ ಬಗ್ಗೆಯೂ ಎಚ್ಚರವಿರುವುದು ಒಳಿತು!