ನವದೆಹಲಿ: ಇತ್ತೀಚಿನ ದಿನಗಳಲ್ಲಿ, ಪಡಿತರ ಚೀಟಿ ನಿಯಮಕ್ಕೆ ಸಂಬಂಧಪಟ್ಟಂತೆ ಹಲವಾರು ಸುದ್ದಿ ವೆಬ್ ಸೈಟ್ ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಪಡಿತರ ಚೀಟಿಗೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದ್ದು ಅದರಂತೆ, ಮೂರು ತಿಂಗಳಕಾಲ ರೇಷನ್ ಕಾರ್ಡ್ಬಳಸದಿದ್ದರೆ ಅದನ್ನು ರದ್ದುಮಾಡಲಾಗುವುದು ಎಂದು ಹೇಳಲಾಗಿತ್ತು.ಕೇಂದ್ರ ಸರಕಾರ ಹೊರಡಿಸಿರುವ ಹೊಸ ನಿಯಮದ ಪ್ರಕಾರ, ಒಬ್ಬ ವ್ಯಕ್ತಿ 3 ತಿಂಗಳ ಕಾಲ ಪಡಿತರ ಚೀಟಿ ಬಳಸದಿದ್ದರೆ, ಆ ವ್ಯಕ್ತಿ ಈಗ ಅರ್ಹ, ಆತನಿಗೆ ಪಡಿತರ ದಿನಸಿಯ ಅವಕಶ್ಯಕತೆ ಇಲ್ಲ ಅಂತ ಕೇಂದ್ರ ಸರ್ಕಾರ ಪರಿಗಣಿಸಿ ಆತನ/ಅವರ ಕುಟುಂಬದ ರೇಶನ್ ಚೀಟಿಯನ್ನು ರದ್ದುಪಡಿಸಲಾಗುವುದು ಅಂತ ಕೆಲ ಮಾಧ್ಯಮಗಳು ವರದಿ ಮಾಡಿದ್ದವು.
ಆದರೆ ಈಗ ಸರ್ಕಾರದ ಪರವಾಗಿ ಪಿಐಬಿ ಫ್ಯಾಕ್ಟ್‌ಚೆಕ್‌ನಲ್ಲಿ ಸ್ಪಷ್ಟನೆ ಗಳನ್ನು ನೀಡಿದ್ದು.
'ಮೂರು ತಿಂಗಳ ಪಡಿತರ ತೆಗೆದುಕೊಳ್ಳದಿದ್ದರೆ ಪಡಿತರ ಚೀಟಿ ರದ್ದು ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಪಿಐಬಿಯ ಫ್ಯಾಕ್ಟ್ ಚೆಕ್ ನಲ್ಲಿ ಈ ಹೇಳಿಕೆ ನಕಲಿ ಎಂದು ಹೇಳಿದ್ದು ಕೇಂದ್ರ ಸರ್ಕಾರ ಅಂತಹ ಯಾವುದೇ ಮಾರ್ಗಸೂಚಿಗಳನ್ನು ನೀಡಿಲ್ಲ ಎಂದು ಹೇಳಿದೆ.ಈ ಹಿಂದೆ ಭಾರತ ಸರ್ಕಾರ ದೇಶದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವೆಬ್ ಸೈಟ್ ಗೆ ಲಿಂಕ್ ಕೂಡ ಸಂದೇಶಕ್ಕೆ ಲಿಂಕ್ ಆಗಿದೆ. ಆದರೆ, ಈ ಸುದ್ದಿ ಸುಳ್ಳು ಮತ್ತು ಮೋದಿ ಸರ್ಕಾರ ಇಂತಹ ಯಾವುದೇ ಯೋಜನೆ ಜಾರಿಗೊಳಿಸುತ್ತಿಲ್ಲ. ಪಿಐಬಿ ಫ್ಯಾಕ್ಟ್ ಚೆಕ್ ನ ಒಂದು ಟ್ವೀಟ್ ನಲ್ಲಿ ಸರ್ಕಾರ ವು ಅಂತಹ ಯಾವುದೇ ಯೋಜನೆಯನ್ನು ಆರಂಭಿಸಿಲ್ಲ ಮತ್ತು ಅದು ತಪ್ಪು ಎಂದು ಹೇಳಿದೆ.