ಶ್ರೀಕೃಷ್ಣನು ನವಿಲುಗರಿಯನ್ನು ಏಕೆ ಧರಿಸುತ್ತಾನೆ ಕೃಷ್ಣ! ನವಿಲುಗರಿ ನಂಟಿನ ಸುತ್ತ ಇವ...

Lord Sri Krishna: ಭಗವಾನ್ ಕೃಷ್ಣನು ದಶಾವತಾರಗಳಲ್ಲಿ 8ನೇ ಅವತಾರ. ಅವನ ಕಣ್ಣುಗಳಲ್ಲಿ ನೀಲಿ ಆಕೃತಿ, ಅವನ ತಲೆಯ ಮೇಲೆ ನವಿಲುಗರಿ ಮತ್ತು ಕೈಲಿ ಕೊಳಲು ಇರುವ ಚಿತ್ರಪಟಗಳು ಸಾಮಾನ್ಯ. ಈ ಪ್ರತಿ ವಸ್ತುವಿಗೂ ಒಂದೊಂದು ಮಹತ್ವ ಇದೆ.

ಭಗವಾನ್ ಶ್ರೀಕೃಷ್ಣ
'ಶ್ರೀ ಕೃಷ್ಣ' ಎಂಬ ಪದ ಕಿವಿಗೆ ಬಿದ್ದಾಗ ಮೊದಲು ನೆನಪಾಗುವುದು ನೀಲಿ ಮುಖ. ತಲೆಯ ಮೇಲೆ ನವಿಲುಗರಿ ಧರಿಸಿ, ಕೈಲಿ ಕೊಳಲು ಹಿಡಿದ ಮುದ್ದಾದ ಮುಖ. ಬಾಲಕೃಷ್ಣ, ಬೆಣ್ಣೆಕೃಷ್ಣ, ಗೋಪಾಲಕೃಷ್ಣ, ರಾಧಾಕೃಷ್ಣ... ಹೀಗೆ ಹಲವು ವಿವಿಧ ರೂಪಗಳಲ್ಲಿ ಪೂಜೆಯನ್ನು ಪಡೆಯುತ್ತಿರುವ ಕೃಷ್ಣನನ್ನು ಎಲ್ಲರೂ ಇಷ್ಟಪಡುತ್ತಾರೆ. ತಲೆ ಮೇಲೆ ನವಿಲುಗರಿ, ಕೈಲಿ ಕೊಳಲು ಇಲ್ಲದ ಕೃಷ್ಣನನ್ನು ಊಹಿಸಿಕೊಳ್ಳುವುದೂ ಕಷ್ಟ.


ಬ್ರಹ್ಮಚರ್ಯದ ಸಂಕೇತ ನವಿಲುಗರಿ
ಕೃಷ್ಣನು ತಲೆಯ ಮೇಲೆ ನವಿಲುಗರಿಯನ್ನು ಏಕೆ ಸಿಕ್ಕಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಹಲವು ಕಥೆಗಳು ಪ್ರಚಲಿತದಲ್ಲಿವೆ. ಬೆಣ್ಣೆ ಕಳ್ಳ ಕೃಷ್ಣ ತನ್ನ ತುಂಟಾಟಗಳಿಂದ ಎಲ್ಲರನ್ನೂ ತನ್ನ ಕಡೆಗೆ ತಿರುಗಿಸಿಕೊಳ್ಳುತ್ತಾನೆ. ಕೃಷ್ಣನಿಗೆ ಎಂಟು ಮಂದಿ ಹೆಂಡತಿಯರಿದ್ದರು. ಹದಿನಾರು ಸಾವಿರ ಗೋಪಿಯರ ಸಖ್ಯವಿದ್ದರೂ ಕೃಷ್ಣ ಎಂದಿಗೂ ತನ್ನ ಮಿತಿಗಳನ್ನು ಮೀರಲಿಲ್ಲ. ಕೃಷ್ಣ ಮತ್ತು ಗೋಪಿಕಾಸ್ತ್ರೀಯರ ನಡುವೆ ಇರುವ ಪವಿತ್ರಬಂಧವನ್ನು ಅರ್ಥೈಸಿಕೊಳ್ಳಲು ಸಿದ್ಧತೆ ಬೇಕು. ನಡುವಿನ ಪವಿತ್ರ ಬಂಧ ಮಾತ್ರ. ಭೋಗಿಯಾಗಿ ಕಾಣಿಸಿಕೊಳ್ಳುವ ಕೃಷ್ಣನು ಒಬ್ಬ ಯೋಗಿ.

16,000 ಗೋಪಿಯರ ಜೊತೆಗಿದ್ದರೂ ಕೃಷ್ಣನು ಅಸ್ಖಲಿತಾ ಬ್ರಹ್ಮಚಾರಿಯಾಗಿಯೇ ಉಳಿದ ಎಂಬ ಪ್ರತೀತಿ ಇದೆ. ಬಾಲಕನ ಮುಗ್ಧತೆಯನ್ನು ಉಳಿಸಿಕೊಂಡಿದ್ದರ ಪ್ರತೀಕವಾಗಿ ಕೃಷ್ಣನ ತಲೆಯ ಮೇಲೆ ನವಿಲುಗರಿ ಇದೆ ಎಂದು ಹಲವರು ವಿಶ್ಲೇಷಿಸುತ್ತಾರೆ.


ನೃತ್ಯ ಕಲಿಸಿದ ಗುರು
ಒಂದು ದಿನ ಮಳೆ ಬೀಳುತ್ತಿದ್ದಾಗ ಶ್ರೀಕೃಷ್ಣನು ಆಹ್ಲಾದಕರ ವಾತಾವರಣದಲ್ಲಿ ಕೊಳಲು ನುಡಿಸುತ್ತಿದ್ದ. ಕೃಷ್ಣನ ಮುರಳಿ ಗಾಯನದಿಂದ ಪ್ರಕೃತಿ ರೋಮಾಂಚನಗೊಂಡಿತು. ಅಲ್ಲಿದ್ದ ಎಲ್ಲ ನವಿಲುಗಳು ಸಂಗೀತಕ್ಕಾಗಿ ಅವನ ಸುತ್ತಲೂ ಜಮಾಯಿಸಿದವು. ಕೊಳಲು ನುಡಿಸುತ್ತಿದ್ದ ಶ್ರೀಕೃಷ್ಣ ಒಂದು ಹಂತದಲ್ಲಿ ಕುಣಿಯಲು ಶುರು ಮಾಡಿದ. ಕೃಷ್ಣನ ಹೆಜ್ಜೆಗಳನ್ನು ನೋಡಿ ನವಿಲುಗಳು ಸಹ ನೃತ್ಯ ಮಾಡಿದವು. ಸಂಗೀತ, ನೃತ್ಯದ ನಂತರ ಎಲ್ಲ ನವಿಲುಗಳೂ ಒಗ್ಗೂಡಿ ಸೇರಿ ಶ್ರೀಕೃಷ್ಣನಿಗೆ ನಮಸ್ಕರಿಸಿದವು. 'ನೀನು ನಮಗೆ ನೃತ್ಯವನ್ನು ಕಲಿಸಿದ ಗುರು. ಗುರುದಕ್ಷಿಣೆಯಾಗಿ ನಮ್ಮ ಗರಿ ತೆಗೆದುಕೊಳ್ಳಿ' ಎಂದು ಶ್ರೀಕೃಷ್ಣನ ಪಾದಗಳಿಗೆ ಅರ್ಪಿಸಿದವು. ಕೃಷ್ಣ ಪ್ರೀತಿಯಿಂದ ನವಿಲುಗರಿಗಳನ್ನು ತೆಗೆದುಕೊಂಡು ತಲೆಯ ಮೇಲಿಟ್ಟುಕೊಂಡನು.


ನವಿಲುಗರಿಯು ಕೃಷ್ಣನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತು. ಹಿಂದೂಗಳು ನವಿಲನ್ನು ಪವಿತ್ರ ಪಕ್ಷಿ ಎಂದು ಪರಿಗಣಿಸುತ್ತಾರೆ. ನವಿಲು ಮನೆಗಳ ಮೇಲೆ ಹಾರಾಡಿದರೆ, ಅಂಗಳದಲ್ಲಿ ಓಡಾಡಿದರೆ ಸಕಲ ಸಂಪತ್ತು ಲಭ್ಯವಾಗುತ್ತದೆ ಎಂಬ ನಂಬಿಕೆ ಇದೆ. ಮಳೆ ಬರುವ ಮೊದಲು ಕಾರ್ಮೋಡ ಕವಿದಾಗ ನಲಿವುಗಳು ರೋಮಾಂಚನಗೊಂಡು ನರ್ತಿಸುತ್ತವೆ.

ಸರ್ಪದೋಷಕ್ಕೆ ನವಿಲುಗರಿಯ ರಕ್ಷೆ
ಶ್ರೀಕೃಷ್ಣನದು ಕಾಲಸರ್ಪ ಯೋಗ ಎಂದು ಕೆಲ ಪಂಡಿತರು ವಿಶ್ಲೇಷಿಸಿದ್ದಾರೆ. ನವಿಲು ಮತ್ತು ಹಾವಿನ ನಡುವೆ ದ್ವೇಷವಿದೆ. ಕಾಲಸರ್ಪ ದೋಷ ಇರುವವರು ನವಿಲುಗರಿಯನ್ನು ಸಮೀಪದಲ್ಲಿ ಇರಿಸಿಕೊಳ್ಳುವುದು ಉತ್ತಮ ಎಂದು ಹಲವರು ಅಭಿಪ್ರಾಯಪಡುತ್ತಾರೆ. ಶ್ರೀಕೃಷ್ಣನು ಸಹ ಕಾಲಸರ್ಪ ದೋಷಕ್ಕೆ ಪರಿಹಾರ ಕಂಡುಕೊಳ್ಳಲು ನವಿಲುಗರಿ ಇರಿಸಿಕೊಂಡಿದ್ದಾನೆ ಎಂದು ನಂಬಲಾಗುತ್ತಿದೆ. ಬಾಲ್ಯದಲ್ಲಿ ಕಾಳಿಂಗಮರ್ದನ ಮಾಡಿದ್ದ ಕೃಷ್ಣನ ಬಳಿಗೆ ಮತ್ತೊಮ್ಮೆ ಸರ್ಪವು ಬರಬಾರದು ಎನ್ನುವ ಕಾರಣಕ್ಕೆ ಗೊಲ್ಲ ಸಮಾಜದ ಹಿರಿಯರು ಶ್ರೀಕೃಷ್ಣನನ್ನು ನವಿಲುಗರಿಗಳಿಂದ ಅಲಂಕರಿಸಿದರು ಎಂಬ ಜಾನಪದ ಕಥೆಗಳೂ ಚಾಲ್ತಿಯಲ್ಲಿವೆ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...