ಸ್ಕಿನ್ ನ್ಯಾಚುರಲ್ ಆಗಿಡಲು, ಈ ಫ್ಲವರ್ ಫೇಸ್ ಪ್ಯಾಕ್ ಟ್ರೈ ಮಾಡಿ! Flowers Face pa...

ಸುಂದರ ತ್ವಚೆಗೆ ಹೂಗಳ ಫೇಸ್ ಪ್ಯಾಕ್

ಹಿಂದಿನಿಂದಲೂ ಮಹಿಳೆಯರು ತಮ್ಮ ಸೌಂದರ್ಯ ವರ್ಧನೆಗೆ ವಿಶೇಷ ಕಾಳಜಿ ವಹಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನು ಬಳಸಿ ಸುಂದರವಾಗಿ ಕಾಣಲು ಬಯಸುತ್ತಾರೆ. ಹಾಗೂ ಪಾರ್ಲರ್ ಮೊರೆ ಹೋಗುತ್ತಾರೆ.

ಮನೆಯಲ್ಲಿ ಕೆಲವು ತರಕಾರಿ, ಹಣ್ಣಿನ ಫೇಸ್ ಪ್ಯಾಕ್ ಹಚ್ಚಿಕೊಂಡು ತ್ವಚೆಯ ಸೌಂದರ್ಯ ಇಮ್ಮಡಿಗೊಳಿಸಿಕೊಳ್ಳುವ ಬಗ್ಗೆ ನಿಮಗೆ ತಿಳಿದಿದೆ. ಆದರೆ ಕೆಲವು ಸುಲಭವಾಗಿ ಸಿಗುವಂತಹ ಹೂವಿನಿಂದಲೂ ಫೇಸ್ ಪ್ಯಾಕ್ ತಯಾರಿಸಬಹುದು.

ಮೊಸರು ಬಳಸಿ ಕೂದಲು ಸಂರಕ್ಷಿಸಿ…!

ದಾಸವಾಳ ಹೂವಿನ 2 ಎಸಳುಗಳನ್ನು 2 ಚಮಚ ಮೊಸರಿನಲ್ಲಿ ಸೇರಿಸಿ ರುಬ್ಬಿ ಅದಕ್ಕೆ 4-5 ಹನಿ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿರಿ. 20 ನಿಮಿಷದ ನಂತರ ಮುಖ ತೊಳೆದರೆ ಬೇಸಿಗೆಯ ಬಿಸಿಲಿನಿಂದ ಬಸವಳಿದ ಚರ್ಮಕ್ಕೆ ಒಳ್ಳೆಯ ಪ್ಯಾಕ್ ಆಗುತ್ತದೆ.

ಗುಲಾಬಿ ಹೂವಿನ ದಳಗಳನ್ನು ಬಿಡಿಸಿ ಸ್ವಲ್ಪ ನೀರಿನಲ್ಲಿ ಅರ್ಧ ಗಂಟೆ ಕಾಲ ನೆನೆಸಿಡಿ. ಅದಕ್ಕೆ 1 ಸ್ಪೂನ್ ಜೇನುತುಪ್ಪ ಸೇರಿಸಿ ರುಬ್ಬಿ ಅದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ತೊಳೆದುಕೊಂಡರೆ ಮುಖ ಹೂವಿನಂತೆ ಅರಳುವುದು.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...