ಅನ್ವೇಷಣ (ಅಂದರೆ: ಅನ್ವೇಷಣೆ) ಎಸ್‌ಎಲ್ ಭೈರಪ್ಪ ಬರೆದ ಕಾದಂಬರಿಯಾಗಿದ್ದು, ಇದನ್ನು ಮೊದಲು 1976 ರಲ್ಲಿ ಪ್ರಕಟಿಸಲಾಯಿತು
ಈ ಕಾದಂಬರಿಯ ಪಾತ್ರಗಳು ತಮ್ಮ ತಮ್ಮ ಜೀವನವನ್ನು ಹುಡುಕಿಕೊಳ್ಳುವ ಪರಿಕ್ರಮದಲ್ಲಿ ‘ಗೃಹಭಂಗ’ದ ವಿಶ್ವನಾಥನ ಜೀವನವು ಓದುಗರಿಗೆ ಸ್ಪುಟವಾಗುತ್ತಾ ಹೋಗುತ್ತದೆ. ಅಲೆಮಾರಿಯಾಗಿ, ಹೋಟೆಲು ಕೆಲಸಗಾರನಾಗಿ, ಜಟಕಾ ಹೊಡೆಯುವವನಾಗಿ, ಪ್ರಿಯಕರನಾಗಿ, ಇನ್ನೂ ಹಲವು ರೀತಿಯಲ್ಲಿ ಅವನು ಸಾಗಿದ ದಾರಿಯಿಂದ ವಿವಿಧ ಪಾತ್ರಗಳು ಆಕರ್ಷಿತರಾಗುತ್ತಾರೆ; ತಮ್ಮನ್ನು ಅವನೊಡನೆ ಹೋಲಿಸಿಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ಯಾರಿಗೂ ಅವನ ಜೀವನದ ಸಮಗ್ರ ಚಿತ್ರ ಕಾಣುವುದಿಲ್ಲ. ಈ ಕಾದಂಬರಿಯಲ್ಲಿ ಭೈರಪ್ಪನವರು ಸಾಧಿಸಿರುವ ತಂತ್ರಕೌಶಲ, ಜೀವನಗ್ರಹಿಕೆ ಬುದ್ಧಿಭಾವ, ಇಂದ್ರಿಯಾತ್ಮಕ ಚಿತ್ರಗಳ ಸಮರಸ ಹದವು ಕನ್ನಡ ಕಾದಂಬರೀಲೇಖನದಲ್ಲಿ ಒಂದು ಮುಖ್ಯ ಹಂತವಾಗಿ ನಿಂತಿದೆ.