ಹೊಟ್ಟೆ ಮೇಲೆ ನಿತ್ಯ 10 ನಿಮಿಷಗಳ ಕಾಲ ಎಳ್ಳೆಣ್ಣೆಯಿಂದ ಮಸಾಜ್ ಮಾಡಿ ನೋಡಿ.! Benefi...
ಹೊಟ್ಟೆ ನೋವಿಗೆ ಎಣ್ಣೆ ಮಸಾಜ್ ಒಳ್ಳೆಯದೇ?
ಎಣ್ಣೆ ಮಸಾಜ್ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆಯೇ?
ನನ್ನ ಹೊಟ್ಟೆಯನ್ನು ಮಸಾಜ್ ಮಾಡುವುದು ಒಳ್ಳೆಯದು?
ಹೊಟ್ಟೆಗೆ ಮಸಾಜ್ ಮಾಡುವುದರಿಂದ ಗ್ಯಾಸ್ ಬಿಡುಗಡೆಯಾಗುತ್ತದೆಯೇ?
ಹೊಟ್ಟೆಯ ಮಸಾಜ್ ಅನ್ನು ನೀವೇ ಹೇಗೆ ನೀಡುತ್ತೀರಿ?
ನಿಮ್ಮ ಹೊಟ್ಟೆಯನ್ನು ಮಸಾಜ್ ಮಾಡುವುದು ಸರಿಯೇ?
ನಿಮ್ಮ ಹೊಟ್ಟೆಯನ್ನು ಉಜ್ಜುವುದರಿಂದ ಅನಿಲವನ್ನು ನಿವಾರಿಸಬಹುದೇ?
ಮಸಾಜ್ ಮೂಲಕ ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವುದು ಹೇಗೆ?
ಸ್ವಯಂ ಹೊಟ್ಟೆಯ ಮಸಾಜ್
ಈ 2 ನಿಮಿಷಗಳ ಹೊಟ್ಟೆಯ ಮಸಾಜ್ ಗುಣಪಡಿಸಬಹುದು.
ಪ್ರತಿದಿನ 10 ನಿಮಿಷಗಳ ಕಾಲ ನಿಮ್ಮ ಹೊಟ್ಟೆಯನ್ನು ಎಳ್ಳಿನ ಎಣ್ಣೆಯಿಂದ ಮಸಾಜ್ ಮಾಡಲು ಪ್ರಯತ್ನಿಸಿ. ಕಿಬ್ಬೊಟ್ಟೆಯ ಮಸಾಜ್ನ ಪ್ರಯೋಜನಗಳು
#ಆರೋಗ್ಯ
ಮೈಕೈ ಮತ್ತು ಕೀಲು ನೋವುಗಳಿದ್ದರೆ, ಈ ಎಣ್ಣೆಗಳಿಂದಲೇ ಮಸಾಜ್ ಮಾಡಿ ನೋಡಿ...
ಮಸಾಜ್ ಅತ್ಯುತ್ತಮಮನುಷ್ಯನಿಗೆ ಮೈ ಕೈ ನೋವು, ಪಾರ್ಶ್ವವಾಯು, ಅಥವಾ ಕೀಲು ನೋವಿನ ಸಮಸ್ಯೆ ಎದುರಾದಾಗ ಔಷಧಿ ಗಳಿಗಿಂತ ಮೊದಲು ನೆನಪಾಗುವುದು ಎಣ್ಣೆಯ ಮಸಾಜ್ ಮತ್ತು ಬಿಸಿನೀರಿನ ಸ್ನಾನ. ನಗರ ಪ್ರದೇಶಗಳಲ್ಲಿ ವಾಸ ಮಾಡುವವರಿಗೆ ಇಂದು ಎಣ್ಣೆಯ ಮಸಾಜ್ ಒಂದು ಟ್ರೆಂಡ್ ಆಗಿದೆ.
ಆದರೆ ಇದಕ್ಕೆ ಸುಮಾರು ಇನ್ನೂರು ವರ್ಷಗಳ ಇತಿಹಾಸವಿದೆ. ಆಯುರ್ವೇದ ಪದ್ಧತಿಯಲ್ಲಿ ಅದರಲ್ಲೂ ವಿಶೇಷವಾಗಿ ಕೇರಳದ ಆರೋಗ್ಯ ಪದ್ಧತಿಯಲ್ಲಿ ಎಣ್ಣೆಯ ಮಸಾಜ್ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ.
ದೇಹದಲ್ಲಿ ಯಾವ ಭಾಗದಲ್ಲಿ ನೋವು ಕಾಣಿಸಿಕೊಂಡಿರುತ್ತದೆ ಅಲ್ಲಿಗೆ ಪರಿಣಾಮಕಾರಿಯಾಗಿ ಒಂದು ಎಣ್ಣೆಯನ್ನು ಅಥವಾ ಹಲವು ಎಣ್ಣೆಗಳ ಮಿಶ್ರಣವನ್ನು ಹಾಕಿ ಮಸಾಜ್ ಮಾಡುವುದರಿಂದ ಕೇವಲ ನೋವಿನ ನಿವಾರಣೆ ಆಗುವುದು ಮಾತ್ರವಲ್ಲದೆ ಮೂಳೆಗಳು ಬಲಗೊಳ್ಳುತ್ತವೆ. ರಾತ್ರಿಯ ಸಮಯದಲ್ಲಿ ಒಳ್ಳೆಯ ನಿದ್ರೆ ಬರುತ್ತದೆ, ದೇಹದ ನರಮಂಡಲ ಶಾಂತವಾಗುತ್ತದೆ. ಇದರ ಜೊತೆಗೆ ಹೊಟ್ಟೆಗೆ ಸಂಬಂಧಪಟ್ಟ ಸಾಕಷ್ಟು ಸಮಸ್ಯೆಗಳು ಬಗೆಹರಿಯುತ್ತವೆ. ಮನುಷ್ಯನ ಜೀರ್ಣ ಶಕ್ತಿ ಅಭಿವೃದ್ಧಿ ಆಗುವುದರ ಜೊತೆಗೆ ಅತ್ಯುತ್ತಮವಾದ ಮಸಾಜ್ ಪ್ರಕ್ರಿಯೆಯನ್ನು ಕೈಗೊಂಡು ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಈ ಲೇಖನದಲ್ಲಿ ಪುರಾತನ ಕಾಲದಿಂದ ಮನುಷ್ಯನ ದೈಹಿಕ ಅಸ್ವಸ್ಥತೆಯನ್ನು ಹೋಗಲಾಡಿಸಿ ಮೈ ಕೈ ನೋವು, ಮೂಳೆ ನೋವು ಮತ್ತು ಕೀಲು ನೋವುಗಳನ್ನು ಹೋಗಲಾಡಿಸಲು ಬಳಕೆ ಆಗುವಂತಹ ಕೆಲವೊಂದು ವಿಶೇಷ ಬಗೆಯ ಎಣ್ಣೆಗಳ ಬಗ್ಗೆ ಹಾಗೂ ಅವುಗಳ ಪರಿಣಾಮಕಾರಿ ಪ್ರಭಾವಗಳ ಬಗ್ಗೆ ತಿಳಿದುಕೊಳ್ಳೋಣಆಲಿವ್ ಆಯಿಲ್
ತುಂಬಾ ಹಗುರವಾದ ನೋವಿಗೆ ಮತ್ತು ಮೃದುವಾದ ಮಸಾಜ್ ಮಾಡಲು ಆಲಿವ್ ಆಯಿಲ್ ಬಳಕೆ ಮಾಡಬಹುದು. ಏಕೆಂದರೆ ಈ ಎಣ್ಣೆ ಸ್ವಲ್ಪ ಗಟ್ಟಿ ಇರುವುದರಿಂದ ಚರ್ಮದ ಭಾಗಕ್ಕೆ ನಿಧಾನವಾಗಿ ಹೀರಿಕೊಳ್ಳುತ್ತದೆ.
ದೇಹದಲ್ಲಿ ಮಾಂಸಖಂಡಗಳನ್ನು ಶಾಂತಗೊಳಿಸಿ ಚರ್ಮದ ಭಾಗದಲ್ಲಿ ತೇವಾಂಶವನ್ನು ಶೇಖರಣೆ ಮಾಡುವ ಅದ್ಭುತ ಪ್ರಯೋಜನ ನಮಗೆ ಇದರಿಂದ ಲಭ್ಯವಾಗುತ್ತದೆ.
ನಮ್ಮ ರಕ್ತ ಸಂಚಾರವನ್ನು ಹೆಚ್ಚಾಗಿಸಿ, ಮೈ ಕೈ ನೋವು, ಮಾಂಸಖಂಡಗಳ ಸೆಳೆತ, ಉರಿಯೂತ ಇತ್ಯಾದಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ನಿಯಮಿತವಾಗಿ ಆಲಿವ್ ಆಯಿಲ್ ಮಸಾಜ್ ಮಾಡಿಕೊಳ್ಳುವುದರಿಂದ ಆಕ್ಸಿಡೇಟಿವ್ ಒತ್ತಡದಿಂದ ಚರ್ಮವನ್ನು ರಕ್ಷಣೆ ಮಾಡಿಕೊಳ್ಳಬಹುದು.
ಎಳ್ಳೆಣ್ಣೆ
ಕೆಲವರಿಗೆ ಮೈಕೈ ಮೂಳೆಗಳು ತುಂಬಾ ದುರ್ಬಲವಾಗಿರುತ್ತವೆ. ಸಣ್ಣಪುಟ್ಟ ಕೆಲಸ ಮಾಡಲು ಹೋದರೆ ಮೈಕೈ ನೋವು ಹೆಚ್ಚಾಗುತ್ತದೆ ಮತ್ತು ಕೀಲು ನೋವು ಕಂಡುಬರುತ್ತದೆ. ಆದರೆ ಎಳ್ಳೆಣ್ಣೆಯಿಂದ ಆಗಾಗ ಮಸಾಜ್ ಮಾಡಿಕೊಳ್ಳುವುದರಿಂದ ಮೂಳೆಗಳಿಗೆ ಶಕ್ತಿ ದೊರಕಿ ಮೂಲಗಳ ಬಲ ಹೆಚ್ಚುತ್ತದೆ.
ಎಳ್ಳು ಕಾಳುಗಳಲ್ಲಿ ತಾಮ್ರದ ಅಂಶ, ಮೆಗ್ನೀಷಿಯಂ ಅಂಶ, ಕ್ಯಾಲ್ಸಿಯಂ, ಆರೋಗ್ಯಕರವಾದ ಕೊಬ್ಬಿನ ಅಂಶ, ಒಮೆಗಾ 3 ಫ್ಯಾಟಿ ಆಸಿಡ್ ಅಂಶ, ಪ್ರೋಟಿನ್ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಎಳ್ಳೆಣ್ಣೆಯಿಂದ ಮಸಾಜ್ ಮಾಡುವುದರಿಂದ ಮೆದುಳಿನಿಂದ ಹರಿದುಬಂದಿರುವ ನರಮಂಡಲಗಳು ಶಾಂತವಾಗುತ್ತದೆ.
ಚರ್ಮಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್ ಈ ಅಂಶ ಅಪಾರ ಪ್ರಮಾಣದಲ್ಲಿ ಸಿಕ್ಕಿದಂತಾಗಿ ಚರ್ಮದ ಮೇಲೆ ಕಂಡುಬರುವ ಸುಕ್ಕುಗಳು ಮತ್ತು ಗೆರೆಗಳು ಮಾಯವಾಗುತ್ತದೆ. ವಯಸ್ಸಾಗುವಿಕೆ ಪ್ರಕ್ರಿಯೆ ಇದರಿಂದ ದೂರವಾಗುತ್ತದೆ.