Health Tips: ಹೆಚ್ಚು ಕಾಲ ಬದುಕಲು ಯುವಜನತೆ ಈ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲೇಬೇಕು
ಒಬ್ಬ ವ್ಯಕ್ತಿಯು ತನ್ನ ಆಹಾರವನ್ನು ಸರಿಯಾಗಿ ಅಗಿಯುವಾಗ ಅದು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಗೆ ಒಳ್ಳೆಯದು ಮತ್ತು ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ಆರೋಗ್ಯ ಸುಧಾರಿಸಿ ವಯಸ್ಸನ್ನು ಹೆಚ್ಚಿಸುತ್ತದೆ.
ದೀರ್ಘಾಯುಷ್ಯಕ್ಕಾಗಿ ಯುವಜನತೆ ಕೈಗೊಳ್ಳಬಹುದಾದ 8 ಅಭ್ಯಾಸಗಳು
ಆಹಾರವನ್ನು ಅಗೆದು-ಜಗಿದು ತಿನ್ನಿ: ಕೆಲವರು ಕಣ್ಣುಮುಚ್ಚು ಬಿಡುವುದರಲ್ಲಿ ಊಟ ಮಾಡಿ ಮುಗಿಸಿರುತ್ತಾರೆ. ಇದು ನಿಜಕ್ಕೂ ಕೆಟ್ಟ ಅಭ್ಯಾಸ. ಆಹಾರವನ್ನು ಅಗೆದು-ಜಗಿದು ನಿಧಾನವಾಗಿ ತಿನ್ನುವುದು ಆರೋಗ್ಯಕ್ಕೆ ಸಹಕಾರಿಯಾಗುತ್ತದೆ.
ಒಬ್ಬ ವ್ಯಕ್ತಿಯು ತನ್ನ ಆಹಾರವನ್ನು ಸರಿಯಾಗಿ ಅಗಿಯುವಾಗ ಅದು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಗೆ ಒಳ್ಳೆಯದು ಮತ್ತು ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ಆರೋಗ್ಯ ಸುಧಾರಿಸಿ ವಯಸ್ಸನ್ನು ಹೆಚ್ಚಿಸುತ್ತದೆ.
ಒತ್ತಡ ನಿಭಾಯಿಸಿ: ಹೆಚ್ಚಿನ ಒತ್ತಡವು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಬಿಡುಗಡೆಗೆ ಕಾರಣವಾಗುತ್ತದೆ. ಹೆಚ್ಚಿನ ಒತ್ತಡವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಹ ಕುಗ್ಗಿಸುತ್ತದೆ.
ಈ ಬೆಳವಣಿಗೆ ನಮ್ಮನ್ನು ಹಲವಾರು ರೋಗಗಳಿಗೆ ಗುರಿಯಾಗಿಸುತ್ತದೆ. ಆದ್ದರಿಂದ, ಹೆಚ್ಚು ಕಾಲ ಬಾಳಿ ಬದುಕಲು ಒತ್ತಡವನ್ನು ನಿಭಾಯಿಸುವ ಕಲೆ ಕಲಿತುಕೊಳ್ಳಿ.
ಆರೋಗ್ಯಕರ ಆಹಾರ: ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಅಳವಡಿಸಿಕೊಳ್ಳುವುದು ದೀರ್ಘಾವಧಿಯ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ನಿರ್ಣಾಯಕವಾಗಿದೆ.
ಹೀಗಾಗಿ ಆಹಾರದಲ್ಲಿ ಯಥೇಚ್ಛವಾಗಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ನೇರ ಪ್ರೋಟೀನ್‌ಗಳನ್ನು ಸೇರಿಸಿಕೊಳ್ಳಿ. ಆದಷ್ಟು ನಿಮ್ಮ ಆಹಾರದಿಂದ ಸಕ್ಕರೆಗಳು, ಅನಾರೋಗ್ಯಕರ ಕೊಬ್ಬುಗಳು ಮತ್ತು ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಮಿತಿಗೊಳಿಸಿ.
ನಿಯಮಿತ ದೈಹಿಕ ಚಟುವಟಿಕೆ: ನಿಯಮಿತ ವ್ಯಾಯಾಮವು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುವುದರ ಜೊತೆ ದೀರ್ಘಾಯುಷ್ಯಕ್ಕೆ ಕೊಡುಗೆ ನೀಡುತ್ತದೆ. ಹೆಚ್ಚಿನ ಪ್ರಯೋಜನ ಪಡೆಯಲು ಶಕ್ತಿ ತರಬೇತಿ ವ್ಯಾಯಾಮಗಳೊಂದಿಗೆ ಪ್ರತಿ ವಾರ ಕನಿಷ್ಠ 150 ನಿಮಿಷಗಳ ಮಧ್ಯಮ-ತೀವ್ರತೆಯ ಏರೋಬಿಕ್ ಚಟುವಟಿಕೆ ಅಥವಾ 75 ನಿಮಿಷಗಳ ಹುರುಪಿನ-ತೀವ್ರತೆಯ ಚಟುವಟಿಕೆ ಮಾಡಿ.
ಮಾನಸಿಕ ಯೋಗಕ್ಷೇಮ: ಯೋಗಕ್ಷೇಮ ಮತ್ತು ದೀರ್ಘಾಯುಷ್ಯದಲ್ಲಿ ಮಾನಸಿಕ ಆರೋಗ್ಯವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಮಾನಸಿಕ ಆರೋಗ್ಯಕ್ಕೆ ಮಾರಕವಾಗಿರುವ ಒತ್ತಡವನ್ನು ನಿಭಾಯಿಸುವ ನತಂತ್ರಗಳನ್ನು ಅಭ್ಯಾಸ ಮಾಡಿ.
ಜೊತೆಗೆ ನಿಮಗೆ ಸಂತೋಷ ಮತ್ತು ವಿಶ್ರಾಂತಿ ನೀಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಧ್ಯಾನ, ಸಾವಧಾನತೆ, ಯೋಗ, ಹವ್ಯಾಸಗಳಂತಹ ಸ್ವಯಂ-ಆರೈಕೆಗೆ ಆದ್ಯತೆ ನೀಡಿ.
ತೂಕ ನಿರ್ವಹಣೆ: ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಒಟ್ಟಾರೆ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ಮುಖ್ಯವಾಗಿದೆ. ಅಧಿಕ ತೂಕ, ವಿಶೇಷವಾಗಿ ಸೊಂಟದ ಸುತ್ತ ಬರುವ ಬೊಜ್ಜು ಹೃದ್ರೋಗ, ಮಧುಮೇಹ ಮತ್ತು ಕೆಲವು ಕ್ಯಾನ್ಸರ್‌ಗಳಂತಹ ದೀರ್ಘಕಾಲದ ಕಾಯಿಲೆಗಳ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದೆ.
ಆದ್ದರಿಂದ ಆರೋಗ್ಯಕರ ತೂಕವನ್ನು ಸಾಧಿಸಲು ಮತ್ತು ನಿರ್ವಹಿಸಲು ಆರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಮೇಲೆ ಕೇಂದ್ರೀಕರಿಸಿ.
ಡ್ರೈಪ್ರೂಟ್ಸ್ ಸೇವಿಸಿ: ಬಾದಾಮಿ, ವಾಲ್‌ನಟ್‌ಗಳಂತಹ ಬೀಜಗಳು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅವು ಪೋಷಕಾಂಶಗಳಿಂದ ಕೂಡಿರುವುದಲ್ಲದೆ ಮೆದುಳಿನ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದು ಮೆಮೊರಿ ನಷ್ಟದ ಅಪಾಯವನ್ನು ಕಡಿಮೆ ಮಾಡಲು ಮತ್ತು ಮೆದುಳಿನ ಅರಿವಿನ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಹಾನಿಕಾರಕ ಅಭ್ಯಾಸಗಳನ್ನು ತಪ್ಪಿಸಿ:
ನಿಮ್ಮ ಆರೋಗ್ಯ ಮತ್ತು ದೀರ್ಘಾಯುಷ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಧೂಮಪಾನ, ಅತಿಯಾದ ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆಯಂತಹ ಅಭ್ಯಾಸಗಳನ್ನು ತಪ್ಪಿಸಿ.
ಧೂಮಪಾನ ಶ್ವಾಸಕೋಶದ ಹಾನಿಗೆ, ಮದ್ಯಪಾನ ಲಿವರ್ ಹಾನಿಗೆ ಕೊಲೆಸ್ಟ್ರಾಲ್ ಹೃದಯದ ಕಾಯಿಲೆಗೆ ಕಾರಣವಾಗಿವೆ. ಆದ್ದರಿಂದ ಈ ಹಾನಿಕಾರಕ ಅಭ್ಯಾಸಗಳನ್ನು ತಪ್ಪಿಸಿ.