ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಎರಡು ರಾಶಿಯ ಪುರುಷರಿಗೆ ಪತ್ನಿಯಾಗಿ ಬರುವ ಹುಡುಗಿಯನ್ನು ಪಡೆಯುವುದರಲ್ಲಿ ತುಂಬಾ ಅದೃಷ್ಟವಂತರು. ಜಗತ್ತಿನ ಅತ್ಯಂತ ಸುಂದರಿಯಾಗಿರುವ ಸ್ತ್ರೀಯರು ಅಥವಾ ಹುಡುಗಿಯರು ಇವರಿಗೆ ಬಾಳ ಸಂಗಾತಿಯಾಗಿ ಸಿಗುತ್ತಾರೆ.
ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ಹುಡುಗನು ಕೂಡ ಯೋಚಿಸುವುದೇನೆಂದರೆ ಅವರಿಗೆ ಪತ್ನಿಯಾಗಿ ಬರುವ ಹುಡುಗಿಯರು ತುಂಬಾ ಸುಂದರಿಯಾಗಿರಬೇಕು ಮತ್ತು ಸಕಲ ಗುಣ ಸಂಪನ್ನೆಯಾಗಿರಬೇಕು ಎಂದು ಬಯಸುತ್ತಾರೆ. ಹುಡುಗರು ತಮಗೆ ಪತ್ನಿಯಾಗಿ ದೊರೆಯುವ ಹುಡುಗಿಯ ಬಗ್ಗೆ ಅನೇಕ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಇಂದು ನಾವು ಎರಡು ರಾಶಿಯ ಬಗ್ಗೆ ತಿಳಿದುಕೊಳ್ಳೋಣ. ಅವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪತ್ನಿಯನ್ನು ಪಡೆಯುವುದರಲ್ಲಿ ತುಂಬಾ ಭಾಗ್ಯಶಾಲಿಯಾಗಿರುತ್ತಾರೆ. ಈ ಎರಡೂ ರಾಶಿಯವರಿಗೆ ಅವರು ಯೋಚಿಸುವ ರೀತಿಯಲ್ಲಿಯೇ ಸುಂದರಿ ಹಾಗೂ ಗುಣವತಿಯಾಗಿರುವ ಪತ್ನಿಯು ಸಿಗುತ್ತಾಳೆ
ಮೇಷ ರಾಶಿ .
ಮೇಷ ರಾಶಿಯ ಪುರುಷರಿಗೆ ಪ್ರೀತಿ, ಪ್ರೇಮದ ವಿಷಯದಲ್ಲಿ ಜೀವನ ತುಂಬಾ ಸುಮಧುರ ಮತ್ತು ಸುಖಮಯವಾಗಿರುತ್ತದೆ. ಈ ರಾಶಿಯ ಹುಡುಗರು ಯಾವ ಹುಡುಗಿಯನ್ನು ಪ್ರೀತಿಸುತ್ತಾರೋ, ಅವಳು ತುಂಬಾ ಸುಂದರ ಯುವತಿಯಾಗಿದ್ದು ಮತ್ತು ಗುಣವತಿ, ರೂಪವತಿಯೂ ಆಗಿರುತ್ತಾಳೆ. ಇದರ ಜೊತೆಗೆ ಮದುವೆಯಾಗುವ ತೊಂಬತ್ತು ಪ್ರತಿಶತ ಸಾಧ್ಯತೆ ಇದ್ದು , ಇದರ ಜೊತೆಗೆ ಮೇಷ ರಾಶಿಯವರು ತುಂಬಾ ಜವಾಬ್ದಾರಿಯುತ ಮನುಷ್ಯರಾಗಿರುತ್ತಾರೆ ಮತ್ತು ಬೇರೆಯವರನ್ನು ಬೇಗನೆ ಅರ್ಥ ಮಾಡಿಕೊಳ್ಳುವ ಮನಸ್ಸನ್ನು ಹೊಂದಿರುತ್ತಾರೆ. ಅವರ ಬಾಳ ಸಂಗಾತಿಯಾಗಿ ಬರುವವರ ಪ್ರತಿಯೊಂದು ವಿಷಯಕ್ಕೂ ತಮ್ಮ ಜೀವನ ಸಂಗಾತಿಗೆ ಸಹಕಾರ ನೀಡುತ್ತಾರೆ. ಇವರ ಸಂಬಂಧ ತುಂಬಾ ಗಟ್ಟಿಯಾಗಿ ಸುಮಧುರವಾಗಿ ಇರುತ್ತದೆ.
ಕನ್ಯಾ ರಾಶಿ.
ಈ ರಾಶಿಯ ಪುರುಷರಿಗೆ ಸುಂದರಿ ಪತ್ನಿಯ ವಿಷಯದಲ್ಲಿ ತುಂಬಾ ಹೆಚ್ಚಾಗಿಯೇ ಅದೃಷ್ಟ ಒಲಿದು ಬರಲಿದೆ. ಯಾಕೆಂದರೆ ಇವರಿಗೂ ಕೂಡ ಹೆಚ್ಚಾಗಿ ಸುಂದರಿ, ರೂಪವತಿ ಮತ್ತು ಗುಣವತಿಯಾಗಿರುವ ಹೆಂಡತಿಯೂ ದೊರೆಯುತ್ತಾಳೆ. ಕನ್ಯಾ ರಾಶಿಯ ಪುರುಷರು ನೋಡಲು ತುಂಬಾ ಸುಂದರವಾಗಿದ್ದು ಮತ್ತು ಚಾಣಾಕ್ಷರು, ಬುದ್ಧಿವಂತರೂ ಆಗಿರುತ್ತಾರೆ. ಈ ರಾಶಿಯ ಜನರು ಅವರ ಮಾತುಗಳಿಂದಲೇ ಬೇರೆಯವರನ್ನು ಬೇಗನೆ ಪ್ರಭಾವಿತಗೊಳಿಸುತ್ತಾರೆ. ಒಟ್ಟಾಗಿ ಹೇಳಬೇಕೆಂದರೆ ಈ ಎರಡೂ ರಾಶಿಯವರು ತಮ್ಮ ಪತ್ನಿಯಾಗಿ ಸಿಗುವ ಹುಡುಗಿಯ ವಿಷಯಗಳಲ್ಲಿ ಅದೃಷ್ಟವಂತರು ಎಂದೇ ಹೇಳಬಹುದು.