ರಾಷ್ಟ್ರಕೂಟ ಮೂರನೆ ಕೃಷ್ಣನ ಜೂರಾ ಶಾಸನದ ಪರಿಚಯ ಮಧ್ಯಪ್ರದೇಶದ ಜೂರದಲ್ಲೊಂದು ಕನ್ನಡ ಶ...


ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಜೂರಾ ಎಂಬ ಹಳ್ಳಿಯಲ್ಲಿ ಸಿಕ್ಕಿರುವ ರಾಷ್ಟ್ರಕೂಟರ ಮುಮ್ಮಡಿ ಕೃಷ್ಣನ ಕನ್ನಡ. ಶಾಸನವನ್ನ ಏಚಿಮಯ್ಯ ಎಂಬುವವನು ಬರೆದಿದ್ದಾನೆಂದು ತಿಳಿದು ಬರುತ್ತದೆ.ಇದರ ಕಾಲ ಸುಮಾರು ಕ್ರಿ .ಶ 947

ಶಾಸನದ ಒಂದು ಪದ್ಯ ಹೀಗೆ ಹೇಳುತ್ತೆ

ಸೋಲದೆ ಪರವನಿತೆಗೆ ಕಣ್
ಸೋಲದು ಮೊಲೆವಾಲನೂಡಿ ನಡಪಿದ ತಾಯಿಂ
ಮೇಲೆನೆ ಬಗೆಗುಂ ನೋಡಿರೆ
ಸೋಲದು ಚಿತ್ತಂ ಪರಾಂಗನಾಪುತ್ರಕನಾ
ಅವನು ಪರಸ್ತ್ರೀಗೆ ಸೋಲುವವನಲ್ಲ. ಅವರನ್ನು ನೋಡಿದರೆ ಮೊಲೆಹಾಲನ್ನು ಕುಡಿಸಿ ಬದುಕು ನೀಡಿದ ತಾಯಿಗಿಂತ ಹೆಚ್ಚಾಗಿ ಗೌರವಿಸುತ್ತಿದ್ದ. ಎಂತಹ ಪರಿಸ್ಥಿತಿಯಲ್ಲೂ ಪರಸ್ತ್ರೀಗೆ ಆತನ ಚಿತ್ತ ಸೋತುದ್ದಿಲ್ಲವಂತೆ




ಕನ್ನಡದಲ್ಲಿ ಲಭ್ಯವಿರುವ ಬಲು ಅಪರೂಪದ ಶಾಸನ. ಇದು ಮಧ್ಯಪ್ರದೇಶದ ಉತ್ತರ ಗಡಿ ಜಿಲ್ಲೆಯಾದ ಸತ್ನದ, ಜೂರ ಎಂಬ ಊರಿನಲ್ಲಿ ಸಿಕ್ಕಿದೆ. ವಿಶೇಷವೆಂದರೆ, ಇಲ್ಲಿಯವರೆಗೆ ಲಭ್ಯವಿರುವ ಉತ್ತರ ದಿಕ್ಕಿನ ಕನ್ನಡದ ಶಾಸನದ ಇದಾಗಿದೆ. ಈ ಶಾಸನದ ಕಾಲವು ಸುಮಾರು ೯ ಹಾಗು ೧೦ನೇ ಶತಮಾನಕ್ಕೆ ಸೇರಿದ ರಾಷ್ರಕೂಟರ ದೊರೆ ಮುಮ್ಮಡೀ ಕೃಷ್ಣರ ಕಾಲದ್ದಾಗಿದೆ. ಈ ಶಾಸನವನ್ನು ಚಿಮ್ಮಯ್ಯ ಎಂಬ ವ್ಯಕ್ತಿಯು ಕೆತ್ತಿದ್ದಾನೆ. ಇದರ ಭಾಷೆ ಹಳಗನ್ನಡ ಹಾಗು ಇದನ್ನು ಹಳಗನ್ನಡ ಲಿಪಿಯಲ್ಲಿ ಕೆತ್ತಿಸಿದ್ದಾರೆ. ಇದು ರಾಷ್ಟ್ರಕೂಟರರ ರಾಜ ಮುಮ್ಮಡಿ ಕೃಷ್ಣರ ಸಾಹಸಗಾಥೆಯನ್ನು ಬಣ್ಣಿಸುತ್ತದೆ.

ಇಲ್ಲಿ ರಾಜ ಮುಮ್ಮಡಿ ಕೃಷ್ಣನನ್ನು ಹೀಗೆ ಬಣ್ಣಿಸಿದ್ದಾರೆ.

" ಸ್ವಸ್ಥಿ ಪರಮಭಟ್ಟಾರಕ ಶ್ರೀ ಪೃಥವೀವಲ್ಲಭ ಮಹಾರಾಜಾದಿರಾಜನ್ ಎಲ್ಲರಮರುಳನ್ ಆನೆವೆಡೆಮ್ಗನ್ ಚಲಕೆನಲ್ಲಾತನ್ ವೈರಿವಿಲಾಸಮ್ ಮದಗಜಮಲ್ಲಂ ಪರಮಗಣಪುತ್ರಮ್ ಗಣ್ಡಮಾರ್ತಾಣ್ಡನ್ ಅಕಾಲವರ್ಷನ್ ನೃಪತುಂಗನ್ ಕಚ್ಚಗಂ ಶ್ರೀ ಕನ್ನಾರದೇವನ್ "

ಇಲ್ಲಿ ಮುಮ್ಮಡಿ ಕೃಷ್ಣನಿಗೆ ಎಲ್ಲರಮರುಳನ್ಚಲಕೇನಲ್ಲಾತನ್ಆನೆವೆಡೆಮ್ಗನ್ ಎಂಬ ಅಪ್ಪಟ ಕನ್ನಡ ಬಿರುದುಗಳನ್ನು ಕಾಣಬಹುದು. ಮತ್ತೊಂದು ವಿಶೇಷವೆಂದರೆ, ಇಲ್ಲಿ ರಾಜ ಕೃಷ್ಣನ ಮೂಲ ಹೆಸರು (ಕನ್ನಾರ) ಕನ್ನಡದಲ್ಲಿತ್ತು ಎಂಬುದು ವಿಶೇಷ.

ಶಾಸನದ ಸಾರಾಂಶ:

ಈ ಶಾಸನದಲ್ಲಿ ಕನ್ನಾರದೇವನ ವಿಜಯಗಳನ್ನು ವಿವರಿಸಿದ್ದಾರೆ. ಕನ್ನಾರದೇವನು ದಕ್ಷಿಣದ ರಾಜರಾದ ಪಾಂಡ್ಯರು ಹಾಗು ಚೋಳರನ್ನು ಸೋಲಿಸಿದನೆಂದು ಈ ಶಾಸನ ಹೇಳುತ್ತದೆ. ಅಷ್ಟೇ ಅಲ್ಲದೆ ಈ ಶಾಸನದಲ್ಲಿ ಒಂದು ಕನ್ನಡ ಪದ್ಯವೂ ಇದೆ.

"ಸೋಲದೆ ಪರವನಿತೆಗೆ ಕಣ್

ಸೋಲದು ಮೊಲೆವಾಲನೂಡಿ ನಡಪಿದ ತಾಯಿಂ

ಮೇಲೆನೆ ಬಗೆಗುಂ ನೋಡಿರೆ

ಸೋಲದು ಚಿತ್ತಂ ಪರಾಂಗನಾಪುತ್ರಕನಾ"

ಇದಲ್ಲದೆ ಶಾಸನವನ್ನು ಕೆತ್ತಿಸಿದವರ ಸಂಪೂರ್ಣ ಮಾಹಿತಿ ಇಲ್ಲಿ ದೊರೆಯುತ್ತದೆ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...