ಈ ಆರು ಸಂಕೇತಗಳು ಎದುರಾದರೆ ಶೀಘ್ರದಲ್ಲೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ! kannada astrology...


ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಈ ಆರು ಸಂಕೇತಗಳು ಎದುರಾದರೆ, ಅದೃಷ್ಟ ನಿಮ್ಮನ್ನು ಶೀಘ್ರದಲ್ಲೇ ಹುಡುಕಿಕೊಂಡು ಬರಲಿದೆ ಎನ್ನುವುದರ ಸಂಕೇತವಾಗಿದೆ.

 

ಸಾಮಾನ್ಯವಾಗಿ ಕೆಲವರಿಗೆ ಅದೃಷ್ಟವಿರುತ್ತದೆ ಒಳ್ಳೆಯ ಧನವಂತರಾಗುತ್ತಾರೆ ಎಂದು ಒಳ್ಳೆಯ ಭವಿಷ್ಯ ಇದೆ ಎಂದು ಕೆಲವರು ನಂಬುತ್ತಾರೆ. ಇನ್ನು ಕೆಲವರು ಕಷ್ಟಪಟ್ಟು ಕೆಲಸ ಮಾಡಿದರೆ ನಾವು ಶ್ರೀಮಂತರಾಗುತ್ತೇವೆ ಮತ್ತು ಅದೃಷ್ಟವಂತರಾಗುತ್ತೇವೆ ಎಂದು ಹೇಳುತ್ತಾರೆ.

 


ಆದರೆ ಇಲ್ಲಿ ಹೇಳಲಾಗಿರುವ ಈ ಕೆಲವು ಸಂಕೇತಗಳು ನಿಮ್ಮಲ್ಲಿ ಕಾಣಿಸಿಕೊಂಡರೆ, ನಿಮಗೆ ಎದುರಾದರೆ ನೀವು ಅದೃಷ್ಟವಂತರಾಗಿರುವಿರಿ ಎಂದು ವಿವಿಧ ಶಾಸ್ತ್ರಗಳಲ್ಲಿ ಹೇಳಲಾಗಿದೆ.ಮುಂದೆ ಹೇಳುವ ಸಂಕೇತಗಳು ಎದುರಾದರೆ ನಿಮಗೆ ಶೀಘ್ರದಲ್ಲಿಯೇ ಹಣ ಅಥವಾ ಸಂಪತ್ತು ದೊರೆಯುತ್ತದೆ ಎಂದು ಸೂಚಿಸುತ್ತವೆ. ಹಾಗಾದರೆ ಆ ಸಂಕೇತಗಳು ಬಗ್ಗೆ ತಿಳಿದುಕೊಳ್ಳೋಣ ಬನ್ನಿ

 

1.ತೆಂಗಿನ ಕಾಯಿ ಅಥವಾ ಬಿಳಿ ಜಲ ಪಕ್ಷಿ.

 

ಬೆಳಗ್ಗೆ ಎದ್ದ ತಕ್ಷಣ ತೆಂಗಿನ ಕಾಯಿಗೆ ಅಥವಾ ಬಿಳಿ ಜಲ ಪಕ್ಷಿ ಕಾಣಿಸಿಕೊಂಡರೆ ಯಾವುದೋ ಒಂದು ಮಾರ್ಗದಿಂದ ಹಣ ಬರುತ್ತದೆ ಎಂಬುದರ ಸಂಕೇತವಾಗಿದೆ.

 2.ಬಿಳಿ ಅಥವಾ ಬಂಗಾರದ ಬಣ್ಣದ ಹಾವು.

 

ಬಿಳಿ ಅಥವಾ ಬಂಗಾರದ ಬಣ್ಣದ ಹಾವು ಕನಸಿನಲ್ಲಿ ಕಾಣಿಸಿಕೊಂಡರೆ ಶೀಘ್ರದಲ್ಲೇ ನೀವು ಶ್ರೀಮಂತರಾಗುತ್ತೀರ ಹಣ ನಿಮ್ಮ ಬಳಿ ಬರುತ್ತದೆ ಎಂಬ ಸಂಕೇತವನ್ನು ಸೂಚಿಸುತ್ತದೆ.

 3.ಕೋತಿ, ನಾಯಿ,  ಮತ್ತು ಪಕ್ಷಿ.

 


ಒಂದು ವೇಳೆ ನೀವು ಎಲ್ಲಿಗಾದರೂ ಪ್ರಯಾಣಿಸುವಾಗ ಕೋತಿ, ನಾಯಿ ಹಾಗೂ ಪಕ್ಷಿ ಯಾವುದಾದರೂ ನಿಮ್ಮ ವಾಹನಕ್ಕೆ ಬಲಭಾಗದಲ್ಲಿ ಅಡ್ಡ ಬಂದರೆ ಅದು ನೀವು ಶೀಘ್ರದಲ್ಲಿಯೇ ಧನವಂತರಾಗುತ್ತೀರ ಎಂಬ ಸಂಕೇತವಾಗಿದೆ .


4.ಹಾಲು ಅಥವಾ ಮೊಸರು .



 

ಬೆಳಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಮೊದಲು ನೋಡುವ ಮೊದಲ ವಸ್ತು ಹಾಲು ಅಥವಾ ಮೊಸರು ಅಥವಾ ಹಾಲಿನ ಉತ್ಪನ್ನಗಳಲ್ಲಿ ಯಾವುದಾದರೂ ಒಂದು ಆಗಿದ್ದರೆ ಹಣ ನಿಮ್ಮ ಹತ್ತಿರದಲ್ಲೇ ಇದೆ ಎಂದು ಸೂಚಿಸುತ್ತದೆ.

 

5.ಸಿಂಧೂರ.


ನೀವು ಹೊರಗೆ ಹೋಗುವಾಗ ಮದುವೆಯಾದ ಮಹಿಳೆ ಸಿಂಧೂರದೊಂದಿಗೆ ಕಾಣಿಸಿಕೊಂಡರೆ, ಶೀಘ್ರದಲ್ಲೇ ಒಂದು ದೊಡ್ಡ ಮೊತ್ತದಲ್ಲಿ ಹಣ ಬರುತ್ತದೆ ಎಂಬ ಸೂಚನೆಯಾಗಿದೆ.

6.ಬಾವಲಿ.


 ಸಾಧಾರಣವಾಗಿ ಭಾರತೀಯರು ಬಾವಲಿಗಳಿಗೆ ದೂರವಾಗಿರುತ್ತಾರೆ. ಆದರೆ ಚೀನಿಯರು ಬಾವಲಿಗಳನ್ನು ಅದೃಷ್ಟ ಎಂದು ಭಾವಿಸುತ್ತಾರೆ. ಅವುಗಳು ಆಕಸ್ಮಿಕವಾಗಿ ಬಂದರೆ ದುರದೃಷ್ಟ ಎಂದು ಭಾವಿಸುತ್ತಾರೆ. ಆದರೆ ಅವು ಮನೆಯ ಹೊರ ಭಾಗದಲ್ಲಿ ಗೂಡು ಕಟ್ಟಿಕೊಂಡರೆ, ಶೀಘ್ರದಲ್ಲಿಯೇ ಸಂಪತ್ತು ಲಭಿಸುತ್ತದೆ ಎಂಬುದರ ಸಂಕೇತವಾಗಿದೆ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...