ಮದುವೆ ಸಮಯದಲ್ಲಿ ಬೆಳ್ಳಗೆ ಕಾಣಬೇಕಾ? ಹಾಗಾದ್ರೆ ಆಹಾರಕ್ರಮ ಹೀಗಿರಲಿ

 

ನೀವು ವಿವಾಹಕ್ಕೆ ತಯಾರಿ ನಡೆಸುತ್ತಲಿದ್ದರೆ ಆಗ ಈ ಆಹಾರಗಳನ್ನು ತಪ್ಪದೆ ಸೇವಿಸಿ.

best foods include in your diet before your wedding day to get glowing skin
ಮದುವೆ ಸಮಯದಲ್ಲಿ ಬೆಳ್ಳಗೆ ಕಾಣಬೇಕಾ? ಹಾಗಾದ್ರೆ ಆಹಾರಕ್ರಮ ಹೀಗಿರಲಿ
ಮದುವೆ ಅನ್ನುವುದು ಜೀವನದ ಅತೀ ಸುಂದರ ಹಾಗೂ ಖುಷಿಯ ಕ್ಷಣ. ಇದು ಜೀವಮಾನವಿಡಿ ನೆನಪಿಡುವಂತಹ ಕ್ಷಣ. ಇದನ್ನು ಸುಂದರವಾಗಿಸಿಕೊಳ್ಳಲು ವರ ಹಾಗೂ ವಧು ತುಂಬಾ ಪ್ರಯತ್ನ ಮಾಡುವರು. ಹೀಗಾಗಿ ಅವರು ತಮಗೆ ಬೇಕಾಗಿರುವಂತಹ ಬಟ್ಟೆಬರೆ, ಆಭರಣ ಇತ್ಯಾದಿಗಳನ್ನು ಖರೀದಿ ಮಾಡುವ ಜತೆಗೆ ಕೂದಲು ಹಾಗೂ ತ್ವಚೆಯ ಆರೈಕೆಗೂ ಗಮನ ನೀಡುವರು.

ಆದರೆ ಕೆಲವೊಂದು ತ್ವಚೆಯ ಕಾಂತಿವರ್ಧಕ ಕ್ರೀಮ್ ಅಥವಾ ಲೋಷನ್ ಗಳಿಂದ ಚರ್ಮಕ್ಕೆ ಹಾನಿ ಆಗುವ ಸಾಧ್ಯತೆಯು ಇರುವುದು. ಹೀಗಾಗಿ ಮದುವೆಗೆ ಮೊದಲು ತ್ವಚೆಯ ಆರೈಕೆ ಮಾಡುವ ಸಂದರ್ಭದಲ್ಲಿ ತುಂಬಾ ಎಚ್ಚರಿಕೆ ಕೂಡ ಅಗತ್ಯ. ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾಡಬೇಕಾಗುತ್ತದೆ. ಕಾಂತಿಯುತ ತ್ವಚೆ ಪಡೆಯಲು ಕೆಲವು ಆಹಾರಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿದರೆ ಅದರಿಂದ ಖಂಡಿತವಾಗಿಯೂ ಕಾಂತಿಯು ವೃದ್ಧಿಯುವುದು.

ಇಡೀ ಧಾನ್ಯಗಳು

​ಇಡೀ ಧಾನ್ಯಗಳು

ಗೋಧಿ, ಜೋಳ ಮತ್ತು ಮೆಕ್ಕೆಜೋಳದಂತಹ ಇಡೀ ಧಾನ್ಯಗಳನ್ನು ನೀವು ಬಳಕೆ ಮಾಡಿ. ಇಡೀ ಧಾನ್ಯಗಳಲ್ಲಿ ಅಧಿಕ ಪ್ರಮಾಣದ ನಾರಿನಾಂಶವಿದ್ದು, ಇದು ಕರುಳಿನ ಕ್ರಿಯೆ ಸರಾಗವಾಗಿಡುವುದು ಮತ್ತು ಮಲಬದ್ಧತೆ ತಡೆಯುವುದು. ಇದರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೊರಗೆ ಹೋಗಿ, ಚರ್ಮವು ಆರೋಗ್ಯದಿಂದ ಕೂಡಿರುವುದು.

​ಬೀಜಗಳು

​ಬೀಜಗಳು
  • ನೀವು ವಿವಾಹಕ್ಕೆ ಮೊದಲು ಸಂಸ್ಕರಿಸಿದ ಮೈದಾ ಮತ್ತು ಇತರ ಸಂಸ್ಕರಿಸಿದ ಆಹಾರ ಸೇವನೆ ಮಾಡುವ ಬದಲು ಹಸಿವಾದ ಸಂದರ್ಭದಲ್ಲಿ ಬೀಜಗಳನ್ನು ಸೇವನೆ ಮಾಡಿ.
  • ಇದರಿಂದ ಬಯಕೆ ಕೂಡ ದೂರವಾಗುವುದು ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು. ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಕೊಬ್ಬಿನಾಮ್ಲ ಒಮೆಗಾ-3 ಇದೆ ಮತ್ತು ಇದು ತ್ವಚೆಯನ್ನು ನಯವಾಗಿಡುವುದು.

​ನೀರಿನ ಪ್ರಮಾಣ ಹೆಚ್ಚಿಸಿ

​ನೀರಿನ ಪ್ರಮಾಣ ಹೆಚ್ಚಿಸಿ
  • ನಾವೆಲ್ಲರೂ ಮಾಡುವಂತಹ ದೊಡ್ಡ ತಪ್ಪು ಎಂದರೆ ನೀರು ಕಡಿಮೆ ಕುಡಿಯುವುದು. ನಿತ್ಯವೂ 6ರಿಂದ 8 ಲೋಟ ಕುಡಿಯಬೇಕು. ಚರ್ಮವು ಆರೋಗ್ಯವಾಗಿ ಕಾಣಲು 12 ಲೋಟ ನೀರು ಕುಡಿಯಬೇಕು.
  • ನೀರು ಚರ್ಮವನ್ನು ಮೊಶ್ಚಿರೈಸ್ ಮಾಡುವುದು ಮತ್ತು ಇದು ಹಸಿವನ್ನು ಕಡಿಮೆ ಮಾಡಿ, ಅತಿಯಾಗಿ ತಿನ್ನುವುದನ್ನು ತಡೆಯುವುದು. ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವ ಮೂಲಕ ಮೊಡವೆಗಳು ಮೂಡದಂತೆ ನೋಡಿಕೊಳ್ಳೂವುದು. ಹೀಗಾಗಿ ದೇಹವನ್ನು ಯಾವಾಗಲೂ ತೇವಾಂಶದಿಂದ ಇಟ್ಟುಕೊಳ್ಳುವುದು ಅತೀ ಅಗತ್ಯ. ಇದಕ್ಕಾಗಿ ಸೂಪ್, ಹಣ್ಣುಗಳನ್ನು ನಿತ್ಯವೂ ಸೇವಿಸಿ.

​ಹಸಿ ತರಕಾರಿಗಳು

​ಹಸಿ ತರಕಾರಿಗಳು

ಹಸಿ ತರಕಾರಿಗಳಾಗಿರುವಂತಹ ಕ್ಯಾರೆಟ್, ಬೀಟ್ ರೂಟ್, ಸೌತೆಕಾಯಿ ಮತ್ತು ನೆಲ್ಲಿಕಾಯಿಯನ್ನು ಸೇವನೆ ಮಾಡಿದರೆ ಅದರಿಂದ ಚರ್ಮಕ್ಕೆ ಪೋಷಣೆ ಸಿಗುವುದು ಮತ್ತು ಚರ್ಮವು ಗುಲಾಬಿ ಬಣ್ಣದಿಂದ ಕೂಡಿರುವುದು. ಈ ತರಕಾರಿಗಳನ್ನು ನಿಮ್ಮ ಸಲಾಡ್ ಗಳನ್ನು ಸೇರಿಸಿ ಅಥವಾ ಅವುಗಳ ಸ್ಮೂಥಿ ಮಾಡಿಕೊಂಡು ಕುಡಿಯಿರಿ.

​ಡಾರ್ಕ್ ಚಾಕಲೇಟ್(ಮಿತವಾಗಿ)

​ಡಾರ್ಕ್ ಚಾಕಲೇಟ್(ಮಿತವಾಗಿ)

ಡಾರ್ಕ್ ಚಾಕಲೇಟ್ ನಲ್ಲಿ ಇರುವಂತಹ ಹೆಚ್ಚಿನ ಪ್ರಮಾಣವು ಕೋಕಾದಿಂದ ಕೂಡಿರುವುದು. ಇದು ಒಂದು ಆಂಟಿಆಕ್ಸಿಡೆಂಟ್ ಮತ್ತು ಇದರಲ್ಲಿನ ಫ್ಲಾವನಾಯ್ಡ್ ಅಂಶವು ಒತ್ತಡದ ಹಾರ್ಮೋನ್ ನ್ನು ನಿವಾರಣೆ ಮಾಡಿ, ನೆರಿಗೆ ಹಾಗೂ ಗೆರೆಗಳು ಮೂಡದಂತೆ ನೋಡಿಕೊಳ್ಳುವುದು.

​ಚೀಯಾ ಬೀಜದ ನೀರು

​ಚೀಯಾ ಬೀಜದ ನೀರು
  • ಚೀಯಾ ಬೀಜಗಳು ತ್ವಚೆಗೆ ಅದ್ಭುತವಾಗಿ ಕೆಲಸ ಮಾಡುವುದು. ಇವುಗಳಲ್ಲಿ ಕೂಡ ಒಮೆಗಾ-3 ಕೊಬ್ಬಿನಾಮ್ಲವು ಅದ್ಭುತ ಪ್ರಮಾಣದಲ್ಲಿದೆ ಮತ್ತು ಇದು ಅಂಗಾಂಶಗಳಿಗೆ ಪೋಷಣೆ ನೀಡುವುದು ಮತ್ತು ಚರ್ಮವು ಕಾಂತಿಯುತವಾಗಿ ಹೊಳೆಯುವಂತೆ ಮಾಡುವುದು.
  • ಒಮೆಗಾ-3 ಕೊಬ್ಬಿನಾಮ್ಲವು ದೇಹದಲ್ಲಿರುವಂತಹ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕಾರಿ. ಒಮೆಗಾ-3 ಕೊಬ್ಬಿನಾಮ್ಲವು ದೇಹದಲ್ಲಿನ ಹಾರ್ಮೋನ್ ಗಳನ್ನು ತಗ್ಗಿಸುವುದು.

​ಪಪ್ಪಾಯಿ

​ಪಪ್ಪಾಯಿ

ಎರಡು ಪಿಂಗಾಣಿಯಷ್ಟು ಪಪ್ಪಾಯಿಯನ್ನು ವಿವಾಹದ ತನಕ ಪ್ರತಿನಿತ್ಯವೂ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಲ್ಲಿ ಉತ್ತಮ ಪ್ರಮಾಣದ ಕಿಣ್ವ ಪಪೈನ್ ಇದ್ದು, ವೇಗವಾಗಿ ಜೀರ್ಣವಾಗಲು ಸಹಕಾರಿ ಮತ್ತು ಚಯಾಪಚಯವನ್ನು ಇದು ಸುಧಾರಣೆ ಮಾಡುವುದು.

​ಮೊಸರು

​ಮೊಸರು

ಮೊಸರಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಉತ್ತಮ ಪ್ರಮಾಣದಲ್ಲಿದೆ. ಇದು ಹೊಟ್ಟೆಯ ಆರೋಗ್ಯಕ್ಕೆ ಅದ್ಭುತವಾಗಿ ಕೆಲಸ ಮಾಡುವುದು ಮತ್ತು ತೂಕ ಇಳಿಸಲು ಕೂಡ ಸಹಕಾರಿ. ಮೊಸರು ವಿವಿಧ ರೀತಿಯಲ್ಲಿ ಲಭ್ಯವಿದ್ದು, ಇದರಲ್ಲಿ ಇರುವಂತಹ ಒಳ್ಳೆಯ ಬ್ಯಾಕ್ಟೀರಿಯಾವು ಹೊಟ್ಟೆಯ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.

​ನೆನೆಸಿಟ್ಟ ಬಾದಾಮಿ

​ನೆನೆಸಿಟ್ಟ ಬಾದಾಮಿ

ದಿನಾ ನೆನೆಸಿಟ್ಟ ಬಾದಾಮಿಯನ್ನು ಸೇವನೆ ಮಾಡಿದರೆ ಅದರಿಂದ ದೇಹದ ಒಳಗಿನ ಅಂಗಾಂಗಗಳು ಶುಚಿಯಾಗುವುದು ಮತ್ತು ಹಲವಾರು ರೀತಿಯ ಚರ್ಮದ ಸಮಸ್ಯೆಗಳಾಗಿರುವಂತಹ ಮೊಡವೆ, ಬೊಕ್ಕೆ, ವೈಡ್ ಹೆಡ್ ಇತ್ಯಾದಿಗಳನ್ನು ಇದು ನಿವಾರಿಸುವುದು. ಬಾದಾಮಿಯನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ಚರ್ಮದ ಅಂಗಾಂಶಗಳು ಆರೋಗ್ಯವಾಗಿ ಇರುವುದು.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...