ವಯಸ್ಸಾದ ಮೇಲೆ ಮುಖದಲ್ಲಿ ಸುಕ್ಕು, ನೆರಿಗೆ ಉಂಟಾಗುವುದು ಸಹಜ. ಆದರೆ ಕೆಲವೊಮ್ಮೆ ಚಿಕ್ಕ ವಯಸ್ಸಿನಲ್ಲೇ ಚರ್ಮದಲ್ಲಿ ನೆರಿಗೆ ಉಂಟಾಗುತ್ತದೆ. ಇದಕ್ಕಾಗಿ ಸಾಕಷ್ಟು ಖರ್ಚು ಮಾಡಬೇಕು ಎಂದೇನಿಲ್ಲ. ಮನೆಯಲ್ಲೇ ಇರುವ ಪದಾರ್ಥಗಳ ಮೂಲಕ ಸುಕ್ಕು, ನೆರಿಗೆ ನಿವಾರಿಸಿಕೊಳ್ಳುವ ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು.
ತ್ವಚೆಯ ಕಾಳಜಿ
ವಯಸ್ಸಾಗುತ್ತಿದ್ದಂತೆ ಮುಖದ ಮೇಲೆ ಸುಕ್ಕು, ನೆರಿಗೆ ಉಂಟಾಗುವುದು ಸಾಮಾನ್ಯ. ಇದು ಪ್ರಕೃತಿಯ ಸಹಜ ಗುಣ. ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಮುಖದಲ್ಲಿ ಸುಕ್ಕು ಉಂಟಾಗುವುದು ಆಗುತ್ತದೆ, ನೆರಿಗೆ ಬಿದ್ದಂತೆ ಕಾಣುತ್ತದೆ. ಆದರೆ ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಅಡುಗೆಮನೆಯಲ್ಲಿ ಇರುವ ಕೆಲವು ಪದಾರ್ಥ ಸುಕ್ಕು, ನೆರಿಗೆ ನಿವಾರಿಸುವ ಜೊತೆಗೆ ಅಂದವನ್ನೂ ಹೆಚ್ಚಿಸುತ್ತವೆ.
ಅಡುಗಮನೆಯಲ್ಲಿ ಇರುವ ಜೇನುತುಪ್ಪ, ಅರಿಸಿನ, ಸಕ್ಕರೆ, ಎಳ್ಳೆಣ್ಣೆ, ಹಾಲಿನ ಕೆನೆ ಇವುಗಳನ್ನು ಅನಾದಿಕಾಲದಿಂದಲೂ ಸೌಂದರ್ಯವರ್ಧಕವಾಗಿ ಬಳಸುತ್ತಿದ್ದರು. ಇವು ತ್ವಚೆಯನ್ನು ಅಂದವನ್ನು ಅರಳಿಸುವ ಜೊತೆಗೆ ಚರ್ಮದ ಯೌವನ ಉಳಿಯುವಂತೆ ಮಾಡುತ್ತದೆ. ಹಾಗಾದರೆ ಸುಕ್ಕು ನೆರಿಗೆ ನಿವಾರಣೆಗೆ ಯಾವೆಲ್ಲಾ ಪದಾರ್ಥಗಳನ್ನು ಹೇಗೆ ಬಳಸಬಹುದು ನೋಡಿ.
- ಕ್ಯಾರೆಟ್ ರಸದ ಜೊತೆ ಜೇನುತುಪ್ಪ ಮಿಶ್ರಣ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆದುಕೊಳ್ಳಬೇಕು. ಸಾಧ್ಯವಾದರೆ ಐಸ್‌ಕ್ಯೂಬ್‌ನಿಂದ ಮುಖವನ್ನು ಮಸಾಜ್ ಮಾಡಿಕೊಳ್ಳಬಹುದು.
- ಮಲಗುವ ಮುನ್ನ ಗ್ಲಿಸರಿನ್ ಮತ್ತು ಜೇನುತುಪ್ಪವನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಂಡು ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿನಿಂದ ತೊಳೆಯಬೇಕು. ಇದರಿಂದ ಮುಖವು ತಾಜಾವಾಗಿರುತ್ತದೆ. ಅಲ್ಲದೆ ಚರ್ಮದ ಕಾಂತಿಯೂ ಹೆಚ್ಚುತ್ತದೆ.
- ಮೆಂತ್ಯಸೊಪ್ಪನ್ನು ಅರೆದು ಪ್ರತಿ ರಾತ್ರಿ ಮುಖಕ್ಕೆ ಹಚ್ಚಿ ಬೆಳಗ್ಗೆ ಹೊತ್ತು ಶುದ್ಧ ನೀರಿನಿಂದ ಸ್ವಚ್ಛ ಮಾಡಿಕೊಳ್ಳಬೇಕು. ಇದರಿಂದ ಮುಖವು ಹೆಚ್ಚು ಕಾಂತಿಯುತವಾಗಿ ಕಾಣುತ್ತದೆ.
- ಎಳ್ಳೆಣ್ಣೆ ಸಾಸಿವೆ ಎಣ್ಣೆ ಮತ್ತು ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಮುಖಕ್ಕೆ ಎರಡು ಮೂರು ಗಂಟೆಗಳ ಕಾಲ ಹಚ್ಚಿಕೊಳ್ಳಬೇಕು. ನಂತರ, ಸ್ನಾನ ಮಾಡಬಹುದು ಅಥವಾ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
- ಹಾಲಿನ ಕೆನೆಯನ್ನು ಆಗಾಗ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖಕ್ಕೆ ಸುಕ್ಕು ಉಂಟಾಗುವುದನ್ನು ತಡೆಯಬಹುದು. ಹಾಗೆ ಚರ್ಮ ಮೃದುವಾಗಲಿದೆ ಮತ್ತು ಹೊಳಪನ್ನು ಕೂಡ ನೀಡಲಿದೆ.
- ನೇಂದ್ರ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಅದಕ್ಕೆ ರೋಸ್‌ವಾಟರ್ ಸೇರಿಸಿ ಮುಖ ಹಾಗೂ ದೇಹದಲ್ಲಿ ಸುಕ್ಕು ಉಂಟಾಗಿರುವ ಭಾಗಗಳಿಗೆ ಹಚ್ಚುವುದರಿಂದ ಸುಕ್ಕು ಉಂಟಾಗದಂತೆ ತಡೆಯಬಹುದು.
- ನಿಂಬೆಹಣ್ಣಿನ ಸಿಪ್ಪೆಯಿಂದ ದಿನಕ್ಕೆ 3-4 ಬಾರಿ ಮುಖದ ಮೇಲೆ ಉಜ್ಜಿ ನಂತರ ತೊಳೆದುಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚಲಿದೆ ಹಾಗೂ ನೆರಿಗೆ ಕಡಿಮೆಯಾಗಲಿದೆ.
- ನಿಂಬೆರಸಕ್ಕೆ ಕೆನೆ ಹಾಲು ಸೇರಿಸಿ ಪ್ರತಿದಿನ ಮುಖ, ಕುತ್ತಿಗೆ, ಕೈ, ಕಾಲು ಪಾದಗಳಿಗೆ ಹಚ್ಚಿ. ಬೆಳಗಿನ ಹೊತ್ತು ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಇದರಿಂದ ಕೂಡ ಮುಖದ ಮೇಲಿನ ಸುಕ್ಕನ್ನು ತಡೆಗಟ್ಟಬಹುದು.
- ಜೇನುತುಪ್ಪ, ನಿಂಬೆರಸ ಹಾಗೂ ಒಂದು ಚಮಚ ಹಾಲು ಈ ಎಲ್ಲವನ್ನು ಮಿಶ್ರಣ ಮಾಡಿ ಪ್ರತಿದಿನ ಸ್ನಾನಕ್ಕೆ ಮೊದಲು 15 ನಿಮಿಷ ಹಚ್ಚಿಕೊಂಡು ಸ್ನಾನ ಮಾಡಬೇಕು.
- ನಿಂಬೆರಸ, ಸೌತೆಕಾಯಿ, ಅರಿಸಿನ ಪುಡಿ ಎಲ್ಲವನ್ನು ಮಿಶ್ರಣ ಮಾಡಿ ಅರ್ಧ ಗಂಟೆಗಳ ಕಾಲ ಮುಖ ಕುತ್ತಿಗೆ ಕೈ ಕಾಲುಗಳಿಗೆ ಹಚ್ಚಿಕೊಂಡು ತೊಳೆಯುವುದರಿಂದ ಚರ್ಮಕ್ಕೆ ಕಾಂತಿ ಮರಳಲಿದೆ.
ಬ್ಯೂಟಿಪಾರ್ಲರ್‌ಗೆ ಹೋಗದೆ ಮನೆಯಲ್ಲೇ ತ್ವಚೆಯ ಅಂದ ಹೆಚ್ಚಿಸಿ; ನೈಸರ್ಗಿಕ ಫೇಸ್‌ಪ್ಯಾಕ್ ಬಳಸಿ
ತ್ವಚೆಯ ಅಂದ ಅರಳಲು ಫೇಷಿಯಲ್ ಅಥವಾ ಫೇಸ್‌ಪ್ಯಾಕ್‌ಗಳ ಸಹಕಾರಿ. ಇವು ಚರ್ಮದ ನಿರ್ಜೀವ ಕಣಗಳನ್ನು ತೊಡೆದು ಹಾಕಿ, ಮುಖಕ್ಕೆ ಹೊಳಪು ನೀಡುತ್ತವೆ. ಫೇಶಿಯಲ್ ಮಾಡಿಸಿ ಮುಖದ ಅಂದ ಹೆಚ್ಚಿಸಿಕೊಳ್ಳಲು ಪಾರ್ಲರ್‌ಗೆ ಹೋಗಬೇಕು ಎಂದೇನಿಲ್ಲ. ಮನೆಯಲ್ಲಿ ಸಿಗುವ ಹಣ್ಣುಗಳಿಂದಲೂ ಫೇಸ್‌ಪ್ಯಾಕ್ ತಯಾರಿಸಿ ಅಂದ ಹೆಚ್ಚಿಸಿಕೊಳ್ಳಬಹುದು.