ಹಣದ ಸಮಸ್ಯೆ, ನರ ದೃಷ್ಟಿಯ ಸಮಸ್ಯೆ ಕಾಡುತ್ತಿದ್ದರೆ ಸಾಕಷ್ಟು ರೀತಿಯ ಕಷ್ಟಗಳನ್ನು ಮನುಷ್ಯನು ಅನುಭವಿಸಬೇಕಾಗುತ್ತದೆ. ಈ ರೀತಿ ವ್ಯಾಪಾರ ಮಾಡುವ ಸ್ಥಳದಲ್ಲಿ ಅಥವಾ ಮನೆಯಲ್ಲಿ ನಡೆಯುತ್ತಿದ್ದರೆ ಜೀವನವನ್ನು ನಡೆಸುವುದು ತುಂಬಾ ಕಷ್ಟವಾಗುತ್ತದೆ. ಹಾಗಾದರೆ ಈ ಸಮಸ್ಯೆಗೆ ಮಂಗಳವಾರದ ದಿನದಂದು ಯಾವ ರೀತಿ ಉಪಾಯವನ್ನು ಮಾಡಿದರೆ ಮುಕ್ತಿಯನ್ನು ಹೊಂದಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ಮಂಗಳವಾರದ ದಿನದಂದು ಉಮ್ಮತ್ತಿ ಕಾಯಿ ಅಥವಾ ಉಮ್ಮತ್ತಿ ಗಿಡದ ಬೇರನ್ನು ತೆಗೆದುಕೊಂಡು ಬರಬೇಕು, ಉಮ್ಮತಿ ಕಾಯನ್ನು ತೆಗೆದುಕೊಂಡು ಬಂದ ನಂತರ ಅದನ್ನು ದೇವರಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕು. ಪೂಜೆಯನ್ನು ಯಾವ ರೀತಿ ಮಾಡಬೇಕೆಂದರೆ ಮೊದಲಿಗೆ ಅಷ್ಟದಳ ಪದ್ಮದ ರಂಗೋಲಿಯನ್ನು ಹಾಕಿ ಅದರ ಮೇಲೆ ಹಳದಿ ಬಣ್ಣದ ಬಟ್ಟೆಯನ್ನು ಇಟ್ಟು ನಂತರ ಅರಿಶಿಣ ಕುಂಕುಮವನ್ನು ಹಾಕಿ ತದನಂತರ ಉಮ್ಮತಿ ಕಾಯಿ ಅಥವಾ ಉಮ್ಮತ್ತಿ ಗಿಡದ ಬೇರು ಎರಡರಲ್ಲಿ ಒಂದನ್ನು ಇಟ್ಟು ಹಳದಿ ಬಟ್ಟೆಯನ್ನು ಕಟ್ಟಬೇಕು.
ಈ ರೀತಿ ಮಾಡಿದ ನಂತರ ಹಳದಿ ಬಟ್ಟೆಯನ್ನು ಮನೆಯಲ್ಲಿ ಯಾವ ಜಾಗದಲ್ಲಿ ಹಣವನ್ನು ಇಡುತ್ತೇವೋ ಆ ಜಾಗದಲ್ಲಿ ಇಡಬೇಕು. ಇದೇ ರೀತಿ ವ್ಯಾಪಾರ ಮಾಡುವವರಾದರೆ ಉಮ್ಮತ್ತಿ ಗಿಡದ ಬೇರು ಅಥವಾ ಕಾಯಿಯನ್ನು ಪೂಜೆಯನ್ನು ಮಾಡಿ ಅದನ್ನು ಗಲ್ಲಾಪೆಟ್ಟಿಗೆಯಲ್ಲಿ ಇಟ್ಟುಕೊಳ್ಳಬಹುದು ಇದರಿಂದ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು.