Shiva Mantra Benefits: ಶಿವ ಪುರಾಣದಲ್ಲಿ ಶಿವ ಮೂಲ ಮಂತ್ರಗಳ ಕುರಿತು ಉಲ್ಲೇಖಿಸಲಾಗಿದೆ. ಈ ಮಂತ್ರಗಳನ್ನು ಪಠಿಸುವುದರಿಂದ ಶಿವನ ಅನುಗ್ರಹ ನಿಮಗೆ ಪ್ರಾಪ್ತವಾಗುತ್ತದೆ. ಈ ಮಂತ್ರಗಳ ಪಠಣವು ತೊಂದರೆಗಳನ್ನು ದೂರಾಗಿಸುವುದಲ್ಲದೇ, ಶಾಂತಿ ಮತ್ತು ಮೋಕ್ಷವನ್ನು ನೀಡುತ್ತದೆ. ಶಿವ ಪುರಾಣದ ಪ್ರಕಾರ, ಶಿವನ ಮೂಲ ಮಂತ್ರಗಳಾವುವು.? ಶಿವನ ಈ ಮೂಲ ಮಂತ್ರಗಳಿಂದ ಅಪಾರ ಪ್ರಯೋಜನ..
ಉತ್ತಮ ಆರೋಗ್ಯಕ್ಕಾಗಿ

ಶಿವ ಪುರಾಣದ ಪ್ರಕಾರ, 'ಓಂ ನಮಃ ಶಿವಾಯ' ಎನ್ನುವ ಮಂತ್ರವು ಶಿವನ ಪರಿಣಾಮಕಾರಿ ಮಂತ್ರವಾಗಿದೆ. ಈ ಮಂತ್ರವನ್ನು ನಾವು ಪ್ರತಿದಿನ ಜಪಿಸುವುದರಿಂದ ನಮ್ಮ ದೇಹವು ಯಾವಾಗಲೂ ರೋಗಗಳಿಂದ ಮುಕ್ತವಾಗಿರುತ್ತದೆ ಮತ್ತು ನಾವೇನೇ ಬಯಸಿದರೂ ಅದು ಶೀಘ್ರದಲ್ಲೇ ನಮ್ಮ ಕೈಸೇರುತ್ತದೆ.
ಇಷ್ಟಾರ್ಥಗಳ ಈಡೇರಿಕೆಗಾಗಿ

'ಓಂ ನಮೋ ಭಗವತೇ ರುದ್ರಾಯ ನಮಃ' ಎಂಬುದು ಶಿವನ ರುದ್ರ ಮಂತ್ರವಾಗಿದ್ದು, ಈ ಮಂತ್ರವನ್ನು ನೀವು ಯಾವುದೇ ದಿನದಂದು ಜಪಿಸಿದರೂ ಅಥವಾ ಪ್ರತಿಯೊಂದು ದಿನವೂ ಜಪಿಸುವುದರಿಂದ ಸಾಧಕರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
ದೀರ್ಘಾಯುಷ್ಯಕ್ಕಾಗಿ

ಮಹಾದೇವನ ಮಹಾಮೃತ್ಯುಂಜಯ ಮಂತ್ರವಾದ ‘ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ, ಊರ್ವರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್’ ಕೂಡ ಅತ್ಯಂತ ಪರಿಣಾಮಕಾರಿ ಮಂತ್ರವೆಂದು ಪರಿಗಣಿಸಲಾಗಿದೆ. ಇದನ್ನು ಪಠಿಸುವುದರಿಂದ ಅಕಾಲಿಕ ಮರಣದ ಬಗ್ಗೆ ಭಯ ಪಡುವ ಅವಶ್ಯಕತೆಯಿರುವುದಿಲ್ಲ.
ಆರ್ಥಿಕ ಬಿಕ್ಕಟ್ಟಿನ ನಿವಾರಣೆಗಾಗಿ

ಶಿವ ಗಾಯತ್ರಿ ಮಂತ್ರ ‘ಓಂ ತತ್ಪುರುಷಾಯ ವಿದ್ಮಹೇ, ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್.’ ಇದನ್ನು ವೈದಿಕ ಜ್ಯೋತಿಷ್ಯದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಸಾಧಿಸುವ ಮಂತ್ರವೆಂದು ಪರಿಗಣಿಸಲಾಗಿದೆ. ಇದನ್ನು ಪ್ರತಿದಿನ ಪಠಿಸುವುದರಿಂದ ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಜೀವನದಲ್ಲಿ ಎಂದಿಗೂ ಹಣಕಾಸಿನ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ.
ಶಿವ ಮಂತ್ರವನ್ನು ಪಠಿಸುವ ವಿಧಾನ

ಶಿವನ ಮಂತ್ರಗಳನ್ನು ಪಠಿಸುವ ಸಾಧಕನು ತನ್ನ ಮನಸ್ಸಿನಲ್ಲಿ ಭಕ್ತಿ ಮತ್ತು ಸಮರ್ಪಣಾ ಭಾವವನ್ನು ಹೊಂದಿರಬೇಕು. ಈ ಮಂತ್ರಗಳನ್ನು ರುದ್ರಾಕ್ಷಿ ಜಪಮಾಲೆಯನ್ನು ಹಿಡಿದು ಜಪಿಸಬೇಕು. ಏಕೆಂದರೆ ರುದ್ರಾಕ್ಷಿಯು ಶಿವನಿಗೆ ತುಂಬಾ ಪ್ರಿಯವಾದ ವಸ್ತುವಾಗಿದೆ. ಅಲ್ಲದೆ, ಮಂತ್ರಗಳನ್ನು ಪಠಿಸುವಾಗ, ನೀವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡು ಮಂತ್ರವನ್ನು ಪಠಿಸಬೇಕು. ಶಿವನ ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು.
https://youtu.be/lwjHWneILrk