ಗಂಧದಕಡ್ಡಿಯ ಹೊಗೆಯು ಸಿಗರೇಟ್ ಹೊಗೆಗಿಂತಲೂ ಆರೋಗ್ಯಕ್ಕೆ ಅನಾಹುತವನ್ನು ಉಂಟು ಮಾಡುತ್ತ...


ಪ್ರತಿಯೊಂದು ಮನೆಯಲ್ಲೂ ಒಂದಲ್ಲಾ ಒಂದು ಸಂದರ್ಭದಲ್ಲಿ ಊದುಬತ್ತಿ (ಅಗರಬತ್ತಿ) ಹಚ್ಚುತ್ತೇವೆ. ಪೂಜೆಯಾಗಲಿ ಅಥವಾ ಇನ್ನಿತರ ಶುಭ ಕಾರ್ಯವಿರಲಿ ಅಲ್ಲಿ ಗಂಧದಕಡ್ಡಿ ಇದ್ದೇ ಇರುತ್ತದೆ. ಅದರ ಪರಿಮಳ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವುದರಿಂದ ಯಾರು ಕೂಡ ಅದರ ಹೊಗೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಅದೇ ಅಗರಬತ್ತಿಯ ಹೊಗೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದರೆ ನಂಬುತ್ತೀರಾ?

ಹೌದು, ಸಿಗರೇಟ್​ ಹೊಗೆಯಿಂದ ಹೇಗೆ ಕ್ಯಾನ್ಸರ್ ಬರುತ್ತದೆಯೋ, ಹಾಗೆಯೇ ಊದುಬತ್ತಿಯ ಹೊಗೆಯಿಂದಲೂ ಕ್ಯಾನ್ಸರ್ ಉಂಟಾಗುತ್ತದೆ. ಅಗರಬತ್ತಿಗಳಲ್ಲಿರುವ ಪಾಲಿ ಆರೊಮ್ಯಾಟಿಕ್ ಹೈಡ್ರೋಕಾರ್ಬನ್​ಗಳು(Poly-Aromatic Hydrocarbons) ಕ್ಯಾನ್ಸರ್​​ಗೆ ಕಾರಣವಾಗಬಲ್ಲದು. ಇದರಿಂದ ಅಸ್ತಮಾದಂತಹ ಉಸಿರಾಟಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳು ಕೂಡ ಕಾಣಿಸಿಕೊಳ್ಳಬಹುದು. ಊದುಬತ್ತಿ ಹೊಗೆಯಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಹೃದಯಾಘಾತದ ಅಪಾಯ : ಊದುಬತ್ತಿಯ ಹೊಗೆ ನಿರಂತರ ಉಸಿರಾಟದ ಕ್ರಿಯೆಗೆ ತೊಂದರೆ ಮಾಡುವುದಲ್ಲದೆ, ಹೃದಯದ ಜೀವಕೋಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಜೀವಕೋಶದ ಶಕ್ತಿ ಕುಗ್ಗುವುದರಿಂದ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಕಣ್ಣುಗಳಿಗೆ ಹಾನಿಕಾರಕ : ಇದರ ಹೊಗೆಯಲ್ಲಿ ಕಂಡು ಬರುವ ರಾಸಾಯನಿಕಗಳು ಕಣ್ಣಿನ ತುರಿಕೆ ಹಾಗೂ ಚರ್ಮದ ಅಲರ್ಜಿಗೆ ಕಾರಣವಾಗಬಹುದು. ಹಾಗೆಯೇ ದೃಷ್ಟಿ ಹಾನಿಯಾಗುವ ಸಾಧ್ಯತೆ ಕೂಡ ಇದೆ.

ಶ್ವಾಸಕೋಶ ತೊಂದರೆ ಮತ್ತು ಕ್ಯಾನ್ಸರ್ : ಇದರಿಂದ ಹೊರಸೂಸುವ ಹೊಗೆಯು ಕಾರ್ಬನ್​ ಮೋನೊ ಆಕ್ಸೈಡ್​​ ಅನ್ನು ಹೊಂದಿರುತ್ತದೆ. ಇದು ಶ್ವಾಸಕೋಶದ ಮೇಲೆ ಹಾನಿ ಉಂಟು ಮಾಡುತ್ತದೆ. ಇದರಿಂದಾಗಿ ಶೀತ ಮತ್ತು ಕೆಮ್ಮಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಊದುಬತ್ತಿಯ ಹೊಗೆಯನ್ನು ಉಸಿರಾಡುವುದರಿಂದ ಶಾಶ್ವಕೋಶದ ಕ್ಯಾನ್ಸರ್ ಸಂಭವಿಸುತ್ತದೆ. ಅದರಲ್ಲೂ ಧೂಮಪಾನಿಗಳಿಗೆ ಗಂಧದಕಡ್ಡಿಯ ಹೊಗೆಯಿಂದ ಕ್ಯಾನ್ಸರ್​ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಅಸ್ತಮಾದ ತೊಂದರೆ : ಅಗರಬತ್ತಿಯಲ್ಲಿ ನೈಟ್ರೊಜನ್ ಮತ್ತು ಸಲ್ಫರ್ ಡೈ ಆಕ್ಸೈಡ್​ಗಳು ಕಂಡು ಬರುತ್ತದೆ. ಇದು ಆರೋಗ್ಯಕ್ಕೆ ತುಂಬ ಹಾನಿಕಾರಕ. ಇದರ ಹೊಗೆಯಿಂದ ಅಸ್ತಮಾದ ಸಮಸ್ಯೆಗಳು ಕೂಡ ಕಾಣಿಸುವ ಸಾಧ್ಯತೆಯಿದೆ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...