ಹೀಗಾಗಿ ಸದಾ ಕಾಲ ಮೇಕಪ್ ಮೊರೆ ಹೋಗಬೇಕಾದ ಸ್ಥಿತಿ ಇರುತ್ತದೆ. ಆದರೆ ಇದರಿಂದ ಮುಖಕ್ಕೆ ಹಾನಿಯೇ ಹೆಚ್ಚು. ಹಾಗಾದರೆ ನೈಸರ್ಗಿಕವಾಗಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬಹುದು
ಅರಿಶಿನ, ಲಿಂಬು ರಸ

ಸಾರ್ವಕಾಲಿಕವಾಗಿ ಮುಖದ ಸೌಂದರ್ಯ ವೃದ್ಧಿಗೆ ಅರಿಶಿನವನ್ನು ಬಳಕೆ ಮಾಡುವುದು ಗೊತ್ತೆ ಇದೆ. ಇನ್ನು ಲಿಂಬು ರಸ ನೈಸರ್ಗಿಕವಾಗಿ ಮುಖಕ್ಕೆ ಬ್ಲೀಚ್ ಆಗುವಂತೆ ಮಾಡುತ್ತದೆ. ಹೀಗಾಗಿ ಮುಖ ಬೆಳ್ಳಗಾಗುತ್ತದೆ.
ಹೀಗೆ ಮಾಡಿ
ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಒಂದು ಚಮಚ ಅರಿಶಿನ ಪುಡಿಗೆ ಅರ್ಧ ಚಮಚ ಲಿಂಬು ರಸ, ಅರ್ಧ ಚಮಚ ಕಡಲೆ ಹಿಟ್ಟನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಮುಖಕ್ಕೆ ಅದನ್ನು ಹಚ್ಚಿ.
ಅರ್ಧಗಂಟೆ ಬಿಟ್ಟು ತಣ್ಣನೆಯ ನೀರಿನಿಂದ ಮುಖವನ್ನು ತೊಳೆದು, ಒಣ ಬಟ್ಟೆಯಿಂದ ಒರೆಸಿಕೊಳ್ಳಿ. ವಾರದಲ್ಲಿ ಎರಡು ಬಾರಿಯಾದರೂ ಇದನ್ನು ಮಾಡಿ ಮುಖದ ಅಂದ ಹೆಚ್ಚುತ್ತದೆ.

ಟೊಮೆಟೋ ಬಳಕೆ

ಹುಳಿ ಅಂಶವಿರುವ ಟೊಮೆಟೋ ಮುಖಕ್ಕೆ ನೈಸರ್ಗಿಕ ಬ್ಲೀಚ್‌ನಂತೆ ಕೆಲಸ ಮಾಡುತ್ತದೆ. ಟೊಮೆಟೋವನ್ನು ಮುಖಕ್ಕೆ ಹಚ್ಚುವುದರಿಂದ ಕಪ್ಪು ಕಲೆ, ಕೊಳೆ ಎಲ್ಲವೂ ಸ್ವಚ್ಛವಾಗಿ ಮುಖ ಬೆಳಗ್ಗೆ ಕಾಣುತ್ತದೆ. ಅಲ್ಲದೆ ಸನ್ ಟ್ಯಾನ್ ಹೋಗಲಾಡಿಸಲೂ ಸಹ ಟೊಮೆಟೋ ಫೇಸ್ ಪ್ಯಾಕ್‌ನ್ನು ಬಳಸಬಹುದಾಗಿದೆ.
ಹೀಗೆ ಮಾಡಿ
ಟೊಮಟೋವನ್ನು ಅರ್ಧ ಕತ್ತರಿಸಿ ನಂತರ ಅದನ್ನು ಮುಖಕ್ಕೆ ಉಜ್ಜಿಕೊಳ್ಳಿ. ನಂತರ 10 ನಿಮಿಷ ಬಿಟ್ಟು ತಣ್ಣೀರಿನಿಂದ ಒರೆಸಿಕೊಳ್ಳಿ.
ಅಥವಾ ಅರ್ಧ ಕತ್ತರಿಸಿದ ಟೊಮೆಟೋಗೆ ಚಿಟಿಕೆ ಸಕ್ಕರೆ ಹಾಕಿ ಮುಖಕ್ಕೆ ಹಾಕಿ ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ಮುಖಕ್ಕೆ ನೈಸರ್ಗಿಕ ಸ್ಕೃಬ್ ಆದಂತಾಗುತ್ತದೆ. ಹೀಗಾಗಿ ಸತ್ತ ಜೀವಕೋಶಗಳು ಹೋಗಿ ಕಾಂತಿಯುತ ಚರ್ಮವನ್ನು ಪಡೆಯಬಹುದಾಗಿದೆ.
ಶ್ರೀಗಂಧದ ಬಳಕೆ

ಶ್ರೀಗಂಧ ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಚರ್ಮದ ಮೇಲಿನ ಕಪ್ಪು ಕಲೆ ನಿವಾರಿಸಿ, ಮುಖವನ್ನು ಕಾಂತಿಯುತಗೊಳಿಸಲು ಶ್ರೀಗಂಧ ಸಹಾಯ ಮಾಡುತ್ತದೆ. ಹೀಗಾಗಿ ನೀವು ಮುಖವನ್ನು ಬೆಳ್ಳಗಾಗಿಸಲು ಗಂಧದ ಫೇಸ್‌ಪ್ಯಾಕ್‌ನ್ನು ಬಳಸಬಹುದು.
ಹೀಗೆ ಮಾಡಿ
ಒಂದು ಚಮಚ ಶ್ರೀಗಂಧದ ಪುಡಿಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ. ನಂತರ 10 ನಿಮಿಷ ಹಾಗೆಯೇ ಬಿಡಿ. ಒಣಗಿದ ಮೇಲೆ ನೀರು ಹಾಕಿ ಮುಖವನ್ನು ನಿಧಾನವಾಗಿ ಉಜ್ಜಿ. ಇದರಿಂದ ಮುಖದ ಮೇಲಿನ ಸತ್ತ ಜೀವಕೋಶಗಳು ನಾಶವಾಗಿ ಮುಖ ಕಾಂತಿಯುವಾಗುತ್ತದೆ.