ಕರ್ನಾಟಕದ ಕನ್ನಡದ ಮೊದಲುಗಳು Karnataka Kannada firsts


# ಕನ್ನಡದ ಪ್ರಾಚೀನತೆ – 1 ನೆ ಶತಮಾನ . (ಗ್ರೀಕ್ ಪ್ರಹಸನಗಳಲ್ಲಿ ‘ದೀನ ‘ ಮತ್ತು ‘ದಮ್ಮಾರ’ ಎಂಬ ಕನ್ನಡ ಪದಗಳ ಬಳಕೆ – ಸಂಶೋಧನೆ ಎಂ. ಗೋವಿಂದ ಪೈ )
# ಉಪಲಬ್ದವಿರುವ ಕನ್ನಡದ ಮೊದಲ ಶಾಸನ – ಹಲ್ಮಿಡಿ ಶಾಸನ (ಕ್ರಿ. ಶ.450)
# ತ್ರಿಪದಿ ಛಂದಸ್ಸಿನಲ್ಲಿರುವ ಮೊದಲ ಶಾಸನ – ಕಪ್ಪೆ ಅರೆಭಟ್ಟನ ಶಾಸನ (ಕ್ರಿ. ಶ .700)
# ಕನ್ನಡದ ಮೊದಲ ಶಾಸ್ತ್ರ ಗ್ರಂಥ – ಕವಿರಾಜ ಮಾರ್ಗ (ಕ್ರಿ.ಶ. 850)
# ಕನ್ನಡದ ಮೊದಲ ಗದ್ಯ ಕೃತಿ – ವಡ್ಡಾರಾಧನೆ (ಕ್ರಿ ಶ.920)
# ಕನ್ನಡದ ಆದಿ ಕವಿ – ನಾಡೋಜ ಪಂಪ (ಕ್ರಿ. ಶ.940)
# ಮೊದಲ ಕಾವ್ಯ – ಆದಿಪುರಾಣ (ಪಂಪ .ಕ್ರಿ.ಶ.941)
# ಮೊದಲ ಕವಯಿತ್ರಿ ಮತ್ತು ವಚನಕಾರ್ತಿ- ಅಕ್ಕಮಹಾದೇವಿ (ಕ್ರಿ.ಶ.1150)
# ಮೊದಲು ಅಚ್ಚಾದ ಕನ್ನಡದ ಕೃತಿ – ‘ಎ ಗ್ರಾಮರ್ ಆಫ್ ದಿ ಕರ್ನಾಟಕ ಲಾಂಗ್ವೇಜ್ ‘ (ವಿಲಿಯಂ ಕೇರಿ ಕ್ರಿ. ಶ1890)

# ಕನ್ನಡದ ಮೊದಲ ಮುಸ್ಲಿಂ ಕವಿ – ಶಿಶುನಾಳ ಶರೀಪ ಸಾಹೇಬರು (ಕ್ರಿ. ಶ.1819)
# ಕನ್ನಡದ ಮೊದಲ ದೊರೆ – ಕದಂಬ ವಂಶದ ಮಯೂರವರ್ಮ.
# ಮೊದಲ ಶಿಲ್ಪ- ಬನವಾಸಿಯ ನಾಗಶಿಲ್ಪ
# ಮೊದಲ ಕೆರೆ – ಚಂದ್ರವಳ್ಳಿ ( ಚಿತ್ರದುರ್ಗ )
# ಮೊದಲ ಶಾಸನ – ಹಲ್ಮಿಡಿ ಶಾಸನ ( ಕ್ರಿ.ಶ. 450 )
# ಮೊದಲ ಕೋಟೆ – ಬಾದಾಮಿ ( ಕ್ರಿ. ಶ. 543)
# ಕನ್ನಡದ ಮೊದಲ ನಾಟಕ – ಸಿಂಗರಾಯನ ಮಿತ್ರವಿಂದಾಗೋವಿಂದ
# ಕನ್ನಡದ ಮೊದಲ ದಿನ ಪತ್ರಿಕೆ – ಸೂರ್ಯೋದಯ ಪ್ರಕಾಶಿಕ
# ಕನ್ನಡದ ಮೊದಲ ವಚನಕಾರ್ತಿ – ಅಕ್ಕಮಹಾದೇವಿ
# ಕನ್ನಡದ ಮೊದಲ ರಾಷ್ಟ್ರಕವಿ – ಗೋವಿಂದ ಪೈ

# ಕನ್ನಡದ ಮೊದಲ ಪತ್ರಿಕೆ – ಮಂಗಳೂರು ಸಮಾಚಾರ ಸ್ಥಾಪಕ -ಫಾದರ್ ಹರ್ಮನ್ ನೊಗ್ಲಿಂಗ್ -1842
# ಮೊದಲ ಗದ್ಯ ಕೃತಿ – ವಡ್ಡಾರಾಧನೆ.
# ಮೊದಲ ಕಾವ್ಯ – ಆದಿಪುರಾಣ.
# ಮೊದಲ ಪಂಪ ಪ್ರಶಸ್ಥಿ ವಿಜೇತ ಕವಿ – ಕುವೆಂಪು
# ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಸರ್. ಎಂ. ವಿಶ್ವೇಶ್ವರಯ್ಯ.
# ಜ್ಞಾನ ಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡ ಕೃತಿ ಮತ್ತು ಕವಿ – ಶ್ರೀ ರಾಮಾಯಣ ದರ್ಶನಂ ( ಕುವೆಂಪು )
# ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ – ಬೇಡರ ಕಣ್ಣಪ್ಪ
# ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡದ ಗಾಯಕ – ಶಿವಮೊಗ್ಗ ಸುಬ್ಬಣ್ಣ
# ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ – ಜಯದೇವಿತಾಯಿ ಲಿಗಾಡೆ ( 1984 )

# ಕನ್ನಡದ ಮೊದಲ ವರ್ಣಚಿತ್ರ – ಅಮರಶಿಲ್ಪಿ ಜಕಣಾಚಾರಿ
# ಕನ್ನಡ ಕೆಲಸಕ್ಕೆ ಡಾಕ್ಟರೇಟ್ ಪ್ರಶಸ್ತಿ ಪಡೆದ ಮೊದಲಿಗ – ಫರ್ಡಿನೆಂಡ್ ಕಿಟ್ಟೆಲ್ (ಕನ್ನಡ -ಇಂಗ್ಲೀಷ್ ನಿಘಂಟು)
# ಕನ್ನಡ ರಂಗಭೂಮಿಯ ಮೊದಲ ನಾಯಕಿ ನಟಿ – ಎಲ್ಲೂಬಾಯಿ ಗುಳೇದಗುಡ್ಡ.
# ಕರ್ನಾಟಕದಲ್ಲಿ ತಯಾರಾದ ಮೊದಲ ಮೂಕ ಚಿತ್ರ – ಮೃಚ್ಛಕಟಿಕ
# ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ಪತ್ರಿಕೆ – ಉದಯವಾಣಿ
# ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ – ರಾಮಗಾಣಿಗ.
# ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಮಹಿಳೆ ಮತ್ತು ಕನ್ನಡಿಗ – ಅನುಪಮಾ ನಿರಂಜನ, ಬಸವರಾಜ ಕಟ್ಟಿಮನಿ.
# ಕನ್ನಡದ ಮೊದಲ ನವೋದಯ ಕವಿತ್ರಿ – ಬೆಳಗೆರೆ ಜಾನಕಮ್ಮ.
# ಕನ್ನಡದ ಪ್ರಥಮ ತ್ರಿಪದಿ ಶಾಸನ -ಬಾದಾಮಿ ಶಾಸನ
# ಕನ್ನಡದ ಪ್ರಥಮ ರಾಜವಂಶ – ಕದಂಬರು

# ಸ್ವಾತಂತ್ರ್ಯ ಕಹಳೆ ಊದಿದ ಭಾರತದಲ್ಲೇ ಪ್ರಥಮ ಕನ್ನಡ ಪ್ರಾಂತ್ಯ-ಕಿತ್ತೂರು
# ಕರ್ನಾಟಕ ಮೊದಲ ವಿಶ್ವವಿದ್ಯಾಲಯ-ಮ್ಯೆಸೂರು
# ಭಾರತರತ್ನ ಪ್ರಶಸ್ತಿ ಪಡೆದ ಪ್ರಥಮ ಕನ್ನಡ ವಿಜ್ನಾನಿ-ಸರ್.ಸಿ.ವಿ.ರಾಮನ್.
# ರೈಟ್ ಸಹೋದರರಿಗಿಂತ 8 ವರ್ಷ ಮೊದಲೇ (1895) ಮುಂಬಯಿಯಲ್ಲಿ 2000 ಅಡಿ ಎತ್ತರಕ್ಕೆವಿಮಾನ ಹಾರಿಸಿದ ಕನ್ನಡಿಗ – ಆನೇಕಲ್ ಸುಬ್ಬರಾಯ ಶಾಸ್ತ್ರಿ.
# ಕನ್ನಡದ ಪ್ರಥಮ ನಾಡಗೀತ-ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಕವಿ : ನಾರಾಯಣ ಹುಯಿಲಗೋಳ
# ಕನ್ನಡದ ಪ್ರಥಮ ಭಾವಗೀತಗಳ ಕ್ಯಾಸೆಟ್ -ನಿತ್ಯೋತ್ಸವ
# ವಿದೇಶದಲ್ಲಿ ಚಿತ್ರಿಸಿದ ಮೊದಲ ಕನ್ನಡ ಚಿತ್ರ-ಸಿಂಗಾಪುರದಲ್ಲಿ ರಾಜಾಕುಳ್ಳ
# ಕನ್ನಡದ ಪ್ರಥಮ ಚಿತ್ರ ನಿರ್ಮಾಪಕ-ಎಂ. ವಿ ರಾಜಮ್ಮ.
# ಚಿತ್ರರಂಗದ ಪ್ರಥಮ ವಾಕ್ಚಿತ್ರ-ಭಕ್ತಧ್ರುವ

# ಕನ್ನಡ ರಂಗಮಂಟಪದ ಮೇಲೆ ಪ್ರಥಮ ಬಾರಿಗೆ ಜೀವಂತ ಪ್ರಾಣಿ ತಂದ ಕನ್ನಡಿಗ-ಗುಬ್ಬಿವೀರಣ್ಣ
# ಕರ್ನಾಟಕ ಪ್ರಶಸ್ತಿ , ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಪ್ರಥಮ ಕನ್ನಡ ಚಲನಚಿತ್ರ ನಟ-ಡಾ. ರಾಜ್ ಕುಮಾರ್
# ಕರ್ನಾಟಕದ ಪ್ರಥಮ ಚಿತ್ರಮಂದಿರ-ಪ್ಯಾರಾಮೊಂಟು.
# ಭಾರತ ಹಾಕಿ ತಂಡದ ಮೊದಲ ನಾಯಕರಾಗಿದ್ದ ಕನ್ನಡಿಗ-ಎಂ. ಪಿ ಗಣೇಶ್.
# ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಥಮ ಕನ್ನಡತಿ-ಶಾಂತ ರಂಗಸ್ವಾಮಿ.
# ಭಾರತ ಶ್ರೀ, ಭಾರತ ಕಿಶೋರ್, ಭಾರತ್ ಕುಮಾರ್ ಪ್ರಶಸ್ತಿಗಳನ್ನು
# ಒಂದೇ ವರ್ಷದಲ್ಲಿ ಗಳಿಸಿದ ದೇಹಧಾರ್ಡ್ಯ ಪಟು-ಕನ್ನಡಿಗ ರೇಮಂಡ್ ಡಿಸೋಜಾ
# ನಾಟರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಫಿಲಿಪ್ಯೆನ್ಸ್ ಮ್ಯಾಗ್ಸಸ್ಸೇ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ-ಕೆ.ವಿ ಸುಬ್ಬಣ್ಣ
# ಅಭಿನಯಿಸಿದ ಮೊದಲ ಚಿತ್ರಕ್ಕೇ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ನಾಯಕ-ದಿ. ಶಂಕರನಾಗ್

# ಮೊದಲ ವರ್ಣಚಲನಚಿತ್ರ -ಸತಿಸುಲೋಚನಾ.
# ಕನ್ನಡ ಭಾಷೆಯ ಮೊದಲ ಪದ – ಇಸಿಲ.
# ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
# ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.
ಬನ್ನಿ ಎಲ್ಲರು ಕಲಿಯೋಣ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿ ಹೋಂದೊಣ

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...