ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಸಾಗಿಸಲು ಸರ್ಕಾರ ಶ್ರಮಿಕ್ ವಿಶೇಷ ರೈಲುಗಳನ್ನು ಪ್ರಾರಂಭಿಸಿದ ನಂತರ, ಮುಜೀಬುಲ್ಲಾ ರೆಹ್ಮಾನ್ ಚಾರ್ಬಾಗ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅವರ ಸಾಮಾನುಗಳನ್ನು ಉಚಿತವಾಗಿ ಸಾಗಿಸುವ ಸೇವೆ ನೀಡುತ್ತಿದ್ದಾರೆ.

ರೆಹಮಾನ್ ಪ್ರತಿದಿನ ಸುಮಾರು 8-10 ಗಂಟೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಾರೆ. ರೈಲ್ವೆ ಪೋರ್ಟರ್ ಸಮವಸ್ತ್ರ ಹಾಗೂ ಮಾಸ್ಕ್ ಧರಿಸಿ, ರೈಲುಗಳು ಪ್ಲಾಟ್‌ಫಾರ್ಮ್‌ಗೆ ಬರುವವರೆಗೆ ಕಾಯುತ್ತಿರುತ್ತಾರೆ. ಪ್ರಯಾಣಿಕರು ಬಂದಿಳಿಯುತ್ತಲೇ ಅವರ ಸಾಮಾನುಗಳನ್ನು ಉಚಿತವಾಗಿ ಸಾಗಿಸುತ್ತಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 80ರ ಈ ಇಳಿವಯಸ್ಸಿನಲ್ಲೂ ಅಗತ್ಯವಿರುವವರಿಗೆ ಉಚಿತ ಸೇವೆ ನೀಡುತ್ತಿರುವ ರೆಹ್ಮಾನ್ರ ಸಾಮಾಜಿಕ ಕಳಕಳಿಗೆ ನೆಟ್ಟಿಗರು ಮನ ಸೋತಿದ್ದಾರೆ. ಜಾಲತಾಣದಲ್ಲಿ ಅವರಿಗೆ ನೆಟ್ಟಿಗರು ಗೌರವ, ಪ್ರೀತಿ ಸಲ್ಲಿಸಿದ್ದಾರೆ.