
2020ರಲ್ಲಿ ಸಂಭವಿಸುತ್ತಿರುವ ಎರಡನೇ ಚಂದ್ರಗ್ರಹಣ ಇದು. ಮೊದಲನೆಯದು ಜನವರಿ 10ರಂದು ಸಂಭವಿಸಿತ್ತು. ಜುಲೈ 5 ಮತ್ತು ನವೆಂಬರ್ 29ರಂದು ಇನ್ನೆರಡು ಚಂದ್ರಗ್ರಹಣಗಳು ಸಂಭವಿಸಲಿವೆ.

ಈ ನಾಲ್ಕೂ ಗ್ರಹಣಗಳ ಪೈಕಿ ಜೂನ್ 5ರ ಗ್ರಹಣ ಕರ್ನಾಟಕವೂ ಸೇರಿದಂತೆ ಭಾರತದ ಕೆಲವು ಭಾಗಗಳಲ್ಲಿ ಸ್ವಲ್ಪಮಟ್ಟಿಗೆ ಮಾತ್ರ ಗೋಚರಿಸುತ್ತದೆ. ನವೆಂಬರ್ 29ರ ಗ್ರಹಣ ಕೂಡ ಭಾಗಶಃ ಗೋಚರಿಸುವಂತಹದ್ದು. ಆದರೆ ಇದೆಲ್ಲವೂ ಆ ಸಂದರ್ಭದಲ್ಲಿ ಇರುವ ಶುಭ್ರ ವಾತಾವರಣ, ಮೋಡ ಮುಸುಕಿದ ಆಕಾಶ ಇದೆಲ್ಲದರ ಮೇಲೆ ಅವಲಂಬಿತವಾಗಿರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.