ಪತಿ ಚಿರಂಜೀವಿ ಸರ್ಜಾ ಸಾವಿನ ಬೆನ್ನಲ್ಲೇ ಹೆಸರು ಬದಲಿಸಿಕೊಂಡ ಮೇಘನಾ!



ಇತ್ತೀಚೆಗಷ್ಟೇ ಅಗಲಿದ ಚಿರಂಜೀವಿ ಸರ್ಜಾ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಾಗಲೇ ಅವರಿಲ್ಲದೆ ಮೂರು ವಾರಗಳು ಕಳೆದವು. ದುಃಖದ ಮಡುವಿನಲ್ಲಿಯೇ ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ. ಅಣ್ಣನನ್ನು ಕಳೆದುಕೊಂಡ ದುಃಖ ಧ್ರುವನಿಗೆ ಬಾಧಿಸಿದರೆ, ಇಷ್ಟಪಟ್ಟು, ಕಷ್ಟಪಟ್ಟು ಪಡೆದುಕೊಂಡ ಪತಿ ಇನ್ನಿಲ್ಲ ಎಂಬ ಕೊರಗಿನಲ್ಲಿ ಗರ್ಭಿಣಿ ಮೇಘನಾ ಕಣ್ಣೀರಿಡುತ್ತಿದ್ದಾರೆ. ಇತ್ತ ಅಭಿಮಾನಿಗಳದ್ದು ಮತ್ತೊಂದು ಥರದ ಯಾತನೆ. ಒಟ್ಟಾರೆಯಾಗಿ ಚಿರು ಸರ್ಜಾ ಸಾವು ಕೇವಲ ಕುಟುಂಬಕ್ಕಷ್ಟೇ ನೋವು ತರಿಸಿಲ್ಲ. ಇಡೀ ನಾಡು ಅವರ ಸಾವಿಗೆ ಕಂಬನಿ ಮಿಡಿದಿದೆ. ಈ ನಡುವೆಯೇ ಪತಿ ಚಿರು ನೆನೆದು ಸೋಷಿಯಲ್​ ಮೀಡಿಯಾಗಳಲ್ಲಿ ಹಲವು ಪೋಸ್ಟ್ ಹಾಕಿದ್ದರು ಪತ್ನಿ ಮೇಘನಾ ರಾಜ್​, ಇದೀಗ ಹೆಸರನ್ನೂ ಬದಲಿಸಿಕೊಂಡಿದ್ದಾರೆ.


ಹೌದು, ಚಿರು ಅಗಲಿಕೆಯ ನೋವಿನಲ್ಲಿ ಸೋಷಿಯಲ್​ ಮೀಡಿಯಾ ಖಾತೆಗಳ ಹೆಸರನ್ನು ಮೇಘನಾ ಬದಲಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ಮೇಘ ಎಸ್​ ರಾಜ್​ ಹೆಸರಿನಲ್ಲಿದ್ದ ಖಾತೆಗಳೆಲ್ಲ, ಮೇಘನಾ ರಾಜ್​ ಸರ್ಜಾ ಎಂದು ಬದಲಾಗಿವೆ. ಇತ್ತೀಚೆಗಷ್ಟೇ ಹೊಸ ಹೆಸರನ್ನು ಅಪ್​ಡೇಟ್​ ಮಾಡಿದ್ದು, ಚಿರಂಜೀವಿಯನ್ನು ಹೆಸರಿನ ಜತೆಯಲ್ಲಿಯೇ ಇರಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿರಂಜೀವಿಯನ್ನು ನೆನೆದು ವಿವರವಾದ ಪತ್ರವೊಂದನ್ನು ಬರೆದು ಪೋಸ್ಟ್ ಮಾಡಿದ್ದರು ಮೇಘನಾ.


ಮೇಘನಾ ಪತ್ರದ ಸಾರಾಂಶ ಹೀಗಿದೆ.

ಚಿರು ನಾನು ಸಾಕಷ್ಟು ಬಾರಿ ಪ್ರಯತ್ನಿಸಿದೆ. ಆದರೆ, ನಾನು ಏನು ಹೇಳಬೇಕೆಂದುಕೊಂಡನೋ ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ನನಗೆ ನೀನು ಏನಾಗಿದ್ದೆ ಎಂಬುದನ್ನು ಜಗತ್ತಿನಲ್ಲಿರುವ ಎಲ್ಲ ಪದಗಳಿಂದ ವರ್ಣಿಸಲು ಆಗುವುದಿಲ್ಲ. ನನ್ನ ಸ್ನೇಹಿತ, ನನ್ನ ಪ್ರಿಯಕರ, ನನ್ನ ಪಾಲುದಾರ, ನನ್ನ ಮಗು, ನನ್ನ ವಿಶ್ವಾಸ ಹಾಗೂ ನನ್ನ ಪತಿ. ಇದೆಲ್ಲದಕ್ಕಿಂತ ಹೆಚ್ಚು ನೀನು. ನನ್ನ ಆತ್ಮದ ಒಂದು ಭಾಗ ನೀನು ಚಿರು.
ImageImage
ಮನೆಯ ಬಾಗಿಲನ್ನು ನೋಡಿದಾಗಲೆಲ್ಲಾ ಅಗಾಧ ನೋವು ನನ್ನ ಹೃದಯದಲ್ಲಿ ಆವರಿಸಿಕೊಳ್ಳುತ್ತದೆ. ಪ್ರತಿದಿನ, ಪ್ರತಿಕ್ಷಣ ನಿಮ್ಮನ್ನು ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ ಎಂದು ಗೊತ್ತಾದಾಗ ನನ್ನ ಹೃದಯದ ಮುಳುಗಡೆಯಾದಂತೆ ಭಾಸವಾಗುತ್ತದೆ. ನನ್ನ ಹೃದಯ ಸಾವಿರ ಸಾವುಗಳಂತೆ ನಿಧಾನ ಮತ್ತು ನೋವಿನಿಂದ ಕೂಡಿದೆ. ಆದರೆ, ನೀ ನನ್ನ ಸುತ್ತ ಇರುವೆ ಎಂಬ ಮ್ಯಾಜಿಕ್​ ಶಕ್ತಿಯು ಒಮ್ಮೆ ಬಂದು ಹೋಗುತ್ತದೆ. ಪ್ರತಿ ಕ್ಷಣ ನಾನು ಅಶಕ್ತಳೆಂಬ ಭಾವ ಕಾಡುತ್ತದೆ. ಆದರೂ ನೀನು ಗಾರ್ಡಿಯನ್​ ಏಂಜೆಲ್​ ರೀತಿ ನನ್ನ ಸುತ್ತಲೂ ಇರುತ್ತೀಯ ಎಂಬಂತೆ ಭಾಸವಾಗುತ್ತದೆ.
ImageImage
ನೀವು ನನ್ನನ್ನು ತುಂಬಾ ಪ್ರೀತಿಸುತ್ತೀರಿ, ನೀವು ನನ್ನನ್ನು ಒಬ್ಬಂಟಿಯಾಗಿ ಬಿಡಲು ಸಾಧ್ಯವೇ ಇಲ್ಲ. ನಿಮಗೆ ಸಾಧ್ಯವೇ ಚಿರು? ನಮ್ಮ ಪುಟಾಣಿಯೇ ನನಗೆ ನೀವು ನೀಡಿರುವ ಅದ್ಭುತವಾದ ಉಡುಗೊರೆ, ನಮ್ಮ ಪ್ರೀತಿಯ ಸಂಕೇತವಾಗಿದೆ. ಈ ಸಿಹಿಯಾದ ಉಡುಗೊರೆಗೆ ನಾನು ಶಾಶ್ವತವಾಗಿ ಋಣಿಯಾಗಿರುತ್ತೇನೆ. ಮಗುವಾಗಿ ನಿಮ್ಮನ್ನು ಮರಳಿ ಪಡೆಯುವುದಕ್ಕೆ ಕಾಯಲು ನನ್ನಿಂದ ಆಗುತ್ತಿಲ್ಲ. ಮರಳಿ ನಿಮ್ಮನ್ನು ಬಿಗಿಯಾಗಿ ಹಿಡಿದಿಕೊಳ್ಳುವುದಕ್ಕೆ ಕಾಯಲು ನನ್ನಿಂದ ಸಾಧ್ಯವಿಲ್ಲ. ನಿಮ್ಮ ಮಗು ಮುಖವನ್ನು ನೋಡುವುದಕ್ಕೆ ಕಾಯಲು ಆಗುತ್ತಿಲ್ಲ. ಇಡೀ ರೂಮಿನ ತುಂಬಿರುತ್ತಿದ್ದ ನಿಮ್ಮ ನಗೆಯನ್ನು ಕೇಳುವುದಕ್ಕೆ ಕಾಯಲು ಸಾಧ್ಯವಾಗುತ್ತಿಲ್ಲ. ನಾನು ನಿಮಗಾಗಿ ಕಾಯುತ್ತಿದ್ದರೆ, ಮತ್ತೊಂದು ಕಡೆಯಿಂದ ನೀವು ನನಗಾಗಿ ಕಾಯುತ್ತಿದ್ದೀರಾ. ನಾನು ಉಸಿರಾಡುವವರೆಗೂ ನೀವು ಬದುಕಿರುತ್ತೀರಿ, ನೀವು ನನ್ನಲ್ಲಿದ್ದೀರಿ ಐ ಲವ್​ ಯು ಎಂದು ಸುದೀರ್ಘವಾಗಿ ಮೇಘನಾ ಬರೆದುಕೊಂಡಿದ್ದರು.



ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...